ಯಾರ ಮನೆಯ ಪಂಕ್ಷನ್ ನಲ್ಲೂ, ಕ್ಲಾಸ್ ರೂಮಿನಲ್ಲಿ, ಕಚೇರಿಯಲ್ಲೂ ಈ ಹೆಸರಿನ ಬಗ್ಗೆ ಮಾತುಕತೆ ಆಗುತ್ತಲೇ ಇರುತ್ತದೆ. ಕರ್ನಾಟಕದ ಮನೆ ಮನೆಗೆ ಗೊತ್ತಿರುವ ದೇಶ ವಿದೇಶ ಸುತ್ತುತ್ತಿದ್ದರು ಬಹಳ ಡೌಟ್ ಟು ಅರ್ಥ್ ಪರ್ಸನಾಲಿಟಿ ಮೂಲಕ ಎಲ್ಲಾ ಕನ್ನಡಿಗರ ಮನ ಗೆದ್ದಿರುವ ವ್ಯಕ್ತಿ ಗಗನ್ ಶ್ರೀನಿವಾಸ್ (Gagan Shrinivas alias Dr.Bro)..
ಬಹುಷಃ ಈ ಹೆಸರು ಹೇಳಿದರೆ ಯಾರಿಗೂ ಗೊತ್ತಾಗುವುದಿಲ್ಲ, ಇದರ ಬದಲು ನಮಸ್ಕಾರ ದೇವ್ರು ಅಥವಾ ಡಾ. ಬ್ರೋ ಎಂದರೆ ಎಲ್ಲರ ಮುಖದಲ್ಲೂ ಖಂಡಿತ ಮುಗುಳ್ನಗು ಮೂಡುತ್ತದೆ. ಅತಿ ಕಿರಿಯ ವಯಸ್ಸಿಗೆ ಕನ್ನಡಿಗರಿಗೆ ದೇಶ-ವಿದೇಶ ತೋರಿಸುವ ಸಾಹಸ ಮಾಡುತ್ತಿರುವ ಈ ಮುದ್ದು ಹುಡುಗನ ಮಾತಿಗೆ ಮತ್ತು ಈತನ ಇತಿಹಾಸ ಜ್ಞಾನಕ್ಕೆ ಬೆರಗಾಗದವರಿಲ್ಲ.
ಮೇಕಪ್ ಇಲ್ಲದ ಮುಖ ಫಿಲ್ಟರ್ ಇಲ್ಲದ ಮುತ್ತಿನಂತ ಮಾತುಗಳು ಜನ ಇವರಲ್ಲಿ ಮೆಚ್ಚಿರುವ ಅಂಶಗಳು ಎಂದೇ ಹೇಳಬಹುದು. ಈಗ ಒಂದು ಸರ್ವೆ ಪ್ರಕಾರ ಕನ್ನಡದ ಸ್ಟಾರ್ ಹೀರೋಗಳಿಗೂ ಡಾಕ್ಟರ್ ಮೇಲಂತೆ ಹೇಗಂದರೆ, ಕರ್ನಾಟಕದ ಮಟ್ಟಿಗೆ ನಂಬರ್ ಒನ್ ಯೂಟ್ಯೂಬ್ ಚಾನೆಲ್ ಹೊಂದಿರುವ ಡಾಕ್ಟರ್ ಬ್ರೋ ಫಾಲೋವರ್ ಸಂಖ್ಯೆ ಕರ್ನಾಟಕದ ಸ್ಟಾರ್ ನಟರ ಫಾಲೋವರ್ಸ್ ಸಂಖ್ಯೆಯನ್ನು ಮೀರಿಸಿದೆ.
ಕಳೆದೆರಡು ದಶಕದಿಂದ ಕರ್ನಾಟಕದಲ್ಲಿ ಸ್ಟಾರ್ ಹೀರೋಗಳು ಎನ್ನುವ ಪಟ್ಟಿಯಲ್ಲಿ ದರ್ಶನ್ ಮತ್ತು ಸುದೀಪ್ ಹೆಸರು (Darshan & Sudeep) ಮುನ್ನಡೆಯಲ್ಲಿ ಇದೆ. ದರ್ಶನ್ ಅವರು ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕನ್ನಡದ ನಟರಾಗಿದ್ದು ಸೋಶಿಯಲ್ ಮೀಡಿಯಾ ಫಾಲೋವರ್ಸ್ ಮಾತ್ರವಲ್ಲದೆ ಅದನ್ನು ಮೀರಿ ಅನೇಕ ಜನರ ಮನ ಗೆದ್ದಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಇದೇ ರೀತಿ ಕಿಚ್ಚ ಸುದೀಪ್ ಕೂಡ, ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ದೇಶಕ್ಕೆ ಪರಿಚಿತನಾಗಿರುವ ಸೆಲೆಬ್ರಿಟಿ ಆಗಿದ್ದಾರೆ. ಇವರಿಬ್ಬರ ಇನ್ಸ್ಟಾಗ್ರಾಮ್ ಫಾಲೋವರ್ ಸಂಖ್ಯೆ ನೋಡಿದರೆ ಕಿಚ್ಚ ಸುದೀಪ್ ಅವರಿಗೆ ಇದುವರೆಗೂ 2.2 ಮಿಲಿಯನ್ ಫಾಲೋವರ್ಸ್ ಇದ್ದರೆ ದರ್ಶನ್ ಅವರಿಗೆ 2 ಮಿಲಿಯನ್ ಫಾಲೋವರ್ಸ್ ಇದ್ದಾರೆ.
