ನಮಸ್ಕಾರ ಸ್ನೇಹಿತರೇ ನಾವು ಇಂದು ವಿಶೇಷ ಮಾಹಿತಿಯನ್ನು ತಿಳಿಸುತ್ತಿದ್ದೇವೆ ನಿಮಗೆ ಹಣಕಾಸಿನ ಸಮಸ್ಯೆ ಇದ್ದರೆ ಈ ದೇವಸ್ಥಾನಕ್ಕೆ ಭೇಟಿ ನೀಡಿದರೆ ಸಾಕು ನಿಮ್ಮ ಕಷ್ಟಗಳೆಲ್ಲ ಕರಗಿ ಸಾಲದ ಸಮಸ್ಯೆಯಿಂದ ಹೊರ ಬರಬಹುದು. ಸಹಜವಾಗಿ ಎಲ್ಲರೂ ಕೂಡ ತಿರುಪತಿಗೆ ಹೋಗಿ ಬರುತ್ತಾರೆ ತಿಮ್ಮಪ್ಪನ ದರ್ಶನವನ್ನು ಪಡೆದು ಸಾಲಗಳಿಂದ ಮುಕ್ತಿ ಕೊಡು ಎಂದು ಕೇಳಿ ಬರುತ್ತಾರೆ ಆದರೆ ಬಹಳಷ್ಟು ಜನ ತಿರುಪತಿಗೆ ಹೋಗಬೇಕು ಎಂದರೆ ಕಷ್ಟವಾಗುತ್ತದೆ
ಯಾಕೆಂದರೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಎರಡರಿಂದ ಮೂರು ದಿನ ಬೇಕಾಗುತ್ತದೆ ಅದಕ್ಕಾಗಿಯೇ ನಮ್ಮ ಬೆಂಗಳೂರಿನಲ್ಲಿ ಇರುವ ವೆಂಕಟೇಶ್ವರನ ದೇವಸ್ಥಾನಕ್ಕೆ ಭೇಟಿ ನೀಡಿ. ಇದು ತಿರುಪತಿ ಅರ್ಚಕರು ಬಂದು ಇಲ್ಲಿ ಪ್ರತಿಷ್ಠಾಪನೆ ಮಾಡಿರುವುದು ಇಲ್ಲಿನ ಪೂಜೆಯ ವಿಧಾನ ದೇವರು ಎಲ್ಲವೂ ಕೂಡ ತಿರುಪತಿಯಲ್ಲಿ ಹೇಗೆ ನಡೆಯುತ್ತದೆ ಅದೇ ರೀತಿಯಲ್ಲಿ ಇಲ್ಲಿಯೂ ಸಹ ನಡೆಯುತ್ತದೆ ಕೆಲವೊಂದು ಶನಿವಾರದ ಸಮಯದಲ್ಲಿ ನಿಮಗೆ ತಿರುಪತಿ ಲಡ್ಡು ಕೂಡ ದೊರೆಯುತ್ತದೆ.
ಈ ದೇವಸ್ಥಾನದಲ್ಲಿ ಕೇವಲ ವೆಂಕಟೇಶ್ವರ ಸ್ವಾಮಿ ಅಷ್ಟೇ ಅಲ್ಲದೆ ಹನುಮಂತನ ದೇವಸ್ಥಾನ ಲಕ್ಷ್ಮಿ ದೇವಸ್ಥಾನ ಇದೆ, ಇಲ್ಲಿ ವಿಶೇಷವಾಗಿ ಇಡಿ ದೇವಸ್ಥಾನವನ್ನು ಕಲ್ಲಿನಲ್ಲಿ ಕಟ್ಟಲಾಗಿದೆ. ಇದು ಬೆಲೆಂಡೂರ್ ಕೆರೆ ಪಕ್ಕ ಇರುವ ದೇವಸ್ಥಾನವಾಗಿದೆ. ನಮ್ಮ ಧರ್ಮದ ಪ್ರಕಾರ ಮೊದಲ ಪೂಜೆ ಗಣೇಶನಿಗೆ ಅದಕ್ಕಾಗಿ ಮೊದಲು ಗಣೇಶನ ದೇವಸ್ಥಾನವಿದೆ. ನೀವು ದೇವಸ್ಥಾನಕ್ಕೆ ಹೋಗಬೇಕೆಂದರೆ ಶನಿವಾರದ ದಿನ ಹೋಗಿ ಬೆಳಿಗ್ಗೆ ಮತ್ತು ಸಂಜೆ ಎರಡು ಸಮಯದಲ್ಲೂ ಪೂಜೆ ಇರುತ್ತದೆ ರಾತ್ರಿ ಎಂಟು ಗಂಟೆಯ ಸಮಯದಲ್ಲಿ ವಿಶೇಷವಾದಂತಹ ಪೂಜೆ ಇರುತ್ತದೆ.
ಈ ದೇವಸ್ಥಾನಕ್ಕೆ ಹೋದರೆ ಸ್ವರ್ಗಕ್ಕೆ ಹೋಗಿರುವಂತೆ ಭಾಸ ನಿಮಗಾಗುತ್ತದೆ ಅಷ್ಟು ಸುಂದರವಾದಂತಹ ಸಕಾರಾತ್ಮಕ ಭಾವನೆಯನ್ನು ನಮ್ಮೊಳಗೆ ತುಂಬುತ್ತದೆ. ಗರ್ಭಗುಡಿ ಇಡೀ ದೇವಸ್ಥಾನವನ್ನು ತಿರುಪತಿಯಲ್ಲಿ ಯಾವ ರೀತಿಯಲ್ಲಿ ಕಟ್ಟಿದ್ದಾರೆ ಅದೇ ರೀತಿಯಲ್ಲಿ ಈ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ ಈ ದೇವಸ್ಥಾನದಲ್ಲಿ ಹೋದ ತಕ್ಷಣ ಗಂಧ ಅಥವಾ ಕುಂಕುಮ ಇರುತ್ತದೆ ಅದನ್ನು ನಿಮ್ಮ ಹಣೆಗೆ ಹಚ್ಚಿಕೊಳ್ಳುವುದರಿಂದ ಬಹಳಷ್ಟು ಸಕಾರಾತ್ಮಕ ಭಾವನೆ ನಮ್ಮೊಳಗೆ ತುಂಬುತ್ತದೆ.
ಈ ದೇವಸ್ಥಾನದಲ್ಲಿ ವಿಶೇಷವಾಗಿ ದೋಸೆಯನ್ನು ಪ್ರಸಾದವಾಗಿ ವಿನಿಯೋಗ ಮಾಡಲಾಗುತ್ತದೆ ನೀವು ಪ್ರತಿ ವಾರ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗದಿದ್ದರೆ ನಿಮ್ಮ ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಿ ನಿಮ್ಮ ಕಷ್ಟವನ್ನು ಹೇಳಿ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಮಾಡಿದ್ದರೆ ತುಂಬಾ ಒಳ್ಳೆಯದಾಗುತ್ತದೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ಕಷ್ಟಗಳು ಇದ್ದರೂ ಸಹಿತ ಅದು ನಿವಾರಣೆಯಾಗುತ್ತದೆ ನಿಮ್ಮ ಮಕ್ಕಳನ್ನು ಒಮ್ಮೆ ಇಲ್ಲಿಗೆ ಕರೆದುಕೊಂಡು ಬಂದು ದೇವರ ದರ್ಶನವನ್ನು ಮಾಡಿಸಿದರೆ ಮಕ್ಕಳ ಭವಿಷ್ಯದಲ್ಲಿ ಒಳ್ಳೆಯದಾಗುತ್ತದೆ ಹಾಗೆಯೇ ಮಕ್ಕಳ ವಿದ್ಯಾಭ್ಯಾಸಕ್ಕೂ ಕೂಡ ಒಳ್ಳೆಯದು. ಸಾಮಾನ್ಯವಾಗಿ ಹಣದ ಸಮಸ್ಯೆ ಇರುವವರು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ತಮ್ಮ ಹಣದ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳುತ್ತಾರೆ.
ಆದರೆ ಎಲ್ಲರಿಗೂ ಸಹ ತಿರುಪತಿಗೆ ಹೋಗಲು ಸಾಧ್ಯವಾಗದೇ ಇರುವ ಕಾರಣದಿಂದಾಗಿ ಬೆಂಗಳೂರಿನಲ್ಲಿ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಭೇಟಿ ನೀಡಿ ನೀವು ನಿಮ್ಮ ಕಷ್ಟಗಳನ್ನು ದೇವರ ಹತ್ತಿರ ಮೊರೆಯಿಟ್ಟು ಬೇಡಿಕೊಂಡರೆ ಖಂಡಿತವಾಗಿಯೂ ನಿಮ್ಮ ಮನೆಯಲ್ಲಿ ಇರುವಂತಹ ಹಣಕಾಸಿನ ಸಮಸ್ಯೆ ಹಾಗೆ ಮತ್ತಿತರ ಯಾವುದೇ ಸಮಸ್ಯೆಗಳು ಸಹ ನಿವಾರಣೆಯಾಗುತ್ತದೆ. ಈ ದೇವಸ್ಥಾನದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಮೆಂಟ್ಸ್ ಮೂಲಕ ತಿಳಿಸಿ ಮಾಹಿತಿ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.