Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಬೇರೆಯದ್ದಕ್ಕೆಲ್ಲಾ ಕೋಟಿ ಕೋಟಿ ಖರ್ಚು, ಹಿಂದೂ ಉತ್ಸವಗಳು ಮಾತ್ರ ಸಿಂಪಲ್ ಎಂದು ಸರಳ ದಸರಾ ನಿರ್ಧಾರದ ಬಗ್ಗೆ ಆಕ್ರೋ-ಶ ವ್ಯಕ್ತಪಡಿಸಿದ ಯತ್ನಾಳ್‌.!

Posted on September 23, 2023 By Admin No Comments on ಬೇರೆಯದ್ದಕ್ಕೆಲ್ಲಾ ಕೋಟಿ ಕೋಟಿ ಖರ್ಚು, ಹಿಂದೂ ಉತ್ಸವಗಳು ಮಾತ್ರ ಸಿಂಪಲ್ ಎಂದು ಸರಳ ದಸರಾ ನಿರ್ಧಾರದ ಬಗ್ಗೆ ಆಕ್ರೋ-ಶ ವ್ಯಕ್ತಪಡಿಸಿದ ಯತ್ನಾಳ್‌.!

 

ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಬರದ ಪರಿಸ್ಥಿತಿ (drought) ಎದುರಾಗಿದೆ. ರೈತಾಪಿ ವರ್ಗವು ಕೂಡ ಬಹಳ ದುಃಖದಲ್ಲಿದ್ದು ಇದೇ ಕಾರಣಕ್ಕಾಗಿ ಇಷ್ಟು ವರ್ಷಗಳ ಕಾಲ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದ ನಾಡ ಹಬ್ಬ ದಸರಾವನ್ನು (Dasara Celebration Simple) ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಮಾಡಲು ಸರ್ಕಾರ ನಿರ್ಧಾರ ಮಾಡಿದೆ.

ಇದರ ಜೊತೆಗೆ ನವೆಂಬರ್ ತಿಂಗಳಿನಲ್ಲಿ ನಡೆಯಬೇಕಾಗಿದ್ದ ಹಂಪಿ ಉತ್ಸವವನ್ನು (Hampi Uthasava postponed) ಕೂಡ ಫೆಬ್ರವರಿ 2024ಕ್ಕೆ ಮುಂದೂಡಲಾಗಿದ್ದು ಆಗಿನ ಪರಿಸ್ಥಿತಿಯನ್ನು ಅವಲೋಕನೆ ಮಾಡಿ ಹಂಪಿ ಉತ್ಸವದ ಆಚರಣೆ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದೆ. ದಸರಾ ಆಚರಣೆಯನ್ನು ಸರಳವಾಗಿ ಮಾಡುವುದಕ್ಕೆ ಚರ್ಚೆಯಾದ ಬಳಿಕ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಪಿ ಮಹದೇವಪ್ಪ (H.P Mahadevappa) ಅವರು ಸಾಮಾಜಿಕ ಜಾಲತಾಣ ಎಕ್ಸ್ (X) ಅಕೌಂಟ್ ನಲ್ಲಿ ಅಧಿಕೃತವಾಗಿ ಈ ವಿಷಯವನ್ನು ಜನತೆಯೊಂದಿಗೆ ಹಂಚಿಕೊಂಡಿದ್ದರು.

ಆಶಾ ಕಾರ್ಯಕರ್ತೆಯರಂತೆ ಪಶುಸಂಗೋಪನಾ ಇಲಾಖೆಯಿಂದ ಪಶು ಸಖಿಯರ ನೇಮಕ.!

ಸರಳ ದಸರಾ ಆಚರಣೆ ಮಾಡಲು ಸರ್ಕಾರ ನಿರ್ಧರಿಸಿರುವ ವಿಚಾರ ತಿಳಿಯುತ್ತಿದ್ದಂತೆ BJP ಶಾಸಕ ಬಸವರಾಜ್ ಯತ್ನಾಳ್ (BJP Leader Basavaraja Yathnal tweet) ಕೂಡ ಟ್ವೀಟ್ ಮಾಡಿ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಾರಿ ಸರಳವಾಗಿ ದಸರಾ ಆಚರಣೆ ಮಾಡಲು ಮತ್ತು ಈ ವರ್ಷ ಹಂಪಿ ಉತ್ಸವ ಇಲ್ಲ ಎಂದು ಸರ್ಕಾರ ನಿರ್ಧರಿಸಿದೆ.

ಆದರೆ, ಸರ್ಕಾರಕ್ಕೆ ನಿಯಮಗಳನ್ನು ಗಾಳಿಗೆ ತೂರಿ ಮಂತ್ರಿ ಮಂಡಲಕ್ಕೆ ಹೊಸ ಕಾರುಗಳ ಖರೀದಿ ಮಾಡಿರುವುದು, ವಕ್ಫ್ ಹಾಗು ಹಜ್ ಭವನಗಳಿಗೆ ಕೋಟಿ ಕೋಟಿ ಹಣ ಅನುದಾನ ಮಾಡಿರುವುದು, ರಾಜೀವ್ ಗಾಂಧೀ ಪುತ್ಥಳಿಗಾಗಿ ಹಣ ಖರ್ಚು ಮಾಡಿರುವುದು, ಗ್ಯಾರಂಟಿ ಯೋಜನೆ ಕಾರ್ಯಕ್ರಮಗಳಿಗೆ ಕೋಟಿ ಕೋಟಿ ಹಣ ನೀಡುತ್ತಿರುವುದನ್ನು ಪ್ರಸ್ತಾಪಿಸಿ ಇವುಗಳನ್ನು ಆಚರಣೆ ಮಾಡಬಹುದು.

