ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ಇಂದು ನಾವು ಸಂಜೆಯ ಸಮಯದಲ್ಲಿ ಉಗರನ್ನು ಏಕೆ ಕತ್ತರಿಸಬಾರದು ಎಂಬ ಹಲವಾರು ಉಪಯುಕ್ತ ಮಾಹಿತಿಯನ್ನು ನಿಮಗೆ ತಿಳಿಸಲು ಹೊರಟಿದ್ದೇವೆ ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ನಾನಾ ರೀತಿಯಾದಂತಹ ಆಚಾರಗಳು ವಿಚಾರಗಳು ಕಂಡುಬರುತ್ತದೆ ಇದು ಆಚಾರಗಳು ಮಾತ್ರವಲ್ಲದೇ ವೈಜ್ಞಾನಿಕವಾಗಿಯೂ ಸಹ ಇದರ ಹಿಂದೆ ನಾನಾ ರೀತಿಯಾದಂತಹ ಸತ್ಯಾಂಶಗಳು ಇರುತ್ತದೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಸಹ ಮುಸ್ಸಂಜೆ ಅಥವಾ ರಾತ್ರಿಯ ಸಮಯದಲ್ಲಿ ಉಗುರನ್ನು ಕತ್ತರಿಸಿದರೇ ನಮ್ಮ ಹಿರಿಯರು ಹಾಗೆಯೇ ಪೋಷಕರು ಈ ಸಮಯದಲ್ಲಿ ಉಗುರನ್ನು ಕತ್ತರಿಸಬಾರದು ಎಂದು ಬಯ್ಯುವುದು ನೀವೆಲ್ಲರೂ ಸಹ ಗಮನಿಸಿದ್ದೀರಾ.
ರಾತ್ರಿಯ ಸಮಯದಲ್ಲಿ ಅಥವಾ ಮುಸ್ಸಂಜೆಯ ಸಮಯದಲ್ಲಿ ಉಗರನ್ನು ಏಕೆ ಕತ್ತರಿಸಬಾರದು ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ನಾವು ದೈನಂದಿನ ವಾಗಿ ನಮ್ಮ ದೇಹದ ಸುಚಿತ್ವ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ನಾವು ನಮ್ಮನ್ನು ಎಷ್ಟು ಸ್ವಚ್ಛವಾಗಿ ಇಟ್ಟುಕೊಳ್ಳುತ್ತೇವೆಯೋ ನಮ್ಮ ಆರೋಗ್ಯವು ಸಹ ಅಷ್ಟೇ ಸುಧಾರಿಸುತ್ತದೆ ಅದರಲ್ಲಿ ಉಗುರು ಕತ್ತರಿಸುವುದು ಕೂಡ ಒಂದಾಗಿದ್ದು ನಾವು ಉಗುರುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಸರಿಯಾದ ಸಮಯಕ್ಕೆ ಉಗುರುಗಳನ್ನು ಕತ್ತರಿಸುವುದು ಬಹಳ ಅಗತ್ಯ ನಾವು ಗುರುಗಳನ್ನು ಕತ್ತರಿಸಿದೆ ಹಾಗೆ ಬಿಟ್ಟರೆ ನಮ್ಮ ಆರೋಗ್ಯದ ಮೇಲೆ ಅದು ದುಷ್ಪರಿಣಾಮ ಬೀರುತ್ತದೆ ಎಂದು ವೈಜ್ಞಾನಿಕವಾಗಿ ಹೇಳುತ್ತಾರೆ ಅದೇ ರೀತಿಯಲ್ಲಿ ಉಗುರುಗಳನ್ನು ಕತ್ತರಿಸುವುದರ ಬಗ್ಗೆ ಸಾಕಷ್ಟು ಧಾರ್ಮಿಕ ನಂಬಿಕೆಗಳು ಕೂಡ ಇವೆ. ಮುಸ್ಸಂಜೆಯ ವೇಳೆ ಅಂದರೆ ಸಂಜೆಯ ಸಮಯದಲ್ಲಿ ಉಗುರನ್ನು ಕತ್ತರಿಸಬಾರದು ಎಂದು ಹೇಳಲಾಗುತ್ತದೆ.
