ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟು ಹಬ್ಬದಂದು (Yash Birthday) ಅಭಿಮಾನಿಗಳು ತಮ್ಮ ಅಭಿಮಾನ ಪ್ರದರ್ಶಿಸಲು ಹೋಗಿ ಮಾಡಿಕೊಂಡ ಅವಾಂತರದ ಬಗ್ಗೆ ಇಡೀ ರಾಜ್ಯದಾದ್ಯಂತ ದೊಡ್ಡ ಸುದ್ದಿಯಾಗಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಬಳಿಯ ಗ್ರಾಮವಾದ ಸುರಣಗಿ ಅಂಬೇಡ್ಕರ್ ಕಾಲೋನಿಯಲ್ಲಿ ಜನವರಿ 2ರ ಮಧ್ಯರಾತ್ರಿ ಯಶ್ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಬೇಕೆಂದು ದೊಡ್ಡ ಕಟೌಟ್ ನಿಲ್ಲಿಸಲು ಹೋದ ಯುವಕರಿಗೆ ಹತ್ತಿರದಲ್ಲಿದ್ದ ವಿದ್ಯುತ್ ಲೈನ್ ತಗಲಿ ಮೂರು ಜನ ಸಾ’ವ’ನ್ನ’ಪ್ಪಿ’ದ್ದರೆ.
ಮತ್ತು ನಾಲ್ಕು ಜನ ಇನ್ನು ಸಹ ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿದಿದ್ದಂತೆ ಗೋವಾದಿಂದ ದೌಡಾಯಿಸಿ ಬಂದ ಯಶ್ ಕುಟುಂಬಸ್ಥರಿಗೆ ಸಾಂತ್ವನ ಹೇಳುವುದರ ಜೊತೆಗೆ ನೆರವಾಗುವ ಭರವಸೆಯನ್ನು ನೀಡಿದ್ದಾರೆ. ತಮ್ಮ ಅಭಿಮಾನಿಗಳಿಗೆ ನೀವು ಇರುವಲ್ಲೇ ಹರಸಿ ಹಾರೈಸಿ ಈ ರೀತಿ ಆದಾಗ ಬಂದು ನೋಡುವುದು ನಿಮ್ಮ ಹುಚ್ಚಾಟಗಳಿಗಲ್ಲ.
ಯಾರು ಬೇಜಾರು ಮಾಡಿಕೊಂಡಿದ್ದರು ಪರವಾಗಿಲ್ಲ ಅವರ ತಂದೆ ತಾಯಿಗೆ ಗೌರವ ಸಲ್ಲಿಸುವ ಸಲುವಾಗಿ ಬರುತ್ತೇವೆ. ಈ ಘಟನೆ ಹೊರತುಪಡಿಸಿ ಹೇಳುತ್ತಿರುವುದು. ಇದರಲ್ಲಿ ಅವರ ತಪ್ಪು ಕೂಡ ಇಲ್ಲ, ಇದು ಆಕ್ಸಿಡೆಂಟ್ ಆಗಿ ಆಗಿದೆ. ಆದರೆ ಎಲ್ಲರಿಗೂ ಪಾಠವಾಗಬೇಕು. ಮುಂದೆಂದೂ ಕೂಡ ಇದು ಮರುಕಳಿಸಬಾರದು.
ನಿಮಗೆ ಅಭಿಮಾನಿ ಇದ್ದರೆ ನೀವು ಕೂಡ ನಿಮ್ಮ ಕುಟುಂಬಕ್ಕೆ ಹೀರೋ ಆಗಬೇಕು, ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಿ. ನಮ್ಮ ಸಿನಿಮಾಗಳಿಗೆ ಬೆಲೆ ಕೊಟ್ಟು ಸಿನಿಮಾ ನೋಡಿ ಸಾಕು. ನನ್ನ ಹುಟ್ಟುಹಬ್ಬ ನನಗೆ ಅಸಹ್ಯ ತರುವ ರೀತಿ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ.
ಈ ಘಟನೆಯಲ್ಲಿ ಮೃ’ತ ಪಟ್ಟವರು ಮತ್ತು ಗಾಯಾಳುಗಳೆಲ್ಲಾ ಕೂಲಿ ಕಾರ್ಮಿಕರಾಗಿದ್ದಾರೆ. ಕಡುಬಡದಂತೆ ಇರುವ ಕುಟುಂಬಗಳಿಗೆ ಸರ್ಕಾರವು ಕೂಡ ನೆರವಾಗಲು ಬಯಸಿದ್ದು, ಘಟನೆಯಲ್ಲಿ ಮ’ತ ಪಟ್ಟವರ ಕುಟುಂಬಕ್ಕೆ ತಲಾ ಎರಡೆರಡು ಲಕ್ಷ ಹಾಗೂ ಗಾಯಾಳುಗಳಿಗೆ 50 ಲಕ್ಷ ಪರಿಹಾರವನ್ನು ನೀಡಿದೆ ಆದರೆ ಈಗ ಗ್ರಾಮಸ್ಥರಿಂದ ಹೊಸ ವರಸೆ ಶುರುವಾಗಿದೆ.
ನೀವು ನೀಡಿರುವ ಪರಿಹಾರದ ಹಣ ಯಾವುದಕ್ಕೂ ಕೂಡ ಸಾಕಾಗುವುದಿಲ್ಲ, 2 ಲಕ್ಷ ಪರಿಹಾರ ಹಣ ಘೋಷಣೆ ನೀಡಿರುವುದರ ಜೊತೆಗೆ ಎರಡು ಎಕರೆ ಜಮೀನು ಕೂಡ ಆ ಕುಟುಂಬಗಳಿಗೆ ನೀಡಬೇಕು ಮತ್ತು ಗ್ರಾಮದಲ್ಲಿ ಆ ಯುವಕರ ಪುತ್ಥಳಿ ನಿರ್ಮಿಸಬೇಕು ಎಂದು ವಿಚಿತ್ರ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ ಗ್ರಾಮಸ್ಥರು. ಆದರೆ ಇದಕ್ಕೆ ಸರ್ಕಾರ ಯಾವ ರೀತಿ ಸ್ಪಂದಿಸಿಲಿದೆ ಕಾದು ನೋಡಬೇಕು.
ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಹಬ್ಬತಿದ್ದಂತೆ ನೆಟ್ಟಿಗರು ಈ ವಿಚಿತ್ರ ಬೇಡಿಕೆಗಳಿಗೆ ತೀರಾ ಅಕ್ಷೇಪ ವ್ಯಕ್ತಪಡಿಸಿದ್ದಾರೆ, ಈ ವಿಚಾರವಾಗಿ ಯಾರಿಗೂ ಕೂಡ ಒಪ್ಪಿಗೆಯೂ ಸಹ ಇಲ್ಲ ಕುಟುಂಬಕ್ಕೆ ಆಗಿರುವ ನಷ್ಟದ ಬಗ್ಗೆ ಖಂಡಿತವಾಗಿಯೂ ಎಲ್ಲರ ಮನಸ್ಸಿನಲ್ಲಿ ನೋವಿದೆ ಆದರೆ ಈ ಬೇಡಿಕೆಗೆ ಅರ್ಥ ಇಲ್ಲ ಎನ್ನುವುದೇ ಹೆಚ್ಚಿನವರ ಅಭಿಪ್ರಾಯವಾಗಿದೆ.
ಈಗಾಗಲೇ ಕೈಮೀರಿ ನಡೆದಿರುವ ಘಟನೆಗೆ ತಮ್ಮ ತಪ್ಪಿಲ್ಲದಿದ್ದರೂ ಕೂಡ ರಾಕಿಂಗ್ ಸ್ಟಾರ್ ಯಶ್ ಕುಟುಂಬಗಳಿಗೆ ತೆರಳಿ, ಕ್ಷಮೆ ಕೇಳಿ ಕುಟುಂಬ ಸಮಾಧಾನ ಪಡಿಸುವ ಮತ್ತು ಅವರ ಹೊಣೆ ಹೊತ್ತಿಕೊಳ್ಳುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಸರ್ಕಾರವೂ ಕೂಡ ತನ್ನಿಂದ ಆದಷ್ಟು ಕ್ರಮ ಕೈಗೊಂಡಿದೆ ಇದನ್ನು ಮೀರಿ ಗ್ರಾಮಸ್ಥರ ಬೇಡಿಕೆಗೆ ಯಾವ ರೀತಿ ತೀರ್ಮಾನವಾಗುತ್ತದೆ ಕಾದು ನೋಡೋಣ.