ಕನ್ನಡ ಕಿರುತೆರೆ ಲೋಕದ ಚಿರಪರಿಚಿತ ಪ್ರತಿಭಾನ್ವಿತ ಕಲಾವಿದೆ ನಯನ ಅವರು ಯಾರಿಗೆ ಗೊತ್ತಿಲ್ಲ ಹೇಳಿ, ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಸೀಸನ್ 2 ನಲ್ಲಿ ಕಂಟೆಸ್ಟೆಂಟ್ ಆಗಿ ಸ್ಮಾರ್ಟ್ ಸ್ಕ್ರೀನ್ ಗೆ ಎಂಟ್ರಿ ಕೊಟ್ಟ ಇವರು ನಂತರ ಹಿಂತಿರುಗಿ ನೋಡಿದ್ದೇ ಇಲ್ಲ. ತನಗೆ ಸಿಕ್ಕ ವೇದಿಕೆಯನ್ನು ಅತ್ಯಂತ ಯಶಸ್ವಿಯಾಗಿ ಬಳಸಿಕೊಂಡ ನಯನ ಅವರು ಬಳಿಕ ಕಾಮಿಡಿ ಚಾಂಪಿಯನ್ ಸೇರಿದಂತೆ ಅನೇಕ ಜೀ ಕನ್ನಡ ವಾಹಿನಿಯ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು.
ಇವರ ಖ್ಯಾತಿ ಎಷ್ಟರ ಮಟ್ಟಿಗೆ ಬೆಳೆದಿದ್ದು ಎಂದರೆ ಇವರನ್ನು ಕರೆಸದ ಚಾನೆಲ್ ಕನ್ನಡದಲ್ಲಿ ಇಲ್ಲವೇ ಇಲ್ಲ ಎನ್ನಬಹುದು. ಅಷ್ಟರಮಟ್ಟಿಗೆ ಕನ್ನಡದ ಎಲ್ಲಾ ವಾಹಿನಿಯಲ್ಲೂ ಕೂಡ ನಿರೂಪಕಿಯಾಗ, ರಿಯಾಲಿಟಿ ಶೋಗಳ ಕಂಟೆಸ್ಟೆಂಟ್ ಆಗಿ, ಧಾರಾವಾಹಿಯ ಪಾತ್ರಗಳಲ್ಲಿ ಕೂಡ ನಯನ ಮಿಂಚಿದರು.
ಮಾತಿನಮಲ್ಲಿ ಎನ್ನುವ ಬಿರುದು ಕೂಡ ಪಡೆದಿರುವ ನಯನ ಅವರು ತಮ್ಮ ಮಾತು ಮತ್ತು ನಟನೆ ಮೂಲಕ ಜೂನಿಯರ್ ಉಮಾಶ್ರೀ ಎಂದು ಕರೆಸಿಕೊಂಡಿದ್ದಾರೆ. ಕಿರುತೆರೆಯಿಂದ ಬೆಳ್ಳಿ ತೆರೆಗೂ ಕೂಡ ಎಂಟ್ರಿ ಕೊಟ್ಟಿರುವ ಇವರು ದೊಡ್ಡ ದೊಡ್ಡ ಸ್ಟಾರ್ ಸಿನಿಮಾಗಳಲ್ಲೂ ಕೂಡ ಕಾಮಿಡಿ ರೋಲ್ ಗಳಲ್ಲಿ ಝಲಕ್ ತೋರಿಸಿದ್ದಾರೆ.
ಅತಿ ಚಿಕ್ಕ ವಯಸ್ಸಿಗೆ ಕರ್ನಾಟಕದ ಮನೆ ಮನೆ ಮಾತಾಗಿರುವ ನಟಿ ನಯನ ಈಗ ವೈಯಕ್ತಿಕ ಜೀವನದಲ್ಲಿ ಕೂಡ ಒಂದು ಪ್ರಮುಖ ಘಟ್ಟ ತಲುಪಿದ್ದಾರೆ. ಕಲಾವಿದೆಯಾಗಿ ಯಶಸ್ಸಿನ ಉತ್ತುಂಗದಲ್ಲಿದ್ದರೂ ವೈಯುಕ್ತಿಕ ಜೀವನದ ಜವಾಬ್ದಾರಿಗಳನ್ನು ಮರೆಯದ ಈಕೆ ಇತ್ತೀಚಿಗೆ ಗುಡ್ ನ್ಯೂಸ್ ಹೇಳಿದ್ದರು. ನೋಡ ನೋಡುತ್ತಿದ್ದಂತೆ ದಿನಗಳು ಉರುಳಿ ಇಂದು ಮುದ್ದಾದ ಹೆಣ್ಣು ಮಗುವಿಗೆ ನಯನ ಜನ್ಮ ಕೊಟ್ಟಿದ್ದಾರೆ.
ಕಳೆದೆರಡು ವಾರಗಳ ಹಿಂದೆ ಅದ್ದೂರಿಯಾಗಿ ಕುಟುಂಬದವರು ನಯನಾಗೆ ಸೀಮಂತ ಕಾರ್ಯಕ್ರಮವನ್ನುಶಾಸ್ತ್ರೋಕ್ತವಾಗಿ ನೆರವೇರಿಸಿದ್ದರು. ಅದಕ್ಕೂ ಮುನ್ನ ಆಕೆ ಕಾಣಿಸಿಕೊಂಡ ಎಲ್ಲಾ ಕಾರ್ಯಕ್ರಮಗಳಲ್ಲೂ ಕೂಡ ವಾಹಿನಿ ವತಿಯಿಂದ ಆಕೆಗೆ ಸೀಮಂತ ಮಾಡಲಾಗಿತ್ತು.
ಆ ಸಮಯದಲ್ಲೆಲ್ಲ ಮಗು ಬಗ್ಗೆ ಪ್ರಶ್ನೆ ಕೇಳಿದಾಗ ನಯನ ತಮ್ಮ ನಿರೀಕ್ಷೆ ಏನಿದೆ ಎಂದು ಹೇಳಿಕೊಳ್ಳುತ್ತಿದ್ದರು. ತನಗೆ ಯಾವ ಮಗು ಆದರೂ ಸಂತೋಷ. ಆದರೆ ಪತಿಗೆ ಹೆಣ್ಣುಮಕ್ಕಳು ಎಂದರೆ ಇಷ್ಟ ಹಾಗಾಗಿ ಮನೆಗೆ ಮೊದಲು ಪುಟ್ಟಲಕ್ಷ್ಮಿ ಪುಟ್ಟ ಸರಸ್ವತಿ ಅಥವಾ ಪುಟ್ಟಶಕ್ತಿ ಬರಲಿ ಗಂಡು ಮಗುವಾದರೂ ಪರವಾಗಿಲ್ಲ ಆತನನ್ನು ದೇಶಕ್ಕೆ ಒಬ್ಬ ಯೋಧನನ್ನಾಗಿ ಮಾಡೋಣ ಎಂದು ಮಾತನಾಡಿಕೊಳ್ಳುತ್ತಿದ್ದೆವು, ಯಾವ ಮಕ್ಕಳಾದರೂ ಪರವಾಗಿಲ್ಲ ದೇವರ ಆಶೀರ್ವಾದದಿಂದ ಒಳ್ಳೆಯದಾದರೆ ಸಾಕು ಎಂದು ಹೇಳುತ್ತಿದ್ದರು.
ನಯನ ಅವರು ತಾವು ಗರ್ಭಿಣಿ ಎನ್ನುವುದನ್ನು ರಿವೀಲ್ ಮಾಡುತ್ತಿದ್ದಂತೆ ಸೋಶಿಯಲ್ ಮೀಡಿಯಾಗಳಲ್ಲಿ ಅನೇಕ ಬಾರಿ ಆಕೆಗೆ ಮಗು ಆಯಿತು ಎನ್ನುವ ಗಾಳಿಸುದ್ದಿ ಹರಿದಾಡುತ್ತಿತ್ತು. ಇದರಿಂದ ಬೇಸರಕೊಂಡ ನಟಿ ಮಗು ವಿಚಾರದಲ್ಲಿ ಬೇಳೆ ಬೇಯಿಸಿಕೊಳ್ಳಬೇಡಿ ನಾನು ನನ್ನ ಮಗುವಿಗೆ ವಿಚಾರವನ್ನು ಅಧಿಕೃತವಾಗಿ ತಿಳಿಸುತ್ತೇನೆ ಎಂದು ತಮ್ಮದ ಶೈಲಿಯಲ್ಲಿ ಖಡಕ್ ವಾರ್ನಿಂಗ್ ಕೊಟ್ಟಿದ್ದರು.
ಅಂತೆಯೇ ಇಂದು ನಟಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅವರ ಪತಿ ಶರತ್ ಕೈಯಲ್ಲಿ ಮುದ್ದು ಮಗುವನ್ನು ಹಿಡಿದಿರುವ ಫೋಟೋ ಹಂಚಿಕೊಂಡು ನನ್ನ ಜೀವನದ ಇಬ್ಬರು ಪ್ರಮುಖ ವ್ಯಕ್ತಿಗಳು ಒಂದೇ ಪ್ರೇಮ್ ನಲ್ಲಿ ಇದ್ದಾರೆ ಎಂದು ಬರೆದುಕೊಂಡು ಮನೆಗೆ ಪುಟ್ಟಲಕ್ಷ್ಮಿ ಆಗಮನವಾಗಿದೆ ಎನ್ನುವ ಸಿಹಿ ಸುದ್ದಿ ಹಚ್ಚಿಕೊಂಡಿದ್ದಾರೆ, ನಮ್ಮ ಕಡೆಯಿಂದ ಕೂಡ ಅವರ ಕುಟುಂಬಕ್ಕೆ ಶುಭ ಹಾರೈಸೋಣ.