Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ನೀವು ಒಮ್ಮೆಯಾದರೂ ಭೇಟಿ ನೀಡಲೇಬೇಕು.? ಯಾಕೆ ಗೊತ್ತಾ.?

Posted on July 25, 2023 By Admin No Comments on ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ನೀವು ಒಮ್ಮೆಯಾದರೂ ಭೇಟಿ ನೀಡಲೇಬೇಕು.? ಯಾಕೆ ಗೊತ್ತಾ.?

ನಮ್ಮ ಹಿಂದೂ ಸಂಪ್ರದಾಯದಲ್ಲಿ ತಿರುಪತಿ ತಿಮ್ಮಪ್ಪನಿಗೆ ತನ್ನದೇ ಆದಂತಹ ಒಂದು ಹಿನ್ನೆಲೆ ಇದೆ ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಯಾವುದೇ ಒಂದು ಹೊಸ ಕೆಲಸವನ್ನು ಆರಂಭಿಸಬೇಕು ಎಂದರೆ ತಿರುಪತಿ ತಿಮ್ಮಪ್ಪನ ದರ್ಶನವನ್ನು ಪಡೆದು ನಂತರ ಆ ಕೆಲಸವನ್ನು ಮುಂದುವರೆಸುತ್ತಾರೆ. ಮನೆಯಲ್ಲಿ ಶಾಂತಿ ನೆಲೆಸಲು ಸುಖ ಸಮೃದ್ಧಿಯಿಂದ ಕೂಡಿರಬೇಕು ಎಂದು ಹಾಗೆ ಇನ್ನು ಹಲವಾರು ಕಾರಣಗಳಿಗೆ ತಿರುಪತಿ ದೇವಸ್ಥಾನಗಳಿಗೆ ನೀವು ಭೇಟಿ ನೀಡಲೇಬೇಕು.

ಪುರಾಣಗಳ ಪ್ರಕಾರ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಹಲವಾರು ಕುತೂಹಲಕಾರಿ ದಂತಕಥೆಗಳನ್ನು ಹೊಂದಿದೆ ಭಗವಾನ್ ವಿಷ್ಣು ತಿರುಪತಿಯಲ್ಲಿರುವ ನಗರದ ಏಳು ಬೆಟ್ಟಗಳಲ್ಲಿ ಒಂದು ಬೆಟ್ಟದಲ್ಲಿ ನೆಲೆಸಿದ್ದಾರೆ ಎನ್ನುವಂತಹ ನಂಬಿಕೆ ಪ್ರತೀತಿ ನಮ್ಮಲ್ಲಿದೆ. ಪ್ರತಿನಿತ್ಯವೂ ಸಹ ಸಾವಿರಾರು ಜನರು ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆಯನ್ನು ತೀರಿಸುತ್ತಾರೆ ಅಷ್ಟೇ ಅಲ್ಲದೆ ಹೊಸದಾಗಿ ಅಂದರೆ ನವ ವಿವಾಹಿತರು, ಶಾಂತಿಯನ್ನು ಬಯಸುವವರು ಅಷ್ಟೇ ಅಲ್ಲದೆ ವಿದ್ಯಾರ್ಥಿಗಳು ಈ ದೇವಸ್ಥಾನಕ್ಕೆ ಪ್ರಯಾಣ ಬೆಳೆಸಿ ಭಗವಂತನನ್ನು ಪ್ರಾರ್ಥಿಸಿ ಬರುತ್ತಾರೆ.

ತಿರುಪತಿಗೆ ನಾವು ಏಕೆ ಭೇಟಿ ನೀಡಬೇಕು ಗೊತ್ತಾ? ಈ ವಿಷಯದ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ ಮಕ್ಕಳಿಗೆ ಶಾಲೆ ಪ್ರಾರಂಭವಾಗುವ ಮೊದಲು ಯಾವುದೇ ಹೊಸ ಕೆಲಸಗಳನ್ನು ಪ್ರಾರಂಭಿಸುವ ಮೊದಲು ಪ್ರತಿ ಕುಟುಂಬವು ಸಹ ತಮ್ಮ ಚಿಕ್ಕ ಮಕ್ಕಳನ್ನು ಭಗವಾನ್ ತಿರುಪತಿ ತಿಮ್ಮಪ್ಪನನ್ನು ಭೇಟಿ ಮಾಡಲು ಅವರ ಆಶೀರ್ವಾದವನ್ನು ಪಡೆದುಕೊಳ್ಳಲು ಬರುತ್ತಾರೆ ಇದು ಭಾರತೀಯ ಸಂಪ್ರದಾಯವಾಗಿದೆ ಯಾತ್ರಿಕರು ವೆಂಕಟೇಶ್ವರ ಸ್ವಾಮಿ ತನ್ನ ಭಕ್ತರನ್ನು ಆಶೀರ್ವದಿಸಲು ಸ್ವರ್ಗದಿಂದ ತಿರುಮಲ ತಿರುಪತಿಗೆ ಇಳಿದು ಬಂದರೆ ಎನ್ನುವ ನಂಬಿಕೆ ಇದೆ

ಹಿಂದೂ ಪುರಾಣಗಳ ಪ್ರಕಾರ ಬಾಲಾಜಿಯನ್ನು ಕಲಿಯುಗದ ಪುರುಷೋತ್ತಮ ದೇವನೆಂದು ಅಥವಾ ಆಕಾಶ ಅವತಾರ ಎಂದು ಚಿತ್ರಿಸುತ್ತಾರೆ. ತಿರುಮಲ ದೇವಸ್ಥಾನವನ್ನು ಏಳು ಬೆಟ್ಟೆಗಳ ದೇವಾಲಯ ಎಂದು ಸಹ ಕರೆಯಲಾಗುತ್ತದೆ ಶೇಷಾಚಲಂ ಪರ್ವತ ಶ್ರೇಣಿಯ ಭಾಗವಾಗಿರುವ ಈ ಬೆಟ್ಟಗಳು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿದೆ ಮತ್ತು ಇದು ಜನಪ್ರಿಯ ಪ್ರವಾಸಿ ತಾಣವಾಗಿದೆ ಈ ದೇವಾಲಯವು ದಕ್ಷಿಣ ಭಾರತದಲ್ಲಿ ಶೇಷಚಲಂ ಪರ್ವತ ಶ್ರೇಣಿಯನ್ನು ರೂಪಿಸುವ ಏಳು ಶಿಖರಗಳಲ್ಲಿ ಒಂದನ್ನು ಹೊಂದಿದೆ ಅದರ ಅದ್ಭುತ ಸೌಂದರ್ಯ ಮತ್ತು ಧಾರ್ಮಿಕ ಆಕರ್ಷಣೆಯಿಂದಾಗಿ ಇದು ಹಲವಾರು ವರ್ಷಗಳಿಂದ ಭಾರತ ಮತ್ತು ಪ್ರಪಂಚದ ಇತರೆ ಭಾಗಗಳಿಂದ ಜನರನ್ನು ಸೆಳೆಯುತ್ತಿದೆ

ಶ್ರೀ ಭೂವರಹ ಸ್ವಾಮಿ ಮತ್ತು ಸ್ವಾಮಿ ಪುಷ್ಕರಣಿ ದೇವಾಲಯಗಳು ಇಲ್ಲಿನ ಅತ್ಯಂತ ಆಕರ್ಷಣೀಯ ಮತ್ತು ಮನಸ್ಸಿಗೆ ಶಾಂತಿಯನ್ನು ನೀಡುವಂತಹ ಧಾರ್ಮಿಕ ಸ್ಥಳಗಳಾಗಿವೆ. ಪುರಾಣಗಳ ಪ್ರಕಾರ ವೆಂಕಟೇಶ್ವರನ 16.2 ಎಕರೆ ಭೂಮಿಯಲ್ಲಿ ಸುಮಾರು 5000 ವರ್ಷಗಳ ಐತೋಹ್ಯವನ್ನು ಹೊಂದಿದೆ, ವಾಸ್ತು ಶೈಲಿಯಲ್ಲಿ ತಿರುಮಲ ಬೆಟ್ಟವನ್ನು ತನ್ನ ಶಾಶ್ವತ ನೆಲೆಯಾಗಿ ಆರಿಸಿಕೊಂಡನು

ದ್ರಾವಿಡ ಶೈಲಿಯಲ್ಲಿರುವ ಈ ದೇವಾಲಯವನ್ನು ಸುಮಾರು ಕ್ರಿಸ್ತಶಕ 300ರಲ್ಲಿ ನಿರ್ಮಿಸಲಾಗಿತ್ತು ಎನ್ನುವುದರ ಬಗ್ಗೆ ಉಲ್ಲೇಖಗಳಿವೆ. ಇನ್ನು ವೆಂಕಟೇಶ್ವರನ ತನ್ನ ಮೊದಲ ಶ್ರೀವಾರಿ ಲಡ್ಡನ್ನು ಪಡೆದ ದಿನದಿಂದ ಪ್ರತಿದಿನವೂ ಕೂಡ ಲಡ್ಡುಗಳನ್ನು ಪ್ರಸಾದವಾಗಿ ನೀಡಲಾಗುತ್ತದೆ ಹೊಸ ವರ್ಷವನ್ನು ತಿರುಪತಿಗೆ ಭೇಟಿ ನೀಡುವುದರ ಮೂಲಕ ಆರಂಭಿಸಿದರೆ ಉತ್ತಮ ಎನ್ನುವ ಕಾರಣದಿಂದ ಲಕ್ಷಾಂತರ ಭಕ್ತರು ಹೊಸ ವರ್ಷದ ಆರಂಭವನ್ನು ಇಲ್ಲಿ ಪಡೆಯುತ್ತಾರೆ.

ಬ್ರಹ್ಮೋತ್ಸವಂ (September October) ಪವಿತ್ರೋತ್ಸವಂ (November December), ಮಕರ ಸಂಕ್ರಾಂತಿ (January February) ನಂತಹ ಧಾರ್ಮಿಕ ಉತ್ಸವಗಳಲ್ಲಿ ದೇಶ ವಿದೇಶಗಳಿಂದ ಭಕ್ತರು ಬಂದು ಇಲ್ಲಿ ಸೇರುತ್ತಾರೆ. ಮನಸ್ಸಿಗೆ ಶಾಂತಿ ಹಾಗೆ ಯಾವುದೇ ಒಂದು ಒಳ್ಳೆಯ ಕೆಲಸ ಪ್ರಾರಂಭವಾಗಲು ಮಕ್ಕಳ ವಿದ್ಯಾಭ್ಯಾಸ ಪ್ರಾರಂಭವಾಗುವ ಮೊದಲು ಮನಸ್ಸಿಗೆ ಶಾಂತಿಯನ್ನು ತುಂಬಿಕೊಳ್ಳಲು ಇನ್ನು ನಾನ ಕಾರಣಗಳಿಗೆ ತಿರುಪತಿಗೆ ಭೇಟಿ ನೀಡಿದರೆ ತಿಮ್ಮಪ್ಪನು ಅವರ ಎಲ್ಲಾ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ. ನೀವು ಸಹ ವೆಂಕಟೇಶ್ವರ ಸ್ವಾಮಿಯ ಭಕ್ತರಾಗಿದ್ದರೆ ನಮೋ ವೆಂಕಟೇಶ್ವರ ಸ್ವಾಮಿ ಎಂದು ಕಮೆಂಟ್ಸ್ ಮಾಡಿ.

News Tags:Balaji, Venkatesheara swamy

Post navigation

Previous Post: ಮಹಿಳೆಯರಿಗೆ ಗುಡ್ ನ್ಯೂಸ್ ಉಚಿತ ಪ್ರಯಾಣ ಮಾಡಲು ಶಕ್ತಿ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ.! ಕೂಡಲೇ ಅರ್ಜಿ ಸಲ್ಲಿಸಿ.!
Next Post: ನಿಮ್ಮ ಮನೆಯ ವಿದ್ಯುತ್ ಮೀಟರ್ ನಿಮ್ಮ ತಾತ ಅಥವಾ ತಂದೆಯ ಹೆಸರಿನಲ್ಲಿದ್ದರೆ ನಿಮ್ಮ ಹೆಸರಿಗೆ ಮಾಡಿಸಿಕೊಳ್ಳುವಂತಹ ಸುಲಭ ವಿಧಾನ.

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme