Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ದರ್ಶನ್ ನನ್ಗೆ ಬೆಲ್ಟ್ ತೆಗೆದುಕೊಂಡು ಹೊಡುದ್ರು ಎಂದು ಆ ದಿನ ನೆಡೆದ ಘಟನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಬುಲೆಟ್ ಪ್ರಕಾಶ್ ಮಗ ರಕ್ಷಕ್.

Posted on February 21, 2023 By Admin No Comments on ದರ್ಶನ್ ನನ್ಗೆ ಬೆಲ್ಟ್ ತೆಗೆದುಕೊಂಡು ಹೊಡುದ್ರು ಎಂದು ಆ ದಿನ ನೆಡೆದ ಘಟನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಬುಲೆಟ್ ಪ್ರಕಾಶ್ ಮಗ ರಕ್ಷಕ್.

ಸಿನಿಮಾ ಇಂಡಸ್ಟ್ರಿ ಹಾಗೆ ಎಲ್ಲರನ್ನೂ ತನ್ನತ್ತ ಸೆಳೆಯುತ್ತದೆ. ಇನ್ನು ಕಲಾವಿದರ ಮಕ್ಕಳಿಗೆ ಮೊದಲ ಆಯ್ಕೆಯೇ ಅವರು ಸಹ ಇಂಡಸ್ಟ್ರಿಗೆ ಬರುವುದು. ಈಗಾಗಲೇ ಸ್ಟಾರ್ಗಳ ಮಕ್ಕಳು, ವಿಲನ್ ಗಳ ಮಕ್ಕಳು, ಡೈರೆಕ್ಟರ್ ಹಾಗೂ ಪ್ರೊಡ್ಯೂಸರ್ ಮತ್ತು ಸಿಂಗರ್ಸ್ ಗಳ ಮಕ್ಕಳು ಕೂಡ ಇಂಡಸ್ಟ್ರಿಗೆ ಬಂದದ್ದಾಗಿದೆ. ಈಗ ನಿಧಾನವಾಗಿ ಕಾಮಿಡಿ ಆಕ್ಟರ್ ಮಕ್ಕಳು ಕೂಡ ಇಂಡಸ್ಟ್ರಿ ಕಡೆ ಮುಖ ಮಾಡುತ್ತಿದ್ದಾರೆ. ಸದ್ಯಕ್ಕೆ ಕನ್ನಡದಲ್ಲಿ ಹಾಸ್ಯಕ್ಕೆ ಹೆಸರುವಾಸಿ ಆಗಿರುವ ಫೇಮಸ್ ನಟರಲ್ಲಿ ಬುಲೆಟ್ ಪ್ರಕಾಶ್ (Comedy actor Bullet Prakash) ಕೂಡ ಒಬ್ಬರು.

ಬುಲೆಟ್ ಪ್ರಕಾಶ್ ಅವರಿಗೆ ತಮ್ಮ ಮಗನನ್ನು ಕನ್ನಡ ಸಿನಿಮಾ ಇಂಡಸ್ಟ್ರಿಯ ಹೀರೋ ಮಾಡಬೇಕು ಎನ್ನುವ ಕನಸಿತ್ತು. ಅಪ್ಪನ ಆಸೆ ನೆರವೇರಿಸುವ ದೃಷ್ಟಿಯಿಂದ ಆ ಕಡೆಗೆ ತನ್ನ ಗಮನವನ್ನು ಕೇಂದ್ರೀಕರಿಸಿರುವ ಮಗ ರಕ್ಷಕ್ (Son Rakshak) ಅದಕ್ಕಾಗಿ ತೆರೆ ಹಿಂದೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಗುರು ಶಿಷ್ಯರು (Guru Shishyaru) ಎನ್ನುವ ಸಿನಿಮಾದಿಂದ ಇವರು ಬಣ್ಣ ಹಚ್ಚಿದ್ದು ಆಗಿದೆ. ಸದಾ ಮೀಡಿಯಾದಲ್ಲಿ ಒಂದಲ್ಲ ಒಂದು ವಿಚಾರವಾಗಿ ಕಾಣಿಸಿಕೊಳ್ಳುವ ರಕ್ಷಕ್ ಅವರನ್ನು ಅನೇಕ ಚಾನೆಲ್ಗಳು ಸಂದರ್ಶನ ಮಾಡಿವೆ. ಹೀಗೆ ಒಂದು ಚಾನೆಲ್ ಸಂದರ್ಶನದಲ್ಲಿ ತಮ್ಮ ಜೀವನದ ಬಗ್ಗೆ ಮಾತನಾಡುತ್ತ ದರ್ಶನ್ (Darshan) ಅವರನ್ನು ನೆನೆಸಿಕೊಂಡಿದ್ದಾರೆ ರಕ್ಷಕ್.

ತಂದೆ ಬುಲೆಟ್ ಪ್ರಕಾಶ್ ಮತ್ತು ದರ್ಶನ್ ಅವರು ಒಂದೇ ಸಮಯದಲ್ಲಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟವರು, ದರ್ಶನ್ ಅವರ ಬಹುತೇಕ ಎಲ್ಲಾ ಸಿನಿಮಾಗಳಲ್ಲೂ ಕೂಡ ಬುಲೆಟ್ ಪ್ರಕಾಶ್ ಅವರು ಕಾಮಿಡಿ ಆಕ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ ದರ್ಶನ ಅವರ ಆಪ್ತ ಸ್ನೇಹಿತರ ಬಳಗದಲ್ಲಿ ಬುಲೆಟ್ ಪ್ರಕಾಶ್ ಅವರು ಸಹ ಒಬ್ಬರು. ಈ ರೀತಿ ಸ್ನೇಹಿತ ಎಂದು ಒಮ್ಮೆ ಒಪ್ಪಿಕೊಂಡ ಮೇಲೆ ದರ್ಶನ್ ಅವರ ಕಷ್ಟ ಸುಖಗಳ ಭಾಗವಾಗುತ್ತಾರೆ. ಜೊತೆಗೆ ಸ್ನೇಹಿತರನ್ನು ಪದೇಪದೇ ಭೇಟಿಯಾಗುತ್ತಿರುತ್ತಾರೆ. ಹೀಗೆ ಬುಲೆಟ್ ಪ್ರಕಾಶ್ ಅವರನ್ನು ಮನೆಗೆ ಕರೆಸಿಕೊಳ್ಳುತ್ತಿದ್ದ ದರ್ಶನ್ ಮಗನನ್ನು ಕರೆತರಲು ಹೇಳುತ್ತಿದ್ದರಂತೆ.

ಆ ಸಮಯದಲ್ಲಿ ಸಿನಿಮಾ ಬಗ್ಗೆ ಮಾತನಾಡದೆ ಮಕ್ಕಳ ಆಸಕ್ತಿ, ವಿದ್ಯಾಭ್ಯಾಸ, ಟ್ರಿಪ್, ಪ್ರಾಣಿ ಪಕ್ಷಿಗಳು ಇಂತಹ ವಿಷಯಗಳ ಬಗ್ಗೆ ಮಾತನಾಡಿ ಸಮಯ ಕಳೆಯುತ್ತಿದ್ದರಂತೆ. ಜೊತೆಗೆ ಬುಲೆಟ್ ಪ್ರಕಾಶ್ ಅವರು ಅಗಲಿ ಹೋದ ಸಮಯದಲ್ಲಿ ಅವರ ಮನೆಗೆ ಮಗನಂತೆ ದರ್ಶನ್ ಅವರು ಬುಲೆಟ್ ಪ್ರಕಾಶ್ ಮಗಳ ಜವಾಬ್ದಾರಿಯನ್ನು ತಮ್ಮದು ಎಂದು ಒಪ್ಪಿಕೊಂಡಿದ್ದಾರೆ. ಈ ರೀತಿ ತನ್ನ ಕುಟುಂಬದವರಂತೆ ಬುಲೆಟ್ ಪ್ರಕಾಶ್ ಕುಟುಂಬದವರನ್ನು ಹಚ್ಚಿಕೊಂಡಿರುವ ದರ್ಶನ್ ಅವರು ಒಮ್ಮೆ ರಕ್ಷಕ್ ಮೇಲೆ ಕೈ ಮಾಡಿದ್ದರಂತೆ.

ಅದು ಯಾವ ಕಾರಣಕ್ಕೆ ಎನ್ನುವುದನ್ನು ಕೂಡ ರಕ್ಷಕ ಅವರು ಹೇಳಿಕೊಂಡಿದ್ದಾರೆ. ಮೊಬೈಲ್ ಯೂಸ್ ಮಾಡುವುದನ್ನು ಅಡಿಕ್ಷನ್ ಮಾಡಿಕೊಂಡಿದ್ದ ರಕ್ಷಕ ಅವರು ಫೇಸ್ಬುಕ್ ಅಲ್ಲಿ ದರ್ಶನ್ ಅವರಿಗೆ ರಿಕ್ವೆಸ್ಟ್ ಕಳಿಸಿದ್ದರಂತೆ. ಆಗ ಅದು ರಕ್ಷಕ್ ಇಂದ ಬಂದಿರುವುದು ಎನ್ನುವುದನ್ನು ತಿಳಿದ ದರ್ಶನ್ ಅವರು ರಕ್ಷ್ ಗೆ ಮನೆಗೆ ಬರಲು ಹೇಳಿ ಬೆಲ್ಟ್ ತೆಗೆದುಕೊಂಡ ಚೆನ್ನಾಗಿ ಬಾರಿಸಿದ್ದರಂತೆ. ಈ ವಯಸ್ಸಿಗೆ ನಿನಗೆ ಇದೆಲ್ಲಾ ಬೇಕಾ? ಮೊದಲು ಓದಿನ ಕಡೆ ಗಮನ ಕೊಡು ನಂತರ ಇದೆಲ್ಲಾ ಇದ್ದೇ ಇರುತ್ತದೆ ಎಂದು ಚೆನ್ನಾಗಿ ಬೈದಿದ್ದರಂತೆ.

ಇದನ್ನು ಆ ಸಂದರ್ಶನದಲ್ಲಿ ರಕ್ಷಕ್ ಅವರು ಹೇಳಿಕೊಂಡಿದ್ದಾರೆ. ಜೊತೆಗೆ ಈಗ ಅಲ್ಲ ಯಾವಾಗಲೂ ಅಷ್ಟೇ ದರ್ಶನ್ ಅವರೇ ನನ್ನ ಫೇವರೆಟ್ ಸ್ಟಾರ್ ಮತ್ತು ಅವರೊಬ್ಬ ಒಳ್ಳೆ ಗೈಡೆನ್ಸ್ ಕೂಡ ನಾನು ಅವರಂತೆ ಹೀರೋ ಆಗುತ್ತೇನೆ ಅವರೇ ನನ್ನ ರೋಲ್ ಮಾಡೆಲ್ ಎನ್ನುವುದನ್ನು ಸಹ ಹೇಳಿಕೊಂಡಿದ್ದಾರೆ. ದರ್ಶನ್ ಅವರು ಮಕ್ಕಳ ವಿದ್ಯಾಭ್ಯಾಸಕ್ಕೆ ಎಷ್ಟು ಬೆಲೆ ಕೊಡುತ್ತಾರೆ ಎನ್ನುವುದು ಇದರಿಂದ ತಿಳಿಯುತ್ತದೆ. ಅದರಲ್ಲೂ ಸಹನಟನ ಮಕ್ಕಳ ಬಗ್ಗೆ ಇಷ್ಟು ಕಾಳಜಿ ಹೊಂದಿರುವ ದರ್ಶನ್ ಹೃದಯ ವೈಶಾಲ್ಯತೆ ಮೆಚ್ಚಲೇಬೇಕು.

ಇಂತಹ ಅಪ್ಪಟ ಚಿನ್ನದಂತ ಗುಣಗಳಲ್ಲಿ ದರ್ಶನ್ ಅವರಿಗೆ ಅವರೇ ಸಾಟಿ ಅದೇ ಕಾರಣಕ್ಕಾಗಿ ದರ್ಶನ್ ಅವರಿಗೆ ಅಷ್ಟು ದೊಡ್ಡ ಸ್ನೇಹ ವಲಯ ಇರುವುದು ಮತ್ತು ಅಭಿಮಾನಿ ಬಳಗ ಇರುವುದು. ದರ್ಶನ್ ಅವರು ಅಭಿಮಾನಿಗಳನ್ನು ಕೂಡ ಅಷ್ಟೇ ಪ್ರೀತಿಸುತ್ತಾರೆ, ಗೌರವಿಸುತ್ತಾರೆ. ಅದೇ ಕಾರಣಕ್ಕಾಗಿ ಅವರನ್ನು ಅಭಿಮಾನಿಗಳು ಎಂದು ಕರೆಯದೆ ಸೆಲೆಬ್ರೆಟಿಸ್ ಎಂದು ಕರೆಯುತ್ತಾರೆ. ಈಗ ತನ್ನ ಸೆಲೆಬ್ರಿಟಿಸ್ಗಳಿಗೆಲ್ಲ ಟ್ರುಬ್ಯೂಟ್ ಕೊಡುವ ಸಲುವಾಗಿ ತನ್ನ ಎದೆ ಮೇಲೆ ನನ್ನ ಸೆಲೆಬ್ರಿಟಿಸ್ ಎಂದು ಶಾಶ್ವತವಾದ ಹಚ್ಚೆ ಕೂಡ ಹಾಕಿಸಿಕೊಂಡಿದ್ದಾರೆ ಇಂತಹ ನಟನೊಬ್ಬ ಕನ್ನಡಕ್ಕೆ ಸಿಕ್ಕಿದ್ದು ನಿಜಕ್ಕೂ ಕನ್ನಡಿಗರ ಅದೃಷ್ಟ.

https://youtu.be/kgHhvJ0Z5a8

 

Entertainment Tags:Darshan, Rakshak Bullet

Post navigation

Previous Post: ಬಟ್ಟೆ ಹಾಕದೆ ಕೇವಲ ಆಭರಣಗಳಿಂದಲೇ ಮೈಮುಚ್ಚಿಕೊಂಡು ಫೋಟೋಶೂಟ್ ಮಾಡಿಸಿ ಟ್ರೋಲ್ ಗೆ ಗುರಿಯಾದ ಖ್ಯಾತ ನಟಿ. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ.
Next Post: ಸೃಜನ್ ಕಂಡ್ರೆ ನನ್ಗೆ ಆಗ್ತ ಇರ್ಲಿಲ್ಲ ಅವನೊಬ್ಬ ದುರಂಕಾರಿ. ಇದ್ದಕ್ಕಿದ್ದ ಹಾಗೇ ಸೃಜನ್ ಮೇಲೆ ಗಂಭೀರ ಆರೋಪ ಮಾಡಿ ನಟಿ ಶ್ವೇತ ಚಂಗಪ್ಪ ಕಾರಣವೇನು ಗೊತ್ತ.?

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme