ಬಿಗ್ ಬಾಸ್ ಸೀಸನ್ 10ರ (Bigboss S10) ನಾಲ್ಕನೇ ವಾರದ ವಾರಾಂತ್ಯದ ಎಪಿಸೋಡ್ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಯಾಕೆಂದರೆ ಬಿಗ್ ಬಾಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಒಬ್ಬ ಕಂಟೆಸ್ಟೆಂಟ್ ಪ್ರಶ್ನೆ ಮಾಡಿ ಎಂದು ಸೆಲೆಬ್ರಿಟಿಗಳು ಸೇರಿದಂತೆ, ನೋಡುಗರೆಲ್ಲರೂ ಚಾನೆಲ್ ಹಾಗೂ ಸುದೀಪ್ (Suddep weekend episodes ) ಅವರಿಗೆ ರಿಕ್ವೆಸ್ಟ್ ಮಾಡಿದ್ದಾರೆ.
ಮನೆಯಲ್ಲಿ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವ, ಅವ್ಯಾಚ್ಯ ಶಬ್ದಗಳನ್ನು ಬಳಸಿ ಹೆಣ್ಣು ಮಕ್ಕಳನ್ನು ನಿಂದಿಸಿರುವ, ರೂಲ್ಸ್ ಬ್ರೇಕ್ ಮಾಡಿ ಓಪನ್ ಆಗಿ ನಾಮಿನೇಷನ್ ಬಗ್ಗೆ ಮಾತನಾಡುತ್ತಿರುವ, ತಪ್ಪು ಮಾಡಿದ್ದರೂ ಪ್ರಶ್ನಿಸಿದವರನ್ನು ತನ್ನ ಏರು ದನಿಯಿಂದ ಬಾಯಿ ಮುಚ್ಚಿಸಲು ಪ್ರಯತ್ನಿಸಿ ರೌಡಿ ರೀತಿ ಹೊರಗಡೆ ಬಿಂಬಿತರವಾಗಿ ಬಿಗ್ ಬಾಸ್ ಶುರುವಾದಗಿನಿಂದಲೂ ಕೂಡ ಸಿಕ್ಕಾಪಟ್ಟೆ ಟ್ರೋಲ್ (troll) ಆಗುತ್ತಿರುವ ಕಂಟೆಸ್ಟೆಂಟ್ ವಿನಯ್ ಗೌಡ ಅವರ ವರ್ತನೆಯು ನಾಲ್ಕನೇ ವಾರದಲ್ಲೂ ಮಿತಿಮೀರಿದ್ದು.
ಇದರ ಬಗ್ಗೆ ಖಂಡಿಸಿರುವ ಪ್ರೇಕ್ಷಕರು ಸುದೀಪ್ ಅವರನ್ನು ವಿನಯ್ ಗೌಡ (Vinay Gowda) ಮತ್ತು ಅವರಿಗೆ ಚಮಚದಂತಿರುವ ನಮ್ರತಾಗೆ (Namratha) ಸರಿಯಾಗಿ ಕ್ಲಾಸ್ ತೆಗೆದುಕೊಳ್ಳಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಕಳೆದ ವಾರದ ವಾರಾಂತ್ಯದ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಅವರು ಎಲ್ಲರಿಗೂ ಸ್ವಲ್ಪ ಖಾರವಾಗಿಯೇ ಬುದ್ದಿ ಹೇಳಿದರು ಆದರೆ ವಿನಯ್ ಗೌಡ ಅವರ ವಿಚಾರದಲ್ಲಿ ಸ್ವಲ್ಪ ವಿನಾಯಿತಿಯಿಂದ ಇತ್ತು ಎನ್ನುವುದು ನೋಡುಗರ ಅಭಿಪ್ರಾಯ.
ಅದರಲ್ಲೂ ಅವರಿಗೆ ಆನೆ ಉಡುಗೊರೆ ಬಂದಿರುವುದರಿಂದ ಆನೆ ನಡೆದದ್ದೇ ದಾರಿ ಎನ್ನುವ ರೀತಿ ನಾಲ್ಕನೇ ವಾರದಲ್ಲಿ ಅಕ್ಷರಶಹ ಮತ್ತೇರಿದ ಮದಗಜದಂತೆ ಕಾಣಿಸಿಕೊಂಡಿದ್ದಾರೆ. ಈ ವಾರದಲ್ಲಿ ಸಂಗೀತ ಮತ್ತು ತನಿಷಾ ಅವರಿಗೆ ಏಕವಚನದಲ್ಲಿ ಗೌರವ ಕೊಡದೆ ಮಾತನಾಡಿದ್ದಾರೆ, ಕಾರ್ತಿಕ್ ಅವರಿಗೂ ಕೂಡ ಬಳೆಗಳ ರಾಜ ಎಂದು ಕರೆದಿದ್ದಾರೆ.
