ಹೆಣ್ಣು ಮಕ್ಕಳು ತಂದೆ ಮನೆಯ ಎಲ್ಲಾ ಆಸ್ತಿಯಲ್ಲಿಯೂ ಸಹ ಹಕ್ಕನ್ನು ಕೇಳಲು ಸಾಧ್ಯವಿಲ್ಲ, ತವರು ಮನೆಯ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಹೇಗೆ ಪಾಲು ಇರುತ್ತದೆಯೋ ಅದೇ ರೀತಿಯಲ್ಲಿ ಹೆಣ್ಣು ಮಕ್ಕಳಿಗೂ ಸಹ ಸಮಾನವಾದ ಪಾಲನ್ನು ನೀಡಬೇಕು ಎಂದು ಕಾನೂನು ಹೇಳುತ್ತದೆ ಆದರೆ ಕೆಲವೊಂದು ತವರು ಮನೆಯ ಆಸ್ತಿಯನ್ನು ಅಂದರೆ ತಂದೆ ಮನೆಯ ಆಸ್ತಿಯನ್ನು ಹೆಣ್ಣು ಮಕ್ಕಳು ಪಡೆದುಕೊಳ್ಳಲು ಸಾಧ್ಯವಿಲ್ಲ.
ಹೆಣ್ಣು ಮಕ್ಕಳು ಯಾವ ಯಾವ ಆಸ್ತಿಯಲ್ಲಿ ಹಕ್ಕನ್ನು ಕೇಳಬಹುದು ಎಂದು ನೋಡುವುದಾದರೆ.
* ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಎಷ್ಟು ಸಮಾನವಾದ ಹಕ್ಕು ಇರುತ್ತದೆ ಹಾಗೆ ಹೆಣ್ಣು ಮಕ್ಕಳಿಗೂ ಕೂಡ ಸಮಾನವಾದಂತಹ ಹಕ್ಕು ಇರುವುದರಿಂದ ಪಿತ್ರಾರ್ಜಿತವಾಗಿ ಬಂದಂತಹ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಹಕ್ಕುದಾರರಾಗಿರುತ್ತಾರೆ. ಪಿತ್ರಾರ್ಜಿತ ಆಸ್ತಿ ಎಂದರೆ ವಂಶ ಪಾರಂಪರವಾಗಿ ಬಂದಿರುವ ಆಸ್ತಿ ತಂದೆ ತಾತ ಮುತ್ತಾತ ಮೂರು ತಲೆಮಾರುಗಳಿಂದ ಬಂದಂತಹ ಆಸ್ತಿ ಆಗಿರುತ್ತದೆ ಒಬ್ಬ ಮಹಿಳೆಗೆ ತಂದೆಯಿಂದ ತಾತನಿಂದ ಮುತ್ತಾತನಿಂದ ಈ ರೀತಿಯಾಗಿ ಬಂದಿರುವ ಆಸ್ತಿಯೇ ಪಿತ್ರಾರ್ಜಿತ ಆಸ್ತಿ, ಪಿತ್ರಾರ್ಜಿತ ಆಸ್ತಿ ಎಂದು ಮೂರು ತಲೆಮಾರಿಗೆ ಮಾತ್ರ ತೆಗೆದುಕೊಳ್ಳಲಾಗುತ್ತದೆ.
ಸರ್ಕಾರಿ ಉದ್ಯೋಗಗಳು, ಸರ್ಕಾರಿ ಯೋಜನೆಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್ಗೆ ಸೇರಿ
ನಮ್ಮ ವಾಟ್ಸಾಪ್ ಗ್ರೂಪ್ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಚಾನಲ್ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
* ಒಟ್ಟು ಕುಟುಂಬದ ಮೂಲಕ ಗಳಿಸಿರುವಂತಹ ಆಸ್ತಿಗಳು ತಂದೆ ಮತ್ತು ತಂದೆಯ ಅಣ್ಣ-ತಮ್ಮಂದಿರು ಎಲ್ಲರೂ ಸೇರಿ ಒಟ್ಟಾಗಿ ಜೊತೆಯಲ್ಲಿದ್ದು ಸಂಪಾದಿಸಿರುವಂತಹ ಆಸ್ತಿ ಆಗಿರುತ್ತದೆ ಅಂದರೆ ಜಂಟಿ ಕುಟುಂಬದಲ್ಲಿ ಇರುವಾಗ ಸಂಪಾದಿಸಿದಂತಹ ಆಸ್ತಿ, ಈ ರೀತಿ ಒಟ್ಟು ಕುಟುಂಬದಲ್ಲಿ ಮಾಡಿರುವ ಆಸ್ತಿಯಲ್ಲಿಯೂ ಕೂಡ ಹೆಣ್ಣು ಮಕ್ಕಳು ಪಾಲನ್ನು ಕೇಳಬಹುದು ಅದನ್ನು ಜಂಟಿ ಕುಟುಂಬದ ಆಸ್ತಿ ಎಂದು ಹೇಳಲಾಗುತ್ತದೆ. ಈ ಆಸ್ತಿಯಲ್ಲಿಯೂ ಸಹ ಹೆಣ್ಣು ಮಕ್ಕಳು ಪಾಲುದಾರರಾಗಿರುತ್ತಾರೆ.
