ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ಇಂದು ನಾವು ಹೂವು ಕಟ್ಟುವಂತಹ ಒಂದು ಯಂತ್ರದ ಬಗ್ಗೆ ಮಾಹಿತಿಯನ್ನು ತಿಳಿಸಲು ಹೊರಟಿದ್ದೇವೆ ಭಾರತೀಯ ಸಂಸ್ಕೃತಿಯಲ್ಲಿ ನಮ್ಮ ಹೆಣ್ಣು ಮಕ್ಕಳು ಹೇಗಿರುತ್ತಾರೆ ಎಂದರೆ ತಲೆ ತುಂಬಾ ಹೂವನ್ನು ಮುಡಿದು ಹಣೆ ತುಂಬ ಕುಂಕುಮವನ್ನು ಇಟ್ಟು ಕೈ ತುಂಬಾ ಬಳೆಯನ್ನು ಹಾಕಿ ನೋಡಲು ದೇವತೆಯ ಹಾಗೆ ಕಾಣಿಸುತ್ತಾರೆ ನಮ್ಮ ಕರ್ನಾಟಕದಲ್ಲಿ ಹೇಳಬೇಕೆಂದರೆ ಹೂವಿಗೆ ಬಹಳಷ್ಟು ಪ್ರಾಮುಖ್ಯತೆಯನ್ನು ಕೊಡುತ್ತಾರೆ
ಹೆಣ್ಣು ಮಕ್ಕಳು ತಲೆಯಲ್ಲಿ ಮುಡಿದುಕೊಳ್ಳುವುದು ಮಾತ್ರವಲ್ಲದೆ ದೇವರ ಪೂಜೆಗೂ ಸಹ ಇದನ್ನು ಬಳಸಿಕೊಳ್ಳಲಾಗುತ್ತದೆ. ಬಗೆ ಬಗೆಯ ಹೂವುಗಳಿಂದ ಹೂವಿನ ಮಾರುಕಟ್ಟೆ ನೋಡಲೇ ಎರಡು ಕಣ್ಣು ಸಾಲದು. ಸಾಮಾನ್ಯವಾಗಿ ನಾವು ಹೂವನ್ನು ಕೈಯಲ್ಲಿ ದಾರದಿಂದ ಕಟ್ಟುವುದನ್ನು ನೋಡಿದ್ದೇವೆ ಆದರೆ ಇದೀಗ ಹೂ ಕಟ್ಟುವಂತಹ ಯಂತ್ರ ಸಹ ಬಂದಿದ್ದು ಈ ಯಂತ್ರದ ಸಹಾಯದಿಂದ ಅತಿ ಸುಲಭವಾಗಿ ನಾವು ಹೂವನ್ನು ಕಟ್ಟಬಹುದಾಗಿದೆ.
ಯಾಂತ್ರಿಕ ಯುಗದಲ್ಲಿ ಎಲ್ಲವೂ ಸಹ ಯಂತ್ರಮಯವಾಗಿದೆ ಯಾವ ಕೆಲಸ ಬೇಕಾದರೂ ಸಹ ಈಗ ಯಂತ್ರಗಳ ಬಳಕೆ ಜಾಸ್ತಿಯಾಗುತ್ತಿದೆ ಅಡಿಗೆಯಿಂದ ಹಿಡಿದು ಹೊಲ ಹೂಳುವ ಮಿಷಿನ್ ತನಕ ಸಾಕಷ್ಟು ರೀತಿಯಾದಂತಹ ಯಂತ್ರಗಳು ಬಳಕೆಯಲ್ಲಿ ಇದೆ, ಅದೇ ರೀತಿಯಲ್ಲಿ ಈ ಹೂವು ಕಟ್ಟುವ ಮಿಷಿನ್ ಸಹ ಒಂದು. ಕರ್ನಾಟಕದ ಬಾಗಲಕೋಟೆಯಲ್ಲಿ ರೈತರು ಸಾಕಷ್ಟು ರೀತಿಯಾದಂತಹ ಹೂವನ್ನು ಬೆಳೆಯುತ್ತಾರೆ ಆ ಹೂವನ್ನು ಮಾಲೆ ಕಟ್ಟುವುದೇ ಒಂದು ದೊಡ್ಡ ಸವಾಲಾಗಿತ್ತು.
ಸರ್ಕಾರಿ ಉದ್ಯೋಗಗಳು, ಸರ್ಕಾರಿ ಯೋಜನೆಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಸೇರಿ
ನಮ್ಮ ವಾಟ್ಸಾಪ್ ಗ್ರೂಪ್‌ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಚಾನಲ್‌ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ಹೂವನ್ನು ಮಾಲೆ ಕಟ್ಟಲು ಜನ ಸಿಗದೇ ಹೂವಿನ ಕೃಷಿ ಇಂದ ವಿಮುಖ ರಾಗುತ್ತಿದ್ದರು ಇದನ್ನು ತಪ್ಪಿಸಲೆಂದು ರಾಯಚೂರು ಕೃಷಿ ವಿಶ್ವ ವಿದ್ಯಾನಿಲಯದ ಸಂಸ್ಕರಣೆ ಹಾಗೂ ಆಹಾರ ತಂತ್ರಜ್ಞಾನ ವಿಭಾಗ ಹೂವು ಬೆಳೆಗಾರರ ನೆರವಿಗೆ ಧಾವಿಸಿದೆ ವಿಶ್ವವಿದ್ಯಾನಿಲಯದ ಕೊಯ್ಲೊತ್ತರ ತಂತ್ರಜ್ಞಾನ ವಿಷಯದ ಸ್ನಾತಕೋತರ ವಿದ್ಯಾರ್ಥಿ ಪ್ರವೀಣ್ ರೆಡ್ಡಿ ವಿದ್ಯುತ್ ಚಾಲಿತ ಹೂವು ಕಟ್ಟುವಂತಹ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ.
ಅದನ್ನು ಸಾರ್ವಜನಿಕರಿಗೆ ಪರಿಚಯಿಸಲು ಇಲ್ಲಿನ ತೋಟಗಾರಿಕೆ ವಿಶ್ವ ವಿದ್ಯಾನಿಲಯದಲ್ಲಿ ಮುಕ್ತಾಯಗೊಂಡ ತೋಟಗಾರಿಕೆ ಮೇಳವನ್ನು ವೇದಿಕೆಯಾಗಿಸಿಕೊಂಡಿದ್ದರು. ಬಿಡಿ ಮಲ್ಲಿಗೆ ಹೂವನ್ನು ಕ್ಷಣಮಾತ್ರದಲ್ಲಿ ಮಾಲೆಯಾಗಿ ಬದಲಾಯಿಸಿದ ಯಂತ್ರದ ಕಾರ್ಯವೈಕರಿ ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ ಹಳೆಯ ಹೊಲಿಗೆ ಯಂತ್ರ ಮತ್ತು ಎರಡು ಬ್ಯಾಟರಿ ಬಳಸಿ ಪ್ರವೀಣ್ ಹೂ ಕಟ್ಟುವ ಯಂತ್ರ ಸಿದ್ದಪಡಿಸಿದ್ದಾರೆ ವಿದ್ಯುತ್ ಸಂಪರ್ಕ ಕೂಡ ನೀಡಬಹುದು ಈ ಯಂತ್ರದಲ್ಲಿ ಗಂಟೆಗೆ 900 ಗ್ರಾಮ್ ನಿಂದ ಒಂದು ಕೆಜಿವರೆಗೆ ಹೂವನ್ನು ಮಾಲೆಯಾಗಿ ಕಟ್ಟಬಹುದು.
ದಿನಕ್ಕೆ 10 ರಿಂದ 12 ಕೆಜಿ ಬಿಡಿ ಹೂವನ್ನು ಮಾಲೆಯಾಗಿ ಕಟ್ಟಬಹುದಾಗಿದೆ ಈ ಯಂತ್ರಕ್ಕೆ 28000 ಖರ್ಚಾಗಿದ್ದು, ದೊಡ್ಡ ಸಂಖ್ಯೆಯಲ್ಲಿ ತಯಾರಿಸಿದರೆ 15,000 ದಿಂದ 18000ಕ್ಕೆ ಯಂತ್ರ ಸಿದ್ಧಗೊಳ್ಳುತ್ತದೆ ಎಂದು ಪ್ರವೀಣ್ ರೆಡ್ಡಿ ಹೇಳುತ್ತಾರೆ ಸದ್ಯ ಈ ಯಂತ್ರದಲ್ಲಿ ಮಲ್ಲಿಗೆ ಸೇವಂತಿಗೆ ಹಾಗೆಯೆ ಚೆಂಡು ಹೂಗಳ ಮಾಲೆ ಕಟ್ಟಬಹುದು ಸುಗಂಧರಾಜ ಕಟ್ಟಲು ಕೆಲವು ತಾಂತ್ರಿಕ ಅಡಚಣೆಗಳು ಇವೆ. ಇದನ್ನು ಸರಿಪಡಿಸುವ ಪ್ರಯತ್ನದಲ್ಲಿ ಇದ್ದೇನೆ ಎಂದು ಪ್ರವೀಣ್ ಅವರು ಹೇಳಿದ್ದಾರೆ.
