ಮನೆ ಇಲ್ಲದವರಿಗೆ ಇದೊಂದು ಸುವರ್ಣ ಅವಕಾಶ ಬಸವ ವಸತಿ ಯೋಜನೆಯ ಅಡಿಯಲ್ಲಿ ಮನೆ ಇಲ್ಲದವರಿಗೆ ಮನೆಯನ್ನು ನಿರ್ಮಾಣ ಮಾಡಿಕೊಳ್ಳಲು ಇದೀಗ ಎರಡು ಲಕ್ಷ ರೂಪಾಯಿ ಉಚಿತವಾಗಿ ನೀಡಲಾಗುತ್ತಿದೆ. ಹೌದು ರಾಜ್ಯ ಸರ್ಕಾರವು ಮನೆ ಇಲ್ಲದಂತಹ ಬಡವರಿಗೆ ಇದೀಗ 2 ಲಕ್ಷ ರೂಪಾಯಿ ಅನುದಾನವನ್ನು ಒದಗಿಸುತ್ತಿದೆ ಕರ್ನಾಟಕ ರಾಜ್ಯ ಸರ್ಕಾರವು ಬಸವ ವಸತಿ ಯೋಜನೆ 2023-24ನೇ ಸಾಲಿನ ರಾಜ್ಯದ ಎಲ್ಲಾ ಬಡ ಜನರಿಗೆ ವಸತಿಯನ್ನು ಕಲ್ಪಿಸಿಕೊಡುವ ಉದ್ದೇಶದಿಂದ ಎಲ್ಲಾ ಜನರಿಗೆ ಆಶ್ರಯ ದೊರಕಬೇಕು ಎನ್ನುವಂತಹ ದೃಷ್ಟಿಯಿಂದ ಈ ಒಂದು ಯೋಜನೆಯನ್ನು ಜಾರಿಗೆ ತಂದಿದೆ.
ರಾಜ್ಯ ಸರ್ಕಾರದ ಆನ್ಲೈನ್ ಪೋರ್ಟಲ್ ashraya.karnataka.gov.in/ ಈ ಒಂದು ವೆಬ್ಸೈಟ್ನ ಮೂಲಕ ಫಲಾನುಭವಿಗಳು ಇದಕ್ಕೆ ಸಂಬಂಧಪಟ್ಟಂತಹ ಎಲ್ಲಾ ಮಾಹಿತಿಗಳನ್ನು ತಿಳಿದುಕೊಳ್ಳಬಹುದಾಗಿದೆ. ಕೇಂದ್ರ ಮತ್ತು ರಾಜ್ಯ ವಸತಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಮೂಲಕ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ವಸತಿಯನ್ನು ಒದಗಿಸಲು ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ ಅನ್ನು 2000 ರಲ್ಲಿ ರಚಿಸಲಾಯಿತು.
ಇದೀಗ ಬಸವ ವಸತಿ ಯೋಜನೆ 2023ರಲ್ಲಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಈ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಹೋಗಿ ರಾಜೀವ್ ಗಾಂಧಿ ಬಸವ ವಸತಿ ಯೋಜನೆಯ ಆನ್ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು. ಈ ಯೋಜನೆಗೆ ಸಂಬಂಧಿಸಿದಂತಹ ಎಲ್ಲ ಮಾಹಿತಿ ಮತ್ತು ಅಭ್ಯರ್ಥಿಗೆ ಸಂಬಂಧಪಟ್ಟಂತಹ ಎಲ್ಲ ವಿಷಯಗಳನ್ನು ನಾವು ಇಲ್ಲಿ ತಿಳಿಸಲು ಹೊರಟಿದ್ದೇವೆ.
ಬಸವ ವಸತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಕೆಲವೊಂದು ಹಂತಗಳನ್ನು ನೀವು ಅನುಸರಿಸಬೇಕಾಗುತ್ತದೆ
* ಬಸವ ವಸತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅಧಿಕೃತ ವೆಬ್ಸೈಟ್ಗೆ ಹೋಗಿ ಈ ಬಸವ ವಸತಿ ಯೋಜನೆ ಫಾರಂ 2023 ಲಿಂಕನ್ನು ನೀವು ಕ್ಲಿಕ್ ಮಾಡಬೇಕು. https://ashraya.karnataka.gov.in/
* ಆನ್ಲೈನ್ ನಲ್ಲಿ ಅರ್ಜಿಯನ್ನು ಭರ್ತಿ ಮಾಡುವ ಮೊದಲು ವೆಬ್ಸೈಟ್ನಲ್ಲಿ ಇರುವಂತಹ ಅಧಿಕೃತ ಅಧಿಸೂಚನೆಗಳನ್ನು ನೀವು ಗಮನದಲ್ಲಿ ಇಟ್ಟು ಓದಿಕೊಳ್ಳಬೇಕು.
* ಅಪ್ಲಿಕೇಶನ್ ಓಪನ್ ಆದ ನಂತರ ಅವಶ್ಯಕತೆಗೆ ಅನುಗುಣವಾಗಿ ನಿಮ್ಮ ವಿವರಗಳನ್ನು ಅಲ್ಲಿ ಭರ್ತಿ ಮಾಡಿ.
* ಅಪ್ಲಿಕೇಶನ್ ಫಿಲ್ ಮಾಡಿದ ನಂತರ ಮತ್ತೊಮ್ಮೆ ಪರಿಶೀಲಿಸಿ ಮತ್ತು ಸಬ್ಮಿಟ್ ಮಾಡಿ.
ಬಸವ ವಸತಿ ಯೋಜನೆಯ ಉದ್ದೇಶಗಳನ್ನು ನಾವು ಈ ಕೆಳಕಂಡಂತೆ ತಿಳಿಸಲಾಗುತ್ತಿದೆ
* ಕರ್ನಾಟಕ ರಾಜ್ಯದಾದ್ಯಂತ EWS ಗೆ ಕೈಗೆಟಕುವ ದರದಲ್ಲಿ ವಸತಿಯನ್ನು ಒದಗಿಸಿ.
* ನಿರ್ಮಿತಿ ಕೇಂದ್ರಗಳನ್ನು ಬಲಪಡಿಸುವ ಮೂಲಕ ಮತ್ತು ಹೊಸ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವೆಚ್ಚ ಪರಿಣಾಮವಾಗಿ ಕಟ್ಟಡ ತಂತ್ರಜ್ಞಾನಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಈ ಒಂದು ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
* ನಿರ್ವಹಣೆಯ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುವಂತಹ ದೃಷ್ಟಿಯಿಂದ ಸರ್ಕಾರವು ಈ ಸೌಲಭ್ಯವನ್ನು ಬಡವರಿಗೆ ಕಲ್ಪಿಸಿಕೊಡಲಾಗುತ್ತಿದೆ.
ನಗರ ಪ್ರದೇಶಗಳಲ್ಲಿ ಅಥವಾ ಹಳ್ಳಿ ಪ್ರದೇಶಗಳಲ್ಲಿ ಎಲ್ಲಾದರೂ ಬಸವ ವಸತಿ ಯೋಜನೆಯನ್ನು ನೀವು ಪಡೆದುಕೊಳ್ಳಬಹುದು ಅಧಿಕೃತ ವೆಬ್ಸೈಟ್ ಗೆ ಹೋಗಿ ನೀವು ಅರ್ಜಿಯನ್ನು ಸಲ್ಲಿಸುವ ಮೂಲಕ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ ಈ ಯೋಜನೆಯ ಮುಖ್ಯ ಉದ್ದೇಶ ಏನೆಂದರೆ, ಯಾರೆಲ್ಲಾ ಬಡತನ ರೇಖೆಯಿಂದ ಕೆಳಗಿರುತ್ತಾರೆ ಅಂದರೆ ವಸತಿ ಇಲ್ಲದೆ ಇರುವಂತಹ ಜನರಿಗೆ ವಸತಿಯನ್ನು ಕಲ್ಪಿಸಿ ಕೊಡುವಂತಹ ಹಿತ ದೃಷ್ಟಿಯಿಂದ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಈ ಮಾಹಿತಿ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಶೇರ್ ಮಾಡಿ.