ಲೂಸ್ ಮಾದ ಯೋಗಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಒಂದು ವಿಭಿನ್ನ ಮ್ಯಾನರಿಸಂ ಇರುವ ಹೀರೋ ತನ್ನ ಲೂಸು ತನದಿಂದಲೇ ಯಂಗ್ ಸ್ಟಾರ್ಗಳ ಫೇವರೆಟ್ ಆಗಿದ್ದಾರೆ. ದುನಿಯಾ ಸಿನಿಮಾದ ಸಣ್ಣದೊಂದು ಪಾತ್ರದ ಮೂಲಕ ಚಿಗುರು ಮೀಸೆ ಇದ್ದಾಗಲೇ ಬಣ್ಣದ ಘೀಳು ಹತ್ತಿಸಿಕೊಂಡ ಇವರು ನಂದ ಲವ್ಸ್ ನಂದಿತಾ ಸಿನಿಮಾ ಮೂಲಕ ಸ್ವತಂತ್ರ ಹೀರೋ ಆದರು. ಆ ಬಳಿಕ ಅಂಬಾರಿ, ಧೂಳ್ ಈ ಸಿನಿಮಾಗಳು ಅವರಿಗೆ ಬಹಳ ಯಶಸ್ಸು ತಂದು ಕೊಟ್ಟಿದ್ದು ಮಾತ್ರ ಅಲ್ಲದೇ ಸಾಲು ಸಾಲು ಸಿನಿಮಾಗಳಲ್ಲಿ ಬಿಝಿ ಆಗಿರುವಂತೆ ಮಾಡಿದವು.
ಅದು ಯೋಗಿ ಅವರ ಅದೃಷ್ಟವ ದುರಾದೃಷ್ಟವೋ ಗೊತ್ತಿಲ್ಲ ಬರುತ್ತಿದ್ದ ಎಲ್ಲಾ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದ ಅವರು ಕಥೆ ಆರಿಸಿಕೊಳ್ಳುವುದರಲ್ಲಿ ಎಡವಿ ಒಂದೇ ಬಾರಿಗೆ ಗೆಲುವಿನ ಏಣಿಯಿಂದ ಕಾಲು ಜಾರಿದರು. ಲೂಸ್ ಮಾದ ಯೋಗಿ ಅವರು ಅತಿ ಹೆಚ್ಚು ಸಿನಿಮಾಗಳಲ್ಲಿ ಬಿಝಿ ಇದ್ದರು ಹೊರತು ಅವುಗಳಿಂದ ಹಿಟ್ ಪಡೆಯುವದರಲ್ಲಿ ವಿಫಲವಾಗಿ ಹೋದರು. ಜೊತೆಗೆ ಇನ್ನೊಂದು ಮುಖವಾಗಿ ಕೂಡ ಲಾಸ್ ಅನುಭವಿಸಿದ್ದಾರೆ. ಈ ಸಿನಿಮಗಳಿಗಾಗಿ ಬೇರೆ ಸಿನಿಮಾಗಳ ಅವಕಾಶಗಳನ್ನು ಕಳೆದುಕೊಳ್ಳಬೇಕಾಯಿತು, ಇವರು ಕಳೆದುಕೊಂಡ ಆ ಸಿನಿಮಾಗಳಲ್ಲಿ ಮತ್ತೊಬ್ಬರು ನಟಿಸಿ ಸ್ಟಾರ್ ಗಳಾಗಿ ಹೋದರು.
ಅಂತಹದ್ದೇ ಒಂದು ಚಿತ್ರ ಡ್ರಾಮಾ. 2012ರಲ್ಲಿ ತೆರೆಕಂಡ ಡ್ರಾಮಾ ಚಿತ್ರದ ಮುಖ್ಯ ಭೂಮಿಕೆಯಲ್ಲಿ ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್, ನೀನಾಸಂ ಸತೀಶ್ ಹಾಗೂ ಸಿಂಧು ಲೋಕನಾಥ್ ಅವರು ಕಾಣಿಸಿಕೊಂಡಿದ್ದರು. ಆದರೆ ಈ ಸಿನಿಮಾಗೆ ಮೊದಲು ಲೂಸ್ ಮಾದ ಅವರನ್ನೇ ಹಾಕಿಕೊಳ್ಳಬೇಕು ಎಂದು ಚಿತ್ರತಂಡ ನಿರ್ಧಾರ ಮಾಡಿತ್ತಂತೆ. ಆ ಸಮಯದಲ್ಲಿ ಲೂಸ್ ಮಾದ ಅವರು ಬೇರೆ ಸಿನಿಮಾಗಳಲ್ಲಿ ಬಿಝಿ ಇದ್ದ ಕಾರಣ ಯಶ್ ಅವರಿಗೆ ಅವಕಾಶ ಕೊಡಲಾಯಿತು.
ಯಶ್ ಹಾಗೂ ನೀನಾಸಂ ಸತೀಶ್ ಇಬ್ಬರಿಗೂ ಕೂಡ ದೊಡ್ಡ ಬ್ರೇಕ್ ಕೊಟ್ಟ ಚಿತ್ರ ಇದು. ಯಶ್ ಆವರೆಗೆ ಸಾಕಷ್ಟು ಸಿನಿಮಾ ಮಾಡಿದ್ದರು ಕೂಡ ದೊಡ್ಡ ಮಟ್ಟದಲ್ಲಿ ಹಿಟ್ ಪಡೆದದ್ದು ಡ್ರಾಮಾ ಚಿತ್ರದಿಂದ. ನಿನಾಸಂ ಸತೀಶ್ ಕೂಡ ಡ್ರಾಮಾ ಚಿತ್ರದ ಅಭಿನಯದಿಂದ ಲೂಸಿಯಾ ಎನ್ನುವ ಪ್ರಯೋಗಾತ್ಮಕ ಚಿತ್ರದಲ್ಲಿ ನಾಯಕ ನಟನಾಗುವ ಅದೃಷ್ಟ ಪಡೆದುಕೊಂಡರು. ಅದು ಅವರ ಜೀವಮಾನದ ಶ್ರೇಷ್ಠ ಸಿನಿಮಾ ಎಂದೇ ಹೇಳಬಹುದು. ಯಶ್ ಆಗಿದ್ದ ನವೀನ್ ಗೌಡ ರಾಕಿಂಗ್ ಸ್ಟಾರ್ ಆಗಲು ಡ್ರಾಮ ಚಿತ್ರ ಅಡಿಪಾಯವಾಯಿತು.
ನಂತರ ಯಶ್ ಹಿಂತಿರುಗಿ ನೋಡಿದ್ದೇ ಇಲ್ಲ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ಕೊಟ್ಟು ಇಂದು ಕಮರ್ಷಿಯಲ್ ಚಿತ್ರಗಳ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಸದ್ಯದಲ್ಲೇ ಅವರು ಇಂಟರ್ನ್ಯಾಷನಲ್ ಸ್ಟಾರ್ ಆಗುವುದರಲ್ಲಿ ಕೂಡ ಯಾವುದೇ ಅನುಮಾನ ಇಲ್ಲ. ಯೋಗರಾಜ್ ಭಟ್ ಅವರ ನಿರ್ದೇಶನದ ಜಯಣ್ಣ ಮತ್ತು ಭೋಗೇಂದ್ರ ಅವರ ನಿರ್ಮಾಣದಲ್ಲಿ ತಯಾರಾದ ಈ ಚಿತ್ರ ನಂತರ ಯಶ್ ಮೇಲೆ ಈ ನಿರ್ಮಾಪಕರು ಹೂಡಿಕೆ ಮಾಡಲು ಭರವಸೆ ಮೂಡಿಸಿದಂತಹ ಚಿತ್ರ ಆಗಿದೆ.
ಇದಾದ ನಂತರ ಗಜಕೇಸರಿ, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಇನ್ನು ಮುಂತಾದ ಅನೇಕ ಸಿನಿಮಾಗಳಲ್ಲಿ ಇವರ ಕಾಂಬಿನೇಷನ್ ವರ್ಕ್ ಮಾಡಿದೆ. ನಿರ್ಮಾಪಕರ ಭರವಸೆಯ ನಾಯಕನಾಗಿ ಬದಲಾಗಲು ಡ್ರಾಮಾ ಚಿತ್ರ ದೊಡ್ಡ ಅಡಿಗಲ್ಲಾಯಿತು. ಜೊತೆಗೆ ಸಿನಿಮಾದಲ್ಲಿ ಯಶ್ ಅವರಿಗೆ ಮಂಡ್ಯ ಆಡುಭಾಷೆ ಸೊಗಡಿದ್ದ ಹಳ್ಳಿ ಪಡ್ಡೆ ಹೈದನ ಪಾತ್ರ ಬಹಳ ಸೂಟ್ ಆಗಿತ್ತು, ಅದು ತೆರೆ ಮೇಲೆ ಚೆನ್ನಾಗಿ ವರ್ಕ್ ಕೂಡ ಆಯ್ತು. ಜೊತೆಗೆ ಅವರ ಲಕ್ಕಿ ಡಾಲ್ ರಾಧೆ ಇವನ ಪೂರ್ತಿ ಜೊತೆ ಇರುವ ಸಂಗಾತಿ ಆಗಲು ಡ್ರಾಮಾ ಸಿನಿಮಾ ಶೂಟಿಂಗ್ ವೇಳೆ ಶುರುವಾದ ಪ್ರೀತಿ ಕಾರಣ ಆಯ್ತು. ಇಂತಹ ಸಿನಿಮಾದ ಪಾತ್ರವನ್ನು ಕಳೆದುಕೊಂಡ ಯೋಗಿ ಅವರು ಅವರ ಪಾಲಿನ ಯೋಗವನ್ನು ಕಳೆದುಕೊಂಡರು, ಆದರೆ ಯಶ್ ಪಾಲಿಗೆ ಡ್ರಾಮ ಚಿತ್ರ ದೊಡ್ಡ ಯಶಸ್ಸು ಆಯಿತು.