Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಈ ಹೀರೋನಲ್ಲಿ ಅಪ್ಪುನಾ ನೋಡುತ್ತೇನೆ ಆತನ ರೇಂಜಿಗೆ ನಾನು ಡ್ಯಾನ್ಸ್ ಮಾಡಬೇಕು ಎಂದ ಶಿವಣ್ಣ.! ಆ ಮಾಸ್ ಹೀರೋ ಯಾರು ಗೊತ್ತ.?

Posted on February 9, 2023 By Admin No Comments on ಈ ಹೀರೋನಲ್ಲಿ ಅಪ್ಪುನಾ ನೋಡುತ್ತೇನೆ ಆತನ ರೇಂಜಿಗೆ ನಾನು ಡ್ಯಾನ್ಸ್ ಮಾಡಬೇಕು ಎಂದ ಶಿವಣ್ಣ.! ಆ ಮಾಸ್ ಹೀರೋ ಯಾರು ಗೊತ್ತ.?

ಹ್ಯಾಟ್ರಿಕ್ ಹೀರೋ ಶಿವಣ್ಣ (Hatric hero Shivaraj kumar) ಅವರ ವೇದ (Veda) ಸಿನಿಮಾ ತೆಲುಗು ವರ್ಷನ್ (Thelugu version) ಫೆಬ್ರುವರಿ ಒಂಬತ್ತರಂದು ರಿಲೀಸ್ ಆಗುತ್ತಿದೆ. ಇದಕ್ಕಾಗಿ ಸಿನಿಮಾ ಪ್ರಿ ರಿಲೀಸ್ ಇವೆಂಟನ್ನು (Pre release event) ಏರ್ಪಡಿಸಿತ್ತು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ತೆಲುಗಿನ ಸ್ಟಾರ್ ನಟ ಬಾಲಕೃಷ್ಣ (Balakrishna) ಅವರು ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಶಿವಣ್ಣ ಅವರು ಅಲ್ಲಿಯ ಕಲಾಪ್ರೇಕ್ಷಕರನ್ನು ಉದ್ದೇಶಿಸಿ ಕೆಲ ಮಾತುಗಳನ್ನು ಆಡಿದ್ದಾರೆ, ಜೊತೆಗೆ ಅಪ್ಪುವನ್ನು (Appu) ನೆನೆದು ಕಣ್ಣೀರು ಇಟ್ಟಿದ್ದಾರೆ.

ಪುನೀತ್ ರಾಜಕುಮಾರ್ ಅವರ ಅಗಲಿಕೆ ನೋವು ಶಿವಣ್ಣ ಅವರನ್ನು ಎಷ್ಟು ಕಾಡುತ್ತಿದೆ ಎನ್ನುವುದು ಅವರ ಮುಖ ನೋಡಿದರೆ ಅರಿವಾಗುತ್ತದೆ. ಶಿವಣ್ಣ ಅವರ ಮುಖದಲ್ಲಿ ಮುಂಚೆ ಇದ್ದ ಕಳೆ ಈಗ ಇಲ್ಲ, ವಾತ್ಸವವನ್ನು ಒಪ್ಪಿಕೊಂಡು ಅವರು ತಮ್ಮ ದಿನನಿತ್ಯದ ಕೆಲಸಗಳಲ್ಲಿ ಎಷ್ಟೇ ಬ್ಯುಸಿಯಾಗಲು ಪ್ರಯತ್ನ ಪಟ್ಟರು ಕೂಡ ಅವರ ಮನದಾಳದಲ್ಲಿರುವ ನೋವು ಏನು ಎಂದು ಕಣ್ಣು ತೋರುತ್ತಿದೆ. ಶಿವಣ್ಣ ಅಕ್ಷರಶಃ ತಮ್ಮ ಮಗನನ್ನೇ ಕಳೆದುಕೊಂಡ ರೀತಿ ಆಗಿದ್ದಾರೆ.

ಅಪ್ಪು ಹಾಗೂ ಶಿವಣ್ಣ ಇಬ್ಬರಲ್ಲಿ ಇದ್ದ ಕಾಮನ್ ಹೋಲಿಕೆ ಏನೆಂದರೆ ಇಬ್ಬರಿಗೂ ಡ್ಯಾನ್ಸ್ ಇಷ್ಟ, ಇಬ್ಬರು ಸಹ ಡ್ಯಾನ್ಸ್ ಅಲ್ಲಿ ಮಾಸ್ಟರ್ ಗಳು. ಅಪ್ಪು ಅವರು ಶಿವಣ್ಣನನ್ನೇ ಮೀರಿಸುವ ಡ್ಯಾನ್ಸರ್ ಆಗಿದ್ದರು ಶಿವಣ್ಣನೇ ತನ್ನ ರೋಲ್ ಮಾಡಲೆಂದು ಹೇಳುತ್ತಿದ್ದರು. ಇನ್ನು ಶಿವಣ್ಣ ಅಂತೂ ಯಾವುದೇ ವೇದಿಕೆ ಆದರೂ ಯಾವುದೇ ಸಿನಿಮಾ ಕಾರ್ಯಕ್ರಮ ಆದರೂ ಅಪ್ಪು ಹೆಸರು ಹೇಳದೆ ಮಾತು ಮುಗಿಸುತ್ತಲೇ ಇರಲಿಲ್ಲ. ನನ್ನ ಕಣ್ಣೆ ನನ್ನ ತಮ್ಮನಿಗೆ ತಾಕಿತ್ತಾ ಎಂದು ಶಿವಣ್ಣ ಈಗ ಕಣ್ಣೀರಿಡುತ್ತಾ ಹೇಳಿಕೊಳ್ಳುತ್ತಿದ್ದಾರೆ

ಅಷ್ಟು ತಮ್ಮನ ಬಗ್ಗೆ ಅವರು ಮಾತನಾಡುತ್ತಿದ್ದರು. ಜೊತೆಗೆ ಡ್ಯಾನ್ಸ್ ಅಲ್ಲಿ ನನ್ನ ತಮ್ಮನನ್ನು ಬಿಟ್ಟರೆ ಬೇರೆ ಯಾರು ಇಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಈಗ ಅಪ್ಪು ಅನ್ನು ಕಳೆದುಕೊಂಡಿರುವ ಶಿವಣ್ಣ ಬೇರೆ ಅವರಲ್ಲಿ ಅವರನ್ನು ಕಾಣಲು ಪ್ರಯತ್ನ ಪಡುತ್ತಿದ್ದಾರೆ, ಈ ವಿಷಯವನ್ನು ಸಹ ಅವರು ವೇದಿಕೆಯಲ್ಲಿ ಮಾತನಾಡಿದ್ದಾರೆ. ತೆಲುಗಿನಲ್ಲಿ ಜೂನಿಯರ್ ಎನ್ಟಿಆರ್ (Jn. NTR) ಹಾಗೂ ಅಲ್ಲು ಅರ್ಜುನ್ (Allu Arjun) ಅವರು ತುಂಬಾ ಒಳ್ಳೆ ಡ್ಯಾನ್ಸರ್ ಗಳು.

ಅದರಲ್ಲೂ ಅಲ್ಲು ಅರ್ಜುನ್ ಅವರ ಅಲಾವೈಕುಂಠ ಪುರಂಲೋ (Ala vaikuntapuramlo) ಸಿನಿಮಾದ ಪುಟ್ಟ ಬೊಮ್ಮ (Putta bomma) ಹಾಡಿನಲ್ಲಿ ಅವರ ಹೆಜ್ಜೆಗಳನ್ನು ಮೆಚ್ಚಿ ಕೊಳ್ಳದವರಿಲ್ಲ. ಜಾನಿ ಮಾಸ್ಟರ್ ಅವರ ಕೊರಿಯೋಗ್ರಾಫ್ ಅಲ್ಲಿ ಪೂಜಾ ಹೆಗ್ಡೆ ಹಾಗೂ ಅಲ್ಲು ಅರ್ಜುನ್ ಅವರು ಮೈ ಮೂಳೆ ಮುರಿವಂತೆ ಹೆಜ್ಜೆ ಹಾಕಿದ್ದರು. ಆ ಹಾಡು ಸಿಂಪಲ್ ಆಗಿದ್ದರೂ ಡಾನ್ಸ್ ಮತ್ತು ಮ್ಯೂಸಿಕ್ ಬಹಳ ಇಷ್ಟ ಆಗಿತ್ತು. ಡ್ಯಾನ್ಸ್ ಕಲಿಯುದಿದ್ದವರು ಕೂಡ ಹಾಡನ್ನು ನೋಡಿದ ಮೇಲೆ ತಾವು ಡ್ಯಾನ್ಸ್ ಮಾಡಬೇಕು ಎಂದುಕೊಳ್ಳುವ ರೀತಿ ಆ ಹಾಡು ಇತ್ತು.

ಶಿವಣ್ಣ ಆ ಹಾಡನ್ನು ನೆನೆದು ತಾವು ಸಹ ಅಲ್ಲು ಅರ್ಜುನ್ ರೇಂಜಿಗೆ ಡ್ಯಾನ್ಸ್ ಮಾಡಬೇಕು ಆತ ಡ್ಯಾನ್ಸ್ ಅಲ್ಲಿ ನಂಬರ್ ಒನ್ ಎಂದಿದ್ದಾರೆ. ಜೊತೆಗೆ ಜೂನಿಯರ್ ಎನ್ಟಿಆರ್ (Jn.NTR) ಅವರು ಸಹ ಬಹಳ ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಾರೆ ನನಗೆ ಅಪ್ಪು, ಜೂನಿಯರ್ ಎನ್ಟಿಆರ್ ಹಾಗೂ ಅಲ್ಲು ಅರ್ಜುನ್ ಒಂದೇ ರೀತಿ ಕಾಣುತ್ತಾರೆ. ಈ ಮೂರು ಜನರಲ್ಲೂ ಹಲವು ವಿಷಯಗಳಲ್ಲಿ ಒಂದೇ ರೀತಿಯ ಹೋಲಿಕೆ ಇದೆ ಎಂದು ಹೇಳಿರುವ ಶಿವಣ್ಣ ಎವಿ ಪ್ಲೇ ಆದಾಗ ಅಪ್ಪು ಅವರ ಫೋಟೋವನ್ನು ನೋಡಿ ಪುಟ್ಟ ಮಗುವಿನಂತೆ ಬಿಕ್ಕಿ ಅತ್ತಿದ್ದಾರೆ.

ಅಲ್ಲೇ ಪಕ್ಕದಲ್ಲಿ ಇದ್ದ ಗೀತಾ ಅವರು ಮತ್ತು ಬಾಲಯ್ಯ ಅವರು ಸಮಾಧಾನ ಪಡಿಸಲು ಪ್ರಯತ್ನಶಪಟ್ಟಿದ್ದಾರೆ. ಗುರುವಾರ ತೆಲುಗಿನಲ್ಲಿ ಶಿವ ವೇದ ಸಿನಿಮಾ ರಿಲೀಸ್ ಆಗಲಿದೆ. ಕಳೆದ ವರ್ಷಾಂತ್ಯದಲ್ಲಿ ವೇದ ಸಿನಿಮಾ ಕನ್ನಡದಲ್ಲಿ ರಿಲೀಸ್ ಆಗಿತ್ತು . ಶಿವಣ್ಣ, ಗಾನವಿ, ಅಧಿತಿ ಸಾಗರ್, ಉಮಾಶ್ರೀ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾ ಒಳ್ಳೆಯ ಕಲೆಕ್ಷನ್ ಕೂಡ ಮಾಡಿ ಕಥೆಯಿಂದ ಕೂಡ ಹೆಸರಾಗಿತ್ತು. ಈಗ ಶುಕ್ರವಾರ ಕನ್ನಡದ ವೇದ ಸಿನಿಮಾ ಝೀ ಸ್ಟುಡಿಯೋಸ್ (Zee studio’s) ಇಂದ ಓ ಟಿ ಟಿ ಅಲ್ಲಿ ಸ್ಟ್ರೀಮಿಂಗ್ ಅಗಲಿದೆ.

ಬಾಲಕೃಷ್ಣ ಅವರು ಸಹ ನಂತರ ವೇದಿಕೆ ಮೇಲೆ ಬಂದು ವೇದ ಸಿನಿಮಾದ ಬಗ್ಗೆ ಹಾಗೂ ಶಿವರಾಜ್ ಕುಮಾರ್ ಅವರ ಬಗ್ಗೆ ಮಾತನಾಡಿದ್ದಾರೆ. ನಾನು ಈಗಾಗಲೇ ವೇದ ಸಿನಿಮಾವನ್ನು ನೋಡಿದ್ದೇನೆ ಸಿನಿಮಾ ಬಹಳ ಅದ್ಭುತವಾಗಿದೆ, ಒಂದೊಳ್ಳೆ ಕಥೆಯನ್ನು ಸಹ ಹೊಂದಿದೆ. ಖಂಡಿತ ನಿಮಗೆಲ್ಲ ಇಷ್ಟ ಆಗುತ್ತದೆ ಸಿನಿಮಾ ಚೆನ್ನಾಗಿದೆ ಎಲ್ಲರೂ ನೋಡಿ ಎಂದು ಹೇಳಿದ್ದಾರೆ.

https://youtu.be/-TnG29Vzlsk

cinema news Tags:Allu Arjun, Powerstar Puneeth Rajkumar, Shivanna, Vedha

Post navigation

Previous Post: ವಿಷ್ಣು ಹೀರೋ ಆದ್ರೆ ಮಾತ್ರ ಈ ಸಿನಿಮಾದಲ್ಲಿ ಆಕ್ಟ್ ಮಾಡ್ತಿನಿ ಅಂತ ಇಡೀ ಚಿತ್ರರಂಗಕ್ಕೆ ಷರತ್ತು ಹಾಕಿದ್ದ ಏಕೈಕ ನಟಿ ಯಾರು ಗೊಯ.?
Next Post: ವಿಷ್ಣು ಮನೆಗೆ ಅಂಬಿ ಊಟಕ್ಕೆ ಬಂದಾಗ. ಅಂಬಿ ಹೇಳಿದ ಒಂದೇ ಒಂದು ಮಾತಿಗೆ ವಿಷ್ಣು ಏನೆಲ್ಲಾ ತಯಾರಿ ಮಾಡಿದ್ರು ಗೊತ್ತ.? ಸ್ನೇಹ ಅಂದ್ರೆ ಇದು.

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme