ಕನ್ನಡದ ಬಿಗ್ ಬಾಸ್ ಸೀಸನ್ 10 ರ (Bigboss S10) ಆಟ ದಿನೇ ದಿನೇ ರಂಗೇರುತ್ತಿದೆ. ಅಖಾಡಕ್ಕೆ ಇಳಿದ ರಣಕಲಿಗಳಂತೆ ಟಾಸ್ಕ್ ಇದ್ದಾಗಲೂ ಟಾಸ್ಕ್ ಇಲ್ಲದಿದ್ದಾಗಲೂ ಒಬ್ಬರ ಮೇಲೆ ಒಬ್ಬರು ಮಾತಿನಲ್ಲಿ ಎಗರಿ ಬೀಳುತ್ತಿದ್ದಾರೆ. ಸೀಸನ್ ಶುರುವಾಗಿ ಕೇವಲ 20 ದಿನಗಳು ಕಳೆದಿದೆ ಅಷ್ಟೇ.
ಬಿಗ್ ಬಾಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟು ಬೇಗ ಮೂರನೇ ವಾರದ ಪಂಚಾಯಿತಿ ಎಪಿಸೋಡ್ ನಲ್ಲಿಯೇ ಕಿಚ್ಚ ಸುದೀಪ್ (Kicha Sideep guess finalist) ಅವರು ನನಗೆ ಒಬ್ಬರು ಫೈನಲಿಸ್ಟ್ ಕಾಣುತ್ತಿದ್ದಾರೆ ಎಂದು ಹೇಳಿಕೆ ಕೊಟ್ಟುಬಿಟ್ಟಿದ್ದಾರೆ. ಅದು ಕೂಡ ಹರ ಹರ ಮಹಾದೇವ ಧಾರವಾಹಿ ಖ್ಯಾತಿಯ ವಿನಯ್ ಗೌಡ (Vinay Gowda) ಅವರಿಗೆ.
ಆದರೆ ಇತ್ತ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ವಿನಯ್ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ (trolls) ಆಗುತ್ತಿದೆ ಮತ್ತು ನೆಟ್ಟಿಗರು ವಿನಯ್ ಆಟವನ್ನು ಖಂಡಿಸಿ ಮನಸ್ಸೋ ಇಚ್ಛೆ ಕಮೆಂಟ್ ಮಾಡುತ್ತಿದ್ದಾರೆ. ಇದಕ್ಕೆಲ್ಲ ಬಿಗ್ ಬಾಸ್ ಕಾರಣ ಎಂದು ವಿನಯ್ ಪತ್ನಿ ಅಕ್ಷತಾ ಕ’ಣ್ಣೀ’ರು (Vinay wife Akshatha) ಇಟ್ಟಿದ್ದಾರೆ.
ಲೈವ್ ನೋಡಿದವರಿಗೆ ಗೊತ್ತಾಗುತ್ತದೆ ವಿನಯ್ ಎಷ್ಟು ಒಳ್ಳೆಯವರು ಎಂದು, ವಿನಯ್ ಒಳ್ಳೆತನ ಕೂಡ ಮನೆಯಲ್ಲಿ ಇದೆ. ಆದರೆ ಪ್ರೋಮೋಗಳನ್ನು ಕಟ್ ಮಾಡಿ ಬಿಡುತ್ತಿರುವುದರಲ್ಲಿ ಬರಿ ವಿನಯ್ ಅವರ ಜೊತೆ ಕಿತ್ತಾಡಿಕೊಂಡಿರುವುದು, ಕೂಗಾಡಿರುವುದು ಇದೇ ಬರುತ್ತಿದೆ.
ಚಾನೆಲ್ ನವರು ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಗೊತ್ತಿಲ್ಲ ಎಂದು ಖಾಸಗಿ ಯೌಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ಕೊಡುವಾಗ ತಮಗಾಗುತ್ತಿರುವ ಬೇಸರದ ಬಗ್ಗೆ ದುಃ’ಖ ತೋಡಿಕೊಂಡಿದ್ದಾರೆ. ವಿನಯ್ ಅವರು ಇರುವುದೇ ಹಾಗೆ ಅವರು ಜೋರಾಗಿ ಮಾತನಾಡುತ್ತಾರೆ ಮನೆ ಅಂದಮೇಲೆ ಕತ್ತೆ, ಕೋತಿ ಈ ರೀತಿ ಮಾತುಗಳನ್ನು ಕರೆಯುವುದು ಮಾಮೂಲು, ಆದರೆ ಅದನ್ನೇ ಹೈಲೈಟ್ ಮಾಡುತ್ತಿದ್ದಾರೆ.
ಜೊತೆಗೆ ಪ್ರತಾಪ್ ಮೇಲೆ ಹೀಗೆಂದರು, ಕಾರ್ತಿಕ್ ಗೆ ಹೀಗಂದರೂ ಅದನ್ನೇ ಹೈಲೈಟ್ ಮಾಡುತ್ತಿದ್ದಾರೆ ಹೊರತು ಅವರ ಪಕ್ಕದಲ್ಲಿ ಕೂತಿಕೊಂಡು ಮಾತನಾಡಿದ್ದು ತೋರಿಸುತ್ತಿಲ್ಲ. ಕಳೆದ ಬಾರಿ ಪ್ರತಾಪ್ ಗೆ ಹೇರ್ ಕಟ್ ಮಾಡಿಸಿ ಡ್ರೆಸ್ ಮಾಡಿಕೊಟ್ಟಿದ್ದರು ಅದರ ಬಗ್ಗೆ ಯಾರು ಮಾತನಾಡುತ್ತಿಲ್ಲ.
ಇಕತ್ತೀ ನನಗೆ ಬೆದರಿಕೆ ಕರೆಗಳು ಕೂಡ ಬರುತ್ತಿವೆ. ತುಂಬಾ ಕೆಟ್ಟದಾಗಿ ಮೆಸೇಜ್ ಕೂಡ ಮಾಡುತ್ತಾನೆ ನನ್ನ ಮಗನಿಗೂ ಕೂಡ ಅವರ ಅಪ್ಪನ ಬಗ್ಗೆ ಕೆಟ್ಟದಾಗಿ ಹೇಳುತ್ತಿದ್ದಾರೆ. ನನಗೆ ಕಮೆಂಟ್ ಮಾಡಿ ಅಂತಹ ಮನುಷ್ಯನ ಜೊತೆ ಹೇಗಿದ್ದೀಯಾ ನೀನು ಅವನನ್ನು ಬಿಡುವುದೇ ಒಳ್ಳೆಯದು ಎನ್ನುತ್ತಾರೆ ಇದನ್ನು ಕೇಳೋಕ ನಾವು ಬಿಗ್ ಬಾಸ್ ಗೆ
ಕಳಿಸಿದ್ದು.
ನಾನು ಎಷ್ಟು ವರ್ಷಗಳಿಂದ ವಿನಯ್ ಜೊತೆ ಬದುಕಿದ್ದೇನೆ, ಅವನು ಹಂತ ಹಂತವಾಗಿ ತುಂಬಾ ಕಷ್ಟಪಟ್ಟು ಬೆಳೆದ, ಅದೇ ರೀತಿ ಅವನು ಒಳ್ಳೆಯ ವ್ಯಕ್ತಿಯು ಕೂಡ. ವಿನಯ್ ಸ್ಟ್ರಾಂಗ್ ಕಂಟೆಸ್ಟಂಟ್ ಎಂದು ಹೇಳಿದಾಗ ಕೇಳಿ ನನಗೆ ಬಹಳ ಖುಷಿಯಾಯಿತು ಆದರೆ ಇತ್ತೀಚೆಗೆ ತುಂಬಾ ನೆಗೆಟಿವ್ ಆಗಿ ತೋರಿಸುತ್ತಿದ್ದಾರೆ.
ಮೊದಲೆರಡು ವಾರ ಸಾಮಾನ್ಯ ಎಂದು ಕೊಡು ಸುಮ್ಮನೆ ಅದೇ ಮೂರನೇ ವಾರದಲ್ಲಿ ವಿಪರೀತ ಹಾಗೂ ನಾಲ್ಕನೇ ವಾರದಲ್ಲೂ ಅದೇ ಮುಂದುವರೆಯುತ್ತಿದೆ. ಇಲ್ಲಿ ಏನಾಗುತ್ತಿದೆ ಎನ್ನುವುದರ ಬಗ್ಗೆ ಗೊಂದಲವಿದೆ ಈ ಬಗ್ಗೆ ವಿಚಾರಿಸೋಣ ಎಂದರೆ ಚಾನೆಲ್ ಗೆ ಕರೆ ಮಾಡಿದರೆ ಅವರು ಸ್ವೀಕರಿಸುವುದೇ ಇಲ್ಲ ಎಂದು ಕ’ಣ್ಣೀ’ರು ಹಾಕಿದ್ದಾರೆ.
https://youtu.be/7ZarHQSNbzw?si=7vSUP38GcfFGpJeU