ಡಾಕ್ಟರ್ ವಿಷ್ಣುವರ್ಧನ್ (Dr. Vishnuvardhan) ಬರೋಬ್ಬರಿ 220 ಸಿನಿಮಾಗಳನ್ನು ಮಾಡಿ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿ ವಿಷ್ಣು ದಾದಾ ಎಂದು ಉಳಿದುಕೊಂಡಿರುವವರು, ಸಾಹಸಸಿಂಹ ವಿಷ್ಣುವರ್ಧನ್ ಅವರು ಎಂದಿಗೂ ಕನ್ನಡ ಚಲನಚಿತ್ರದ ಯಜಮಾನ, ಅಭಿಮಾನಿಗಳ ಪಾಲಿಗೆ ಸಿರಿವಂತ ಹಾಗೂ ಹೃದಯವಂತ. ಇಂತಹ ಕೋಟಿಗೊಬ್ಬನ ಬಗ್ಗೆ ಎಷ್ಟು ಮಾತನಾಡಿದರು ಕಡಿಮೆಯೇ. ಡಾಕ್ಟರ್ ವಿಷ್ಣುವರ್ಧನ್ ಅವರ ಸಿನಿಮಾಗಳನ್ನು ನೋಡಲು ಅಭಿಮಾನಿಗಳು ಎಷ್ಟು ಆಸೆಪಡುತ್ತಿದ್ದರು ಎಂದು ಎಲ್ಲರಿಗೂ ಗೊತ್ತು.
ಅಭಿಮಾನಿಗಳಿಂದ ಮಾತ್ರ ಅಲ್ಲದೆ ಸಿನಿಮಾ ಇಂಡಸ್ಟ್ರಿಯ ಖ್ಯಾತರಿಂದಲೂ ಕೂಡ ಇಷ್ಟೇ ಪ್ರೀತಿ ಸಂಪಾದನೆ ಮಾಡಿದ್ದರು ವಿಷ್ಣುವರ್ಧನ್ ಅವರು. ಅದಕ್ಕೆ ಸಾಕ್ಷಿ ಏನು ಎಂದರೆ ವಿಷ್ಣುವರ್ಧನ್ ಅವರು ನಟನಾಗಿ ಇಲ್ಲ ಎಂದರೆ ನಾನು ಈ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಖ್ಯಾತ ನಟಿಯೊಬ್ಬರು ಅದನ್ನು ರಿಜೆಕ್ಟ್ ಮಾಡಿ ಬಿಟ್ಟದ್ದರು. ಅದು ಯಾವ ಸಿನಿಮಾ, ಯಾವ ನಟಿ ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.
1972ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ (Puttanna Kanagal) ಅವರ ನಿರ್ದೇಶನದ ನಾಗರಹಾವು (Nagarahavu) ಸಿನಿಮಾ ಯಾರಿಗೆ ಗೊತ್ತಿಲ್ಲ, ಸಿನಿಮಾ ತೆರೆ ಕಂಡು ಇಷ್ಟು ವರ್ಷಗಳಾಗಿದ್ದರೂ ಕೂಡ ಇನ್ನೂ ಸಿನಿಮಾ ಹಾಗೂ ಸಿನಿಮಾದ ಕಥೆ ರಾಮಾಚಾರಿ ಪಾತ್ರ ಮತ್ತು ಆ ಪಾತ್ರವನ್ನು ನಿರ್ವಹಿಸಿದ್ದ ವಿಷ್ಣುವರ್ಧನ್ ಅವರು ಹಾಗೂ ಚಾಮಯ್ಯ ಮೇಷ್ಟ್ರು ಕನ್ನಡಿಗರ ಜನ ಮಾನಸದಲ್ಲಿ ಶಾಶ್ವತವಾಗಿ ಉಳಿದಿರುತ್ತಾರೆ.
ಇಂತಹ ಒಂದು ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿತ್ತಲ್ಲ ಎಂದು ಆ ಸಿನಿಮಾ ತಂಡದ ಅದೆಷ್ಟು ಕಲಾವಿದರು ಇಂದಿಗೂ ಹೆಮ್ಮೆ ಪಟ್ಟು ಹೇಳಿಕೊಳ್ಳುತ್ತಾರೆ. ಇಂತಹ ಒಂದು ಕರ್ನಾಟಕದ ಹೆಮ್ಮೆಯ ಚಿತ್ರ ತಮಿಳಿನಲ್ಲಿ ರಿಮೇಕ್ ಆಗಬೇಕಿತ್ತು ಆ ಸಿನಿಮಾಗೆ ನಾಯಕಿಯಾಗಲು ಜಯಲಲಿತ (Jayalalitha) ಅವರನ್ನು ಸಹ ಕೇಳಲಾಗಿತ್ತು.
ಜಯಲಲಿತಾ ಅವರು ಆಗ ಅಲ್ಲಿ ಸ್ಟಾರ್ ನಟಿಯಾಗಿದ್ದವರು. ಅವರಿಗೆ ಈ ಸಿನಿಮಾದ ರಿಮೇಕ್ ಅಲ್ಲಿ ಅಭಿನಯಿಸಲು ಯಾವುದೇ ಸಮಸ್ಯೆ ಇರಲಿಲ್ಲ, ಆದರೆ ಅವರು ಒಂದೇ ಒಂದು ಷರತ್ತು ಹಾಕಿದ್ದರು. ಅದೇನೆಂದರೆ ವಿಷ್ಣುವರ್ಧನ್ ಅವರೇ ಈ ಸಿನಿಮಾದಲ್ಲಿ ನಾಯಕ ಆಗಿ ತಮಿಳಿನಲ್ಲಿ ರಿಮೇಕ್ ಮಾಡಿದರೆ ಮಾತ್ರ ನಾನು ಇದಕ್ಕೆ ನಾಯಕಿ ಆಗುತ್ತೇನೆ ಎಂದು.
ಆದರೆ ವಿಷ್ಣುವರ್ಧನ್ ಅವರು ಅದ್ಯಾಕೋ ಮತ್ತೊಮ್ಮೆ ಆ ಚಿತ್ರದ ರಿಮೇಕ್ ಅಲ್ಲಿ ಕಾಣಿಸಿಕೊಳ್ಳಲು ಇಷ್ಟಪಡಲಿಲ್ಲ ಹಾಗಾಗಿ ಜಯಲಲಿತ ಅವರೂ ಅಭಿನಯಿಸಲಿಲ್ಲ. ಮುಂದೆ ಬೇರೆ ಕಲಾವಿದರನ್ನು ಹಾಕಿಕೊಂಡು ಸಿನಿಮಾವನ್ನು ತೆಗೆಲಾಯಿತು, ಅದು ಒಳ್ಳೆ ಹೆಸರು ಪಡೆಯಿತು. ಇದೇ ಸಿನಿಮಾದಿಂದ ಅಂಬರೀಶ (Ambarish) ಅಂತಹ ಒಬ್ಬ ರೆಬೆಲ್ ಸ್ಟಾರ್ (Rebel star) ಕರ್ನಾಟಕಕ್ಕೆ ಸಿಕ್ಕರು. ಈ ಸಿನಿಮಾದ ಅವರ ಪಾತ್ರ ಹಾಗೂ ಡೈಲಾಗ್ ಇಂದಿಗೂ ಅಷ್ಟೇ ಫೇಮಸ್.
ಮೆರೆ ಸೊಪ್ನೋಕಿ ರಾಣಿ ಕಬ್ ಆಯಿಗೆತೋ ಬುಲ್ ಬುಲ್ ಮಾತಾಡಕ್ಕಿಲ್ವಾ ಇಂದು ಅಂಬರೀಶ್ ಅವರು ಸಿನಿಮಾದಲ್ಲಿ ಹೊಡೆದಿದ್ದ ಡೈಲಾಗ್. ಇಂದಿಕ ಎಲ್ಲಾ ಪಡ್ಡೆ ಹೈಕಳಿಗೂ ಫಾರೆವರ್ ಫೇವರಿಟ್ ಕೂಡ. ಆರತಿ, ಶಿವರಾಮ್, ಅಂಬರೀಶ್, ಲೋಕನಾಥ್, ಅಶ್ವಥ್, ಪಂಡರೀಬಾಯಿ, ವಿಷ್ಣುವರ್ಧನ್ ಇನ್ನು ಮುಂತಾದ ಅನೇಕ ಕಲಾವಿದರ ದಂಡೇ ಈ ಸಿನಿಮಾದಲ್ಲಿ ಇತ್ತು.
ರಾಜನ್ ನಾಗೇಂದ್ರ ಅವರ ಸಂಗೀತ ಹಾಗೂ ಆರ್ ಎನ್ ಜಯಗೋಪಾಲ್ ಅವರ ಸಾಹಿತ್ಯದಲ್ಲಿ ಮೂಡಿಬಂದ ಎಲ್ಲಾ ಹಾಡುಗಳು ಕೂಡ ಸೂಪರ್ ಹಿಟ್ ಆದವು. ಪ್ರೀತಿ ಪ್ರೇಮ ತ್ಯಾಗ ಹಠ ಛಲ ಇವೆಲ್ಲವನ್ನು ಒಳಗೊಂಡಿದ್ದ ಚಿತ್ರ ನಾಗರಹಾವು ಆಗಿತ್ತು. ಈ ಸಿನಿಮಾ ಕನ್ನಡಿಗರ ಮನದಲ್ಲಿ ಎಂದಿಗೂ ಅಚ್ಚ ಹಸಿರು.