ಕಾಂಗ್ರೆಸ್ ಸರ್ಕಾರ ನೀಡಿರುವಂತಹ ಗ್ಯಾರಂಟಿ ಆದ ಗೃಹ ಜ್ಯೋತಿ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಈಗಾಗಲೇ ಸಾಕಷ್ಟು ಜನ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲಾಗಿದೆ ನೀವು ಸಹ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಯಾವೆಲ್ಲ ದಾಖಲಾತಿಗಳು ಬೇಕು ಹಾಗೆ ಹಂತ ಹಂತವಾಗಿ ಯಾವ ರೀತಿಯಲ್ಲಿ ನೀವು ಅರ್ಜಿಯನ್ನು ಸಲ್ಲಿಸಬೇಕು ಎಂಬಂತಹ ಸಂಪೂರ್ಣ ಮಾಹಿತಿಯನ್ನು ನಾವಿಲ್ಲಿ ತಿಳಿಸಿ ಕೊಡುತ್ತಿದ್ದೇವೆ.
https://sevasindhugs.karnataka.gov.in/ ನಾವಿಲ್ಲಿ ತಿಳಿಸಿರುವ ವೆಬ್ಸೈಟ್ ಲಿಂಕ್ ಓಪನ್ ಮಾಡಿ ಅರ್ಜಿ ಸಲ್ಲಿಸಿ ನಿಮಗೆ ಎಲ್ಲಾ ರೀತಿಯಾದಂತಹ ಮಾಹಿತಿಗಳು ಅಲ್ಲಿ ಸಿಗುತ್ತದೆ.
ಗೃಹಜ್ಯೋತಿ ಯೋಜನೆಗೆ ಅಪ್ಲೈ ಮಾಡಲು ಬೇಕಾಗಿರುವಂತಹ ಮುಖ್ಯ ದಾಖಲಾತಿಗಳು
* ಆಧಾರ್ ಕಾರ್ಡ್
* ಅಕೌಂಟ್ ಐಡಿ ಅಥವಾ ಖಾತೆ ಸಂಖ್ಯೆ
* ಮೊಬೈಲ್ ನಂಬರ್
ಹಂತ ಹಂತವಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಈ ಕೆಳಕಂಡಂತೆ ತಿಳಿಸಲಾಗುತ್ತಿದೆ
* ಮೊದಲಿಗೆ ವೆಬ್ಸೈಟ್ ಲಿಂಕ್ ಓಪನ್ ಮಾಡಿ ನಂತರ ಗೃಹ ಜ್ಯೋತಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ ನಿಮಗೆ ಇಂಧನ ಇಲಾಖೆಯ ಗೃಹಜೋತಿ ಅಪ್ಲಿಕೇಶನ್ ಫಾರಂ ಓಪನ್ ಆಗುತ್ತದೆ
* ನೀವು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು ಕನ್ನಡ ಅಥವಾ ಇಂಗ್ಲಿಷ್ ಯಾವುದರಲ್ಲಾದರೂ ನೀವು ಅಪ್ಲಿಕೇಶನ್ ಅನ್ನು ಫಿಲ್ ಮಾಡಬಹುದು.
* ನಿಮ್ಮ ಖಾತೆ ಸಂಖ್ಯೆ ಅಥವಾ ಅಕೌಂಟ್ ಐಡಿ ಹಾಕಬೇಕು ಇದು ನಿಮ್ಮ ಕರೆಂಟ್ ಬಿಲ್ ನಲ್ಲಿ 10 ಅಂಕೆಯ ನಂಬರ್ ಇರುತ್ತದೆ ಅದನ್ನು ನೀವು ಅಪ್ಲಿಕೇಶನ್ ನಲ್ಲಿ ಫಿಲ್ ಮಾಡಬೇಕು ನಂಬರನ್ನು ಹಾಕಿದ ತಕ್ಷಣ ಕರೆಂಟ್ ಬಿಲ್ ಯಾರ ಹೆಸರಿನಲ್ಲಿ ಇರುತ್ತದೆ ನಿಮ್ಮ ಎಸ್ಕಾಮ್ ಹೆಸರು ಬರುತ್ತದೆ ಹಾಗೆ ನಿಮ್ಮ ಸಂಪೂರ್ಣ ವಿವರ ಅದರಲ್ಲಿ ತೋರಿಸುತ್ತದೆ.