ಸ್ನಾತಕೋತ್ತರ ಅಧ್ಯಯನದ ಪ್ರಾಜೆಕ್ಟ್ ವರ್ಕ್ ವಿಷಯದ ಹುಡುಕಾಟದಲ್ಲಿ ಇದ್ದಾಗ ಉಪನ್ಯಾಸಕ ಡಾಕ್ಟರ್ ಜಿ. ಡಿ. ವಸಂತ ಕುಮಾರ್ ಅವರು ನೀಡಿದ್ದ ಸಲಹೆಗಳು ಈ ರೀತಿ ಸಾಕಾರಗೊಂಡಿದೆ ಹೊಸದನ್ನೆನಾದರೂ ಹುಡುಕಾಟ ಮಾಡಬೇಕು ಅದು ಜನಸಾಮಾನ್ಯರಿಗೆ ನಿತ್ಯದ ಬದುಕಲ್ಲಿ ನೆರವಾಗಬೇಕು ಎಂದಿದ್ದರು ಅವರೇ ಮಾರ್ಗದರ್ಶನ ನೀಡಿದ್ದರು. ವಿಭಾಗದ ಮುಖ್ಯಸ್ಥ ಡಾಕ್ಟರ್ ಉದಯಕುಮಾರ್ ಅವರು ಸಹ ಒತ್ತಾಸೆಯಾಗಿ ನಿಂತಿದ್ದರು. ಇತ್ತೀಚೆಗಂತು ಮಾಲೆ ಕಟ್ಟುವುದು ಮಾತ್ರವಲ್ಲದೆ ಹೂ ಕೀಳಲ್ಲೂ ಕೂಲಿಯವರು ಸಿಗುವುದಿಲ್ಲ ಇದರ ಕಾರಣದಿಂದಾಗಿ ರೈತರು ಹೂವಿನ ಬದಲು ಮೆಕ್ಕೆಜೋಳ ಕಬ್ಬು ಇನ್ನಿತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ ಈಗ ಯಂತ್ರ ಬಂದಿರುವ ಕಾರಣದಿಂದಾಗಿ ಇದರ ಉಪಯೋಗ ಆಗುತ್ತದೆ.
ಈ ರೀತಿಯಾಗಿ ಹೂವು ಕಟ್ಟಲು ಒಂದು ಯಂತ್ರ ಬಂದಿದ್ದು ಇದನ್ನು ವಿದ್ಯುತ್ ಸಹಾಯದ ಮೂಲಕ ನಾವು ಬಳಕೆ ಮಾಡಿಕೊಳ್ಳಬಹುದು ಯಾರಿಗೆಲ್ಲ ಹೂ ಕಟ್ಟಲು ಕಷ್ಟ ಆಗುತ್ತದೆಯೋ ಅಂತಹವರು ಹೂವಿನ ವ್ಯಾಪಾರಿಗಳಿಗೆ ಇದು ಹೆಚ್ಚು ಅನುಕೂಲವಾಗುತ್ತದೆ ಸ್ವಲ್ಪ ಸಮಯದಲ್ಲಿ ಜಾಸ್ತಿ ಹೂವುಗಳನ್ನು ಕಟ್ಟಿ ಮಾರಾಟ ಮಾಡಬಹುದು ಇದರಿಂದ ಲಾಭವು ಬರುತ್ತದೆ ಅಷ್ಟೇ ಅಲ್ಲದೆ ವ್ಯಾಪಾರಸ್ತರಿಗೆ ಸಮಯದ ಉಳಿತಾಯವೂ ಆಗುತ್ತದೆ ಈ ರೀತಿಯಾದಂತಹ ಹೊಸ ಹೊಸ ಅನ್ವೇಷಣೆಗಳು ನಡೆಯುತ್ತಲೇ ಇರುತ್ತದೆ ಇದರ ಪರಿಚಯ ಎಲ್ಲರಿಗೆ ಆಗಬೇಕು ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿಯನ್ನು ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.
ಸರ್ಕಾರಿ ಉದ್ಯೋಗಗಳು, ಸರ್ಕಾರಿ ಯೋಜನೆಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಸೇರಿ
ನಮ್ಮ ವಾಟ್ಸಾಪ್ ಗ್ರೂಪ್‌ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಚಾನಲ್‌ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |