ಯಾವಾಗಲೂ ವೇದಿಕೆಗಳಲ್ಲಿ ತಪ್ಪದೇ ಡಾಲಿ ಜನಾರ್ಧನ್ (Dolly Dhananjay) ಅವರಿಗೆ ಎದುರಾಗುವ ಸಾಮಾನ್ಯ ಪ್ರಶ್ನೆ ಎಂದರೆ ಅವರ ಮದುವೆಯ ಬಗ್ಗೆ. ಇದೀಗ ಅವರು ಮದುವೆ ಬಗ್ಗೆ ಅಲ್ಲದಿದ್ದರೂ ಪ್ರೀತಿ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನಾನು ನಿಜವಾದ ಪ್ರೇಮಿ, ಜಾತಿ-ಧರ್ಮ ಮೀರಿ ಹುಡುಗಿ ಇಷ್ಟ ಪಟ್ಟಿರುವೆ ಎಂದು ಹೇಳುವ ಮೂಲಕ ಸರ್ಪ್ರೈಸ್ ಮಾಡಿದ್ದಾರೆ.
ಆದರೆ ಅವರು ಈ ಬಾರಿ ಹೇಳಿರುವುದು ಅವರು ನಟಿಸಿರುವ ಸಿನಿಮಾದಲ್ಲಿನ ಅವರ ಪಾತ್ರದ ಬಗ್ಗೆ. ಕಳೆದ ವರ್ಷ ಡಾಲಿ ಧನಂಜಯ್, ನವರಸನಾಯಕ ಜಗ್ಗೇಶ್, ಎವರ್ಗೀನ್ ಗ್ರೀನ್ ಸುಮನ್ ರಂಗನಾಥ್, ಅತಿಥಿ ಪ್ರಭುದೇವ್, ದತ್ತಣ್ಣ, ವೀಣಾ ಸುಂದರ್, ಅಧಿತಿ ಪ್ರಭುದೇವ್ ಮುಂತಾದ ಬಹುತಾರಗಣವಿದ್ದ ತೋತಾಪುರಿ ಸಿನಿಮಾ ರಿಲೀಸ್ ಆಗಿತ್ತು.
ಆ ಗೆಲುವಿನ ಬೆನ್ನಲ್ಲೇ ತೋತಾಪುರಿ 2 (Thothapuri 2 Movie) ಸಿನಿಮಾ ಕೂಡ ತಯಾರಾಗಿ ಇದೀಗ ಬಿಡುಗಡೆಗೆ ರೆಡಿಯಾಗಿದೆ. ಟ್ರೈಲರ್ ಕೂಡ ರಿಲೀಸ್ ಆಗಿದ್ದು ಪ್ರೇಕ್ಷಕ ವರ್ಗದಿಂದ ಅಭೂತಪೂರ್ವ ರೆಸ್ಪಾನ್ಸ್ ವ್ಯಕ್ತವಾಗಿದೆ. ಚಿತ್ರದಲ್ಲಿ ಲವರ್ ಬಾಯ್ ಇಮೇಜ್ ನಲ್ಲಿ ಕಾಣಿಸಿಕೊಂಡಿರುವ ಧನಂಜಯ್ ಸಿನಿಮಾ ಹಾಗೂ ಸಿನಿಮಾದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡಿದ್ದಾರೆ.
ನಾನು ಮೊದಲ ಬಾರಿಗೆ ಕತೆ ಕೇಳಿದಾಗಲೇ ತೋತಾಪುರಿ ಸಿನಿಮಾ ಒಪ್ಪಿಕೊಂಡಿದ್ದೆ. ಯಾಕೆಂದರೆ ತೋತಾಪುರಿ ಸಿನಿಮಾ ಕತೆಯಲ್ಲಿ ತಮಾಷೆ ಇತ್ತು, ವಿಷಾದ ಇತ್ತು, ಭಾವುಕತೆ ಇತ್ತು, ಪ್ರೇಕ್ಷಕರ ಮನಮುಟ್ಟಲು ಬೇಕಾದ ಎಲ್ಲಾ ಎಮೋಷನ್ ಕೂಡ ಇದ್ದವು. ಅಲ್ಲದೇ, ನಾನು ಈ ಚಿತ್ರದಲ್ಲಿ ಒಬ್ಬ ಪ್ರಾಮಾಣಿಕ ಪ್ರೇಮಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ.
ರಾತ್ರೋ ರಾತ್ರಿ ನೀರು ಬಿಟ್ಟು ಈಗ ಮೋದಿನಾ ಕರೆದ್ರೆ ಹೇಗೇ.? – ಚಕ್ರವರ್ತಿ ಸೂಲಿಬೆಲೆ.!
