ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ (Gyarantee Scheme) ಬಜೆಟ್ ಮತ್ತು ಬಹಳ ದೊಡ್ಡ ಮೊತ್ತದ್ದು. ಸರ್ಕಾರವು ತನ್ನ ಪ್ರಣಾಳಿಕೆಯ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದಕ್ಕಾಗಿ ಈವರೆಗೆ ಜಾರಿಯಲಲ್ಲಿದ್ದ ಅನೇಕ ಕಲ್ಯಾಣ ಯೋಜನೆಗಳನ್ನು ಕೈ ಬಿಟ್ಟಿದೆ ಎಂದು ಬಜೆಟ್ ಮಂಡನೆ ಆದಾಗನಿಂದಲೂ ಪ್ರತಿಪಕ್ಷಗಳಿಂದ ಆರೋಪ ಇತ್ತು.
ಬೇರೆ ಯೋಜನೆಗಳಿಗೆ ಕತ್ತರಿ ಹಾಕಿ ತನ್ನ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುತ್ತಿದೆ ಎನ್ನುವುದರ ಜೊತೆಗೆ, ಇತ್ತೀಚೆಗೆ ನೋಂದಣಿ ಹಾಗೂ ಮುದ್ರಣ ಶುಲ್ಕ ಹೆಚ್ಚಿಸಿ ಅಕ್ಟೋಬರ್ 1 ರಿಂದಲೇ ಪರಿಶುದ್ಧ ದರ ಜಾರಿ ಮಾಡಿರುವ ಕಾರಣ ಈ ರೀತಿ ಸರ್ಕಾರ ತನ್ನ ರಾಜಸ್ವ ಸಂಗ್ರಹಕ್ಕೆ ಆದಾಯದ ಮೂಲ ಹುಡುಕುತ್ತಿದೆ ಎಂದು ಮಾತನಾಡಿಕೊಳ್ಳಲಾಗುತ್ತಿತ್ತು.
ರಾತ್ರೋ ರಾತ್ರಿ ನೀರು ಬಿಟ್ಟು ಈಗ ಮೋದಿನಾ ಕರೆದ್ರೆ ಹೇಗೇ.? – ಚಕ್ರವರ್ತಿ ಸೂಲಿಬೆಲೆ.!
ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈವರೆಗೆ ಉಳಿಸಿಕೊಂಡಿದ್ದ ಸರ್ಕಾರಕ್ಕೆ ಸಲ್ಲಬೇಕಾದ ಎಲ್ಲಾ ಭಾಗ್ಯಗಳನ್ನು ಕೂಡ ವಸೂಲಿ ಮಾಡಿ ಕೊಡುವ ಕಾರ್ಯಕ್ಕೆ ಕೈ ಹಾಕಿದೆ. ತುಮಕೂರು ಜಿಲ್ಲೆಯಲ್ಲಿಯೇ (Thumakur) ಕೇವಲ 15 ದಿನಗಳಲ್ಲಿ 760 ಕೋಟಿ ಬಾಕಿ ವಸೂಲಿ ಮಾಡಲು ಮುಂದಾಗಿರುವ ಮೂಲಕ ಸರ್ಕಾರವು ಮತ್ತೊಮ್ಮೆ ಸುದ್ದಿಯಲ್ಲಿ ಇದೆ.
ತುಮಕೂರು ಜಿಲ್ಲೆಯಲ್ಲಿರುವ ಒಳಡಾಳಿತ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್, ಕಂದಾಯ, ಶಿಕ್ಷಣ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗಳು, ನಗರಾಭಿವೃದ್ಧಿ, ಲೋಕೋಪಯೋಗಿ, ಸಣ್ಣ ನೀರಾವರಿ, ಕಾನೂನು ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ, ಪಶು ಸಂಗೋಪನೆ ಸೇರಿದಂತೆ ಬಹುತೇಕ ಎಲ್ಲ ಸರ್ಕಾರಿ ಇಲಾಖೆ ಕಚೇರಿಗಳಿಂದ ಸುಮಾರು 760 ಕೋಟಿ ವಿದ್ಯುತ್ ಬಿಲ್ ಬಾಕಿ ಇದೆ ಎನ್ನುವುದು ತಿಳಿದು ಬಂದಿದ್ದು.
ಈ ಹಣವನ್ನು ಕಚೇರಿಗಳಿಂದ ವಸೂಲಿ ಮಾಡಿಕೊಡಲು ಸರ್ಕಾರ ಬೆಸ್ಕಾಂ ಗೆ ತಾಕೀತು ಮಾಡಿದೆ. ಸರ್ಕಾರ ನೀಡಿರುವ ಟಾರ್ಗೆಟ್ ಆದೇಶವನ್ನು ಚಾಚೂ ತಪ್ಪದೇ ಪಾಲಿಸ ಬೇಕಿರುವ ಬೆಸ್ಕಾಂ ಅಧಿಕಾರಿಗಳು (BESCOM) ಕೂಡಲೇ ಬಾಕಿ ಬಿಲ್ ಮೊತ್ತವನ್ನ ಪಾವತಿ ಮಾಡುವಂತೆ ಇಲಾಖೆಯ ಅಧಿಕಾರಿಗಳಿಗೆ ಇದೀಗ ಖಡಕ್ ಎಚ್ಚರಿಕೆ ನೀಡಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಸರ್ಕಾರದ ನಾನಾ ಇಲಾಖೆಗಳ ಕಚೇರಿಗಳಿಂದಲೇ ದೊಡ್ಡ ಮೊತ್ತದ ವಿದ್ಯುತ್ ಬಿಲ್ ಬಾಕಿ ಇದೆ. ಬರೋಬ್ಬರಿ 760 ಕೋಟಿ ರೂಪಾಯಿ ವಿದ್ಯುತ್ ಬಿಲ್ ಬಾಕಿ ಇದೆ. ಇದು ಕಳೆದ 15, 20 ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಿಲ್ ಆಗಿದೆ. ಹಲವು ಬಾರಿ ಈ ಕಚೇರಿಗಳಿಗೆ ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಿಲ್ ಕಟ್ಟುವಂತೆ ನೋಟಿಸ್ ಕಳುಹಿಸಿ ಹಣ ಕಟ್ಟುವಂತೆ ಸಂಬಂಧ ಪಟ್ಟ ಇಲಾಖೆಗಳಿಗೆ ಹೋಗಿ ಆಯಾ ಇಲಾಖೆ ಅಧಿಕಾರಿಗಳಿಗೆ ಬೆಸ್ಕಾಂ ಸಿಬ್ಬಂದಿ ಮನವಿ ಮಾಡಿಕೊಂಡಿದ್ದರು ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ.
ಸನಾತನ ಧರ್ಮದಿಂದಲೇ ಸಂವಿಧಾನದ ಉಳಿವು – ಬಸನಗೌಡ ಪಟೀಲ್ ಯತ್ನಲ್
ಈಗ ಸರ್ಕಾರದ ಆದೇಶ ಇರುವುದರಿಂದ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಎಲ್ಲಾ ಕಚೇರಿಗಳಿಗೂ ಖಡಕ್ ಎಚ್ಚರಿಕೆ ನೀಡಿದ್ದಾರೆ ಈ ಬಾರಿ ಈಗ ನೀಡಿರುವ ಗಡುವಿನೊಳಗೆ ಅದರೆ ಇನ್ನು 15 ದಿನಗಳಲ್ಲಿ ವಿದ್ಯುತ್ ಶುಲ್ಕವನ್ನು ಪಾವತಿ ಮಾಡಲೇಬೇಕು ಎಂದು ನೋಟಿಸ್ ಕೊಟ್ಟಿದ್ದಾರೆ. ತುಮಕೂರಿನ ಸರ್ಕಾರಿ ಕಚೇರಿಗಳಲ್ಲಿಯೇ ಇಷ್ಟು ವಿದ್ಯುತ್ ಬಿಲ್ ಪಾವತಿ ಬಾಕಿ ಇದೆ ಎಂದರೆ ರಾಜ್ಯದಾದ್ಯಂತ ಸರ್ಕಾರ ಹಳೆ ಬಾಕಿ ವಸೂಲಿ ಕೇಳಿದ್ದಾರೆ ರಾಜ್ಯದ ಖಜನೆಗೆ ಎಷ್ಟು ಆದಾಯ ತುಂಬಬಹುದು ಎಂದು ಜನಸಾಮಾನ್ಯರು ಲೆಕ್ಕ ಹಾಕುತ್ತಿದ್ದಾರೆ.