ನಾವು ದೈನಂದಿನ ವಾಗಿ ಬಳಸುವಂತಹ ವಿದ್ಯುತ್ ಗೆ ನಾವು ಹಣ ಪಾವತಿಸುತ್ತೇವೆ ವಿದ್ಯುತ್ ಮೀಟರ್ ನ ಆಧಾರದ ಮೇಲೆ ಇಂತಿಷ್ಟು ಹಣ ಎಂದು ನಾವು ವಿದ್ಯುತ್ ಬಿಲ್ಲನ್ನು ಪಾವತಿ ಮಾಡುತ್ತೇವೆ. ಹೀಗಿರುವಂತಹ ಸಂದರ್ಭದಲ್ಲಿ ನಮ್ಮ ಮನೆಯ ವಿದ್ಯುತ್ ಮೀಟರ್ ನಮ್ಮ ತಾತ ಅಥವಾ ತಂದೆಯ ಹೆಸರಿನಲ್ಲಿ ಇದ್ದರೆ ನಮ್ಮ ಹೆಸರಿಗೆ ಮಾಡಿಸಿಕೊಳ್ಳುವಂತಹ ವಿಧಾನವನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಎಷ್ಟೋ ಮನೆಗಳಲ್ಲಿ ವಿದ್ಯುತ್ ಮೀಟರ್ ತನ್ನ ತಂದೆ ಅಥವಾ ತಾತನ ಹೆಸರಿನಲ್ಲಿ ಇದ್ದರೆ ಅವರು ಮರಣ ಹೊಂದಿದ ನಂತರ ತಮ್ಮ ಹೆಸರಿಗೆ ಮಾಡಿಸಿಕೊಂಡಿರುವುದಿಲ್ಲ ಇದರಿಂದ ಕೆಲವೊಂದು ಸಮಸ್ಯೆಗಳು ಉದ್ಭವ ಆಗಬಹುದು ಆದ್ದರಿಂದ ನಿಮ್ಮ ಮನೆಗಳಲ್ಲಿ ನಿಮ್ಮ ತಂದೆ ಅಥವಾ ತಾತ ಮರಣ ಹೊಂದಿದ ನಂತರ ವಿದ್ಯುತ್ ಮೀಟರ್ ನಿಮ್ಮ ಹೆಸರಿಗೆ ಮಾಡಿಸಿಕೊಳ್ಳುವುದು ಉತ್ತಮ.
ಹಾಗಾದರೆ ವಿದ್ಯುತ್ ಮೀಟರ್ ಅನ್ನು ನಿಮ್ಮ ತಂದೆ ಅಥವಾ ತಾತನ ಹೆಸರಿನಿಂದ ನಿಮ್ಮ ಹೆಸರಿಗೆ ಹೇಗೆ ಮಾಡಿಸಿಕೊಳ್ಳಬೇಕು ಅದಕ್ಕೆ ಬೇಕಾದಂತಹ ದಾಖಲಾತಿಗಳು ಹಾಗೆಯೇ ಯಾವ ಅರ್ಜಿಯನ್ನು ಅಪ್ಲೈ ಮಾಡಬೇಕು ಹಾಗೆಯೇ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ನಾವು ಇಲ್ಲಿ ತಿಳಿಸುತ್ತಿದ್ದೇವೆ.
ವಿದ್ಯುತ್ ಮೀಟರ್ ನ ಹೆಸರು ಬದಲಿಸಲು ಬೇಕಾಗಿರುವಂತಹ ದಾಖಲಾತಿಗಳು.
-ಆಧಾರ್ ಕಾರ್ಡ್ (Adhar card)
-200 ರೂಪಾಯಿ ಸ್ಟ್ಯಾಂಪ್ ಪೇಪರ್ ( Stamp paper)ಮೇಲೆ ಒಪ್ಪಿಗೆ ಪತ್ರ ಬರೆಯಬೇಕು.
-ಮರಣ ಹೊಂದಿದ ವ್ಯಕ್ತಿಯ ಮರಣ ಪ್ರಮಾಣ ಪತ್ರ ( Death certificate).
ವಿದ್ಯುತ್ ಮೀಟರ್ ತಂದೆ ಅಥವಾ ತಾತನ ಹೆಸರಿನಿಂದ ನಿಮ್ಮ ಹೆಸರಿಗೆ ಮಾಡಿಸಿಕೊಳ್ಳಲು ಮೇಲೆ ತಿಳಿಸಿದಂತಹ ದಾಖಲಾತಿಗಳು ಅತ್ಯಗತ್ಯ ನಂತರ ಇದಕ್ಕೆ ಬೇಕಾದಂತಹ ಪತ್ರ ಸಹ ಬೇಕಾಗುತ್ತದೆ ನೀವು ಇಷ್ಟೆಲ್ಲ ದಾಖಲೆಗಳನ್ನು ತೆಗೆದುಕೊಂಡ ಮೇಲೆ ಅರ್ಜಿ ಬರೆಯಬೇಕು ನಿಮ್ಮ ತಂದೆ ಅಥವಾ ತಾತನ ಹೆಸರಿನಲ್ಲಿರುವ ಮೀಟರ್ ಕನೆಕ್ಷನ್ ಅನ್ನು ನಿಮ್ಮ ಹೆಸರಿಗೆ ಮಾಡಿಸಿಕೊಳ್ಳಬೇಕೆಂದರೆ ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿಯ ಜೊತೆಗೆ ಮೇಲೆ ತಿಳಿಸಿರುವ ಎಲ್ಲಾ ದಾಖಲಾತಿಗಳನ್ನು ದಾಖಲಿಸಿ ನಿಮ್ಮ ಮನೆಗೆ ಹತ್ತಿರದಲ್ಲಿರುವ ವಿದ್ಯುತ್ ವಿತರಣಾ ಕೇಂದ್ರ ಕ್ಕೆ ಹೋಗಿ ಅಲ್ಲಿ ಅರ್ಜಿ ಕೊಟ್ಟು ನೀವು ಒಂದು ಸೀದಿಯನ್ನು ಪಡೆದುಕೊಳ್ಳಬೇಕು ಈ ಒಂದು ವಿಧಾನವನ್ನು ಅನುಸರಿಸಿದರೆ ನೀವು ಕೊಟ್ಟಿರುವ ದಾಖಲೆಗಳನ್ನು ಕಚೇರಿಯಲ್ಲಿರುವ ಕಂಪ್ಯೂಟರ್ ಆಪರೇಟರ್ ಅವರು ದಾಖಲಿಸಿ ಪರಿಶೀಲನೆಯನ್ನು ಮಾಡುತ್ತಾರೆ. ಪರಿಶೀಲಿಸಿದ ನಂತರ ವರ್ಗಾವಣೆ ಮಾಡುತ್ತಾರೆ ನಿಮ್ಮ ತಂದೆ ಅಥವಾ ತಾತನ ಹೆಸರಿನಲ್ಲಿ ಇರುವಂತಹ ವಿದ್ಯುತ್ ಮೀಟರ್ ನಿಮ್ಮ ಹೆಸರಿಗೆ ವರ್ಗಾವಣೆ ಆಗುತ್ತದೆ.
ಸರ್ಕಾರವು ನಾನಾ ಯೋಜನೆಗಳನ್ನು ರೂಪಿಸುತ್ತದೆ ಅದರಲ್ಲಿ ಪ್ರತಿಯೊಬ್ಬರಿಗೂ ಸಹ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುವಂತಹ ಉದ್ದೇಶವನ್ನು ಒಳಗೊಂಡಿರುವ ಈ ಕಾರಣದಿಂದಾಗಿ ನೀವು ನಿಮ್ಮ ತಂದೆ ಅಥವಾ ತಾತನ ಹೆಸರಿನಲ್ಲಿರುವಂತಹ ವಿದ್ಯುತ್ ಮೀಟರ್ ಅನ್ನು ನಿಮ್ಮ ಹೆಸರಿಗೆ ಮಾಡಿಸಿಕೊಂಡರೆ ಮಾತ್ರ ಫ್ರೀ ವಿದ್ಯುತ್ತನ್ನು ಪಡೆದುಕೊಳ್ಳಬಹುದು.
ಆದ್ದರಿಂದ ಯಾರೆಲ್ಲ ನಿಮ್ಮ ತಂದೆ ಅಥವಾ ತಾತನ ಹೆಸರಿನಲ್ಲಿರುವ ವಿದ್ಯುತ್ ಮೀಟರ್ ಅನ್ನು ಬದಲಿಸಿಕೊಳ್ಳದೆ ಇರುವಂತಹವರು ಕೂಡಲೇ ನಿಮ್ಮ ಅರ್ಜಿ ಸಲ್ಲಿಸಿ ನಿಮ್ಮ ಹೆಸರಿಗೆ ಮಾಡಿಸಿಕೊಳ್ಳಿ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯವನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.