ಶಕ್ತಿ ಯೋಜನೆಯ ಅಡಿಯಲ್ಲಿ ಈಗಾಗಲೇ ಮಹಿಳೆಯರು ಉಚಿತ ಬಸ್ ಪ್ರಯಾಣವನ್ನು ಆರಂಭಿಸಿದ್ದಾರೆ. ಈಗ ಮೈಸೂರು ಜಿಲ್ಲಾಡಳಿತವು ಪುರುಷರಿಗೂ ಕೂಡ 5 ದಿನದ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿ ಕೊಡಬೇಕು ಎಂದು ನಿರ್ಧಾರವನ್ನು ಕೈಗೊಂಡಿದೆ. ದೇವರ ದರ್ಶನಕ್ಕೆ ಮಹಿಳೆಯರು ಮಾತ್ರವಲ್ಲದೆ ಪುರುಷರು ಕೂಡ ಹೋಗಿ ದರ್ಶನವನ್ನು ಪಡೆಯುತ್ತಾರೆ. ಆದ ಕಾರಣದಿಂದಾಗಿ ಪುರುಷರಿಗೂ ಸಹ ಉಚಿತ ಬಸ್ ಪ್ರಯಾಣವನ್ನು ಕಲ್ಪಿಸಿ ಕೊಡಬೇಕು ಎಂಬಂತಹ ನಿರ್ಧಾರವನ್ನು ಮೈಸೂರು ಜಿಲ್ಲಾಡಳಿತ ಕೈಗೊಂಡಿದೆ.
ಪುರುಷರಿಗೂ ಸಹ ಐದು ದಿನಗಳವರೆಗೆ ಉಚಿತ ಬಸ್ ಪ್ರಯಾಣವನ್ನು ನೇರವಾಗಿ ರಾಜ್ಯ ಸರ್ಕಾರವು ಕಲ್ಪಿಸಿಕೊಡದೆ ಇದ್ದರೂ ಕೂಡ ಮೈಸೂರು ಜಿಲ್ಲಾಡಳಿತ ಗಂಡಸರು ಸೇರಿದಂತೆ ಎಲ್ಲರಿಗೂ ನೀಡುತ್ತಿದೆ ದೇವರ ದರ್ಶನಕ್ಕಾಗಿ ಮೈಸೂರಿಗೆ ಬರುವ ಮಹಿಳೆಯರು ಮಾತ್ರವಲ್ಲದೆ ಪುರುಷರು ಸಹ ಉಚಿತ ಬಸ್ ಪ್ರಯಾಣವನ್ನು ಕಲ್ಪಿಸಿಕೊಡಲಾಗಿದೆ ದರ್ಶನ ಪಡೆಯಬಹುದಾದ ದೇವರು ಯಾವುದು ಮತ್ತು ಎಷ್ಟು ದೂರದವರೆಗೆ ಪ್ರಯಾಣ ಮಾಡಬಹುದು ಎಂಬುವಂತಹ ಸಂಪೂರ್ಣ ಮಾಹಿತಿಯನ್ನು ನಾವಿಂದು ತಿಳಿಸುತ್ತಿದ್ದೇನೆ.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಷಾಡ ಶುಕ್ರವಾರಗಳಂದು ವಿಶೇಷವಾದಂತಹ ಪೂಜೆ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಇದರ ಅಂಗವಾಗಿ ಖಾಸಗಿ ವಾಹನಗಳಿಗೆ ಸಂಪೂರ್ಣ ನಿರ್ಬಂಧವನ್ನು ವಿಧಿಸಲಾಗುತ್ತಿದೆ ಪ್ರತಿವರ್ಷದಂತೆ ಈ ವರ್ಷವೂ ಸಹ ಬೆಟ್ಟಕ್ಕೆ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ ಎಂದು ಊಹೆ ಮಾಡಲಾಗಿದೆ ಸರ್ಕಾರಿ ಬಸ್ ಗಳಲ್ಲಿ ಭಕ್ತಾದಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶವನ್ನು ನೀಡಲಾಗಿದೆ ಚಾಮುಂಡೇಶ್ವರಿಯ ದರ್ಶನವನ್ನು ಪಡೆಯಲು ಮಹಿಳಾ ಭಕ್ತಾದಿಗಳು ಮಾತ್ರವಲ್ಲದೆ ಪುರುಷರು ಸಹ ಚಾಮುಂಡಿ ಬೆಟ್ಟಕ್ಕೆ ಆಗಮಿಸುತ್ತಾರೆ.
ಚಾಮುಂಡಿ ಬೆಟ್ಟಕ್ಕೆ ತೆರಳುವ ಎಲ್ಲಾ ಭಕ್ತರಿಗೂ ಉಚಿತ ಪ್ರಯಾಣ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಅಲ್ಲದೆ ಖಾಸಗಿ ವಾಹನಗಳ ಸಂಚಾರಕ್ಕೆ ನಿರ್ಬಂಧವನ್ನು ಏರಲಾಗಿದೆ ಖಾಸಗಿ ವಾಹನಗಳ ದಟ್ಟಣೆ ಅ’ಪ’ಘಾ’ತ ತಡೆಯುವಂತಹ ದೃಷ್ಟಿಯಿಂದ ಹಾಗೆ ಸುಗಮ ಸಂಚಾರಕ್ಕಾಗಿ ಜಿಲ್ಲಾಡಳಿತದ ಕಡೆಯಿಂದ ಈ ಪ್ರಯತ್ನ ನಡೆಸಲಾಗುತ್ತಿದೆ ಆಷಾಡ ಮಾಸದ ವಿಶೇಷ ದಿನಗಳಲ್ಲಿ ಖಾಸಗಿ ವಾಹನಗಳಿಗೆ ಬೆಟ್ಟಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ
ಹೀಗಾಗಿ ಬೆಟ್ಟದ ಬುಡದ ವರೆಗೆ ಮಾತ್ರ ತಲುಪುತ್ತದೆ ಖಾಸಗಿ ವಾಹನಗಳನ್ನು ಬೆಟ್ಟದ ಬುಡದ ವರೆಗೆ ಮಾತ್ರ ಅವಕಾಶ ನೀಡಲಾಗಿದೆ ಅಲ್ಲಿಂದ ಮೇಲಕ್ಕೆ ವಾಹನಗಳನ್ನು ಬಿಡುವುದಿಲ್ಲ ಆದ್ದರಿಂದಲೇ ಈಗಾಗಲೇ ರಾಜ್ಯ ಸರ್ಕಾರದಿಂದ ಸಾರಿಗೆ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿ ಕೊಡಲಾಗಿದ್ದು ಈಗ ಮೈಸೂರು ಜಿಲ್ಲಾಡಳಿತದ ವತಿಯಿಂದ ಪುರುಷರಿಗೂ ಸಹ ಉಚಿತ ಬಸ್ ಪ್ರಯಾಣಕ್ಕೆ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಜೂನ್ 23 ರಿಂದ ಜುಲೈ 14ರ ಆಷಾಢ ಶುಕ್ರವಾರದ ದಿನಗಳಂದು ಹಾಗೂ ಜುಲೈ 10ರ ಚಾಮುಂಡಿ ವರ್ಧಂತಿ ದಿನದಂದು ಹೆಚ್ಚಿನ ಜನ ಬರುವುದರಿಂದ ಸಂಚಾರ ಮಾರ್ಗಸೂಚಿ ಪ್ರಕಟ ಮಾಡಲಾಗಿದೆ. ಚಾಮುಂಡಿ ಬೆಟ್ಟಕ್ಕೆ ಬರುವಂತಹ ಯಾರೇ ಭಕ್ತಾದಿಗಳು ತಮ್ಮ ವಾಹನಗಳನ್ನು ಲಲಿತ ಮಹಲ್ ಮೈದಾನದಲ್ಲಿ ನಿಲುಗಡೆ ಮಾಡುವಂತೆ ಸೂಚನೆ ಹೊರಡಿಸಿದೆ. ತಮ್ಮ ವಾಹನಗಳನ್ನು ಬೆಟ್ಟದ ತಪ್ಪಲಿನಲ್ಲಿ ನಿಲ್ಲಿಸಿ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣವನ್ನು ಬೆಳೆಸಬಹುದು.
ಭಕ್ತರಿಗೆ ಅನುಕೂಲ ವಾಗುವಂತೆ ಚಾಮುಂಡಿ ಬೆಟ್ಟಕ್ಕೆ ಬೆಳಗಿನ ಜಾವ 3 ಗಂಟೆಯಿಂದಲೇ ಬಸ್ ಸಂಚಾರವನ್ನು ಆರಂಭಿಸಲಾಗುತ್ತದೆ ಹಾಗೆ ರಾತ್ರಿ 10 ಗಂಟೆಗಳವರೆಗೂ ಬಸ್ ಸೌಲಭ್ಯವನ್ನು ಮುಂದುವರಿಸಲಾಗುತ್ತದೆ. ಈ ಒಂದು ಹಿತ ದೃಷ್ಟಿಯಿಂದ ಪುರುಷರಿಗೂ ಸಹ ಉಚಿತ ಬಸ್ ಪ್ರಯಾಣವನ್ನು ಕಲ್ಪಿಸಿಕೊಡಲಾಗುತ್ತದೆ ಎಲ್ಲರೂ ಸಹ ಚಾಮುಂಡಿ ದೇವಿಯ ದರ್ಶನವನ್ನು ಪಡೆಯಲು ಉಚಿತವಾಗಿ ಬರಬಹುದು. ಹಾಗೆಯೇ ಶಾಂತ ರೀತಿಯಲ್ಲಿ ಪ್ರಯಾಣವನ್ನು ಬೆಳೆಸಿ ದೇವರ ದರ್ಶನವನ್ನು ಪಡೆಯುವದಾಗಿ ಮೈಸೂರು ಜಿಲ್ಲಾಡಳಿತವು ಮಾರ್ಗಸೂಚಿಯನ್ನು ಹೊರಡಿಸಿದೆ ಈ ಮಾಹಿತಿ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.