ಕಾವೇರಿ ಸಂಕಷ್ಟಕ್ಕೆ ಪರಿಹಾರ ಅಂದ್ರೆ ಮೇಕೆದಾಟು ಯೋಜನೆ ಜಾರಿಗೆ ತರೋದು.! ಕೇಂದ್ರ ಸರ್ಕಾರ ಇದಕ್ಕೆ ಅನುಮತಿ ನೀಡಲಿ.! ಡಿಕೆಶಿ ಆಗ್ರಾಹ.!

ಆದರೆ ಹಿಂದೂಗಳ ಹಬ್ಬಗಳು ಹಾಗು ಉತ್ಸವಗಳು ಮಾತ್ರ ಸರಳವಾಗಿರಬೇಕು ಸರ್ಕಾರ ದಸರಾ ಹಬ್ಬದ ವಿಚಾರದಲ್ಲಿ ಈ ರೀತಿ ನಿರ್ಧಾರ ಮಾಡಿರುವುದು ತಪ್ಪು ಎನ್ನುವ ಅರ್ಥದಲ್ಲಿ ಶಾಸಕರಾದ ಯತ್ನಾಳ್‌ ರವರು ಟ್ವೀಟ್‌ ಮಾಡಿ ಕಿಡಿಕಾರಿದ್ದಾರೆ. ಜೊತೆಗೆ ಮಹಿಷ ದಸರಾ (Mahisha Dasara) ಆಚರಣೆಗೆ ಸರ್ಕಾರ ಅನುಮತಿ ನೀಡಬಾರದು ಎಂದು ಆಗ್ರಹಿಸಿದ್ದಾರೆ.

ತಾಯಿ ಚಾಮುಂಡೇಶ್ವರಿ ಅಮ್ಮನವರು ಈ ರಾಜ್ಯದ ನಾಡದೇವತೆ ಹಾಗು ಚಾಮುಂಡಿ ಬೆಟ್ಟ ಹಿಂದೂಗಳ ಶ್ರದ್ಧಾ ಕೇಂದ್ರ. ಕೆಲವರು ಪ್ರಚಾರಕ್ಕಾಗಿ ಮಹಿಷ ದಸರಾ ಆಚರಣೆ ಮಾಡುತ್ತೇವೆ ಎಂದು ಹೇಳುತ್ತಿರುವುದನ್ನು ಗಂಜಿ ಗಿರಾಕಿಗಳಿಗೆ ಸರಕಾರ ಕುಮ್ಮಕ್ಕು ನೀಡುತ್ತಿದೆ ಅನ್ನಿಸುತ್ತಿದೆ. ಸರ್ಕಾರ ಮಹಿಷ ದಸರಾ ಆಚರಣೆಗೆ ಅನುಮತಿ ನೀಡಿದರೆ ನಾವೆಲ್ಲರೂ ಮೈಸೂರಿಗೆ ಬರುತ್ತೇವೆ ಎಂದು ಎಚ್ಚರಿಕೆಯನ್ನು ಸಹ ಶಾಸಕರು ನೀಡಿದ್ದಾರೆ.

18 ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರಿಗೆ ಸರ್ಕಾರದಿಂದ ಸಿಹಿಸುದ್ದಿ, ನಿಮ್ಮ ಖಾತೆಗೆ ಬರಲಿದೆ 25,000 ಹಣ ಯಾವ ಯೋಜನೆ ನೋಡಿ.!

ಕೋವಿಡ್‌ ಕಾರಣದಿಂದಾಗಿ (COVID reasons) ಕೂಡ ಈ ಹಿಂದೆ ಸರಳ ದಸರಾ ಆಚರಿಸಲಾಗಿತ್ತು. ಜಂಬೂ ಸವಾರಿ ಮೆರವಣಿಗೆ ನಡೆದರೂ ಅರಮನೆ ಆವರಣಕ್ಕೆ ಮಾತ್ರ ಅದನ್ನು ಸೀಮಿತಗೊಳಿಸಲಾಗಿತ್ತು. ಕಳೆದ ವರ್ಷ ಅದ್ಧೂರಿ ದಸರಾ ಆಚರಣೆ ಮಾಡಲು ಸರ್ಕಾರ ತಯಾರಾಗಿ ಸಿದ್ಧತೆ ಕೂಡ ಶುರು ಮಾಡಿಕೊಂಡಿತ್ತು.

ಆದರೆ ಈ ಬಾರಿ ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ಬರದ ಛಾಯೆ ಆವರಿಸಿ ರಾಜ್ಯದ ಎಲ್ಲಾ ಜಿಲ್ಲೆಗಳ ನೂರಾರು ತಾಲೂಕುಗಳು ಬರಪೀಡಿತವಾಗಿ ರೈತರ ನೋ’ವಿನಲ್ಲಿದ್ದಾರೆ. ಹಾಗಾಗಿ ಸರಳ ದಸರಾ ಆಚರಣೆಗೆ ಸರ್ಕಾರ ನಿರ್ಧರಿಸಿದೆ. ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಅವರ ಈ ಬಾರಿ ದಸರಾ ಮಹೋತ್ಸವ ಉದ್ಘಾಟನೆ ಮಾಡಲಿದ್ದಾರೆ.

Viral News

Post navigation

Previous Post: ಆಶಾ ಕಾರ್ಯಕರ್ತೆಯರಂತೆ ಪಶುಸಂಗೋಪನಾ ಇಲಾಖೆಯಿಂದ ಪಶು ಸಖಿಯರ ನೇಮಕ.!
Next Post: ಇನ್ಮುಂದೆ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೂ ಸಬ್ ರಿಜಿಸ್ಟರ್ ಆಫೀಸ್ ತೆರೆಯಲು ಸರ್ಕಾರದಿಂದ ಆದೇಶ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme