ನಟಿ ಪ್ರಣೀತ(Praneetha) ಮೂಲತಃ ಬೆಂಗಳೂರಿನವರಾಗಿದ್ದರೂ ಸದ್ಯಕ್ಕೆ ಸೌತ್ ಇಂಡಿಯಾದ ಎಲ್ಲಾ ಸಿನಿಮಾ ಇಂಡಸ್ಟ್ರಿಗೂ ಬೇಕಾದ ನಟಿ ಎಂದು ಹೇಳಬಹುದು. ಯಾಕೆಂದರೆ ನಟಿಗೆ ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಚಿತ್ರರಂಗದಲ್ಲೂ ಬಹಳ ದೊಡ್ಡ ಹೆಸರಿದೆ. ಕನ್ನಡದಲ್ಲಿ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಇವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪೊರ್ಕಿ ಸಿನಿಮಾ (Darshan’s Porki Movie heroien) ಹಾಗೂ ದುನಿಯಾ ವಿಜಯ್ ಅವರ ಜೊತೆಗಿನ ಜರಾಸಂಧ ಸಿನಿಮಾ ಹೆಚ್ಚು ಹೆಸರು ತಂದು ಕೊಟ್ಟಿತ್ತು.
ಈಗಲೂ ಇವರ ಸಕತ್ತಾಗವಳೇ, ನೀರಿಗೆ ಬಾರೆ ಚೆನ್ನಿ, ಬಡಪಾಯಿ ಹೃದಯಕೆ ಈ ಹಾಡುಗಳು ಎಂಗೆಳೆಯರ ಫೇವರೆಟ್. ಕನ್ನಡದಲ್ಲಿ ದರ್ಶನ್ ಉಪೇಂದ್ರ ಗಣೇಶ್ ಮುಂತಾದ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡ ನಟಿ ತಮಿಳಿನಲ್ಲೂ ಸಹ ಸೂರ್ಯ ತೆಲುಗಿನ ಪವನ್ ಕಲ್ಯಾಣ್ ಮುಂತಾದ ಖ್ಯಾತರೊಂದಿಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕೂಡ ಸಖತ್ ಆಕ್ಟಿವ್ ಆಗಿರುವ ಇವರು ಸದ್ಯಕ್ಕೆ ಸಿನಿಮಾರಂಗದಿಂದ ದೂರ ಇದ್ದು ಸಮಾಜ ಸೇವೆ ಮತ್ತು ವೈಯುಕ್ತಿಕ ಜೀವನದಲ್ಲಿ ಬಿಸಿಯಾಗಿದ್ದಾರೆ. ಕಳೆದೆರಡು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಮುದ್ದಾದ ಮಗುವಿಗೆ ತಾಯಿ ಆಗಿ ಲೈಫ್ ನಲ್ಲಿ ಸೆಟಲ್ ಆಗಿದ್ದಾರೆ.
ಜೊತೆಗೆ ಸಮಾಜದ ಬಗ್ಗೆ ಅಪಾರ ಕಾಳಜಿ ಹೊಂದಿರು ಇವರು ಆಗಾಗ ತಮ್ಮ ಸಾಮಾಜಿಕ ಕಳಕಳಿ ಮೆರೆಯುತ್ತಿರುತ್ತಾರೆ, ಕೋವಿಡ್ ಸಾಂಕ್ರಾಮಿಕ ಒಕ್ಕರಿಸಿದ ಸಮಯದಲ್ಲೂ ಕೂಡ ತಮ್ಮ ಪ್ರಣೀತ ಫೌಂಡೇಶನ್ ಮೂಲಕ ಹಲವಾರು ಬಡ ಕುಟುಂಬಗಳಿಗೆ ರೇಷನ್, ವ್ಯಾಕ್ಸಿನ್ ಒದಗಿಸುವ ಮೂಲಕ ನಟಿ ಹೆಸರು ಮುನ್ನಡೆಯಲ್ಲಿ ಇತ್ತು. ಸಿನಿಮಾ ಮಾತ್ರವಲ್ಲದೆ ಈ ರೀತಿ ಕಾರ್ಯಗಳಿಂದಲೂ ಕೂಡ ನಟಿ ಆಗಾಗ ಸುದ್ದಿಯಾಗುತ್ತಿರುತ್ತಾರೆ.
ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಕತ್ ಆಕ್ಟಿವ್ ಆಗಿರುವ ನಟಿ ಆಗಾಗ ತಮ್ಮ ಜೀವನದ ವಿಶೇಷ ಕ್ಷಣಗಳ ಬಗ್ಗೆ ಮತ್ತು ವಿಶೇಷ ಸಂದರ್ಭಗಳಲ್ಲಿ ಫೋಟೋಶೂಟ್ ಮಾಡಿಸಿಕೊಂಡು ಅದನ್ನು ತಮ್ಮ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಬಹಳ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಇವರು ಇನ್ಸ್ಟಾಗ್ರಾಮ್ ನಲ್ಲಿ ಕೂಡ ಮಿಲಿಯನ್ ಗಟ್ಟಲೇ ಫಾಲೋವರ್ಸ್ ಹೊಂದಿದ್ದಾರೆ.
ಇದೀಗ ತಮ್ಮ ಸಾಮಾಜಿಕ ಜಾಲತಾಣ ಖಾತೆ ಇನ್ಸ್ಟಾಗ್ರಾಮ್ ನಲ್ಲಿ ಒಂದು ವಿಶೇಷವಾದ ಕ್ಷಣದ ಬಗ್ಗೆ ಮಾಹಿತಿ ಹಂಚಿಕೊಂಡು ಮತ್ತೊಮ್ಮೆ ಜನಸಾಮಾನ್ಯರ ಮನಸಿಗೆ ಹತ್ತಿರವಾಗಿದ್ದಾರೆ. ಇದೀಗ ನಟಿ ಪ್ರಣೀತ ಅವರು ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ 1 ಲಕ್ಷ ರೂಪಾಯಿ ಕಾಣಿಕೆ ಸಲ್ಲಿಸುವ ಮೂಲಕ ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಹಿಂದುಗಳ ಪಾಲಿಗೆ ಇದೊಂದು ಐತಿಹಾಸಿಕ ಅಭಿಯಾನ ಎಂದು ಬರೆದುಕೊಂಡಿದ್ದಾರೆ.
ಅಯೋಧ್ಯೆಯ ಶ್ರೀ ರಾಮಮಂದಿರ (Ram Mandir) ನಿಧಿ ಸಮರ್ಪಣ ಅಭಿಯಾನಕ್ಕೆ ಬೆಂಬಲಿಸಿ 1 ಲಕ್ಷ ರೂ. ನೀಡಿರುವ ನಟಿ ನೀವೆಲ್ಲರೂ ಕೂಡ ಈ ಕಾರ್ಯಕ್ಕೆ ಕೈಜೋಡಿಸಿ ಇದರ ಭಾಗವಾಗಬೇಕೆಂದು ನಾನು ವಿನಂತಿಸುತ್ತೇನೆ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ನಟಿಯ ಈ ಕಾರ್ಯ ನೆಟ್ಟಿಗರ ಹೊಗಳಿಕೆಗೆ ಕಾರಣವಾಗಿದೆ ಮತ್ತು ಸದಾ ಈ ರೀತಿ ಜನಸಾಮಾನ್ಯರ ಭಾವನೆಗಳಿಗೆ ಸ್ಪಂದಿಸುವ ಇವರ ನಡೆಗೆ ಮೆಚ್ಚುಗೆ ಸುರಿಮಳೆ ಇದ್ದೇ ಇರುತ್ತದೆ. ಕೆಲವರು ಮನಪೂರ್ವಕವಾಗಿ ತಾವು ಕೂಡ ಈ ಕಾರ್ಯ ಮಾಡುವುದಕ್ಕೆ ತೊಡಗಿರುವುದಾಗಿ ಸ್ಪಂದಿಸಿದ್ದಾರೆ. ನೀವು ಕೂಡ ನಟಿ ಪ್ರಣಿತ ಸುಭಾಷ್ ಅವರ ಸಿನಿಮಾಗಳನ್ನು ನೋಡಿದ್ದರೆ ಕನ್ನಡದ ಅವರ ಯಾವ ಚಿತ್ರ ನಿಮಗೆ ಇಷ್ಟ ಎಂದು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.