Thursday, September 28, 2023
Home News ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿದೆಯೋ, ಇಲ್ಲವೋ ಎಂದು ಈ ರೀತಿ ಚೆಕ್ ಮಾಡಿಕೊಳ್ಳಿ.

ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿದೆಯೋ, ಇಲ್ಲವೋ ಎಂದು ಈ ರೀತಿ ಚೆಕ್ ಮಾಡಿಕೊಳ್ಳಿ.

ನಮಸ್ಕಾರ ಸ್ನೇಹಿತರೆ ಇಂದಿನ ವಿಷಯ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ಇಂದು ಅನ್ನ ಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿದೆಯೋ ಇಲ್ಲವೋ ಎಂದು ಹೇಗೆ ಪರಿಶೀಲಿಸ ಬೇಕು ಎಂದು ನಾವು ಈ ಲೇಖನದಲ್ಲಿ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಗಳಾದ ಅನ್ನಭಾಗ್ಯ ಯೋಜನೆ ಜಾರಿಯಾಗಿ 10 ವರ್ಷಗಳು ಕಳೆದಿದೆ ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಪ್ರತಿ ವ್ಯಕ್ತಿಗೆ ತಲ 5 ಕೆ.ಜಿ ಅಕ್ಕಿ ಹಾಗೂ 170 ರೂಪಾಯಿ ನೀಡಲು ನಿರ್ಧಾರವನ್ನು ಕೈಗೊಂಡಿದ್ದಾರೆ.

ರಾಜ್ಯದ ಜನರಿಗೆ ಹಸಿವು ಕಾಡಬಾರದು ಎಂಬ ದೃಷ್ಟಿಯಿಂದ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಕುಟುಂಬದ ಪ್ರತಿ ವ್ಯಕ್ತಿಗೆ ತಲ ಐದು ಕೆಜಿ ಅಕ್ಕಿ ಹಾಗೂ 170 ರೂಪಾಯಿಗಳನ್ನು ನೀಡಲಿದ್ದೇವೆ ಎಂದು ಸರ್ಕಾರ ತಿಳಿಸಿದೆ ಹೆಚ್ಚುವರಿ ಐದು ಕೆಜಿ ಅಕ್ಕಿಯ ಬದಲಿಗೆ ನೀಡುವ ಹಣವನ್ನು ಆಹಾರ ಪದಾರ್ಥಗಳ ಖರೀದಿಗೆ ಮಾತ್ರ ಬಳಕೆ ಮಾಡಬೇಕೆಂದು ರಾಜ್ಯದ ಜನರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ.

5 ಕೆಜಿ ಅಕ್ಕಿ ಬದಲಿಗೆ ಹಣವನ್ನು ನೇರವಾಗಿ ಖಾತೆಗೆ ಜಮಾ ಮಾಡಲಾಗುತ್ತಿದೆ ಒಬ್ಬ ಸದಸ್ಯರಿಗೆ 170 ರೂಪಾಯಿ, ಇಬ್ಬರು ಇದ್ದರೆ 340 ಹೀಗೆ ಎಷ್ಟು ಜನ ಸದಸ್ಯರು ಇರುತ್ತಾರೆ ಅದರಂತೆ ಅವರ ಕುಟುಂಬಕ್ಕೆ ತಲಾ 170 ರೂಪಾಯಿಯನ್ನು ನೀಡಲಾಗುತ್ತಿದೆ. ನಿಮ್ಮ ಖಾತೆಗೆ ಹಣ ಬಂದಿದೆಯೋ ಇಲ್ಲವೋ ಎಂದು ನೋಡಲು ಆಹಾರ ಇಲಾಖೆಯ ಅಫೀಷಿಯಲ್ ವೆಬ್ಸೈಟ್ಗೆ ಭೇಟಿ ನೀಡಬೇಕು. ಅಥವಾ ನೀವು ಗೂಗಲ್ ನಲ್ಲಿ ಹೋಗಿ ಆಹಾರ ಡಾಟ್ಕಾಂ ಎಂದು ಟೈಪ್ ಮಾಡಿ ಸರ್ಚ್ ಮಾಡಿದರೆ ನಿಮಗೆ ಓಪನ್ ಆಗುತ್ತದೆ

ಸರ್ಕಾರಿ ಉದ್ಯೋಗಗಳು, ಸರ್ಕಾರಿ ಯೋಜನೆಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ WhatsApp ಗ್ರೂಪ್‌ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಸೇರಿ

ನಮ್ಮ ವಾಟ್ಸಾಪ್ ಗ್ರೂಪ್‌ಗೆ ಸೇರಿ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಚಾನಲ್‌ಗೆ ಸೇರಿ ಇಲ್ಲಿ ಕ್ಲಿಕ್ ಮಾಡಿ

ನಂತರ ಇ ಸೇವೆಗಳು ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು ಇಲ್ಲಿ ನಿಮ್ಮ ಎಡಗಡೆ ಡಿ ಬಿ ಟಿ ಸ್ಥಿತಿ ಎಂಬ ಆಪ್ಷನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ಯಾವ ಜಿಲ್ಲೆಗಳು ಬರುತ್ತದೆ ನಿಮ್ಮ ಜಿಲ್ಲೆಗಳ ಮೇಲೆ ಒಂದು ಲಿಂಕ್ ಇರುತ್ತದೆ ಅದನ್ನು ಕ್ಲಿಕ್ ಮಾಡಿ ಅದರಲ್ಲಿ ನೇರ ನಗದು ವರ್ಗಾವಣೆ ಸ್ಥಿತಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ವರ್ಷ ಸೆಲೆಕ್ಟ್ ಮಾಡಿ ತಿಂಗಳು ಸೆಲೆಕ್ಟ್ ಮಾಡಬೇಕು ನಂತರ ರೇಷನ್ ಕಾರ್ಡ್ ನಂಬರ್ ಹಾಕಿದ ತಕ್ಷಣ ನಿಮಗೆ ಮಾಹಿತಿ ಸಿಗುತ್ತದೆ.

ಸಂಪೂರ್ಣ ಕುಟುಂಬದ ಸದಸ್ಯರ ಹೆಸರು ಅವರ ಐಡಿ ಎಷ್ಟು ಜನ ಸದಸ್ಯರು ಇದ್ದಾರೆ ಎಷ್ಟು ಕೆಜಿ ಅಕ್ಕಿ ಅವರಿಗೆ ವರ್ಗಾವಣೆಯಾಗುತ್ತದೆ ಹಾಗೆಯೇ ಅವರಿಗೆ ಎಷ್ಟು ಹಣ ಬಂದಿದೆ ಎಂಬುದು ಅಲ್ಲೇ ನಿಮಗೆ ತಿಳಿಯುತ್ತದೆ. ಈ ರೀತಿಯಾಗಿ ನೀವು ನಿಮ್ಮ ಖಾತೆಗೆ ಅನ್ನಭಾಗ್ಯ ಯೋಜನೆಯ ಹಣ ಪಾವತಿ ಆಗಿದೆಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಬಹುದು ಮನೆಯಲ್ಲಿ ಕುಳಿತು ಈ ಒಂದು ಕೆಲಸವನ್ನು ಅತಿ ಸುಲಭವಾಗಿ ಮಾಡಿಕೊಳ್ಳಬಹುದು.

ಯಾವುದೇ ತೊಂದರೆ ಇಲ್ಲದೆ ನಿಮಗೆ ಅನ್ನ ಭಾಗ್ಯ ಯೋಜನೆಯ ಹಣ ಬರದೆ ಇದ್ದರೆ ಆಧಾರ್ ಸಂಬಂಧಿತ ಕಾರಣಗಳಿಂದಾಗಿ ನಿಮ್ಮ ಕಾರ್ಡ್ ಡಿ ಬಿ ಟಿ ಪಾವತಿಗೆ ಅರ್ಹವಾಗಿಲ್ಲದಿದ್ದರೆ ಹತ್ತಿರದ ಬೆಂಗಳೂರು ಒನ್ ಅಥವಾ ಕರ್ನಾಟಕ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ನಿಮ್ಮ ಮನೆಯ ಮುಖ್ಯಸ್ಥರ ರೇಷನ್ ಕಾರ್ಡ್ ಗೆ ekyc ಯನ್ನು ಮಾಡಿಸಲು ವಿನಂತಿಸುತ್ತಾರೆ ಇದರ ಜೊತೆಗೆ ಆಹಾರ ಕಚೇರಿಯಿಂದ ಒಮ್ಮೆ ಅನುಮೋದಿಸಿದ ನಂತರ ನೀವು ಮುಂದಿನ ತಿಂಗಳಲ್ಲಿ ಮಾತ್ರ ನಗದು ಪಾವತಿಗಳಿಗೆ ಅರ್ಹರಾಗುತ್ತೀರಿ.

ಕಾಂಗ್ರೆಸ್ ಸರ್ಕಾರದ ಬಹುಮುಖ್ಯ ಯೋಜನೆಗಳಲ್ಲಿ ಬಡವರ ಹಸಿವನ್ನು ನೀಗಿಸುವ ಯೋಜನೆ ಅನ್ನಭಾಗ್ಯ ಯೋಜನೆಯಾಗಿದೆ ಇದರ ಅಡಿಯಲ್ಲಿ ಒಬ್ಬ ವ್ಯಕ್ತಿಗೆ ತಲಾ ಐದು ಕೆಜಿ ಅಕ್ಕಿ ಹಾಗು 170ರೂ ಗಳನ್ನು ನೀಡಲಾಗುತ್ತದೆ ಪ್ರತಿ ಕುಟುಂಬದಲ್ಲಿ ಎಷ್ಟು ಸದಸ್ಯರು ಇದ್ದಾರೆ ಎಂಬ ಆಧಾರದ ಮೇಲೆ ಅವರ ಕುಟುಂಬದವರಿಗೆ ಅಕ್ಕಿ ಹಾಗೂ ಹಣವನ್ನು ವರ್ಗಾವಣೆ ಮಾಡುತ್ತಾರೆ. ಸರ್ಕಾರವು ನೀಡಿದಂತಹ ಹಣವನ್ನು ಬೇರೆ ಯಾವ ಅನವಶ್ಯಕ ಖರ್ಚನ್ನು ಮಾಡದೆ ಹಣದಲ್ಲಿ ನೀವು ಮನೆಗೆ ಬೇಕಾದಂತಹ ಅಂದರೆ ಅಡುಗೆಗೆ ಬೇಕಾದಂತಹ ಸಾಮಗ್ರಿಗಳನ್ನು ಕೊಂಡುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿನಂತಿಯನ್ನು ಮಾಡಿಕೊಂಡಿದ್ದಾರೆ.

ಕಾಂಗ್ರೆಸ್ ಸರ್ಕಾರದ ಸಿದ್ದರಾಮಯ್ಯ ಅವರು 2013ರಲ್ಲಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದರು. ತಾವು ಸಹ ಬಡ ಕುಟುಂಬದಲ್ಲಿ ಹುಟ್ಟಿದ ಕಾರಣದಿಂದಾಗಿ ಸಿಎಂ ಆದ ಮರು ದಿನವೇ ಈ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದು ಯಶಸ್ವಿಯಾದರು ತಾವು ಅನುಭವಿಸಿದಂತಹ ಹಸಿವು ಮತ್ತೊಬ್ಬರು ಅನುಭವಿಸಬಾರದು ಎನ್ನುವ ಕಾರಣಕ್ಕಾಗಿ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿಯನ್ನು ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.

ಸರ್ಕಾರಿ ಉದ್ಯೋಗಗಳು, ಸರ್ಕಾರಿ ಯೋಜನೆಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ WhatsApp ಗ್ರೂಪ್‌ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಸೇರಿ

ನಮ್ಮ ವಾಟ್ಸಾಪ್ ಗ್ರೂಪ್‌ಗೆ ಸೇರಿ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಚಾನಲ್‌ಗೆ ಸೇರಿ ಇಲ್ಲಿ ಕ್ಲಿಕ್ ಮಾಡಿ

- Advertisment -