Thursday, September 28, 2023
Home News ಪ್ರತಿಯೊಬ್ಬ ಗರ್ಭಿಣಿಯರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ 6000 ರೂಪಾಯಿಗಳನ್ನು ಪಡೆದುಕೊಳ್ಳಿ.

ಪ್ರತಿಯೊಬ್ಬ ಗರ್ಭಿಣಿಯರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ 6000 ರೂಪಾಯಿಗಳನ್ನು ಪಡೆದುಕೊಳ್ಳಿ.

ಪ್ರಧಾನಮಂತ್ರಿಯ ಮಾತೃ ವಂದನಾ ಯೋಜನೆಯ ಬಗ್ಗೆ ನೋಡುವುದಾದರೆ, ಮಾತೃ ವಂದನಾ ಯೋಜನೆ ಎಂದರೆ ಗರ್ಭಿಣಿ ಹೆಣ್ಣು ಮಕ್ಕಳಿಗೆ ನೀಡುವ ವಿಶೇಷ ಯೋಜನೆಯಾಗಿದೆ. ಈ ಯೋಜನೆಯಿಂದ ಸಾಕಷ್ಟು ಹೆಣ್ಣು ಮಕ್ಕಳಿಗೆ ತುಂಬಾ ಉಪಯುಕ್ತವಾಗಿದೆ. ಇದನ್ನು ಪ್ರಧಾನಮಂತ್ರಿಯವರು ಮಾಡಿದ್ದು ಎಲ್ಲಾ ಗರ್ಭಿಣಿ ಹೆಣ್ಣು ಮಕ್ಕಳಿಗೆ ಹೆರಿಗೆಯಾದ ನಂತರ 6000 ಧನಸಹಾಯ ನೀಡುವುದೇ ಈ ಯೋಜನೆಯ ಉದ್ದೇಶ. ಹಾಗೆಯೇ ಈ ಯೋಜನೆಯ ಮುಖ್ಯ ಉದ್ದೇಶ ದೇಶದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದ ಕಾರಣ ಈ ಯೋಜನೆಯನ್ನು ಜಾರಿಗೆ ಬಂದಿದೆ.

ಈ ಯೋಜನೆಯು ಮೊದಲನೆಯ ಮಗು ಹೆಣ್ಣು ಆದರು ಹಾಗೂ ಎರಡನೆಯ ಮಗು ಹೆಣ್ಣು ಆದರೂ ಅವಳಿ ಜವಳಿ ಆದರೆ ಒಬ್ಬರಿಗೆ ಮಾತ್ರ ತಲಾ 6,000ಗಳನ್ನು ನೀಡುತ್ತಾರೆ. ಈ ಯೋಜನೆಯ ಅರ್ಜಿಯನ್ನು ಹೇಗೆ ಸಲ್ಲಿಸುವುದೆಂದರೆ. ಒಬ್ಬ ಹೆಣ್ಣು ಮಗಳು ಗರ್ಭಿಣಿಯಾದ ನಂತರ ತಮ್ಮ ಊರಿನಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಹೋಗಿ ಅಲ್ಲಿ ತಾಯಿ ಕಾರ್ಡ್ ನೀಡಿ ಅನಂತರ ಆಶಾ ಕಾರ್ಯಕರ್ತ ರಿಗೆ ಗರ್ಭಿಣಿಯ ಆಧಾರ್ ಕಾರ್ಡ್, ಪತಿಯ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಖಾತೆಯ ಪಾಸ್ ಬುಕ್ ಎಲ್ಲವನ್ನು ಕೊಡಬೇಕು ನಂತರ ಅವರು ಅದನ್ನು ಅಂಗನವಾಡಿ ಕಾರ್ಯಕರ್ತೆಯರ ಕೈಗೆ ಕೊಟ್ಟರೆ ಅವರು ಅರ್ಜಿ ಸಲ್ಲಿಸುತ್ತಾರೆ.

ಈ ಯೋಜನೆಗೆ ಸೇರಬೇಕೆಂದರೆ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಅವುಗಳೆಂದರೆ

* ಯೋಜನೆ ಮೊದಲನೇ ವಿತರಣೆಗೆ ಮಾತ್ರ ಹಣ ಬರುವುದು

* ಸರ್ಕಾರಿ ಉದ್ಯೋಗವಿದ್ದರೆ ಹಣ ಬರುವುದಿಲ್ಲ.

*ಒಂದು ವೇಳೆ ಗರ್ಭಿಣಿ ಮಹಿಳೆ ಸರ್ಕಾರಿ ಹುದ್ದೆ ಇದ್ದರೆ ಅವರಿಗೆ ಈ ನಿಯಮ ಅನ್ವಯಿಸುವುದಿಲ್ಲ.

* ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ವೆಬ್ ಸೈಟ್ ಗಳಲ್ಲಿ ನೇರವಾಗಿಯೂ ಕೂಡ ಅರ್ಜಿಯನ್ನು ಸಲ್ಲಿಸಬಹುದು. ಈ

ಯಾವಾಗ ಹೇಗೆ ಬರುತ್ತದೆ ಎಂದರೆ ಈ ಯೋಜನೆಯಲ್ಲಿ ಒಬ್ಬ ಗರ್ಭಿಣಿ ಮಹಿಳೆಗೆ ನೇರವಾಗಿ ಒಂದೇ ಸಲ 6,000ಗಳನ್ನು ಕೊಡುವುದಿಲ್ಲ, ಮೊದಲು ಗರ್ಭಿಣಿಯಾದಾಗ 2,000 ನಂತರ ಹೆರಿಗೆಯಾದಾಗ 2000 ಮತ್ತೆ 2000 ಗಳನ್ನು ಕಂತಿನ ರೂಪದಲ್ಲಿ ನೀಡುತ್ತಾರೆ. ಈ ಯೋಜನೆಯ ಪ್ರತಿ ಹೆಣ್ಣು ಮಕ್ಕಳಿಗೆ ಮಾಡಿರುವ ಯೋಜನೆ. ಈ ಯೋಜನೆ ಅಡಿಯಲ್ಲಿ ಎಲ್ಲಾ ಜನಾಂಗದ ಗರ್ಭಿಣಿ ಮಹಿಳೆಗೆ ತುಂಬಾ ಅನುಕೂಲಕರವಾಗಿದೆ. ಬಡ ಹೆಣ್ಣು ಮಕ್ಕಳಿಗೂ ಸರ್ಕಾರವು ಮಾಡಿರುವ ಈ ಯೋಜನೆ ತುಂಬಾ ಉಪಯುಕ್ತವಾಗಿದೆ.

ಸರ್ಕಾರದ ಉದ್ದೇಶ ಹೆಣ್ಣು ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವುದು ಹಾಗೂ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು. ಸರ್ಕಾರ ರೂಪಿಸಿರುವಂತಹ ಒಂದು ಅತ್ಯುತ್ತವಾದಂತಹ ಯೋಜನೆಯಾಗಿದ್ದು ಮಹಿಳೆಯರಿಗೆ ಹೆರಿಗೆಯ ಸಮಯದಲ್ಲಿ ಹಾಗೆಯೇ ಬಾಣಂತಿಯ ಸಮಯದಲ್ಲಿ ಸಾಕಷ್ಟು ರೀತಿಯ ಖರ್ಚು ವೆಚ್ಚಗಳು ಇರುತ್ತದೆ ಅದೆಲ್ಲವನ್ನು ನಿಭಾಯಿಸಲು ಕಷ್ಟಪಡುತ್ತಿರುತ್ತಾರೆ ಅಂತಹವರಿಗೆ ಈ ಹಣ ಸಹಕಾರಿಯಾಗುತ್ತದೆ. ದೇಶದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿತ್ತು ಕಾರಣ ಎಲ್ಲರೂ ಗಂಡು ಮಕ್ಕಳ ಮೇಲಿನ ಒಲವಿನಿಂದ ಹೆಣ್ಣು ಮಕ್ಕಳನ್ನು ಕಡೆಗಣಿಸುತ್ತಿದ್ದರು.

ಆದರೆ ಈ ಒಂದು ಯೋಜನೆಯಿಂದ ಹೆಣ್ಣು ಮಕ್ಕಳ ಮೇಲಿನ ಪ್ರೀತಿ ಪೋಷಕರಿಗೆ ಹೆಚ್ಚಾಗುತ್ತದೆ ಎನ್ನುವಂತಹ ಹಿತ ದೃಷ್ಟಿಯಿಂದ ರಾಜ್ಯ ಸರ್ಕಾರವು ಈ ಯೋಜನೆಯನ್ನು ಹಮ್ಮಿಕೊಂಡಿದೆ ಈ ಯೋಜನೆಯು ಈಗಾಗಲೇ ಸಾಕಷ್ಟು ಜನರಿಗೆ ತಲುಪಿದೆ. ಯಾರೆಲ್ಲಾ ಗರ್ಭಿಣಿಯರು ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು ಎಂಬಂತಹ ಮಹತ್ವಕಾಂಕ್ಷೆ ಹೊಂದಿರುತ್ತೀರಾ ಅಂತಹವರು ಕೂಡಲೇ ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಅಷ್ಟೇ ಅಲ್ಲದೆ ನೀವು ಆನ್ಲೈನ್ ಮೂಲಕವೂ ಅರ್ಜಿ ಸಲ್ಲಿಸಿ ಮೂರು ಕಂತಿನ ರೂಪದಲ್ಲಿ ಹಣವನ್ನು ಪಡೆದುಕೊಳ್ಳದು. ಈ ಮಾಹಿತಿ ಇಷ್ಟ ತಪ್ಪದೇ ಲೈಕ್ ಮಾಡಿ ಮತ್ತು ತರರಿಗೂ ಶೇರ್ ಮಾಡಿ.

- Advertisment -