ನಮ್ಮ ರಾಜ್ಯದಲ್ಲಿ ಇರುವಂತಹ ಸಾಕಷ್ಟು ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಭೂಮಿಯಲ್ಲಿ ಹುತ್ತು ಬಿತ್ತು, ಬೆಳೆಯನ್ನು ತೆಗೆದು ಅದರಿಂದ ತಮ್ಮನ ಜೀವನಾಂಶವನ್ನು ಸಾಗಿಸುತ್ತಾ ಇದ್ದಾರೆ. ಹೀಗಿರುವಾಗ ಅನೇಕ ರೈತರು ಕೃಷಿ ಬೆಳೆಗಳಿಗೆ ಬಡ್ಡಿ ಇಲ್ಲದೆ ಸಾಲದ ಮೇಲೆ ಅವಲಂಬಿತರಾಗಿರುತ್ತಾರೆ. ಇದೀಗ ರಾಜ್ಯ ಸರ್ಕಾರದಿಂದ ಒಂದು ಹೊಸ ಸುದ್ದಿ ಹೊರ ಬಂದಿದ್ದು ರೈತರಿಗೆ ನೀಡುವಂತಹ ಶೂನ್ಯ ಬಡ್ಡಿ ದರದ ಸಾಲಗಳ ಮೊತ್ತವನ್ನು ಇದೀಗ ಐದು ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.
ಹೌದು ಕರ್ನಾಟಕ ಸರ್ಕಾರವು ಈ ಹಿಂದೆ ರೈತರಿಗೆ 3 ಲಕ್ಷದ ವರೆಗೆ ಬಡ್ಡಿ ಇಲ್ಲದ ಸಾಲಗಳನ್ನು ನೀಡಲಾಗಿತ್ತು ಅವರು ಮಾಡುವಂತಹ ಕೃಷಿ ಆಧಾರದ ಮೇಲೆ ಅವರಿಗೆ ಹಣವನ್ನು ಯಾವುದೇ ಬಡ್ಡಿಯನ್ನು ನಿರೀಕ್ಷೆ ಮಾಡದೆ ಸಾಲವನ್ನು ಒದಗಿಸುತ್ತಿತ್ತು. ಇದೀಗ ಅದರ ಮೊತ್ತವನ್ನು 5 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿದ್ದು ಇದರ ಅಡಿಯಲ್ಲಿ ರೈತರು ಕೃಷಿಗೆ ಬೇಕಾದಂತಹ ಸಾಲವನ್ನು 5 ಲಕ್ಷದವರೆಗೆ ಪಡೆದುಕೊಳ್ಳಬಹುದು. ಈ ಕುರಿತಾಗಿ ಸಹಕಾರ ಸಚಿವ ಕೆ ಎಸ್ ರಾಜಣ್ಣ ಅವರು ತಿಳಿಸಿದ್ದಾರೆ.
ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನೀಡುವುದು ಅಷ್ಟೇ ಅಲ್ಲದೆ 3% ಬಡ್ಡಿ ದರದಲ್ಲಿ ನೀಡಲಾಗುತ್ತಿದ್ದಂತಹ ಮಧ್ಯಮಾವದಿ ಸಾಲವಾದ ಮೊತ್ತವನ್ನು ಸಹ 10 ಲಕ್ಷ ರೂಪಾಯಿ ಗಳಿಂದ 20 ಲಕ್ಷ ರೂಪಾಯಿಗಳಿಗೆ ಹೆಚ್ಚಳ ಮಾಡಲು ಭರವಸೆಯನ್ನು ನೀಡಿದೆ ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂಬ ಉದ್ದೇಶವನ್ನು ಹೊಂದಿದ್ದು ಪ್ರಸಕ್ತ ಮುಂಗಾರು ಹಂಗಾಮಿನಲ್ಲಿಯೇ ಈ ಯೋಜನೆಗಳನ್ನು ಜಾರಿಗೊಳಿಸುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರವು ಕಳೆದ ವರ್ಷ ರೈತರಿಗೆ ಸುಮಾರು 12000 ಕೋಟಿ ರೂಪಾಯಿಗಳನ್ನು ಸಾಲ ನೀಡಲಾಗುವುದು ಎನ್ನುವಂತಹ ಗುರಿ ಹೊಂದಿತ್ತು ಆದರೆ ಅವರು ಅಂದಾಜು ಮಾಡಿಕೊಂಡಂತಹ ಹಣಕ್ಕಿಂತ ಹೆಚ್ಚಾಗಿ ಸಾಲವನ್ನು ಈಗಾಗಲೇ 20 ಕೋಟಿ ಹಣವನ್ನು ರೈತರಿಗೆ ವಿತರಣೆ ಮಾಡಲಾಗಿದೆ ಅಂದರೆ ರಾಜ್ಯ ಸರ್ಕಾರವು ತಾನು ಇಟ್ಟುಕೊಂಡಂತಹ ಗುರಿಯನ್ನು ಮೀರಿ ಸಾಲವನ್ನು ನೀಡಲು ಮುಂದಾಗಿದೆ.
ಅದೇ ರೀತಿಯಲ್ಲಿ ಈ ವರ್ಷವೂ ಸಹ ರೈತರಿಗೆ ಯಾವುದೇ ತೊಂದರೆ ಉಂಟಾಗಬಾರದು ಅವರ ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುವಂತಹ ದೃಷ್ಟಿಕೋನದಿಂದ ಸಾಲವನ್ನು ವಿತರಣೆ ಮಾಡಲಾಗುತ್ತದೆ ಎಂದು ಸಚಿವ ಕೆ ಎನ್ ರಾಜಣ್ಣ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಶೂನ್ಯ ಬಡ್ಡಿ ದರದ ಸಾಲವನ್ನು 3 ಲಕ್ಷಗಳಿಂದ 5 ಲಕ್ಷಗಳ ಒಳಗೆ ಹೆಚ್ಚು ಮಾಡುವುದಾಗಿ ಬರವಸೆಯನ್ನು ನೀಡಲಾಗಿದೆ.
ಈ ಹಿಂದೆ ರೈತರಿಗೆ 3 ಲಕ್ಷದ ವರೆಗೆ ಕೃಷಿ ಸಾಲವನ್ನು ಯಾವುದೇ ಬಡ್ಡಿ ನಿರೀಕ್ಷೆ ಇಲ್ಲದೆ ಒದಗಿಸಲಾಗುತ್ತಿತ್ತು ಆದರೂ ಸಹ ರೈತರಿಗೆ ತೊಂದರೆಗಳು ಉಂಟಾಗುತ್ತಿತ್ತು ಕಾರಣದಿಂದಾಗಿ ಈ ಸಾಲವನ್ನು 3 ಲಕ್ಷದಿಂದ 5 ಲಕ್ಷದವರೆಗೆ ಹೆಚ್ಚಳ ಮಾಡಲಾಗಿದೆ ಇದರ ಉಪಯೋಗವನ್ನು ಪ್ರತಿಯೊಬ್ಬ ರೈತರು ಸಹ ಸದುಪಯೋಗ ಪಡಿಸಿಕೊಂಡು ನಮ್ಮ ದೇಶ ಮುನ್ನುಗ್ಗಲು ಕೃಷಿಯಲ್ಲಿ ಏಳಿಗೆ ಉಂಟಾಗಲು ಇದು ಸಹಕಾರಿಯಾಗುತ್ತದೆ. ರೈತ ದೇಶದ ಬೆನ್ನೆಲುಬು, ಸರ್ಕಾರವು ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿರುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.