ನಾವು ಈಗ ಪ್ರಸ್ತುತವಾಗಿ ಇರುವಂತಹ ಯುಗವನ್ನು ಕಲಿಯುಗ ಎಂದು ಕರೆಯಲಾಗುತ್ತದೆ 4 ಯುಗಗಳಲ್ಲಿ ಕೊನೆಯ ಯುಗ ಕಲಿಯುಗ ಇದನ್ನು ಶಾಪಗ್ರಸ್ತ ಯುಗ ಎಂದು ಸಹ ಕರೆಯುತ್ತಾರೆ ಯಾವಾಗ ಕಲಿಯುಗ ಪರಾಕಾಷ್ಟೆಗೆ ಸೇರಿಕೊಳ್ಳುತ್ತದೆ ಆಗ ಭೂಮಿ ಮೇಲೆ ಧರ್ಮ ನಶಿಸಿ ಹೋಗುತ್ತದೆ ಆ ಸಮಯದಲ್ಲಿ ಮಹಾವಿಷ್ಣು ಕಲ್ಕಿ ರೂಪದಲ್ಲಿ ಅವತಾರವನ್ನು ತಾಳಿ ಕಲಿಯುಗವನ್ನು ಕೊನೆಗೊಳಿಸಿ ಧರ್ಮ ಯುಗವನ್ನು ಸ್ಥಾಪನೆ ಮಾಡುತ್ತಾನೆ ಎಂದು ನಮ್ಮ ಹಿಂದೂ ಧರ್ಮಗಳ ಗ್ರಂಥಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಆದರೆ ಮುಂಬರುವ ಕಾಲ ಅಂದರೆ ಈಗಿನ ಕಲಿಯುಗ ಹೇಗಿರುತ್ತದೆ ಎಂದು ಆ ಶ್ರೀ ಕೃಷ್ಣ ಮಹಾಭಾರತದ ಕಾಲದಲ್ಲಿಯೇ ಹೇಳಿದ್ದಾನೆ ಅದೇ ರೀತಿಯಲ್ಲಿ ಶ್ರೀ ಕೃಷ್ಣ ಪರಮಾತ್ಮನು ಕಲಿಯುಗಕ್ಕೆ ಸಂಬಂಧಪಟ್ಟ 5 ಕಹಿ ವಿಷಯಗಳನ್ನು ಹೇಳಿದ್ದಾರೆ ಅವು ಈಗಿನ ಕಲಿಯುಗದಲ್ಲಿ ಕಾಣಿಸುತ್ತಿವೆ.
ಮಹಾಭಾರತದ ಕಾಲದಲ್ಲಿ ಜೂಜಿನಲ್ಲಿ ಸರ್ವಸ್ವವನ್ನು ಕಳೆದುಕೊಂಡ ಪಾಂಡವರು ವನವಾಸಕ್ಕೆ ಹೋಗಬೇಕಾದ ಸಂದರ್ಭ ಬರುತ್ತದೆ ಹೀಗೆ ವನವಾಸಕ್ಕೆ ಹೋಗುವ ಮುಂಚೆ ಶ್ರೀ ಕೃಷ್ಣನನ್ನು ಭೇಟಿಯಾಗಿ ಜೂಜಿನಲ್ಲಿ ರಾಜ್ಯವನ್ನು ಕಳೆದುಕೊಂಡು ಈಗ ದ್ರೌಪದಿ ಜೊತೆ ಸೇರಿ ನಾವು ಐದು ಜನ ಸಹೋದರರು ವನವಾಸಕ್ಕೆ ಹೋಗುತ್ತಿದ್ದೇವೆ ಎಂದು ಹೇಳಿ ಶ್ರೀಕೃಷ್ಣನ ಹತ್ತಿರ ಆಶೀರ್ವಾದ ಪಡೆಯುತ್ತಾರೆ ಆನಂತರ ವನವಾಸಕ್ಕೆ ಹೋಗುವ ಮುಂಚೆ ಪಾಂಡವರು ಮುಂಬರುವ ಕಾಲ ಅಂದರೆ ಕಲಿಯುಗ ಹೇಗಿರುತ್ತದೆ ಎಂದು ಶ್ರೀ ಕೃಷ್ಣನ ಹತ್ತಿರ ಕೇಳುತ್ತಾರೆ. ನೀವು ವನವಾಸದಲ್ಲಿ ಯಾವ ದೃಶ್ಯವನ್ನು ನೋಡಿದರೂ ಅದನ್ನು ನನಗೆ ಬಂದು ತಿಳಿಸಿ ಎಂದು ಹೇಳುತ್ತಾರೆ.
ಸರ್ಕಾರಿ ಉದ್ಯೋಗಗಳು, ಸರ್ಕಾರಿ ಯೋಜನೆಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಸೇರಿ
ನಮ್ಮ ವಾಟ್ಸಾಪ್ ಗ್ರೂಪ್‌ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಚಾನಲ್‌ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ಪಾಂಡವರು ವನವಾಸದಲ್ಲಿ ನೋಡಿದಂತಹ ಐದು ದೃಶ್ಯಗಳು
* ಎರಡು ಸಂಡೆಲಿರುವಂತಹ ಆನೆಯನ್ನು ಪಾಂಡವರು ನೋಡುತ್ತಾರೆ
* ಅರಣ್ಯದಲ್ಲಿ ಒಂದು ಪಕ್ಷಿ ರೆಕ್ಕೆಗಳ ಮೇಲೆ ವೇದಗಳನ್ನು ಬರೆದಿರುತ್ತದೆ ಆದರೆ ಆ ಪಕ್ಷಿ ಸ’ತ್ತ ಮಾಂಸವನ್ನು ತಿನ್ನುತ್ತಿರುತ್ತದೆ
* ಅರಣ್ಯದಲ್ಲಿ ಒಂದು ಹಸು ಆಗ ತಾನೇ ಹುಟ್ಟಿದ ತನ್ನ ಕರುವನ್ನು ಗಟ್ಟಿಯಾಗಿ ತನ್ನ ನಾಲಿಗೆಯಿಂದ ಸವಿರುತ್ತಿದೆ ಆ ಕಾರಣದಿಂದ ಕರು ದೇಹದಿಂದ ರಕ್ತ ಬರುತ್ತಿದೆ ತನ್ನ ತಾಯಿ ತನ್ನ ಮಗುವನ್ನು ಏಕೆ ಈ ರೀತಿ ಮಾಡುತ್ತಿದೆ.
* ಅರಣ್ಯದಲ್ಲಿ ಒಂದೇ ಕಡೆ ತುಂಬಾ ಬಾವಿಗಳು ಇರುವುದನ್ನು ನೋಡಿದೆ ಆದರೆ ಇಲ್ಲಿ ಆಶ್ಚರ್ಯ ಏನೆಂದರೆ ಹತ್ತಿರದಲ್ಲಿ ಇದ್ದ ಎಲ್ಲಾ ಬಾವಿಗಳಲ್ಲಿ ನೀರು ಇದೆ ಆದರೆ ಮಧ್ಯೆ ಇರುವಂತಹ ಬಾವಿಯಲ್ಲಿ ನೀರು ಇಲ್ಲ ಅದು ತುಂಬಾ ಆಳದಲ್ಲಿದೆ ಆದರೂ ಕೂಡ ಅದರಲ್ಲಿ ನೀರು ಇರಲಿಲ್ಲ ಇದು ಹೇಗೆ ಸಾಧ್ಯ.
