ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಫಲಾನುಭವಿಗಳಿಗೆ ಸರ್ಕಾರದ ಕಡೆಯಿಂದ ಉಚಿತ ಆಹಾರ ಧಾನ್ಯಗಳ ವಿತರಣೆಯನ್ನು ಮಾಡುತ್ತಿದೆ. ಸರ್ಕಾರದ ಈ ಸೌಲಭ್ಯವನ್ನು ಬಡವರಿಗಾಗಿ ಯೋಚಿಸಿದ್ದು ಇದರ ಲಾಭವನ್ನು ಯಾರು ಅರ್ಹತೆ ಇಲ್ಲವೋ ಅಂತಹವರು ಸಹ ಪಡೆದುಕೊಳ್ಳುತ್ತಿದ್ದಾರೆ ಇದು ಸರ್ಕಾರದ ಗಮನಕ್ಕೆ ಬಂದಿದ್ದು ಇದನ್ನು ತಪ್ಪಿಸುವಂತಹ ಸಲುವಾಗಿ ಇದೀಗ ಸರ್ಕಾರವು ಸಾಕಷ್ಟು ನಿಯಮಗಳನ್ನು ಜಾರಿಗೊಳಿಸುತ್ತಿದೆ.
ನ್ಯಾಯಬೆಲೆ ಅಂಗಡಿಯಲ್ಲಿ ಅನರ್ಹ ವ್ಯಕ್ತಿಗಳು ಆಹಾರ ಧಾನ್ಯಗಳನ್ನು ಪಡೆದುಕೊಳ್ಳುತ್ತಿರುವ ಕಾರಣದಿಂದಾಗಿ ಸರ್ಕಾರವು ರೇಷನ್ ಕಾರ್ಡ್ ಗಳನ್ನು ರದ್ದು ಮಾಡುವಂತಹ ನಿರ್ಧಾರವನ್ನು ಕೈಗೊಂಡಿದೆ. ಹೌದು ಅರ್ಹತೆ ಇಲ್ಲದಿದ್ದರೂ ಸಹ ಸೌಲಭ್ಯವನ್ನು ಪಡೆದುಕೊಳ್ಳುತ್ತಿರುವಂತಹ ಅವರಿಗೆ ಸರ್ಕಾರವು ಎಚ್ಚರಿಕೆಯನ್ನು ನೀಡಿದೆ ಖುದ್ದಾಗಿ ಅವರೇ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಿಸಿಕೊಳ್ಳಿ ಇಲ್ಲವಾದರೆ ಅಧಿಕಾರಿಗಳ ಮೂಲಕ ವಿಚಾರ ಕುರಿತಂತೆ ಸಮಗ್ರವಾಗಿ ತನಿಖೆ ಮಾಡುವಾಗ ಸಿಕ್ಕಿಬಿದ್ದರೆ ಖಂಡಿತವಾಗಿ ಹೆಚ್ಚಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಈಗಾಗಲೇ ಸ್ಪಷ್ಟನೆಯನ್ನು ಕೊಟ್ಟಿದ್ದೆ.
ಯಾರೆಲ್ಲ ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಧಾನ್ಯಗಳನ್ನು ಪಡೆದುಕೊಳ್ಳಲು ಅರ್ಹತೆ ಹೊಂದಿಲ್ಲ ಎಂದು ನೋಡುವುದಾದರೆ ಹಾಗೆಯೆ ತಮ್ಮ ರೇಷನ್ ಕಾರ್ಡ್ ಗಳನ್ನು ಅಧಿಕಾರಿಗಳಿಗೆ ಯಾರೆಲ್ಲ ತಂದು ಒಪ್ಪಿಸಬೇಕು ಎಂದು ನೋಡುವುದಾದರೆ
* ಯಾರ ಬಳಿ ನೂರು ಚದರ ಮೀಟರ್ ಮನೆ ಅಥವಾ ಜಾಗವನ್ನು ನಿಮ್ಮ ಸ್ವಂತ ದುಡಿಮೆಯಿಂದ ಖರೀದಿ ಮಾಡಿದ್ದಾರೆ ಮತ್ತು ನಾಲ್ಕು ಚಕ್ರದ ವಾಹನಗಳನ್ನು ಹೊಂದಿದ್ದರೆ ಅಂದರೆ ಟ್ರ್ಯಾಕ್ಟರ್ ಕಾರ್ ಹೊಂದಿರುವಂತಹರು ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರವನ್ನು ಪಡೆದುಕೊಳ್ಳುತ್ತಿದ್ದಾರೆ ಅಂತಹ ಅವರು ಅನರ್ಹ ರಾಗಿದ್ದು ತಮ್ಮ ರೇಷನ್ ಕಾರ್ಡ್ಗಳನ್ನು ತಂದು ಸರ್ಕಾರಕ್ಕೆ ಒಪ್ಪಿಸಬೇಕು.
* ಗ್ರಾಮೀಣ ಭಾಗದಲ್ಲಿ 2 ಲಕ್ಷ ಆದಾಯ ಹಾಗೂ ನಗರ ಭಾಗದಲ್ಲಿ 3 ಲಕ್ಷ ರೂಪಾಯಿ ಆದಾಯವನ್ನು ಹೊಂದಿದವರು ತಮ್ಮ ರೇಷನ್ ಕಾರ್ಡ್ ಗಳನ್ನು ತಹಸೀಲ್ದಾರರ ಆಫೀಸ್ ನಲ್ಲಿ ಅಥವಾ ಡಿ ಎಸ್ ಓ ಆಫೀಸ್ ನಲ್ಲಿ ಸರಂಡರ್ ಮಾಡಿಕೊಳ್ಳುವುದು ಅತ್ಯಂತ ಕಡ್ಡಾಯವಾಗಿದೆ ಎಂದು ಸುತ್ತೋಲೆಗಳು ತಿಳಿಸುತ್ತಿವೆ.
ಸರ್ಕಾರದ ಆದೇಶವನ್ನು ಯಾರು ಪಾಲಿಸುವುದಿಲ್ಲವೋ ಅಂತಹವರ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ ಒಂದು ವೇಳೆ ಈ ರೀತಿಯಾಗಿ ನೀವು ರೇಷನ್ ಕಾರ್ಡ್ ಅನ್ನು ಅನರ್ಹ ಆದಮೇಲೆ ಕೂಡ ಶರಂಡರ್ ಮಾಡದೇ ಹೋದಲ್ಲಿ ನಿಮ್ಮ ವಿರುದ್ಧ ಕಾನೂನು ಕಠಿಣವಾದಂತಹ ಕ್ರಮವನ್ನು ಕೈಗೊಳ್ಳುತ್ತದೆ ಹಾಗೂ ನೀವು ಇದುವರೆಗೂ ಪಡೆದುಕೊಂಡಿರುವಂತಹ ರೇಷನ್ ಅನ್ನು ಸರ್ಕಾರವು ಹಿಂದಿರುಗಿ ಪಡೆದುಕೊಳ್ಳುತ್ತದೆ.
ಹಾಗಾಗಿ ಒಂದು ವೇಳೆ ನೀವು ಬಡವರ್ಗದ ಜನರ ಪರೀದಿಗೆ ಬರದೇ ಇದ್ದರೂ ಸರ್ಕಾರ ಉಚಿತವಾಗಿ ನೀಡಲಾಗುತ್ತಿರುವಂತಹ ವಸ್ತುಗಳನ್ನು ನೀವು ಪಡೆಯುತ್ತಿದ್ದರೆ ಇದನ್ನು ನೀವು ಸರ್ಕಾರಕ್ಕೆ ತಿಳಿಸಿ ನಿಮ್ಮ ರೇಷನ್ ಕಾರ್ಡನ್ನು ತಹಶೀಲ್ದಾರರ ಆಫೀಸ್ ನಲ್ಲಿ ಸಲ್ಲಿಕೆ ಮಾಡುವುದು ಒಳ್ಳೆಯದು. ಸರ್ಕಾರವು ಬಡವರಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿದೆ ಈ ಯೋಜನೆಗಳು ಬಡವರಿಗೆ ಮಾತ್ರ ಸೀಮಿತವಾಗಿರದೆ ಇದನ್ನು ಅನರ್ಹ ವ್ಯಕ್ತಿಗಳು ಸಹ ಪಡೆದುಕೊಳ್ಳುತ್ತಿದ್ದಾರೆ ಈ ದೃಷ್ಟಿಯಿಂದ ಸರ್ಕಾರವು ಅಂತಹವರನ್ನು ಸರ್ಕಾರದ ಯೋಜನೆಗಳಿಂದ ಮುಕ್ತಗೊಳಿಸಬೇಕು ಎಂದು ಈ ರೀತಿಯಾದಂತಹ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸರ್ಕಾರವು ಕೈಗೊಂಡಿರುವಂತಹ ಈ ನಿಯಮದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.