Tuesday, October 3, 2023
Home cinema news ಅಪ್ಪು ಹುಟ್ಟು ಹಬ್ಬಕ್ಕೆ ಯುವರಾಜ್ ಹೊಸ ಸಿನಿಮಾದ ಟೀಸರ್ ರಿಲೀಸ್. ಯುವ ಜೊತೆ ತೆರೆ ಹಂಚಿಕೊಳ್ತಿರೋ...

ಅಪ್ಪು ಹುಟ್ಟು ಹಬ್ಬಕ್ಕೆ ಯುವರಾಜ್ ಹೊಸ ಸಿನಿಮಾದ ಟೀಸರ್ ರಿಲೀಸ್. ಯುವ ಜೊತೆ ತೆರೆ ಹಂಚಿಕೊಳ್ತಿರೋ ನಟಿ ಯಾರು ಗೊತ್ತ.?

 

ರಾಜವಂಶದ ಮೂರನೇ ತಲೆಮಾರು ಚಿತ್ರರಂಗದಲ್ಲಿ ಸಕ್ರಿಯವಾಗುತ್ತಿದ್ದೆ. ಒಬ್ಬರ ಹಿಂದೆ ಒಬ್ಬರಂತೆ ಡಾಕ್ಟರ್ ರಾಜಕುಮಾರ್ ಅವರ ಮೊಮ್ಮಕ್ಕಳಿಂದರು ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಶಿವಣ್ಣನ ಮಗಳಾದ ನಿರೂಪಮ ಕಲಾವಿದೆ ಆಗಿ ಅಲ್ಲದೆ ನಿರ್ಮಾಪಕ್ಕೆ ಹಾಕಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ಅವರ ಮಕ್ಕಳು ಇನ್ನು ಚಿಕ್ಕವರಾಗಿರುವ ಕಾರಣ ವಿದ್ಯಾಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ, ವಿದ್ಯಾಭ್ಯಾಸ ಮುಗಿದ ನಂತರ ಅವರು ಸಹ ಇಂಡಸ್ಟ್ರಿಯನ್ನೇ ಆರಿಸಿಕೊಳ್ಳುವ ಸಾಧ್ಯತೆಗಳು ಇವೆ.

ಈಗಾಗಲೇ ರಾಮ್ ಕುಮಾರ್ ಮತ್ತು ಪೂರ್ಣಿಮಾ ಅವರ ಮಕ್ಕಳಾದ ಧನ್ಯ ರಾಮ್ ಕುಮಾರ್ ಮತ್ತು ಧೀರಜ್ ರಾಜ್ ಕುಮಾರ್ ಅವರು ನಾಯಕನಟಿ ಮತ್ತು ನಾಯಕನಟನಾಗಿ ಲಾಂಚ್ ಆಗಿದ್ದು ಆಗಿದೆ. ಮತ್ತೊಬ್ಬ ಮಗಳಾದ ಲಕ್ಷ್ಮಿ ಅವರ ಪುತ್ರ ಕೂಡ ನಿಂಬಿಯ ಬನದ ಮ್ಯಾಲ ಎನ್ನುವ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಆಗುತ್ತಿದ್ದಾರೆ. ರಾಘಣ್ಣ ಮಕ್ಕಳಲ್ಲಿ ಮೊದಲನೆಯ ಮಗ ವಿನಯ್ ರಾಜಕುಮಾರ್ ಅವರು ಈಗಾಗಲೇ ಕನ್ನಡದ ಒಬ್ಬ ಭರವಸೆ ನಾಯಕ ಎನಿಸಿದ್ದಾರೆ.