* ಒಟ್ಟು ಕುಟುಂಬದ ಆಸ್ತಿಯಿಂದ ಬಂದಂತಹ ಬಂಡವಾಳದಿಂದ ಆಸ್ತಿಯನ್ನು ಖರೀದಿಸಿದರೆ ಅಥವಾ ಒಟ್ಟು ಕುಟುಂಬದ ಆಸ್ತಿಗೆ ಸಂಬಂಧಿಸಿದ ಯಾವುದೇ ಒಂದು ಗಳಿಕೆಯಿಂದ ಖರೀದಿಸಿರುವಂತಹ ಆಸ್ತಿಗಳಲ್ಲಿ ಕೂಡ ಹೆಣ್ಣು ಮಕ್ಕಳು ಹಕ್ಕನ್ನು ಕೇಳಬಹುದು. ಇದನ್ನು ಒಟ್ಟ ಕುಟುಂಬದ ಆಸ್ತಿ ಎಂದು ಪರಿಗಣಿಸಲಾಗುತ್ತದೆ.
* ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡಿ ಅದರಿಂದ ಬಂದ ಹಣದಿಂದ ಬೇರೆ ಆಸ್ತಿಯನ್ನು ಖರೀದಿಸಿದರೆ ಅದು ಕೂಡ ಒಟ್ಟು ಕುಟುಂಬದ ಆಸ್ತಿಯಾಗುತ್ತದೆ ಅದರಲ್ಲೂ ಕೂಡ ಹೆಣ್ಣು ಮಕ್ಕಳು ಹಕ್ಕನ್ನು ಕೇಳಬಹುದು ಅದು ಕೂಡ ಪಿತ್ರಾರ್ಜಿತ ಆಸ್ತಿ ಆಗಿರುತ್ತದೆ.
* 2005ರ ತಿದ್ದುಪಡಿಯ ನಂತರ ಯಾವುದೇ ರೀತಿಯ ವಿಭಾಗವನ್ನು ಮಾಡದೆ ಹಾಗೆ ಉಳಿದಿರುವಂತಹ ಆಸ್ತಿಯಲ್ಲಿ ಕೂಡ ಹೆಣ್ಣು ಮಕ್ಕಳು ಹಕ್ಕನ್ನು ಕೇಳಬಹುದು.
* ಒಟ್ಟು ಕುಟುಂಬದ ಆಸ್ತಿಗೆ ಸಂಬಂಧಪಟ್ಟ ಒಬ್ಬ ಪುರುಷ ಅವನ ಸ್ವಂತ ಖರ್ಚಿನಿಂದ ಆಸ್ತಿಯನ್ನು ಖರೀದಿಸಿ ಒಟ್ಟು ಕುಟುಂಬಕ್ಕೆ ಬಿಟ್ಟುಕೊಟ್ಟಿದ್ದರೆ ಒಟ್ಟು ಕುಟುಂಬದ ಉಪಯೋಗಕ್ಕಾಗಿ ಮತ್ತು ಅವರ ಒಳಿತಿಗಾಗಿ ಬಿಟ್ಟುಕೊಟ್ಟಿದ್ದರೆ ಆ ಆಸ್ತಿಯಲ್ಲಿ ಕೂಡ ಹೆಣ್ಣು ಮಕ್ಕಳು ಹಕ್ಕನ್ನು ಕೇಳಬಹುದು.
* ಹೆಣ್ಣು ಮಕ್ಕಳನ್ನು ಬಿಟ್ಟು ಗಂಡು ಮಕ್ಕಳು ಮಾತ್ರ 2005ರ ನಂತರ ವಿಭಾಗವನ್ನು ಮಾಡಿಕೊಂಡಿದ್ದರೆ ಅಂತಹ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಹತ್ತಿರ ಯಾವುದೇ ರೀತಿಯಾದಂತಹ ಸಹಿಯನ್ನು ಪಡೆಯದೆ ಹಕ್ಕು ಬಿಡುಗಡೆ ಪತ್ರವನ್ನು ಪಡೆಯದೆ ವಿಭಾಗವನ್ನು ಮಾಡಿಕೊಂಡಿದ್ದರು ಕೂಡ ಅದರ ಮೇಲು ಕೂಡ ಹೆಣ್ಣು ಮಕ್ಕಳು ಹಕ್ಕನ್ನು ಕೇಳಬಹುದು.
ಯಾವ ಯಾವ ಆಸ್ತಿಯಲ್ಲಿ ಹಕ್ಕನ್ನು ಹೆಣ್ಣು ಮಕ್ಕಳು ಕೇಳಲು ಆಗುವುದಿಲ್ಲ ಎಂದು ನೋಡುವುದಾದರೆ.
* ತಾಯಿಗೆ ಬಂದಿರುವಂತಹ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಹಕ್ಕನ್ನು ಕೇಳಲು ಆಗುವುದಿಲ್ಲ ಯಾಕೆಂದರೆ ಅವರ ತವರಿನಿಂದ ಬಂದಂತಹ ಆಸ್ತಿ ಆಗಿರುವುದರಿಂದ ಅದು ಅವರ ತಾಯಿಗೆ ಮಾತ್ರ ಸಂಬಂಧ ಪಟ್ಟಿರುತ್ತದೆ ಅದನ್ನು ತಾಯಿ ಯಾರಿಗೆ ಬೇಕಾದರು ಕೊಡಬಹುದು. ಇದರಲ್ಲಿ ಹೆಣ್ಣು ಮಕ್ಕಳಿಗೆ ಹಕ್ಕು ಇರುವುದಿಲ್ಲ.
* ತಂದೆಗೆ ತನ್ನ ತಾಯಿಯಿಂದ ಆಸ್ತಿ ಬಂದಿದ್ದರೆ, ತಾಯಿ ತನ್ನ ತವರಿಂದ ಬಂದಿರುವ ಆಸ್ತಿಯನ್ನು ಯಾವುದೋ ರೂಪದಲ್ಲಿ ಕೊಟ್ಟಿದ್ದರೆ ಅದರಲ್ಲು ಕೂಡ ಹೆಣ್ಣು ಮಕ್ಕಳು ಹಕ್ಕು ಕೇಳಲು ಆಗುವುದಿಲ್ಲ.
* ತಂದೆಗೆ ವಿಲ್ ಮೂಲಕ ಅಥವಾ ದಾನದ ಮೂಲಕ ಆಸ್ತಿ ಬಂದಿದ್ದರೆ ಆ ಆಸ್ತಿಯ ಮೇಲೆ ಹಕ್ಕು ಕೇಳಲು ಆಗುವುದಿಲ್ಲ.
* ತಂದೆಗೆ ಸರ್ಕಾರದಿಂದ ಮಂಜೂರಿಯಾದ ಆಸ್ತಿಯ ಮೇಲೆ ತಂದೆ ಬದುಕಿರುವ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಹಕ್ಕನ್ನು ಕೇಳಲು ಆಗುವುದಿಲ್ಲ.
* ತಂದೆ ತನ್ನ ಸ್ವಯಾರ್ಜಿತವಾಗಿ ಆಸ್ತಿಯನ್ನು ಗಳಿಸಿದ್ದರೆ ಆಸ್ತಿಯ ಮೇಲೆ ಹೆಣ್ಣು ಮಕ್ಕಳಿಗೆ ಹಕ್ಕು ಇರುವುದಿಲ್ಲ.
* 2005 ರ ಮೊದಲೆ ಗಂಡು ಮಕ್ಕಳು ಮತ್ತು ತಂದೆ ಎಲ್ಲರೂ ಅವರವರ ಭಾಗವನ್ನು ಪಡೆದುಕೊಂಡಿದ್ದರೆ ಅದರಲ್ಲು ಹೆಣ್ಣು ಮಕ್ಕಳಿಗೆ ಹಕ್ಕು ಇರುವುದಿಲ್ಲ. ತಂದೆಯ ಅವಧಿಯ ನಂತರ ಹೆಣ್ಣು ಮಗಳು ಆ ಆಸ್ತಿಯಲ್ಲಿ ಪಾಲು ಕೇಳಬಹುದು ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿಯನ್ನು ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.
ಸರ್ಕಾರಿ ಉದ್ಯೋಗಗಳು, ಸರ್ಕಾರಿ ಯೋಜನೆಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್ಗೆ ಸೇರಿ
ನಮ್ಮ ವಾಟ್ಸಾಪ್ ಗ್ರೂಪ್ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಚಾನಲ್ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |