ಸ್ನೇಹಿತರೆ ಇಂದು ವಿಶೇಷವಾದ ವಿಷಯದೊಂದಿಗೆ ನಿಮ್ಮನ್ನು ಸೆಳೆಯಲಿದ್ದೇವೆ. ಹೌದು ಸ್ನೇಹಿತೆ ಮಹಿಳಾ ಪ್ರಿಯರಿಗೆ ಇಷ್ಟವಾಗುವಂತಹ ವಿಷಯದೊಂದಿಗೆ ಹೆಚ್ಚಿನ ಮಾಹಿತಿಯನ್ನು ತಂದಿದ್ದೇವೆ ಸಾಮಾನ್ಯವಾಗಿ ಮಹಿಳೆಯರು ಇತ್ತೀಚಿಗೆ ಬಟ್ಟೆ ಹೊಲಿಯುಕೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸಿದ್ದಾರೆ ಇದಕ್ಕೆ ಮುಖ್ಯವಾದ ಕಾರಣ ಎಂದರೆ ಇದಕ್ಕೆ ಯಾವುದೇ ತರಹದ ವಿದ್ಯಾರ್ಹತೆ ಅವಶ್ಯಕತೆ ಇಲ್ಲ.
ಅಲ್ಲದೆ ಮಹಿಳೆಯರ ಸೌಂದರ್ಯದ ಬಗ್ಗೆ ಇರುವಂತಹ ಆಸಕ್ತಿ ಹೊಸ ಹೊಸ ತೋಡುಕೆಗಳನ್ನು ಹೊಲಿಯಲು ಸಹಕಾರ ಮಾಡುತ್ತದೆ. ಆದರೆ ಇಂದಿನ ಪುಟದಲ್ಲಿ ಉಲ್ಲೇಖಿಸಿರುವ ವಿಷಯವೆಂದರೆ ನಾವು ಹೊಸದಾಗಿ ಅಥವಾ ಈಗಾಗಲೇ ಬ್ಲೌಸ್ ಗಳನ್ನು ಹೊಲಿಯುತ್ತಿದ್ದರೆ ನಮ್ಮ ಭುಜದ ಭಾಗ ಬಿದ್ದು ಹೋದಂತೆ ಆಗುತ್ತದೆ ಸರಿಯಾದ ಫಿಟ್ನೆಸ್ ಕೊಡಲು ಆಗುತ್ತಿರುವುದಿಲ್ಲ ಇತರ ಆದಾಗ ಏನು ಮಾಡಬೇಕು ಹಾಗೂ ಅದನ್ನು ಹೇಗೆ ಸರಿ ಮಾಡುವುದು ಎಂಬುವುದು ಇಂದಿನ ವಿಷಯವಾಗಿದೆ.
ಮೊದಲನೆಯದಾಗಿ ನಾವು ಬ್ಲೌಸ್ ಅನ್ನು ಹೊಲಿಯಲು ಶುರು ಮಾಡಿದಾಗ ಮುಖ್ಯವಾದ ವಿಷಯವೆಂದರೆ ಸರಿಯಾದ ಅಳತೆಯನ್ನು ತೆಗೆದುಕೊಳ್ಳುವುದು. ನಾವು ಬ್ಲೌಸ್ ನನ್ನು ಹೊಲೆಯುವಾಗ ಅಳತೆ ಸರಿಯಾಗಿ ಇರಬೇಕು ಹಾಗಾಗಿ ನಮ್ಮ ಬ್ಲೌಸ್ನ ಎಲ್ಲಾ ಅಳತೆಯ ಜೊತೆಗೆ ಭುಜದ ಅಳತೆಯನ್ನು ಸರಿಯಾಗಿ ಅಳಿಯಬೇಕು ಇದು ಮೊದಲ ವಿಷಯವಾದರೆ ಎರಡನೇಯದಾಗಿ ನಾವು ಮೇಲೆ ಇರುವಂತಹ ಅಳತೆಯನ್ನು ಸರಿಯಾಗಿದೆ ತೆಗೆದುಕೊಂಡು ಇದರ ಜೊತೆಗೆ ಬ್ಲೌಸ್ ಹಾಗೂ ಸ್ಲೀವ್ ನ ಎಂಡಲ್ಲಿ ಇರುವಂತಹ ರೌಂಡ್ ಕಟಿಂಗ್ ಮೇಲೆ ಗಮನ ಇಡಬೇಕು.