ಸಿದ್ದಾರ್ಥ್, ರನ್ ಆಂಟೋನಿ, ಅನಂತು ವರ್ಸಸ್ ನುಸ್ರತ್ ಇನ್ನು ಮುಂತಾದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಅಭಿನಯ ಚಾತುರ್ಯವನ್ನು ತೋರಿದ್ದಾರೆ. ಅದೇ ಹಾದಿ ತುಳಿಯುತ್ತಿರುವ ಎರಡನೇ ಮಗ ಯುವ ರಾಜಕುಮಾರ ದೊಡ್ಡ ಮಟ್ಟದಲ್ಲಿ ಅದ್ದೂರಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಆಗುತ್ತಿದ್ದಾರೆ. ವರ್ಷದ ಹಿಂದೆಯೇ ಇವರ ಸಿನಿಮಾ ಒಂದು ಸೆಟ್ಟೇರಿತ್ತು, ಯುವ ರಣಧೀರ ಕಂಠೀರವ ಇಂದು ಅದಕ್ಕೆ ಟೈಟಲ್ ಕೂಡ ಫಿಕ್ಸ್ ಆಗಿತ್ತು ಆದರೆ ನಂತರ ಆದ ಬೆಳವಣಿಗೆಗಳ ಕಾರಣ ಸಿನಿಮಾ ಮುಂದುವರಿಸಲು ಸಾಧ್ಯವೇ ಆಗಲಿಲ್ಲ, ಪುನೀತ್ ರಾಜಕುಮಾರ್ ಅವರಿಗೆ ಕೂಡ ಈ ಬಗ್ಗೆ ಬಹಳ ಬೇಸರ ಇತ್ತು.

ಅವರೇ ಜವಾಬ್ದಾರಿ ಹೊತ್ತುಕೊಂಡು ಚಿತ್ರ ಮುಂದೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದರು ಅವರ ಆ’ಗಲಿ’ಕೆ ಕಾರಣ ಅಲ್ಲಿಗೆ ನಿಲ್ಲುವ ಪರಿಸ್ಥಿತಿ ಎದುರಾಯಿತು. ಈಗ ದೊಡ್ಮನೆ ಅಭಿಮಾನಿಗಳಿಗಾಗಿ ಸಂತದ ಸುದ್ದಿ ಒಂದು ಹೊರಬಂದಿದೆ. ಅದೇನೆಂದರೆ ಮುಂದಿನ ತಿಂಗಳು ಅಪ್ಪು ಹುಟ್ಟು ಹಬ್ಬದ ಪ್ರಯುಕ್ತ ಅವರ ಮುದ್ದಿನ ಮಗನಾದ ಯುವರಾಜ್ ಕುಮಾರ್ ಅವರ ಹೊಸ ಸಿನಿಮಾ ಟೀಸರ್ ರಿಲೀಸ್ ಆಗುತ್ತಿದೆ. ಸಂತೋಷ್ ಆನಂದ್ ರಾಮ್ ಅವರ ನಿರ್ದೇಶನದಲ್ಲಿ ಹೊಂಬಾಳೆ ಫಿಲಂಸ್ ಈ ಸಿನಿಮಾದ ನಿರ್ಮಾಣದ ಹೊಣೆ ಹೊತ್ತಿದ್ದಾರೆ.

ಬಹುತೇಕ ಸಿನಿಮಾದ ಎಲ್ಲಾ ಪಾತ್ರಕ್ಕೂ ಕಲಾವಿದರು ಫಿಕ್ಸ್ ಆಗಿದ್ದು ನಾಯಕನಟಿ ಯಾರಿರಲಿದ್ದಾರೆ ಎನ್ನುವ ಕುತೂಹಲವನ್ನು ಕೆರಳಿಸಿತ್ತು. ಇದೀಗ ಅಭಿಮಾನಿಗಳ ಕುತೂಹಲಕ್ಕೆ ತೆರೆ ಬೀಳುವ ಸಮಯ ಬಂದಿದೆ. ಈ ಸಿನಿಮಾದಲ್ಲಿ ಯುವರಾಜನಿಗೆ ನಾಯಕಿ ಆಗಿ ರುಕ್ಮಿಣಿ ವಸಂತ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಬಹುತೇಕ ಖಚಿತ. ಈ ಬಗ್ಗೆ ಸ್ಪಷ್ಟನೆ ಚಿತ್ರತಂಡದಿಂದ ಸಿಗದೇ ಇದ್ದರೂ ಕೆಲವು ಮೂಲ ಇದು ನಿಜ ಸುದ್ದಿ ಎಂದು ಹೇಳುತ್ತಿವೆ.

ಬೀರಬಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ, ಇವರು ಇದೀಗ ರಕ್ಷಿತ್ ಶೆಟ್ಟಿಯೊಂದಿಗೆ ಸಪ್ತಸಾಗರದಾಚೆ ಎಲ್ಲೋ ಮತ್ತು ಗಣೇಶ್ ಅವರೊಂದಿಗೆ ಬಾನ ದಾರಿಯಲ್ಲಿ ಸಿನಿಮಾಗಳ ಶೂಟಿಂಗ್ ಅಲ್ಲಿ ಬಿಝಿ ಆಗಿದ್ದಾರೆ, ನಡುವೆ ಭಘೀರ ಎನ್ನುವ ತಮಿಳು ಸಿನಿಮಾದಲ್ಲೂ ಕೂಡ ಅಭಿನಯಿಸುತ್ತಿದ್ದಾರೆ. ರುಕ್ಮಿಣಿ ವಸಂತ ಅವರಿಗೆ ಇಂಡಸ್ಟ್ರಿಯಲ್ಲಿ ಬಹಳ ಬೇಡಿಕೆ ಇದೆ. ಈಗ ಯುವರಾಜ್ ಕುಮಾರ್ ಅವರ ಮೊದಲ ಸಿನಿಮಾಗೆ ನಾಯಕಿ ಆಯ್ಕೆಯಾಗುವ ಅದೃಷ್ಟವನ್ನು ಇವರು ಪಡೆದುಕೊಂಡಿದ್ದಾರೆ.

ಸಿನಿಮಾ ಟೈಟಲ್ ಬಗ್ಗೆ ಎಲ್ಲೂ ಮಾಹಿತಿ ಬಿಟ್ಟು ಕೊಡದೆ ಇದ್ದರೂ ಸಿನಿಮಾಗೆ ಮಯೂರ ಎನ್ನುವ ಹೆಸರನ್ನು ಹೇಳಲಾಗುತ್ತಿದೆ ಎನ್ನುವ ಊಹೂಪೋಹಗಳು ಜೋರಾಗಿದೆ. ಈ ಹಿಂದೆ ಅಣ್ಣಾವ್ರು ಕೂಡ ಕನ್ನಡದ ಮೊದಲ ರಾಜವಂಶ ಕದಂಬ ಸಾಮ್ರಾಜ್ಯದ ಶ್ರೇಷ್ಠ ದೊರೆ ಮಯೂರವರ್ಮನ ಪಾತ್ರವನ್ನು ಮಯೂರ ಎನ್ನುವ ಸಿನಿಮಾದ ಮೂಲಕ ಅಭಿನಯಿಸಿ ಕನ್ನಡಿಗರಿಗೆ ಕನ್ನಡದ, ಕರ್ನಾಟಕದ ಇತಿಹಾಸ ತಿಳಿಯುವಂತೆ ಮಾಡಿದ್ದರು. ಈಗ ಮೊಮ್ಮಗ ಮಯೂರ ಹೆಸರಿನ ಮೂಲಕ ಒಂದೊಳ್ಳೆ ಕಥೆಯಲ್ಲಿಯೇ ಬರಲಿದ್ದಾರೆ ಎನ್ನುವ ನಂಬಿಕೆ ಕನ್ನಡಿಗರಿಗೆ.

ಕೆಲವೇ ದಿನಗಳಲ್ಲಿ ಇದರ ಕುರಿತು ಅಪ್ಡೇಟ್ ಹೊರಬೀಳಲಿದ್ದು ಅಪ್ಪು ಹುಟ್ಟು ಹಬ್ಬದ ಪ್ರಯುಕ್ತ ಟೀಸರ್ ಕೂಡ ರಿಲೀಸ್ ಆಗಲಿದೆ. ಇದನ್ನು ಅಪ್ಪು ಹುಟ್ಟು ಹಬ್ಬದ ದಿನದಂದು ಬಿಡುಗಡೆ ಮಾಡಲು ಅಪ್ಪು ಜೊತೆಗೆ ಯುವ ಹೊಂದಿರುವ ಸೆಂಟಿಮೆಂಟ್ ಒಂದು ಕಾರಣ ಆದರೆ ಅಭಿಮಾನಿಗಳೆಲ್ಲ ಈಗ ಯುವರಾಜ್ ಕುಮಾರ್ ಅಲ್ಲೇ ಪುನೀತ್ ಅವರನ್ನು ಕಾಣುತ್ತಿದ್ದಾರೆ ಎನ್ನುವುದು ಸುಳ್ಳಲ್ಲ. ಈಗಾಗಲೇ ಪುನೀತ್ ಮತ್ತು ಅಣ್ಣಾವ್ರ ಶೇಡ್ ಇವರಲ್ಲಿ ಕಾಣುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ ಹಾಗಾಗಿ ಇವರ ಚೊಚ್ಚಲ ಸಿನಿಮಾದ ಮೇಲೆ ಬಾರಿ ಕುತೂಹಲ ಏರ್ಪಟ್ಟಿದೆ.

- Advertisment -