ಇತ್ತೀಚಿನ ದಿನಗಳಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ ಎಂಬಂತೆ ಆಗುತ್ತಿದೆ ಮತ್ತೊಬ್ಬರ ಜೀವನದಲ್ಲಿ ಆಟ ಆಡಬಾರದು ಮತ್ತೊಬ್ಬರ ಮನಸ್ಸನ್ನು ನೋಯಿಸಬಾರದು ಎನ್ನುವಂತಹ ಸಾಮಾನ್ಯ ಪ್ರಜ್ಞೆಯನ್ನು ಸಹ ಜನರು ಮರೆತಿದ್ದಾರೆ. ನಾವಿಂದು ಹೇಳ ಹೊರಟಿರುವ ಮಾಹಿತಿ ಏನೆಂದರೆ, ತರಕಾರಿ ತರಲೆಂದು ಮಾರ್ಕೆಟ್ ಗೆ ಹೋದಂತಹ ನವ ವಿವಾಹಿತ ಪ್ರಿಯಕರೊಂದಿಗೆ ಪರಾರಿಯಾಗಿದ್ದಾಳೆ ಹೌದು ಮದುವೆಯಾದ ಒಂದೇ ವಾರಕ್ಕೆ ಗಂಡನನ್ನು ಬಿಟ್ಟು ತನ್ನ ಪ್ರಿಯತಮನ ಜೊತೆ ಹೋಗಿದ್ದಾಳೆ ಈ ಘಟನೆ ಉತ್ತರ ಪ್ರದೇಶದ ಕಲೀಂಜರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೇ 31 ರಂದು ಮದುವೆಯಾಗಿದ್ದ ಮಹಿಳೆ ಒಂದೇ ವಾರಕ್ಕೆ ಗಂಡನನ್ನು ಬಿಟ್ಟು ಪರಾರಿಯಾಗಿರುವದು ತಡವಾಗಿ ಬೆಳಕಿಗೆ ಬಂದಿದೆ ಕುಟುಂಬಸ್ಥರನ್ನು ಭೇಟಿ ಮಾಡಬೇಕೆಂಬ ನೆಪದಲ್ಲಿ ತವರು ಮನೆಗೆ ಬಂದಿದ್ದ ಆಕೆ ಮನೆಗೆ ತರಕಾರಿ ತರುವುದಾಗಿ ತಿಳಿಸಿ ಮಾರುಕಟ್ಟೆಗೆ ಹೋಗಿದ್ದಾಳೆ ತನ್ನ ಪ್ರಿಯಕರೊಂದಿಗೆ ಎಸ್ಕೇಪ್ ಆಗಿರುವಂತಹ ಘಟನೆ ಇದೀಗ ಉತ್ತರ ಪ್ರದೇಶದಲ್ಲಿ ನಡೆದಿದೆ. ಪ್ರಿಯಕರನೊಂದಿಗೆ ಹೋಗಿರುವುದು ಮಾತ್ರವಲ್ಲದೆ ತವರು ಮನೆಯಲ್ಲಿ ಇದ್ದಂತಹ ಚಿನ್ನ ಆಭರಣ ಎಲ್ಲವನ್ನು ಸಹ ತನ್ನೊಂದಿಗೆ ತೆಗೆದುಕೊಂಡು ಹೋಗಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.
ಮಾರ್ಕೆಟ್ ಗೆ ಹೋದಂತಹ ಮಗಳು ಮನೆಗೆ ಬಾರದೆ ಇದ್ದ ಕಾರಣ ಪೋಷಕರು ಆತಂಕಕ್ಕೆ ಒಳಗಾಗಿ ಫೋನ್ ಮಾಡಿದ್ದಾರೆ ಫೋನ್ ಸ್ವಿಚ್ ಆಫ್ ಮಾಡಿದಂತಹ ಮಗಳನ್ನು ಹುಡುಕಾಟ ನಡೆಸಿದ್ದಾರೆ ನಂತರ ತನ್ನ ಪ್ರಿಯಕರೊಂದಿಗೆ ಓಡಿಹೋಗಿರುವುದು ತಿಳಿದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ವಿಷಯವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ ದೂರು ದಾಖಲಿಸಿಕೊಂಡಂತಹ ಪೊಲೀಸರು ಮಹಿಳೆ ಹಾಗೂ ಆಕೆಯ ಪ್ರಿಯಕರನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಮಹಿಳೆ ಪರಾರಿ ಆದ ದಿನ ನಡೆದದ್ದು ಏನೆಂದರೆ, ಕಳೆದ 31ರಂದು ಆ ಮಹಿಳೆಗೆ ಮದುವೆ ಮಾಡಿಸಲಾಗಿತ್ತು ಜೂನ್ 6 ರಂದು ತನ್ನ ತವರು ಮನೆಗೆ ಆಕೆ ವಾಪಸ್ ಬಂದಿದಳು. ಜೂನ್ 11ರಂದು ಮನೆಗೆ ತರಕಾರಿ ಖರೀದಿಸುವ ನೆಪದಲ್ಲಿ ಮಾರುಕಟ್ಟೆಗೆ ಹೋದ ಅವಳು ಮನೆಗೆ ವಾಪಸ್ ಬಂದಿಲ್ಲ ಸಂಜೆಯಾದರೂ ಮಗಳು ಮನೆಗೆ ಬಾರದಿದ್ದ ಕಾರಣ ಆತಂಕಗೊಂಡಂತಹ ಪೋಷಕರು ಹುಡುಕಾಟ ನಡೆಸಿದ್ದಾರೆ ನಂತರ ಅವಳು ಪ್ರಿಯಕರನೊಂದಿಗೆ ಓಡಿ ಹೋಗಿರುವುದು ತಿಳಿದು ಬಂದಿದೆ.
ಆಕೆ ಬರಿ ಕೈಯಲ್ಲಿ ಓಡಿ ಹೋಗಿಲ್ಲ ಮನೆಯಲ್ಲಿ ಇದ್ದಂತಹ ಚಿನ್ನ ಆಭರವನ್ನು ಸಹ ತೆಗೆದುಕೊಂಡು ಹೋಗಿದ್ದಾಳೆ ಆ ಹುಡುಗ ಬೇರೆ ಯಾರು ಅಲ್ಲ ತನ್ನ ಸಹೋದರನ ಕಡೆಯ ಸಂಬಂಧಿ ಎಂದು ತಿಳಿದು ಬಂದಿದೆ ಬಳಿಕ ಪೊಲೀಸರಿಗೆ ಪೋಷಕರು ನೀಡಿದ ದೂರಿನ ಮೇರೆಗೆ ಕೇಸ್ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಮಹಿಳೆ ತಾನು ಮದುವೆಗೂ ಮುನ್ನ ಪ್ರೀತಿಸುತ್ತಿರುವಂತಹ ವಿಚಾರವನ್ನು ಮನೆಯಲ್ಲಿ ತಿಳಿಸಿದ್ದರೆ ಇಷ್ಟೆಲ್ಲ ನಡೆಯುತ್ತಲೇ ಇರಲಿಲ್ಲ.
ಮದುವೆಯಾದಂತಹ ಹುಡುಗನ ಪರಿಸ್ಥಿತಿಯನ್ನು ನೆನೆಸಿಕೊಂಡರೆ ನಿಜಕ್ಕೂ ಬೇಸರವಾಗುತ್ತದೆ ಇಬ್ಬರ ಜೀವನದಲ್ಲಿ ಎಂದಿಗೂ ಆಟ ಆಡಬಾರದು. ಇತ್ತೀಚಿನ ದಿನಗಳಲ್ಲಿ ಈ ರೀತಿಯಾದಂತಹ ವರ್ತನೆಗಳು ಹೆಚ್ಚಾಗಿ ಕಂಡುಬರುತ್ತಿದೆ ಇದಕ್ಕೆ ಕಾರಣ ಸಾಕಷ್ಟಿದ್ದರೂ ಸಹ ತಮ್ಮ ಮನಸ್ಸಿನಲ್ಲಿ ಇರುವಂತಹ ಭಾವನೆಯನ್ನು ಮನೆಯಲ್ಲಿ ತಿಳಿಸಿದಾಗ ಒಂದಲ್ಲ ಒಂದು ರೀತಿಯ ಸ್ಪಷ್ಟನೆ ಸಿಗುತ್ತದೆ ಜೀವನದಲ್ಲಿ ಈ ರೀತಿಯಾಗಿ ಮತ್ತೊಬ್ಬರೊಂದಿಗೆ ಆಟವಾಡುವುದು ಸರಿಯಲ್ಲ ಅವರಿಗೂ ಸಹ ಅವರದೇ ಆದಂತಹ ಮನಸ್ಸು ಇರುತ್ತದೆ ಆದ್ದರಿಂದ ಯಾರು ಕೂಡ ಬೇರೆಯವರ ಜೀವನದಲ್ಲಿ ಆಟ ಆಡಲು ಹೋಗಬಾರದು. ಈ ಮಾಹಿತಿ ಇಷ್ಟಾದರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ ಹಾಗೆಯೇ ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.