* ನೀವು ಬಾಡಿಗೆ ಮನೆಯಲ್ಲಿ ಇದ್ದೀರಾ ಅಥವಾ ಸ್ವಂತ ಮನೆಯಲ್ಲಿ ಇದ್ದೀರಾ ಎಂದು ಅಲ್ಲಿ ನಮೂದಿಸಬೇಕು.
* ನಂತರ ನಿಮ್ಮ ಆಧಾರ್ ಕಾರ್ಡ್ ನಂಬರನ್ನು ಹಾಕಬೇಕು ಆಧಾರ್ ಕಾರ್ಡ್ ನಂಬರ್ ಹಾಕಿದ ನಂತರ ಅವರ ಸಂಪೂರ್ಣ ವಿವರ ಅಲ್ಲಿ ಕಾಣಸಿಗುತ್ತದೆ
* ನಿಮ್ಮ ಮೊಬೈಲ್ ನಂಬರ್ ಅನ್ನು ಸೇರಿಸಬೇಕು ನೀವು ಹಾಕಿದಂತಹ ನಂಬರ್ ಗೆ ಓಟಿಪಿ ಬರುತ್ತದೆ ಆ ಓಟಿಪಿಯನ್ನು ನೀವು ಅಪ್ಲಿಕೇಶನ್ ನಲ್ಲಿ ಎಂಟ್ರಿ ಮಾಡಿ ವ್ಯಾಲಿಡ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
* ನಂತರ ನಿಮಗೆ ಕ್ಯಾಪ್ಚರ್ ಕೋಡ್ ಕಾಣಿಸುತ್ತದೆ ಅದನ್ನು ಎಂಟ್ರಿ ಮಾಡಿ ಸಬ್ಮಿಟ್ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು.
* ನೀವು ಅಪ್ಲೈ ಮಾಡಿದ ನಂತರ ನಿಮಗೆ ರಿಸಿಪ್ಟ್ ತೋರಿಸುತ್ತದೆ ಅದನ್ನು ನೀವು ಸ್ಕ್ರೀನ್ ಶಾಟ್ ಮಾಡಿ ಇಟ್ಟುಕೊಳ್ಳಬೇಕು ಎಕ್ಸ್ಪರ್ಟ್ ಪಿಡಿಎಫ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ನೀವು ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ.
ನೀವು ಹಾಕಿದಂತಹ ಅಪ್ಲಿಕೇಶನ್ ನಂಬರ್ ದಿನಾಂಕ ಎಲ್ಲವೂ ಸಹ ನಿಮಗೆ ದೊರೆಯುತ್ತದೆ ಈ ರೀತಿಯಾಗಿ ನೀವು ಎಲ್ಲಿಗೂ ಹೋಗದೆ ಮನೆಯಲ್ಲಿಯೇ ಕುಳಿತುಕೊಂಡು ಗೃಹ ಜ್ಯೋತಿ ಯೋಜನೆಯ ಅಪ್ಲಿಕೇಶನ್ ಫಾರ್ಮನ್ನು ಫಿಲ್ ಮಾಡಿ ಅಪ್ಲೈ ಮಾಡಬಹುದು. ಮನೆಯಲ್ಲಿಯೇ ಕುಳಿತುಕೊಂಡು ನಿಮ್ಮ ಮೊಬೈಲ್ ಸಹಾಯದಿಂದಲೇ ನೀವು ಗೃಹಜ್ಯೋತಿ ಯೋಜನೆಗೆ ಅಪ್ಲಿಕೇಶನ್ ಸಲ್ಲಿಸಿ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು ನಾವು ತಿಳಿಸಿದಂತಹ ಮೇಲಿನ ಹಂತಗಳನ್ನು ನೀವು ಫಾಲೋ ಮಾಡಿದರೆ ಅತಿ ಸುಲಭವಾಗಿ ಅಪ್ಲೈ ಮಾಡಬಹುದು. ಈ ಮಾಹಿತಿ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.