ಈಗ ಇವರಿಬ್ಬರನ್ನು ಮೀರಿಸಿ 2.3 ಮಿಲಿಯನ್ ಫಾಲೋವರ್ಸ್ ಹೊಂದಿ ಸುದ್ದಿಯಲ್ಲಿದ್ದಾರೆ ಡಾ.ಬೋ. ಈ ಮೂಲಕ ನಿಮ್ಮ ಅಜ್ಜಿಗೆ ಡಾ.ಬ್ರೋ ಗೊತ್ತಾ ಎಂದು ಕೇಳಿದ ಚಾನೆಲ್ ಹೆಡ್ ಒಬ್ಬರ ಮು’ಖ’ಭಂ’ಗ ಮಾಡಿದ್ದಾರೆ ಎಂದೇ ಹೇಳಬಹುದು. ಈ ವಿಷಯ ಟ್ರಾವಲ್ ವ್ಲಾಗ್ ಗಳನ್ನು ಮಾಡುತ್ತಾ ಅದನ್ನು ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿ.
ಮನೆಯಲ್ಲಿ ಕೂತು ತಮ್ಮ ಮೊಬೈಲ್ ಮೂಲಕ ವಿಶ್ವದ ಪ್ರಸಿದ್ಧ ಸ್ಥಳಗಳನ್ನು ಮಾತ್ರವಲ್ಲದೆ ಅದರ ಇತಿಹಾಸವನ್ನು ಕೂಡ ತನ್ನ ಸೀದಾಸಾದ ಸ್ವಚ್ಛ ಕನ್ನಡ ಭಾಷೆಯಿಂದ ಬಹಸಿ ಅಂಗೈಯಲ್ಲಿ ಪ್ರಪಂಚ ತೋರಿಸುತ್ತಿದ್ದಾರೆ ಈ ಸಾಧಕ. ಕನ್ನಡಿಗರು ಒಬ್ಬರ ಮೇಲೆ ಎಷ್ಟು ಅಭಿಮಾನ ಹೊಂದಿದ್ದಾರೆ ಎಂದರೆ ತಿಂಗಳ ಹಿಂದೆ ಇವರು ಚೀನಾ ದೇಶದ ವಿಡಿಯೋ ಮಾಡಿದ ನಂತರ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿರಲಿಲ್ಲ ಮತ್ತು ಯಾವುದೇ ಹೊಸ ವಿಡಿಯೋ ಅಪ್ಲೋಡ್ ಮಾಡಿರಲಿಲ್ಲ.
ಆಗ ಡಾ. ಬ್ರೋ ಎಲ್ಲಿದ್ದಾರೆ ಎಂದು ಯಾರು ಯಾವುದೇ ಪೋಸ್ಟ್ ಮಾಡಿದರು ಅದರ ಕಮೆಂಟ್ಗಳಲ್ಲಿ ಡಾ. ಬ್ರೋ ಎಲ್ಲಿದ್ದಾರೆ ಎಂದು ಕೇಳುತ್ತಿದ್ದರು. ಅಂತಿಮವಾಗಿ ಡಾ. ಬ್ರೋ ಈಗ ಹೊಸ ರೂಪದಲ್ಲಿ ಕಾಣಿಸಿಕೊಂಡಿದ್ದು ಹೊಸ ವರ್ಷದ ಆರಂಭದಲ್ಲಿ ಅಯೋಧ್ಯೆ ದರ್ಶನ ಮಾಡಿಸುವ ಮೂಲಕ ನೂತನ ಯಾತ್ರೆ ಆರಂಭಿಸಿದ್ದಾರೆ. ಇನ್ನು ಕೋಟ್ಯಾಂತರ ಜನರನ್ನು ತಲುಪಿ ಹೆಸರು ಮಾಡಲಿ ಈ ಕನ್ನಡಿಗ ಎಂದು ನಾವು ಹರಸೋಣ.