ಈಗಿನ ಯುಗ ಹೇಗಿದೆ ಎಂದರೆ ಎಲ್ಲವೂ ಡಿಜಿಟಲೀಕರಣ ಕೈಯಿಂದ ಕೈಗೆ ಹಣ ವರ್ಗಾವಣೆ ಆಗುವುದರ ಬದಲಾಗಿ ಫೋನ್ ಗಳ ಮುಖಾಂತರವಾಗಿಯೇ ಸಾಕಷ್ಟು ಪೇಮೆಂಟ್ ಆಪ್ ಗಳನ್ನು ಉಪಯೋಗಿಸಿಕೊಂಡು ಹಣವನ್ನು ಟ್ರಾನ್ಸಾಕ್ಷನ್ ಮಾಡಲಾಗುತ್ತದೆ. ಮೊಬೈಲ್ ನಲ್ಲಿ ಫೋನ್ ಪೇ, ಗೂಗಲ್ ಪೇ, ಪೇಟಿಎಂ, ಅಮೆಜಾನ್ ಪೆ ಸೇರಿದಂತೆ ಯಾವುದೇ ರೀತಿಯ ಯುಪಿಐ ಮೂಲಕ ಹಣ ವರ್ಗಾವಣೆ ಮಾಡುವ ಪ್ರತಿಯೊಬ್ಬರಿಗೂ ಕೂಡ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ರೂಲ್ಸ್ ಜಾರಿಗೆ ತಂದಿದೆ ನಿಮ್ಮ ಮೊಬೈಲ್ ನಲ್ಲಿ ಫೋನ್ ಪೇ ಗೂಗಲ್ ಪೇ ಹೀಗೆ ಯಾವುದೇ ಯುಪಿಐ ಟ್ರಾನ್ಸಾಕ್ಷನ್ ಮಾಡುವ ಆಪ್ ಗಳನ್ನು ಮಾಡುತ್ತಿದ್ದರೆ ನಾವಿಲ್ಲಿ ತಿಳಿಸುವಂತಹ ಮಾಹಿತಿಯನ್ನು ತಪ್ಪದೆ ತಿಳಿದುಕೊಳ್ಳಿ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲಾ ಯುಪಿಐ ಪೇಮೆಂಟ್ ಗಳಿಗೆ ಹೊಸ ರೂಲ್ಸ್ ಜಾರಿಗೆ ತಂದಿದೆ ಇನ್ನು ಮುಂದೆ ನೀವು ಯಾರಿಗಾದರೂ ಹಣ ಕಳಿಸಬೇಕಾದರೆ ಈ ವಿಷಯವನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಅಗತ್ಯ ನಿಮ್ಮ ಮೊಬೈಲ್ ನಲ್ಲಿ ಫೋನ್ ಪೆ, ಗೂಗಲ್ ಪೇ, ಪೇಟಿಎಂ, ಅಮೆಜಾನ್ ಮೂಲಕ ಹಣವನ್ನು ಒಬ್ಬರಿಂದ ಮತ್ತೊಬ್ಬರಿಗೆ ಕಳುಹಿಸಬೇಕಾದರೆ ಬ್ಯಾಂಕ್ ಗೆ ಹೋಗಿ ಟ್ರಾನ್ಸಾಕ್ಷನ್ ಮಾಡಲಾಗುತ್ತಿತ್ತು ಇಲ್ಲವೇ ಮನಿ ಆರ್ಡರ್ ಮಾಡುವ ಕೆಲಸವನ್ನು ಮಾಡುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಡಿಜಿಟಲೀಕರಣ ಸಾಕಷ್ಟು ಮುಂದುವರೆದಿದೆ ಪ್ರತಿಯೊಬ್ಬರೂ ಕೂಡ UPI ಅಪ್ಲಿಕೇಶನ್ ಗಳ ಮೂಲಕ ಹಣವನ್ನು ಟ್ರಾನ್ಸ್ಫರ್ ಮಾಡುತ್ತಿದ್ದಾರೆ ಆದರೆ ಬ್ಯಾಂಕಿಂಗ್ ವ್ಯವಸ್ಥೆ ಕೂಡ UPI ಟ್ರಾನ್ಸಾಕ್ಷನ್ಗಳ ಮೂಲಕ ನಿಯಂತ್ರಿಸುತ್ತಿದೆ.
ಅಂದರೆ ಒಂದು ದಿನದಲ್ಲಿ ನಿಮಗೆ ನಿಶ್ಚಿತ ರೂಪದಲ್ಲಿ ಕೇವಲ ಇಂತಿಷ್ಟು ಹಣವನ್ನು ಮಾತ್ರ ಕಳುಹಿಸಬಹುದು ಅಥವಾ ಪಡೆಯಬಹುದು ಎನ್ನುವ ನಿಯಮವನ್ನು ವಿಧಿಸುತ್ತಿದೆ ಅಷ್ಟು ಹಣವನ್ನು ಮಾತ್ರ ನೀವು ಕಳುಹಿಸಲು ಸಾಧ್ಯವಾಗುತ್ತದೆ. RBI ಗೈಡ್ಲೈನ್ಸ್ ಪ್ರಕಾರ ಪ್ರತಿಯೊಂದು ಬ್ಯಾಂಕ್ಗಳಲ್ಲಿ ಕೂಡ ಲಿಮಿಟ್ ಸಂಖ್ಯೆ ಬದಲಾಗುತ್ತದೆ ಉದಾಹರಣೆಗೆ ಕೆನರಾ ಬ್ಯಾಂಕ್ ನಲ್ಲಿ ಒಂದು ದಿನಕ್ಕೆ 25000 ಟ್ರಾನ್ಸಾಕ್ಷನ್ ಮಾಡುವ ಲಿಮಿಟ್ ನೀಡಿದೆ. ಐಸಿಐಸಿಐ ಬ್ಯಾಂಕ್ ನಲ್ಲಿ ಒಂದು ದಿನಕ್ಕೆ 1 ಲಕ್ಷದ ವರೆಗೆ ಲಿಮಿಟ್ ನೀಡಲಾಗುತ್ತದೆ ಹೀಗಾಗಿ ಬ್ಯಾಂಕ್ ನಿಂದ ಬ್ಯಾಂಕ್ ಗೆ ಬದಲಾಗುತ್ತಾ ಹೋಗುತ್ತದೆ.
UPI ಅಪ್ಲಿಕೇಶನ್ ಗಳಲ್ಲಿ ಇದು ಯಾವ ರೀತಿಯಲ್ಲಿ ಬದಲಾಗುತ್ತಾ ಹೋಗುತ್ತದೆ ಎಂದು ನೋಡುವುದಾದರೆ.
* ಅಮೆಜಾನ್ ಪೆ, ಅಮೆಜಾನ್ ಪೆ ಮೂಲಕ ನೀವು ದಿನಕ್ಕೆ 1 ಲಕ್ಷದ ಟ್ರಾನ್ಸ್ಯಾಕ್ಷನ್ ಮಾಡಬಹುದು ಎಂದು ತಿಳಿದು ಬಂದಿದೆ ಇದರ ಅಕೌಂಟ್ ಕ್ರೆಡಿಟ್ ಮಾಡುವ ಮೊದಲ 24 ಗಂಟೆಯ ಒಳಗಾಗಿ ಕೇವಲ 5,000 ಮಾತ್ರ ಕಳುಹಿಸಬಹುದಾಗಿದೆ ದಿನಕ್ಕೆ ನೀವು 20 ಬಾರಿ ಟ್ರಾನ್ಸಾಕ್ಷನ್ ಮಾಡಬಹುದು.
* ಫೋನ್ ಪೇ ಇದರಲ್ಲಿ ನೀವು 1 ಲಕ್ಷದವರೆಗೆ ಟ್ರಾನ್ಸಾಕ್ಷನ್ ಮಾಡುವ ಲಿಮಿಟ್ ಹೊಂದಿದೆ ಹಾಗೂ ದಿನಕ್ಕೆ 10 ರಿಂದ 20 ಬಾರಿ ಟ್ರಾನ್ಸಾಕ್ಷನ್ ಮಾಡುವ ಸೌಲಭ್ಯವನ್ನು ನೀಡಲಾಗುತ್ತಿದೆ.
* ಗೂಗಲ್ ಪೇ, ಗೂಗಲ್ ಪೇ ಮೂಲಕ ಗ್ರಾಹಕರು 1 ಲಕ್ಷದ ಲಿಮಿಟ್ ಟ್ರಾನ್ಸ್ಫರ್ ಅನ್ನು ಹೊಂದಿದ್ದು ದಿನಕ್ಕೆ 10 ಟ್ರಾನ್ಸಾಕ್ಷನ್ ಗೆ ಅವಕಾಶ ನೀಡಲಾಗಿದೆ.
* ಪೇಟಿಎಂ ಇದರಲ್ಲಿ ದಿನಕ್ಕೆ 1 ಲಕ್ಷದವರೆಗೆ ಟ್ರಾನ್ಸಾಕ್ಷನ್ ಮಾಡಬಹುದು ಆದರೆ ಒಮ್ಮೆಗೆ 20 ಸಾವಿರ ಮಾತ್ರ ಕಳುಹಿಸಬಹುದಾಗಿದೆ ದಿನಕ್ಕೆ 5 ಬಾರಿ ಟ್ರಾನ್ಸ್ಯಾಕ್ಷನ್ ಮಾಡಬಹುದು.
ಈ ರೀತಿಯಾಗಿ ಬೇರೆ ಬೇರೆ ಯುಪಿಐ ಅಪ್ಲಿಕೇಶನ್ ಗಳ ಮೂಲಕ ನೀವು ಟ್ರಾನ್ಸ್ಯಾಕ್ಷನ್ ಲಿಮಿಟನ್ನು ನೋಡಬಹುದು ಆಗಿದೆ. ಈ ಮಾಹಿತಿ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.