ಪ್ರತಾಪ್ ಅವರು ತಮಗೆ ಸಿಕ್ಕ ಅವಕಾಶದಲ್ಲಿ ಮೂರು ಮಹಿಳಾ ಕಂಟೆಸ್ಟೆಂಟ್ಗಳನ್ನು ಸೇವ್ ಮಾಡಿದ ಕಾರಣ ಗಂಡಸರನ್ನು ಕಳುಹಿಸಿ ವೀಕ್ ಇರುವ ಹೆಂಗಸರ ಜೊತೆ ಆಡುತ್ತಾನೆ ಎಂದು ಕಮೆಂಟ್ ಮಾಡಿದ್ದಾರೆ, ಮತ್ತು ಪ್ರತಾಪ್ ಅವರು ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿ ಸರಿ ಇಲ್ಲ ಎನ್ನುವ ಗಂಭೀರ ಆರೋಪ ಹೊರೆಸಿದ್ದಾರೆ, ಸಾಲದಕ್ಕೆ ಇದೇ ವಾರದ ಸಂದರ್ಭ ಒಂದರಲ್ಲಿ ನಾನು ಹೊರಗಡೆ ಹೋಗುವ ಸಮಯದಲ್ಲಿ ಒಬ್ಬನಿಗೆ ಸರಿಯಾಗಿ ಹೊಡೆದೇ ಹೋಗುತ್ತೇನೆ ಎನ್ನುವ ಸ್ಟೇಟ್ಮೆಂಟ್ ಕೂಡ ಮಾಡಿದ್ದಾರೆ.
ಮೊದಲ ವಾರದಿಂದಲೂ ಲೆಕ್ಕ ಹಾಕಿಕೊಂಡರೆ 4ನೇ ವಾರದವರೆಗೆ ಮುಂದುವರೆದಿರುವ ಅವರ ತಪ್ಪುಗಳ ಲೆಕ್ಕ ಉಳಿದ ಅಭ್ಯರ್ಥಿಗಳಿಗೆ ದೊಡ್ಡ ಪಟ್ಟಿಯನ್ನು ಹೊಂದಿದೆ ಆದರೂ ಕೂಡ ಇನ್ನೂ ಅವರಿಗೆ ಬಿಸಿ ಮುಟ್ಟಿಸದೆ ಇರುವುದು ಪ್ರೇಕ್ಷಕರಿಗೆ ಬೇಸರ ತಂದು ಈ ಬಾರಿ ನೇರವಾಗಿ ಬಿಗ್ ಬಾಸ್ ಗೆ ಕೇಳಿಕೊಳ್ಳುತ್ತಿದ್ದಾರೆ.
ನಟಿ ಹಾಗೂ ಗಾಯಕಿ ಐಶ್ವರ್ಯ ರಂಗರಾಜನ್ (Singer Ishwarya Rangarajan also request to this) ಅವರು ಕೂಡ ಸುದೀಪ್ ಸರ್ ಅವರಿಗೆ ನೇರವಾಗಿ ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ, ವಿನಯ್ ಗೌಡ ಅವರು ನಾಲ್ಕನೇ ವಾರದಲ್ಲಿ ಹೆಣ್ಣು ಮಕ್ಕಳ ವಿಚಾರದಲ್ಲಿ ಬಹಳ ತಪ್ಪಾಗಿ ನಡೆದುಕೊಂಡಿದ್ದಾರೆ ನೀವು ಇದರ ಬಗ್ಗೆ ಕ್ರಮ ತೆಗೆದುಕೊಳ್ಳಲೇಬೇಕು ಎಂದು ಕೇಳಿದ್ದಾರೆ.
ಹಾಗಾಗಿ ಪ್ರೇಕ್ಷಕರ ಅಭಿಪ್ರಾಯವೇ ಪ್ರಮುಖವಾಗಿರುವ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಖಂಡಿತವಾಗಿಯೂ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳಿಗೆ ಈ ವಾರದ ಪಂಚಾಯಿತಿ ಕಟ್ಟೆಯಲ್ಲಿ ಮನ್ನಣೆ ಸಿಗಲಿದೆ ಕೊನೆಗೂ ನೋಡುಗರ ಆಕ್ರೋಶಕ್ಕೆ ನ್ಯಾಯ ಸಿಗಲಿದೆ. ವಿನಯ್ ಗೌಡ ಅವರಂತೆ ನಮೃತ ಅವರು ಕೂಡ ಅವರ ಜೊತೆ ಸೇರಿ ಸಾಕಷ್ಟು ತಪ್ಪಾಗಿ ನಡೆದುಕೊಂಡಿದ್ದಾರೆ.
ಅವರಿಗೂ ಕ್ಲಾಸ್ ಇರಲಿದೆ ಎಂದು ನಿರೀಕ್ಷೆ ಮಾಡಲಾಗುತ್ತಿದೆ.
ಈಗಾಗಲೇ ಹರಿದಾಡುತ್ತಿರುವ ಪ್ರೋಮೋಗಳಲ್ಲಿ ಈ ಬಗ್ಗೆ ಸುದೀಪ್ ಸರ್ ಅವರು ಸರಿಯಾಗಿ ಬೆಂಡೆತ್ತಿರುವುದು ಕೂಡ ಗೊತ್ತಾಗುತ್ತದೆ. ಒಟ್ಟಿನಲ್ಲಿ ಬಹಳ ನಿರೀಕ್ಷೆಯ ಎಪಿಸೋಡ್ ಇದಾಗಿದ್ದು ಇದನ್ನು ನೋಡಲು ಇಂದು ಇಡೀ ಕರ್ನಾಟಕ ಕಾಯುತ್ತಿದೆ.