Tuesday, October 3, 2023
Home News ಈ 6 ಲಕ್ಷ ಜನರಿಗೆ BPL ಕಾರ್ಡ್ ಹೊಂದಿದ್ದರು ಕೂಡ ಅನ್ನಭಾಗ್ಯ ಯೋಜನೆಯ ಹಣ ಸಿಗುವುದಿಲ್ಲ,...

ಈ 6 ಲಕ್ಷ ಜನರಿಗೆ BPL ಕಾರ್ಡ್ ಹೊಂದಿದ್ದರು ಕೂಡ ಅನ್ನಭಾಗ್ಯ ಯೋಜನೆಯ ಹಣ ಸಿಗುವುದಿಲ್ಲ, ಅಂತಹವರ ಲಿಸ್ಟ್ ಇಲ್ಲಿದೆ ನೋಡಿ.

ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಅನ್ನಭಾಗ್ಯ ಯೋಜನೆಯು ಕೂಡ ಬಹಳ ಪ್ರಮುಖವಾಗಿದ್ದು ಇದರ ಅಡಿಯಲ್ಲಿ ಜನರಿಗೆ ಅಂದರೆ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಜನರಿಗೆ 10 ಕೆಜಿಗಳ ಅಕ್ಕಿ ನೀಡುವುದಾಗಿ ಸರ್ಕಾರ ತೀರ್ಮಾನವನ್ನು ಕೈಗೊಂಡಿತ್ತು ಆದರೆ ಅಕ್ಕಿಯ ಅಭಾವ ಇರುವ ಕಾರಣದಿಂದಾಗಿ ರಾಜ್ಯದಲ್ಲಿ ಐದು ಕೆಜಿ ಅಕ್ಕಿ ಮತ್ತು ಇನ್ನುಳಿದ 5 ಕೆಜಿಯ ಬದಲಾಗಿ ಪ್ರತಿ ಕುಟುಂಬಕ್ಕೂ ಸಹ ಹಣವನ್ನು ನೀಡುವುದಾಗಿ ಸರ್ಕಾರ ತಿಳಿಸಿತ್ತು.

5 ಕೆಜಿ ಅಕ್ಕಿಯ ಬದಲಾಗಿ 170 ರೂಪಾಯಿಗಳನ್ನು ಜುಲೈ ತಿಂಗಳಿನಿಂದ ಗ್ರಾಹಕರ ಖಾತೆಗೆ ನೇರವಾಗಿ ವರ್ಗಾವಣೆ ಮಾಡುತ್ತೇವೆ ಎಂದು ರಾಜ್ಯ ಸರ್ಕಾರವು ತಿಳಿಸಿತ್ತು. ಆದರೆ ಇದೀಗ ರಾಜ್ಯದಲ್ಲಿ 6 ಲಕ್ಷ ಜನರಿಗೆ ಅನ್ನಭಾಗ್ಯ ಯೋಜನೆಯ ಹಣ ದೊರೆಯುತ್ತಿಲ್ಲ ಕಾರಣ ತಮ್ಮ ಆಧಾರ್ ಕಾರ್ಡನ್ನು ಬ್ಯಾಂಕ್ ಖಾತೆಗೆ ಮ್ಯಾಪಿಂಗ್ ಮಾಡಿಸಿಕೊಳ್ಳದೆ ಇರುವುದರಿಂದ ಅಂತಹವರ ಖಾತೆಗೆ ಹಣ ವರ್ಗಾವಣೆ ಮಾಡಲು ಆಗುವುದಿಲ್ಲ ರಾಜ್ಯದಲ್ಲಿ ಸುಮಾರು 6 ಲಕ್ಷ ಕಾರ್ಡ್ ಗಳು ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿರುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಷಯದ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುವ ಹೊರಟಿದ್ದೇವೆ. ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಕುಟುಂಬದ ಪ್ರತಿ ಸದಸ್ಯರಿಗೂ ಕೂಡ 5 ಕೆಜಿ ಅಕ್ಕಿ ಇಬ್ಬರು ಸದಸ್ಯರಿದ್ದರೆ ಕುಟುಂಬಕ್ಕೆ 10 ಕೆಜಿ ಅಕ್ಕಿ, ಐದಕ್ಕಿಂತ ಹೆಚ್ಚು ಜನರು ಇದ್ದರೆ ಕುಟುಂಬಕ್ಕೆ 25 ಕೆಜಿ ಅಕ್ಕಿ ನಿಗದಿಪಡಿಸಲಾಗಿತ್ತು. ಒಂದು ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ ಈ ಕುಟುಂಬಗಳಿಗೆ ಕ್ರಮವಾಗಿ 170, 340 ಹಾಗು 850ಗಳನ್ನು ನೀಡಲಾಗುತ್ತದೆ.

ಬಿಪಿಎಲ್ ಕಾರ್ಡ್ ಹೊಂದಿರುವಂತಹ ಎಲ್ಲಾ ಗ್ರಾಹಕರಿಗೂ ಕೂಡ ಹಣ ಸಿಗುತ್ತದೆ ರಾಜ್ಯದಲ್ಲಿ ಸುಮಾರು 1.78 ಕೋಟಿ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಜನರು ಇದ್ದಾರೆ. ಈ ಬಗ್ಗೆ ಸುಮಾರು ಆರು ಲಕ್ಷಕ್ಕೂ ಹೆಚ್ಚು ಜನರು ಕಾರ್ಡ್ ಗಳಿಗೆ ಬ್ಯಾಂಕ್ ಲಿಂಕ್ ಆಗದೇ ಇರುವುದರಿಂದ ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲಾ ಗ್ರಾಹಕರ ಆಧಾರ್ ಸಂಖ್ಯೆಗೆ ಬ್ಯಾಂಕ್ ಕಡ್ಡಾಯವಾಗಿ ಮ್ಯಾಪಿಂಗ್ ಆಗಿರಬೇಕು ಹಾಗಿದ್ದರೆ ಮಾತ್ರ ಅನ್ನ ಭಾಗ್ಯ ಯೋಜನೆಯ ಹಣ ದೊರೆಯುತ್ತದೆ ಮನೆಗಳ ಯಾವೊಬ್ಬ ಸದಸ್ಯರು ಬ್ಯಾಂಕ್ ಖಾತೆಯನ್ನು ಪಡಿತರ ಚೀಟಿಗೆ ಲಿಂಕ್ ಮಾಡಿಲ್ಲ ಕೆಲವರು ಬ್ಯಾಂಕ್ ಖಾತೆಗಳು ಲಿಂಕ್ ಆಗಿದ್ದರು ಕೂಡ ಆ ಬ್ಯಾಂಕ್ ಖಾತೆಗಳಿಗೆ ಆಧಾರ್ ನಂಬರ್ ಲಿಂಕ್ ಆಗಿಲ್ಲ.

ಅಂತಹವರಿಗೆ ಈ ಯೋಜನೆಯ ಹಣವನ್ನು ತಲುಪಿಸಲು ಸಾಧ್ಯ ವಾಗುವುದಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರಣಕ್ಕಾಗಿ ನಿಮ್ಮ ರೇಷನ್ ಕಾರ್ಡ್ ಹೊಂದಿರುವವರು ಆಧಾರ್ ಕಾರ್ಡ್ ಮ್ಯಾಪಿಂಗ್ ಆಗಿದೆಯೋ ಅಥವಾ ಇಲ್ಲವೋ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಡಿಬಿಟಿ ಲಿಂಕ್ ಮಾಡಿ ಡಿಪಿಟಿ ಎಂದರೆ ಡೈರೆಕ್ಟ್ ಬೆನೆಫಿಟ್ ಟ್ರಾನ್ಸ್ಫರ್ ಎಂದು ಅರ್ಥ ಇದರಿಂದಾಗಿ ಮಹಿಳೆಯರ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವಂತಹ ಬ್ಯಾಂಕ್ ಖಾತೆಗೆ ನೇರವಾಗಿ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿಗಳು ಹಾಗೆ ಅನ್ನಭಾಗ್ಯ ಯೋಜನೆಯ 170 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ

ಹೀಗಾಗಿ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಆಧಾರ್ ಕಾರ್ಡ್ ಡಿಬಿಟಿ ಲಿಂಕ್ ಆಗಿದೆ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದಕ್ಕಾಗಿ ನೀವು ನಿಮ್ಮ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳುವುದು ಬಹಳ ಮುಖ್ಯವಾಗಿದ್ದು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ನೀವು ಲಾಭವವನ್ನು ಪಡೆದುಕೊಳ್ಳಬೇಕಾದರೆ ನಿಮ್ಮ ಆಧಾರ್ ಕಾರ್ಡ್ ಮ್ಯಾಪಿಂಗ್ ಮಾಡಿಸಿಕೊಳ್ಳಬೇಕಾಗುತ್ತದೆ ಇನ್ನು ಯಾರೆಲ್ಲಾ ಗ್ರಾಹಕರು ಆಧಾರ್ ಕಾರ್ಡ್ ಸಂಖ್ಯೆಗೆ ಬ್ಯಾಂಕ್ ಕಡ್ಡಾಯವಾಗಿ ಮ್ಯಾಪಿಂಗ್ ಮಾಡಿಲ್ಲವೋ ಅಂತವರು ಖುದ್ದಾಗಿ ಈಗಲೇ ಮ್ಯಾಪಿಂಗ್ ಮಾಡಿಸುವುದರಿಂದ ಈ ಭಾಗ್ಯ ಎನ್ನ ಬಗ್ಗೆ ಯೋಚನೆಯ ಲಾಭವನ್ನು ಪಡೆದುಕೊಳ್ಳಬಹುದು.

ಪ್ರತಿಯೊಬ್ಬ ಸದಸ್ಯರು ಕೂಡ ಈ ಯೋಜನೆ ಲಾಭವನ್ನು ಪಡೆದುಕೊಳ್ಳಬಹುದು ಕರ್ನಾಟಕ ಸರ್ಕಾರದ ಈ ರೀತಿಯಾದಂತಹ ಹಲವು ಯೋಜನೆಗಳು ಜಾರಿಯಾಗುತ್ತಲೇ ಇದೆ ಆದ್ದರಿಂದ ಸರ್ಕಾರ ತಿಳಿಸುವಂತಹ ಎಲ್ಲ ನಿಯಮಗಳನ್ನು ನೀವು ಪಾಲಿಸಿದರೆ ಸರ್ಕಾರದ ಎಲ್ಲಾ ಯೋಜನೆಗಳ ಲಾಭವನ್ನು ನೀವು ಪಡೆದುಕೊಳ್ಳಬಹುದು. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ ಹಾಗೆಯೇ ಈ ಮಾಹಿತಿ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.

- Advertisment -