ಸಂಜೆಯ ವೇಳೆಯಲ್ಲಿ ಉಗುರುಗಳನ್ನು ಏಕೆ ಕತ್ತರಿಸಬಾರದು ಎನ್ನುವುದಕ್ಕೆ ಒಂದಷ್ಟು ವಿವರಣೆಯನ್ನು ನಾವು ಈ ಕೆಳಕಂಡಂತೆ ತಿಳಿಸುತ್ತಿದ್ದೇವೆ.
* ಸಂಜೆಯ ಸಮಯದಲ್ಲಿ ನಾವು ಉಗುರನ್ನು ಕಟ್ ಮಾಡುವುದರಿಂದ ಹಿಂದಿನ ಕಾಲದಲ್ಲೆಲ್ಲಾ ಬೆಳಕು ಇರುತ್ತಿರಲಿಲ್ಲ ಕತ್ತಲೆಯ ಸಮಯದಲ್ಲಿ ನಾವು ಉಗುರನ್ನು ಕತ್ತರಿಸುವುದರಿಂದ ನಮ್ಮ ಉಗುರುನ ತುಂಡುಗಳು ಎಲ್ಲಾದರೂ ಬಿದ್ದು ಅನೈರ್ಮಲ್ಯ ಉಂಟಾಗುತ್ತದೆ ಹಾಗೆಯೇ ಸ್ವಚ್ಛತೆ ಇರುವುದಿಲ್ಲ ನಾವು ಉಗುರನ್ನು ಕಟ್ ಮಾಡಿದ ನಂತರ ನಮ್ಮ ಉಗುರಿನ ಸಂದಿನಲ್ಲಿದ್ದ ಕೊಳಕು ನಾವು ಊಟ ಮಾಡಿದ ಸಮಯದಲ್ಲಿ ನಮ್ಮ ಹೊಟ್ಟೆಗೆ ಸೇರಿ ಅದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಜೆ ಸಮಯದಲ್ಲಿ ಉಗುರನ್ನು ಕತ್ತರಿಸಬಾರದು ಎಂದು ಹೇಳಲಾಗುತ್ತಿತ್ತು.
* ಇತ್ತೀಚಿನ ದಿನಗಳಲ್ಲಿ ಜನರು ಉಗುರು ಕತ್ತರಿಸಲು ನೈಲ್ ಕಟರ್ ಅನ್ನು ಉಪಯೋಗಿಸುತ್ತಾರೆ ಆದರೆ ಹಿಂದಿನ ಕಾಲದಲ್ಲಿ ಈ ಒಂದು ಸಾಧನ ಇರಲಿಲ್ಲ ಹಿಂದಿನ ಕಾಲದ ಜನರು ಬ್ಲೇಡ್ ನ ಮೂಲಕ ತಮ್ಮ ಉಗುರುಗಳನ್ನು ಕತ್ತರಿಸುತ್ತಿದ್ದರು. ಸಂಜೆಯ ಸಮಯದಲ್ಲಿ ಬ್ಲೇಡ್ ನಿಂದ ಉಗುರು ಕಟ್ ಮಾಡುವುದರಿಂದ ಅವರ ಬೆರಳಿಗೆ ಅಥವಾ ಕಾಲುಗಳಿಗೆ ಪೆಟ್ಟಾಗಬಹುದು ಗಾಯವಾಗಬಹುದು ಎನ್ನುವಂತಹ ದೃಷ್ಟಿಯಿಂದ ಮುಸ್ಸಂಜೆಯ ವೇಳೆಯಲ್ಲಿ ಉಗುರನ್ನು ಕತ್ತರಿಸಬಾರದು ಎಂದು ಹೇಳಲಾಗುತ್ತಿತ್ತು.
* ಇದರ ಹಿಂದೆ ಧಾರ್ಮಿಕ ಉದ್ದೇಶವು ಕೂಡ ಇದೆ ಧಾರ್ಮಿಕ ಉದ್ದೇಶದ ಪ್ರಕಾರ ಮುಸ್ಸಂಜೆಯಾಗುತ್ತಿದ್ದಂತೆ ಲಕ್ಷ್ಮಿ ದೇವಿಯು ಮನೆಯನ್ನು ಆಗಮಿಸುತ್ತಾಳೆ ಮನೆಗೆ ಸಮೃದ್ಧಿ ಮತ್ತು ಸಂಪತ್ತನ್ನು ನೀಡಲು ಅವಳು ರಾತ್ರಿಯಲ್ಲಿ ಮನೆಯಲ್ಲಿಯೇ ಇರುತ್ತಾಳೆ ಎಂದು ಜನರು ನಂಬುತ್ತಾರೆ ಆದ್ದರಿಂದ ಆ ಸಮಯದಲ್ಲಿ ಕಸವನ್ನು ಮನೆಯಿಂದ ಹೊರಗೆ ಹಾಕುವುದು ಹಣವನ್ನು ಹಸ್ತಾಂತರಿಸುವುದು ಸಾಲವನ್ನು ಕೊಡುವುದು ಮತ್ತು ಉಗುರುಗಳು ಮತ್ತು ಕೂದಲನ್ನು ಕತ್ತರಿಸುವುದು ಮುಂತಾದ ಕಾರ್ಯಕ್ರಮಗಳನ್ನು ಮಾಡಬಾರದು ಇದು ಲಕ್ಷ್ಮಿ ದೇವಿಯನ್ನು ಅಗೌರವಿಸುತ್ತದೆ ಅಗೌರವ ಗೊಳಿಸಿದಂತೆ ಎಂದು ಹಿಂದಿನ ಕಾಲದ ಜನರು ನಂಬಿ ಸಂಜೆಯ ಸಮಯದಲ್ಲಿ ಉಗುರನ್ನು ಕತ್ತರಿಸಿ ಮನೆಯಿಂದ ಆಚೆ ಹಾಕಬಾರದು ಎಂದು ಹೇಳಲಾಗುತ್ತಿತ್ತು.
* ಹಿಂದಿನ ಕಾಲದಲ್ಲಿ ವಿದ್ಯುತ್ ಇಲ್ಲದ ಕಾರಣ ನಾವು ಕತ್ತರಿಸಿದಂತಹ ಉಗುರುಗಳು ನೆಲದ ಮೇಲೆ ಬಿದ್ದು ಗಾಳಿಯ ಮೂಲಕ ನಮ್ಮ ಆಹಾರದಲ್ಲಿ ಸೇರಿ ಹೊಟ್ಟೆಗೆ ಹೋಗಿ ನಂತರ ಸಾಕಷ್ಟು ರೀತಿಯಾದಂತಹ ಉದರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎನ್ನುವಂತಹ ದೃಷ್ಟಿಯಿಂದ ರಾತ್ರಿ ಸಮಯದಲ್ಲಿ ಉಗುರು ಕತ್ತರಿಸಬಾರದು ಎಂದು ಹೇಳುತ್ತಿದ್ದರು.
* ಸಾಮಾನ್ಯವಾಗಿ ನಮ್ಮ ಮೇಲೆ ಪಿತೂರಿ ನಡೆಸುವವರು ಅಂದರೆ ಮಾಟ ಮಂತ್ರ ಮಾಡುವಂತಹ ಅವರು ನಮ್ಮ ಉಗುರುಗಳನ್ನು ಸಹ ತೆಗೆದುಕೊಂಡು ನಮ್ಮ ಮೇಲೆ ಕೆಟ್ಟದ್ದನ್ನು ಮಾಡುವಂತಹ ಸಂಚು ಹಾಕುತ್ತಾರೆ ಆದ್ದರಿಂದ ನಾವು ರಾತ್ರಿ ಸಮಯದಲ್ಲಿ ಉಗುರು ಕತ್ತರಿಸುವುದರಿಂದ ಕೆಳಗೆ ನೆಲದ ಮೇಲೆ ಬಿದ್ದಾಗ ಆ ಉಗುರುಗಳನ್ನು ಅವರು ತೆಗೆದುಕೊಂಡು ನಮ್ಮ ವಿರುದ್ಧ ಸಂಚು ಮಾಡಬಹುದು. ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ತೆರೆಯರಿಗೂ ಶೇರ್ ಮಾಡಿ