ಜಾತಿ, ಧರ್ಮ ಮೀರಿ ಒಬ್ಬ ಹುಡುಗಿಯನ್ನು ಪ್ರೀತಿಸುವ ಪ್ರೇಮಾರಾಧಕನ ಪಾತ್ರ ನನ್ನದು’ ಎಂದಿದ್ದಾರೆ ಡಾಲಿ ಮುಂದುವರೆದು ಇದು ಮಾಸ್, ಕ್ಲಾಸ್ಗಳ ಹಂಗಿಲ್ಲದ ಸಿನಿಮಾ, ಮನುಷ್ಯತ್ವವನ್ನು ಸಂಭ್ರಮಿಸುವ ಸಿನಿಮಾ, ಪ್ರೀತಿಯೇ ಎಲ್ಲಾ ಎಂದು ಸಾರುವ ಸಿನಿಮಾ, ಯಾವುದೇ ನಿರೀಕ್ಷೆಯ ಭಾರವಿಲ್ಲದೆ ನೋಡಿದರೆ ಮಾತ್ರ ಇಷ್ಟವಾಗುವ ರೀತಿಯ ಸಿನಿಮಾ.
ವಿಜಯಪ್ರಸಾದ್ ಸೊಗಸಾಗಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ, ಕೆ.ಎ. ಸುರೇಶ್ ರವರು ಅಪಾರ ಶ್ರಮದಿಂದ ಸಿನಿಮಾವನ್ನು ತೆರೆಗೆ ತರುತ್ತಿದ್ದಾರೆ, ಸಿನಿಮಾದಲ್ಲಿ ಜಗ್ಗಣ್ಣ, ಸುಮನ್ ರಂಗನಾಥನ್, ದತ್ತಣ್ಣ ಹೀಗೆ ಪ್ರತಿಯೊಬ್ಬ ಕಲಾವಿದರು ಕೂಡ ಅದ್ಭುತವಾಗಿ ತಮ್ಮ ಪಾತ್ರಗಳನ್ನು ನಟಿಸಿದ್ದಾರೆ. ಅವರ ಅಭಿನಯ ಥಿಯೇಟರ್ ಇಂದ ಆಚೆ ಬಂದ ಮೇಲೆ ಕೂಡ ಜನರ ಮನಸ್ಸಿನಲ್ಲಿ ಉಳಿಯುವಂತೆ ಇದೆ.
ಇಷ್ಟೆಲ್ಲಾ ಕಾರಣದಿಂದಾಗಿ ತೋತಾಪುರಿ2. ಸಿನಿಮಾ ಬಹಳ ವಿಶೇಷವಾಗಿದೆ ತಪ್ಪದೆ ಸಿನಿಮಾ ನೋಡಿ ಬೆಂಬಲಿಸಿ ಎಂದಿದ್ದಾರೆ. ಈ ಹಿಂದೆ ರಿಲೀಸ್ ಆದ ತೋತಾಪುರಿ 1 ಕೂಡ ಪ್ರೇಕ್ಷಕರನ್ನು ನಕ್ಕು ನಗಿಸುವಂತೆ ಹಾಸ್ಯ ಹೊಂದಿತ್ತು, ಹಾಸ್ಯ ದಿಗ್ಗಜ ಜಗ್ಗೇಶ್ ಅವರು ಇರುವ ಸಿನಿಮಾಗಳ ವಿಶೇಷತೆಯೇ ಅದು ಆದರೆ ಜೊತೆಗೆ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ಸಂದೇಶದ ಸಾರದಂತೆ
ಜಾತಿ ಧರ್ಮಗಳ ಬೇಧವೇ ಇಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಸಾಮರಸ್ಯದಿಂದ ಬದುಕುವ ರೀತಿಯಲ್ಲಿ ಕೂಡ ಸಿನಿಮಾದಲ್ಲಿ ತೋರಿಸಲಾಗಿತ್ತು. ಅಧಿತಿ ಪ್ರಭುದೇವ್ ಅವರು ಮುಸ್ಲಿಂ ಯುವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಸುಮನ್ ರಂಗನಾಥ್ ಅವರು ಸಿಸ್ಟರ್ ಪಾತ್ರ ನಿರ್ವಹಿಸಿದ್ದರು. ಹಾಗಾಗಿ ಸೀಕ್ವೆಲ್ ನಲ್ಲಿ ಕೂಡ ಕಥೆ ಅದೇ ರೀತಿ ಮುಂದುವರೆದಿದೆ ಎನ್ನುವುದನ್ನು ಧನಂಜಯ್ ಅವರ ಸ್ಟೇಟ್ಮೆಂಟ್ ನಿಂದ ಊಹಿಸಬಹುದಾಗಿದೆ.
ಸನಾತನ ಧರ್ಮದಿಂದಲೇ ಸಂವಿಧಾನದ ಉಳಿವು – ಬಸನಗೌಡ ಪಟೀಲ್ ಯತ್ನಲ್