ಸಾಹಸಸಿಂಹ ವಿಷ್ಣುವರ್ಧನ್ (Vishnuvardhan) ಇಡೀ ಕರುನಾಡೆ ಕೈ ಎತ್ತಿ ಮುಗಿಯುವ ಅಭಿನವ ಸಂತ. ಹಾಗೆ ಬದುಕಿನ ಉದ್ದಕ್ಕೂ ಬರೀ ನೋವನ್ನೇ ತಿಂದ ದುರಂತ ನಾಯಕ. ಮೊನ್ನೆ ಅಷ್ಟೇ ಮೈಸೂರಿನಲ್ಲಿ 13 ವರ್ಷಗಳಿಂದ ವಿ-ವಾ-ದದಲ್ಲಿ ಉಳಿದಿದ್ದ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ (Vishuvardhan memorial) ಕಾರ್ಯಕ್ರಮವು ಜರಗಿದ್ದು, ಅಭಿಮಾನಿಗಳ ಪಾಲಿಗೆ ಅಪಾರವಾದ ಸಂತೋಷ ನೀಡಿದೆ. ಈ ಕಾರ್ಯಕ್ರಮಕ್ಕೆ ನಾಡಿನಾದ್ಯಂತ ಇರುವ ದಾದನ ಅಭಿಮಾನಿಗಳು ಹಾಗೂ ಚಿತ್ರರಂಗದಲ್ಲಿ ವಿಷ್ಣು ವರ್ಧನ್ ಅವರಿಗೆ ಆತ್ಮೀಯರಾಗಿದ್ದವರು ಎಲ್ಲರೂ ಭಾಗಿಯಾಗಿದ್ದಾರೆ.
ಸರ್ಕಾರದ ಭಾಗವಾಗಿ ನಡೆದ ಈ ಕಾರ್ಯಕ್ರಮ ರಾಜ್ಯದಾದ್ಯಂತ ಎಲ್ಲರ ಗಮನ ಸೆಳೆದಿತ್ತು. ಇಡೀ ವಿಷ್ಣುವರ್ಧನ್ ಅವರ ಕುಟುಂಬವೇ ಅಂದು ಅಲ್ಲಿ ನೆರೆದಿತ್ತು. ಭಾರತೀ (Bharathi Vishnuvardhan) ಅಮ್ಮನವರ ಪಾಲಿಗಂತೂ ಕೊನೆಗೂ ಸ್ಮಾರಕ ನಿರ್ಮಾಣವಾದ ನೆಮ್ಮದಿಯ ಭಾವ. ಆದರೆ ಎಲ್ಲೂ ವಿಷ್ಣುವರ್ಧನ್ ಅವರ ಎರಡನೇ ಪುತ್ರಿ ಚಂದನ (Vishnuvardhan daughter Chnadana) ಕಾಣಿಸಲಿಲ್ಲ ವಿಷ್ಣುವರ್ಧನ್ ಹಾಗೂ ಭಾರತಿ ಅಮ್ಮ ಅವರು ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡು ಸಾಕಿದ್ದರು.
ಚೆನ್ನಾಗಿ ವಿದ್ಯಾಭ್ಯಾಸ ಕೊಡಿಸಿದ್ದು ಮಾತ್ರವಲ್ಲದೆ ಒಳ್ಳೆ ಕಡೆ ಮದುವೆ ಸಹ ಮಾಡಿಕೊಟ್ಟಿದ್ದರು. ವಿಷ್ಣುವರ್ಧನ್ ಅವರೇ ನಟ ಅನಿರುದ್ಧ್ ಅವರನ್ನು ಮೆಚ್ಚಿ ಮೊದಲ ಮಗಳು ಕೀರ್ತಿ ವಿಷ್ಣುವರ್ಧನ್ ಅವರನ್ನು ಧಾರೆ ಎರೆದು ಕೊಟ್ಟಿದ್ದರು. ಮತ್ತು ಎರಡನೇ ಮಗಳು ಚಂದನ ವಿಷ್ಣುವರ್ಧನ್ ಅವರು ಸಹ ಉದ್ಯಮಿ ಒಬ್ಬರ ಕೈ ಹಿಡಿದು ಬೆಂಗಳೂರಿನಲ್ಲೇ ಬದುಕುತ್ತಿದ್ದಾರೆ. ಆದರೆ ವಿಷ್ಣುವರ್ಧನ್ ಅವರ ಸಂಬಂಧಿತ ಯಾವುದೇ ಸುದ್ದಿಗೋಷ್ಠಿ ಆದರೂ ಕಾರ್ಯಕ್ರಮ ಇದ್ದರೂ ಕೀರ್ತಿ ವಿಷ್ಣುವರ್ಧನ್ ಹಾಗೂ ಅನಿರುದ್ಧ್ ಅವರು ಭಾರತಿ ವಿಷ್ಣುವರ್ಧನ್ ಅವರ ಜೊತೆ ಕಾಣಿಸಿಕೊಳ್ಳುತ್ತಾರೆ.
ಇತ್ತೀಚೆಗೆ ವಿಷ್ಣುವರ್ಧನ್ ಅವರ ಮನೆಯ ಗೃಹಪ್ರವೇಶವು ಕೂಡ ನಡೆಯಿತು. ಆ ಕಾರ್ಯಕ್ರಮದ ಮುಖ್ಯಸ್ಥಿಕೆಯನ್ನು ಕೂಡ ಅನಿರುದ್ಧ್ ದಂಪತಿಗಳ ಹೊತ್ತುಕೊಂಡಿದ್ದರು. ಸದ್ಯಕ್ಕೆ ವಿಷ್ಣುವರ್ಧನ್ ಅವರ ಇಡೀ ಜವಾಬ್ದಾರಿ ಅನಿರುದ್ಧ್ ಅವರ ಹೆಗಲಿಗಿದೆ ಎನ್ನಬಹುದು. ಆದರೆ ಎಲ್ಲೂ ಸಹ ಚಂದನ ವಿಷ್ಣುವರ್ಧನ್ ಅವರ ಬಗ್ಗೆ ಸದ್ದಿಲ್ಲದ ಕಾರಣ ಕೀರ್ತಿ ಹಾಗೂ ಚಂದನ ಅವರ ನಡುವೆ ಮನಸ್ತಾಪ ಇದೆ. ಅವರಿಬ್ಬರ ನಡುವೆ ಎಲ್ಲವೂ ಸರಿ ಇಲ್ಲ ಈ ಕಾರಣಕ್ಕಾಗಿ ಚಂದನ ಅವರು ಕೀರ್ತಿ ಅವರ ಕಾರ್ಯಕ್ರಮಗಳಿಗೆ ಬರುವುದಿಲ್ಲ ಎನ್ನುವ ಗಾಳಿ ಸುದ್ದಿಗಳು ಹರಡುತ್ತಿವೆ.
ಈ ಬಗ್ಗೆ ಮಾಧ್ಯಮದವರು ಅನಿರುದ್ಧ್ ಅವರನ್ನು ಪ್ರಶ್ನಿಸಿದಾಗ ಅವರು ಈ ರೀತಿ ಉತ್ತರ ಕೊಟ್ಟಿದ್ದಾರೆ ಇದೆಲ್ಲ ತಪ್ಪು ಕಲ್ಪನೆ, ನಾವು ಮತ್ತು ಚಂದನ ಕುಟುಂಬದವರು ಬಹಳ ಚೆನ್ನಾಗಿದ್ದೇವೆ. ನಮ್ಮ ಕಾರ್ಯಕ್ರಮಗಳಿಗೆ ಅವರು ಬರುತ್ತಾರೆ, ಅವರ ಕುಟುಂಬದ ಸಮಾರಂಭಗಳಿಗೆ ನಾವು ಭಾಗಿ ಆಗುತ್ತೇವೆ. ಇಂದು ಈ ಕಾರ್ಯಕ್ರಮಕ್ಕೂ ಸಹ ಅವರು ಬಂದಿದ್ದಾರೆ ಆದರೆ ಅವರಿಗೆ ಮಾಧ್ಯಮಗಳ ಎದುರು ಕಾಣಿಸಿಕೊಳ್ಳುವುದು ಇಷ್ಟ ಇಲ್ಲ ಜೊತೆಗೆ ಅವರು ಮಾಧ್ಯಮಗಳ ಜೊತೆ ಮಾತನಾಡಲು ಸಹ ಇಷ್ಟ ಪಡುವುದಿಲ್ಲ.
ಆ ಕಾರಣಕ್ಕಾಗಿ ಅವರು ನಿಮ್ಮ ಕಣ್ಣುಗಳಿಗೆ ಬೀಳದೆ ಹಿಂದೆ ಉಳಿದಿದ್ದಾರೆ ಅಷ್ಟೇ. ಆದರೆ ಇದುವರೆಗೆ ಅಪ್ಪಾಜಿಯವರ ಯಾವ ಕಾರ್ಯಕ್ರಮಕ್ಕೂ ಅವರು ತಪ್ಪಿಸಿಕೊಂಡಿಲ್ಲ ನಾವೆಲ್ಲ ಚೆನ್ನಾಗಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ನಟ ಅನಿರುದ್ಧ ಅವರು ಇತ್ತೀಚೆಗೆ ಜೊತೆ ಜೊತೆಯಲಿ (Jothe jotheyali) ಧಾರಾವಾಹಿ ಇಂದ ಹೊರಬಂದಿದ್ದಾರೆ. ಉದಯ ಟಿವಿಯಲ್ಲಿ (Udaya tv) ಸೂರ್ಯವಂಶ (Suryavamsha) ಎನ್ನುವ ಹೊಸ ಧಾರವಾಹಿಗೆ ಇವರೇ ನಾಯಕ ನಟ ಕೂಡ ಆಗಿರಲಿದ್ದಾರೆ ಎನ್ನುವ ಸುದ್ದಿ ಇದೆ. ಸದ್ಯಕ್ಕೆ ವಿಷ್ಣುವರ್ಧನ್ ಅವರಿಗೆ ಉತ್ತರಧಿಕಾರಿ ಆಗಿರುವ ಅನಿರುದ್ಧ್ ಅವರ ಹೆಸರು ಸಹ ವಿಷ್ಣುವರ್ಧನ್ ಅವರ ಹೆಸರಂತೆ ಬೆಳಗಲಿ ಎಂದು ಕೋಟಿಗೊಬ್ಬನ ಅಭಿಮಾನಿಗಳಾದ ನಾವೆಲ್ಲ ಹರಸೋಣ.