ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಬರದ ಪರಿಸ್ಥಿತಿ (drought) ಎದುರಾಗಿದೆ. ರೈತಾಪಿ ವರ್ಗವು ಕೂಡ ಬಹಳ ದುಃಖದಲ್ಲಿದ್ದು ಇದೇ ಕಾರಣಕ್ಕಾಗಿ ಇಷ್ಟು ವರ್ಷಗಳ ಕಾಲ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದ ನಾಡ ಹಬ್ಬ ದಸರಾವನ್ನು (Dasara Celebration Simple) ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಮಾಡಲು ಸರ್ಕಾರ ನಿರ್ಧಾರ ಮಾಡಿದೆ.
ಇದರ ಜೊತೆಗೆ ನವೆಂಬರ್ ತಿಂಗಳಿನಲ್ಲಿ ನಡೆಯಬೇಕಾಗಿದ್ದ ಹಂಪಿ ಉತ್ಸವವನ್ನು (Hampi Uthasava postponed) ಕೂಡ ಫೆಬ್ರವರಿ 2024ಕ್ಕೆ ಮುಂದೂಡಲಾಗಿದ್ದು ಆಗಿನ ಪರಿಸ್ಥಿತಿಯನ್ನು ಅವಲೋಕನೆ ಮಾಡಿ ಹಂಪಿ ಉತ್ಸವದ ಆಚರಣೆ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದೆ. ದಸರಾ ಆಚರಣೆಯನ್ನು ಸರಳವಾಗಿ ಮಾಡುವುದಕ್ಕೆ ಚರ್ಚೆಯಾದ ಬಳಿಕ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಪಿ ಮಹದೇವಪ್ಪ (H.P Mahadevappa) ಅವರು ಸಾಮಾಜಿಕ ಜಾಲತಾಣ ಎಕ್ಸ್ (X) ಅಕೌಂಟ್ ನಲ್ಲಿ ಅಧಿಕೃತವಾಗಿ ಈ ವಿಷಯವನ್ನು ಜನತೆಯೊಂದಿಗೆ ಹಂಚಿಕೊಂಡಿದ್ದರು.
ಆಶಾ ಕಾರ್ಯಕರ್ತೆಯರಂತೆ ಪಶುಸಂಗೋಪನಾ ಇಲಾಖೆಯಿಂದ ಪಶು ಸಖಿಯರ ನೇಮಕ.!
ಸರಳ ದಸರಾ ಆಚರಣೆ ಮಾಡಲು ಸರ್ಕಾರ ನಿರ್ಧರಿಸಿರುವ ವಿಚಾರ ತಿಳಿಯುತ್ತಿದ್ದಂತೆ BJP ಶಾಸಕ ಬಸವರಾಜ್ ಯತ್ನಾಳ್ (BJP Leader Basavaraja Yathnal tweet) ಕೂಡ ಟ್ವೀಟ್ ಮಾಡಿ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಾರಿ ಸರಳವಾಗಿ ದಸರಾ ಆಚರಣೆ ಮಾಡಲು ಮತ್ತು ಈ ವರ್ಷ ಹಂಪಿ ಉತ್ಸವ ಇಲ್ಲ ಎಂದು ಸರ್ಕಾರ ನಿರ್ಧರಿಸಿದೆ.
ಆದರೆ, ಸರ್ಕಾರಕ್ಕೆ ನಿಯಮಗಳನ್ನು ಗಾಳಿಗೆ ತೂರಿ ಮಂತ್ರಿ ಮಂಡಲಕ್ಕೆ ಹೊಸ ಕಾರುಗಳ ಖರೀದಿ ಮಾಡಿರುವುದು, ವಕ್ಫ್ ಹಾಗು ಹಜ್ ಭವನಗಳಿಗೆ ಕೋಟಿ ಕೋಟಿ ಹಣ ಅನುದಾನ ಮಾಡಿರುವುದು, ರಾಜೀವ್ ಗಾಂಧೀ ಪುತ್ಥಳಿಗಾಗಿ ಹಣ ಖರ್ಚು ಮಾಡಿರುವುದು, ಗ್ಯಾರಂಟಿ ಯೋಜನೆ ಕಾರ್ಯಕ್ರಮಗಳಿಗೆ ಕೋಟಿ ಕೋಟಿ ಹಣ ನೀಡುತ್ತಿರುವುದನ್ನು ಪ್ರಸ್ತಾಪಿಸಿ ಇವುಗಳನ್ನು ಆಚರಣೆ ಮಾಡಬಹುದು.
ಆದರೆ ಹಿಂದೂಗಳ ಹಬ್ಬಗಳು ಹಾಗು ಉತ್ಸವಗಳು ಮಾತ್ರ ಸರಳವಾಗಿರಬೇಕು ಸರ್ಕಾರ ದಸರಾ ಹಬ್ಬದ ವಿಚಾರದಲ್ಲಿ ಈ ರೀತಿ ನಿರ್ಧಾರ ಮಾಡಿರುವುದು ತಪ್ಪು ಎನ್ನುವ ಅರ್ಥದಲ್ಲಿ ಶಾಸಕರಾದ ಯತ್ನಾಳ್ ರವರು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ. ಜೊತೆಗೆ ಮಹಿಷ ದಸರಾ (Mahisha Dasara) ಆಚರಣೆಗೆ ಸರ್ಕಾರ ಅನುಮತಿ ನೀಡಬಾರದು ಎಂದು ಆಗ್ರಹಿಸಿದ್ದಾರೆ.
ತಾಯಿ ಚಾಮುಂಡೇಶ್ವರಿ ಅಮ್ಮನವರು ಈ ರಾಜ್ಯದ ನಾಡದೇವತೆ ಹಾಗು ಚಾಮುಂಡಿ ಬೆಟ್ಟ ಹಿಂದೂಗಳ ಶ್ರದ್ಧಾ ಕೇಂದ್ರ. ಕೆಲವರು ಪ್ರಚಾರಕ್ಕಾಗಿ ಮಹಿಷ ದಸರಾ ಆಚರಣೆ ಮಾಡುತ್ತೇವೆ ಎಂದು ಹೇಳುತ್ತಿರುವುದನ್ನು ಗಂಜಿ ಗಿರಾಕಿಗಳಿಗೆ ಸರಕಾರ ಕುಮ್ಮಕ್ಕು ನೀಡುತ್ತಿದೆ ಅನ್ನಿಸುತ್ತಿದೆ. ಸರ್ಕಾರ ಮಹಿಷ ದಸರಾ ಆಚರಣೆಗೆ ಅನುಮತಿ ನೀಡಿದರೆ ನಾವೆಲ್ಲರೂ ಮೈಸೂರಿಗೆ ಬರುತ್ತೇವೆ ಎಂದು ಎಚ್ಚರಿಕೆಯನ್ನು ಸಹ ಶಾಸಕರು ನೀಡಿದ್ದಾರೆ.
ಕೋವಿಡ್ ಕಾರಣದಿಂದಾಗಿ (COVID reasons) ಕೂಡ ಈ ಹಿಂದೆ ಸರಳ ದಸರಾ ಆಚರಿಸಲಾಗಿತ್ತು. ಜಂಬೂ ಸವಾರಿ ಮೆರವಣಿಗೆ ನಡೆದರೂ ಅರಮನೆ ಆವರಣಕ್ಕೆ ಮಾತ್ರ ಅದನ್ನು ಸೀಮಿತಗೊಳಿಸಲಾಗಿತ್ತು. ಕಳೆದ ವರ್ಷ ಅದ್ಧೂರಿ ದಸರಾ ಆಚರಣೆ ಮಾಡಲು ಸರ್ಕಾರ ತಯಾರಾಗಿ ಸಿದ್ಧತೆ ಕೂಡ ಶುರು ಮಾಡಿಕೊಂಡಿತ್ತು.
ಆದರೆ ಈ ಬಾರಿ ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ಬರದ ಛಾಯೆ ಆವರಿಸಿ ರಾಜ್ಯದ ಎಲ್ಲಾ ಜಿಲ್ಲೆಗಳ ನೂರಾರು ತಾಲೂಕುಗಳು ಬರಪೀಡಿತವಾಗಿ ರೈತರ ನೋ’ವಿನಲ್ಲಿದ್ದಾರೆ. ಹಾಗಾಗಿ ಸರಳ ದಸರಾ ಆಚರಣೆಗೆ ಸರ್ಕಾರ ನಿರ್ಧರಿಸಿದೆ. ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಅವರ ಈ ಬಾರಿ ದಸರಾ ಮಹೋತ್ಸವ ಉದ್ಘಾಟನೆ ಮಾಡಲಿದ್ದಾರೆ.