ಏಕೆಂದರೆ ಭುಜದ ಸ್ಲೀವ್ಸ್ ಕೆಳಭಾಗವು ಸ್ವಲ್ಪ ಪಿಂಚಾದರೆ ಸಾಮಾನ್ಯವಾಗಿ ಭುಜವು ಬಿದ್ದಂತೆ ಭಾಸವಾಗುತ್ತದೆ. ಇನ್ನು ಮೂರನೆಯದಾಗಿ ನಾವು ಬ್ಯಾಕ್ ಡೀಪ್ ನ ಬಗ್ಗೆ ಎಚ್ಚರಿಕೆ ವಹಿಸಬೇಕು ಏಕೆಂದರೆ ಭುಜದ ಬಳಿ ಬ್ಯಾಕ್ ನ ಡೀಪ್ ಜಾಸ್ತಿಯಾದರೆ ಭುಜವು ಡ್ರಾಪೌಟ್ ಆಗುವ ಸಾಧ್ಯತೆಗಳು ಹೆಚ್ಚು. ಹಾಗಾದರೆ ಬ್ಯಾಕ್ ಡೀಪ್ ಜಾಸ್ತಿ ಮಾಡದೆ ಇರಬೇಕಾ ಎನ್ನುವ ಪ್ರಶ್ನೆಗೆ ಇಲ್ಲ ಸ್ವಲ್ಪ ಜಾಗ ಮಾತ್ರ ಎರಡು ಇಂಚನ್ನು ಇಟ್ಟುಕೊಂಡು ಕೆಳಭಾಗಕ್ಕೆ ನಮಗೆ ಬೇಕಾದ ಅಳತೆಗೆ ಹೆಚ್ಚಿಸಬಹುದು ಹೀಗೆ ಮಾಡುವುದರಿಂದ ಭುಜವು ಜಾರುವುದನ್ನು ತಪ್ಪಿಸಬಹುದು.
ಇನ್ನು ಈ ಸ್ಲೀವ್ಸ್ ಅನ್ನು ಅಟ್ಯಾಚ್ ಮಾಡುವಾಗ ಭುಜದ ಅಳತೆಯ ಬಳಿ ಸ್ಟ್ರೈಟ್ ಸ್ಟಿಚ್ ಅನ್ನು ಹಾಕಿಕೊಂಡು ನಂತರ ಭುಜದ ಅಟ್ಯಾಚ್ ಮಾಡುವಾಗ ಸ್ವಲ್ಪ ಸ್ಲ್ಯಾಂಟ್ ಆಗಿ ಹೊಲಿಯುವುದರಿಂದ ಭುಜವು ಜಾರುವುದಿಲ್ಲ ಸ್ವಲ್ಪ ಪ್ರಮಾಣದಲ್ಲಿ ತಪ್ಪಿಸಬಹುದು. ಇನ್ನು ಸಾಮಾನ್ಯವಾಗಿ ಬ್ಲೌಸ್ ನ ಬರ್ಸ್ಟ್ ಪಾಯಿಂಟ್ ಎಂದು ಇರುತ್ತದೆ, ನಮ್ಮ ಭುಜವು ಜಾರುತಿದೆ ಎಂದರೆ ಬರ್ಸ್ ನ ಪಾಯಿಂಟ್ ಗಿಂತ ಕಾಲು ಇಂಚು ಕಡಿಮೆ ಅಳತೆಯಲ್ಲಿ ಹೊಲಿದರೆ ಜಾರುವುದನ್ನು ತಪ್ಪಿಸಬಹುದು. ಇವೆಲ್ಲಾ ಟಿಪ್ಸ್ಗಳನ್ನು ಅನುಸರಿಸಿದರು ಕೂಡ ಇನ್ನೂ ನಮ್ಮ ಬ್ಲೌಸ್ ಗಳು ಭುಜದ ಭಾಗದಲ್ಲಿ ಜಾರುತಿದೆ ಎಂದು ಅನಿಸಿದರೆ ಹೀಗೆ ಮಾಡಿ.
ನಮ್ಮ ಭುಜದ ಸ್ಲೀನ ಪಾಯಿಂಟ್ ಇಂದ ನೆಕ್ ವಿಡ್ತ್ ಕಡೆ ಸ್ಲಾಂಟ್ ಆಗಿ ಲೈನ್ ಹಾಕಿ ಸ್ಟಿಚ್ ಮಾಡುವುದರಿಂದ ಅಲ್ಲಿ ಒಂದು ಫಿಟ್ನೆಸ್ ಕ್ರಿಯೇಟ್ ಆಗಿ ಭುಜದ ಭಾಗವನ್ನು ಜಾರುವುದು ಕಡಿಮೆ ಮಾಡುತ್ತದೆ. ಇನ್ನು ಕೊನೆಯದಾಗಿ ನಮ್ಮ ಭುಜಗಳ ನೆಕ್ ಸೈಡು ಎರಡು ಕೈ ಅಥವಾ ದಾರಗಳನ್ನು ಕಟ್ಟುವುದರಿಂದ ಅಲ್ಲಿ ಒಂದು ಫಿಟ್ನೆಸ್ಸು ಕಾಣುತ್ತದೆ ಇದರಿಂದಲೂ ಕೂಡ ಬ್ಲೌಸ್ ನ ಭುಜದ ಭಾಗವನ್ನು ಜಾರುವುದನ್ನು ತಪ್ಪಿಸಬಹುದು ಸ್ನೇಹಿತರೆ ಇಷ್ಟು ಟಿಪ್ಸ್ ಗಳಲ್ಲಿ ನಿಮ್ಮ ಬ್ಲೌಸ್ ಗೆ ಅವಶ್ಯಕತೆ ಇರುವಂತಹ ಟಿಪ್ಸ್ ಗಳನ್ನು ಫಾಲೋ ಮಾಡಿದರೆ ಸಾಕು. ಭುಜದ ಭಾಗ ಜಾರುತ್ತಿದ್ದರೆ ಈ ಟಿಪ್ಸ್ಗಳನ್ನು ಅನುಸರಿಸಿ.