ನಮಸ್ಕಾರ ಸ್ನೇಹಿತರೆ ನಾವು ಇಂದು ಹೊಸ ವಿಷಯದೊಂದಿಗೆ ಬಂದಿದ್ದೇವೆ ಅದೇನೆಂದರೆ ಕೇವಲ ಎರಡರಿಂದ ಮೂರು ಲಕ್ಷ ರೂಪಾಯಿಯಲ್ಲಿ ನಿಮ್ಮ ಕೈಗೆಟುಕುವ ಬೆಲೆಯಲ್ಲಿ ಒಂದು ಸುಂದರ ಮನೆಯನ್ನು ನೀವು ನಿರ್ಮಾಣ ಮಾಡಿಕೊಳ್ಳಬಹುದು. ಭಾರತದಲ್ಲಿ ಟೈನಿ ಹೋಂ ಕಾನ್ಸೆಪ್ಟನ್ನು ಪ್ರೆಸೆಂಟ್ ಮಾಡುತ್ತಿರುವಂತಹ ಏಕೈಕ ಕಂಪನಿ ಎಂದರೆ ಆಕರ್ಷ್ ಅಂಡ್ ಇಂಡಸ್ಟ್ರೀಸ್, ಈ ಆಕರ್ಷಣೆ ಇಂಡಸ್ಟ್ರೀಸ್ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವ ಪುತ್ತೂರಿನಲ್ಲಿ ಇದೆ ಇವರು 25 ವರ್ಷದಿಂದ ಫ್ರೀ ಕಾಸ್ಟ್ ಟೆಕ್ನಾಲಜಿಯಲ್ಲಿ ಪಳಗಿದ್ದಾರೆ.
ಟೈನಿ ಹೊಂನ ವಿಶೇಷತೆ ಏನೆಂದರೆ ಎರಡರಿಂದ ಮೂರು ಲಕ್ಷದಲ್ಲಿ ನಿರ್ಮಾಣವಾಗುತ್ತದೆ ಕಡಿಮೆ ವೆಚ್ಚದಲ್ಲಿ 3 ದಿನಗಳಲ್ಲಿ ಈ ಮನೆಯನ್ನು ನೀವು ನಿರ್ಮಾಣ ಮಾಡಿಕೊಳ್ಳಬಹುದು. 150 ಸ್ಕ್ವಯರ್ ಪೀಟ್ ವಿಸ್ತೀರ್ಣದಲ್ಲಿ ರೆಡಿ ಮಾಡಿರುವ ರೆಡಿ ಮಾಡಬಹುದಾದಂತಹ ಮನೆ ಇದಾಗಿದ್ದು. ಈ ಮನೆಯಲ್ಲಿ ನಿಮಗೆ ಒಂದು ಬೆಡ್ರೂಮ್, ಒಂದು ಹಾಲ್, ಕಿಚನ್, ಒಂದಯ ಬಾತ್ರೂಮ್ ಎಲ್ಲವೂ ಸಹ ಕಂಪ್ಲೀಟ್ ಆಗಿ ದೊರೆಯುತ್ತದೆ.
ನಿಮ್ಮ ಅಗತ್ಯಕ್ಕೆ ತಕ್ಕ ಹಾಗೆ ನೀವು ಮನೆಯನ್ನು ಸಿದ್ಧತೆ ಮಾಡಿಕೊಳ್ಳ ಬಹುದು ಕಂಪನಿಯವರು ಹೇಳುವ ಪ್ರಕಾರ ಸಾಮಾನ್ಯವಾಗಿ ನಾವು ನಿರ್ಮಾಣ ಮಾಡಿಕೊಳ್ಳುವಂತಹ ಮನೆಗಳಿಗಿಂತ ಹೆಚ್ಚು ಬಾಳಿಕೆ ಮತ್ತು ಸದೃಢತೆಯನ್ನು ಹೊಂದಿರುತ್ತದೆ ಈ ಮನೆಗಳಿಗೆ ರೆಡಿ ಪ್ಯಾನಲ್ ವಾಲ್ ಗಳನ್ನು ಬಳಸಲಾಗುತ್ತದೆ ಕೆಲವೊಂದು ಕಡೆಗಳಲ್ಲಿ ನೀವು ಕಾಂಪೌಂಡ್ಗಳನ್ನು ನೋಡಿರುತ್ತೀರಾ ಆ ಕಾಂಪೌಂಡ್ ಗಳಿಗೆ ರೆಡಿ ಪ್ಯಾನೆಲ್ ನಿಂದ ಸಿದ್ಧಪಡಿಸಿರುತ್ತಾರೆ ಅದೇ ರೀತಿಯಲ್ಲಿ ಮನೆಗಳಿಗೆ ರೆಡಿ ಪ್ಯಾನೆಲ್ ವಾಲ್ ಗಳನ್ನು ಫಿಕ್ಸ್ ಮಾಡಿರಲಾಗುತ್ತದೆ.
ಈ ಗೋಡೆಗಳಿಗೆ ಪಾಲಿಮರ್ ಸಿಮೆಂಟ್ ಅನ್ನು ಬಳಕೆ ಮಾಡಿರುತ್ತಾರೆ ಹಾಗೆಯೇ ಪ್ರೀ ಪ್ರೆಸ್ಡ್ ಕಾಂಕ್ರೀಟನ್ನು ಬಳಸಲಾಗುತ್ತದೆ ಆದ್ದರಿಂದ ಉತ್ತಮ ಗುಣಮಟ್ಟದ ಕನ್ಸ್ಟ್ರಕ್ಷನ್ ನಿಮಗೆ ದೊರೆಯುತ್ತದೆ ಎಲೆಕ್ಟ್ರಿಕಲ್ ವೈರಿಂಗ್ ನೀವು ಪ್ಯಾನೆಲ್ ರೆಡಿ ಮಾಡುವಂತಹ ಸಂದರ್ಭದಲ್ಲಿ ಎಲೆಕ್ಟ್ರಿಕ್ ವಯರ್ಗಳನ್ನು ಸಹ ಫಿಕ್ಸ್ ಮಾಡಿಲಾಗುತ್ತದೆ ಆದ್ದರಿಂದ ಈಜಿ ವೈರಿಂಗ್ ನಿಮಗೆ ಇಲ್ಲಿ ಕಂಡು ಬರುತ್ತದೆ. ಅತಿ ಕಡಿಮೆ ದರದಲ್ಲಿ ಉತ್ತಮವಾದಂತಹ ಕನ್ಸ್ಟ್ರಕ್ಷನ್ ನಡೆಯುತ್ತದೆ ಚಿಕ್ಕದಾದಂತಹ ಮನೆಯನ್ನು ನಿರ್ಮಿಸಿ ಕೊಡಲಾಗುತ್ತದೆ.
ಈ ರೀತಿ ಮನೆಗಳನ್ನು ನೀವು ವರ್ಕರ್ ಷಡ್ ಆಗಿ ಬ್ಯಾಚುಲರ್ ಗಳಿಗೆ ಮನೆಗಳಾಗಿ ರೆಸಾರ್ಟ್ಗಳಲ್ಲಿ ಕ್ಲಬ್ ಹೌಸ್ ಆಗಿ ಬೇರೆ ಬೇರೆ ಕಾಟೇಜಸ್ ಗಳಾಗಿ ನೀವು ಉಪಯೋಗ ಮಾಡಬಹುದು ಅಥವಾ ಹೊಲಗದ್ದೆ ಅಥವಾ ತೋಟ ಇರುವ ಕಡೆಗಳಲ್ಲಿ ನೀವು ತೋಟದ ಮನೆಗಳ ರೀತಿಯಲ್ಲಿ ನಿರ್ಮಾಣ ಮಾಡಿಕೊಳ್ಳಬಹುದು. ಚಿಕ್ಕದಾದ ಚೊಕ್ಕದಾದಂತಹ ಕುಟುಂಬಗಳು ಈ ಮನೆಯಲ್ಲಿ ವಾಸಿಸಲು ಯೋಗ್ಯವಾಗಿರುತ್ತದೆ. ತುಂಬಾ ಜನರು ಕಡಿಮೆ ಬೆಲೆಯಲ್ಲಿ ಕಡಿಮೆ ಸಮಯದಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲು ಇಷ್ಟಪಡುತ್ತಾರೆ. ಯಾರೆಲ್ಲಾ ಎರಡರಿಂದ ಮೂರು ಜನ ಕುಟುಂಬದಲ್ಲಿ ಇರುತ್ತಾರೋ ಅಂತಹವರಿಗೆ ಈ ಮನೆ ಸೂಕ್ತವಾದದ್ದು.
ನಿಮ್ಮ ಮನೆಯ ಟೆರೇಸ್ ಮೇಲೆಯೂ ಮನೆಯನ್ನು ನಿರ್ಮಾಣ ಮಾಡಿಕೊಳ್ಳಬಹುದು ಬಿಡುವಿನ ಸಮಯದಲ್ಲಿ ನೀವು ಸಮಯವನ್ನು ಕಳೆಯಬಹುದು. ಸಾಕಷ್ಟು ಜನರು ಮನೆ ನಿರ್ಮಾಣ ಮಾಡಲು ಜಾಸ್ತಿ ಹಣದ ಅವಶ್ಯಕತೆ ಇರುತ್ತದೆ ಆದ್ದರಿಂದ ಅಂತಹವರಿಗೆ ಇದು ಯೋಗ್ಯವಾದಂತಹ ಕಟ್ಟಡ ನಿರ್ಮಾಣವಾಗಿದೆ ಯಾರಿಗೆಲ್ಲ ಈ ಒಂದು ಕಾನ್ಸೆಪ್ಟ್ ಇಷ್ಟ ಆಗಿದೆ ಅಂತವರು ಇದರ ಬಗ್ಗೆ ತಿಳಿದುಕೊಂಡು ನೀವು ಸಹ ಈ ಮನೆಯನ್ನು ನಿರ್ಮಿಸಿಕೊಳ್ಳಬಹುದು. ಈ ಮಾಹಿತಿ ಇಷ್ಟ ಆದರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.