* ಅರಣ್ಯದಲ್ಲಿ ಹೋಗುತ್ತಿರುವಾಗ ಪರ್ವತದಲ್ಲಿ ಒಂದು ದೊಡ್ಡ ಕಲ್ಲು ಉರುಳುತ್ತಾ ಬರುತ್ತದೆ ಆಗ ಅನೇಕ ಮರ ಗಿಡಗಳು ಅದಕ್ಕೆ ಅಡ್ಡ ಸಿಗುತ್ತದೆ ಆದರೂ ಕೂಡ ಅದನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ ಒಂದು ಚಿಕ್ಕ ಗಿಡವನ್ನು ಸ್ಪರ್ಶಿಸಿದ ನಂತರ ಆ ಬಂಡೆಕಲ್ಲು ನಿಂತು ಹೋಗುತ್ತದೆ.
ಎರಡು ಸೊಂಡಿಲು ಇರುವ ಆನೆಯನ್ನು ನೋಡಿ ಯೋಚನೆ ಮಾಡುತ್ತಿದ್ದರೆ ಯಾರು ಒಂದು ಮಾತನ್ನು ಹೇಳಿ ಇನ್ನೊಂದನ್ನು ಮಾಡುತ್ತಾರೋ ಅವರೇ ಕಲಿಯುಗವನ್ನು ಪಾಲಿಸುತ್ತಾರೆ. ಅವರ ಮನಸ್ಸಿನಲ್ಲಿ ಒಂದು ಇರುತ್ತದೆ ಆದರೆ ಅವರು ಮಾಡುವ ಕೆಲಸ ಇನ್ನೊಂದು ಆಗಿರುತ್ತದೆ ಅಂದರೆ ಅವರು ಗೋಮುಖ ವ್ಯಾಘ್ರಗಳು ಆಗಿರುತ್ತಾರೆ.
ವೇದ ಬರೆದಿರುವಂತಹ ಅಕ್ಕಿ ಮಾಂಸವನ್ನು ತಿನ್ನಲು ಕಾರಣ ಏನೆಂದರೆ ಕಲಿಯುಗದಲ್ಲಿ ಎಂತಹ ವ್ಯಕ್ತಿಗಳು ಇರುತ್ತಾರೆ ಎಂದರೆ ಅವರನ್ನು ಜ್ಞಾನಿಗಳು ಪಂಡಿತರು ಎಂದು ಕರೆಯುತ್ತಾರೆ ಆದರೆ ಅವರ ವರ್ತನೆ, ರಾಕ್ಷಸರ ರೀತಿ ಇರುತ್ತದೆ ಅವರ ಆಲೋಚನೆಗಳೆಲ್ಲವೂ ಕೂಡ ಹೆಣ್ಣು ವನ್ನು ಮಣ್ಣು ಹಣದ ಮೇಲೆ ಇರುತ್ತದೆ ಹಣದ ಆಸೆಯಿಂದ ಏನು ಮಾಡಲು ಸಿದ್ಧರಾಗಿರುತ್ತಾರೆ.
ಕಲಿಯುಗದಲ್ಲಿ ಮನುಷ್ಯ ತಮ್ಮ ಮಕ್ಕಳ ಮೇಲೆ ತುಂಬಾ ಪ್ರೀತಿ ಬೆಳೆಸಿಕೊಳ್ಳುತ್ತಾರೆ ಅದರಿಂದ ತಮ್ಮ ಮಕ್ಕಳ ಅಭಿವೃದ್ಧಿ ನಿಂತು ಹೋಗುತ್ತದೆ ಒಬ್ಬರ ಮಗ ಮನೆ ಬಿಟ್ಟು ಸನ್ಯಾಸಿಯಾಗಿ ಬದಲಾಗುತ್ತಿದ್ದಾರೆ ಎಂದರೆ ಅವರನ್ನು ನೋಡಲು ಸಾವಿರಾರು ಜನ ಹೋಗುತ್ತಾರೆ ಆದರೆ ಸ್ವಂತ ಮಗ ಸನ್ಯಾಸಿಯಾಗಿ ಬದಲಾಗುತ್ತಾನೆ ಎಂದರೆ ತನ್ನ ಮಗ ತಪ್ಪು ದಾರಿಯಲ್ಲಿ ಹೋಗುತ್ತಿದ್ದಾನೆ ಎಂದು ಅಳುತ್ತಾರೆ ಕಲಿಯುಗದಲ್ಲಿ ತಮ್ಮ ಮಕ್ಕಳಿಗೆ ತುಂಬಾ ಹಣವನ್ನು ಕೂಡಿಡುತ್ತಾರೆ ಆದರೆ ಆ ಹಣ ಅವರಿಗೆ ಶಾಪವಾಗಿ ಬದಲಾಗುತ್ತದೆ ಎಲ್ಲ ಕಷ್ಟಗಳು ಆ ಹಣದಿಂದಲೇ ಬರುತ್ತದೆ.
ಅರಣ್ಯದಲ್ಲಿ ನೋಡಿದ ಹಾಗೆ ತುಂಬಾ ಬಾವಿಗಳು ಇರುತ್ತದೆ ಮಧ್ಯದಲ್ಲಿ ಇರುವ ಬಾವಿ ಮಾತ್ರ ಖಾಲಿಯಾಗಿರುತ್ತದೆ ಅಂದರೆ ಕಲಿಯುಗದಲ್ಲಿ ಸುತ್ತಲೂ ಧನವಂತರು ಇರುತ್ತಾರೆ ಮಧ್ಯದಲ್ಲಿ ಬಡವರು ಇರುತ್ತಾರೆ ಧನವಂತರು ನೀರಿನ ರೀತಿ ತಮ್ಮ ಸುಖ ಸಂತೋಷ ಆನಂದಕ್ಕಾಗಿ ನೀರಿನ ರೀತಿ ಹಣ ಖರ್ಚು ಮಾಡುತ್ತಾರೆ ಆದರೆ ತನ್ನ ಪಕ್ಕದಲ್ಲಿರುವ ಬಡವರಿಗಾಗಿ ಯಾವುದೇ ಸಹಾಯ ಮಾಡುವುದಿಲ್ಲ ಒಂದು ವೇಳೆ ಆ ಬಡವ ತನ್ನ ಸ್ವಂತ ಸಂಬಂಧಿಯಾಗಿದ್ದರೂ ಅವನಿಗೆ ಸಹಾಯ ಮಾಡುವುದಿಲ್ಲ.
ಕಾಡಿನಲ್ಲಿ ಒಂದು ಬಂಡೆ ಒಂದು ಚಿಕ್ಕ ಸಸಿಯ ಸ್ಪರ್ಶದಿಂದ ನಿಂತು ಹೋಗುತ್ತದೆ ಇದರ ಅರ್ಥ ಕಲಿಯುಗದಲ್ಲಿ ಮಾನವನ ಪತನವಾಗುತ್ತದೆ ಇದನ್ನು ದನದ ವೃಕ್ಷ ನಿಲ್ಲಿಸುವುದಿಲ್ಲ ಭಗವಂತನ ಸ್ಮರಣೆ ಧ್ಯಾನ ಎಂಬ ಭಕ್ತಿಯ ಗಿಡವೇ ಅವನ ಪತನವನ್ನು ನಿಲ್ಲಿಸುತ್ತದೆ ಆದ್ದರಿಂದ ಕಲಿಯುಗದಲ್ಲಿ ಯಾರು ದನದಾಹವನ್ನು ಬಿಟ್ಟು ದೇವರ ಸೇವೆಯನ್ನು ಮಾಡುತ್ತಾರೆ ಅವರು ಖಂಡಿತವಾಗಿ ಸಂತೋಷವಾಗಿರುತ್ತಾರೆ ಎಂದು ಹೇಳುತ್ತಾರೆ.
ಸರ್ಕಾರಿ ಉದ್ಯೋಗಗಳು, ಸರ್ಕಾರಿ ಯೋಜನೆಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಸೇರಿ
ನಮ್ಮ ವಾಟ್ಸಾಪ್ ಗ್ರೂಪ್‌ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಚಾನಲ್‌ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |