ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Power Star Punith Rajkumar) ಕನ್ನಡ ಚಿತ್ರರಂಗದಲ್ಲಿ ಶಾಶ್ವತವಾಗಿ ಉಳಿಯುವ ಹೆಸರು ಮತ್ತು ಕರ್ನಾಟಕದ ಜನರ ಮನಸ್ಸಲ್ಲಿ ಸೆಲೆಬ್ರಿಟಿ ಎನ್ನುವ ಕಾರಣಕ್ಕಾಗಿ ಅಲ್ಲದೇ ತಮ್ಮ ಸಮಾಜಮುಖಿ ಕಾರ್ಯಗಳಿಂದ ಮನೆ ಮಗ ಎನ್ನುವ ಸ್ಥಾನ ಗಿಟ್ಟಿಸಿಕೊಂಡಿರುವ ಅಪ್ಪು (Appu) ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಒಂದೊಂದು ಕಾರಣಕ್ಕೆ ಇಷ್ಟ.
ಹಾಗಾಗಿ ಇವರನ್ನು ಪುನೀತ್ ಎನ್ನುವ ಹೆಸರಿಗಿಂತ ಮುದ್ದಿನಿಂದ ಅಪ್ಪು ಎಂದೇ ಎಲ್ಲರೂ ಕರೆಯುವುದು ಅಪ್ಪು ಪಕ್ಕ ಫ್ಯಾಮಿಲಿ ಮ್ಯಾನ್ (Family Man), ತಂದೆ ತಾಯಿ ಇರುವವರೆಗೂ ಕೂಡ ಅತ್ಯಂತ ಪ್ರೀತಿಯ ಕಿರಿಯ ಮಗನಾಗಿದ್ದರು. ಅಣ್ಣ ಹಾಗೂ ಅಕ್ಕಂದಿರ ಪಾಲಿಗಂತೂ ಕೊನೆಯ ತಮ್ಮ ಎನ್ನುವುದಕ್ಕಿಂತ ಮಗನಿಗಿಂತ ಹೆಚ್ಚು ಹಾಗೆ ಕೈಹಿಡಿದ ಪತ್ನಿ ಅಶ್ವಿನಿ (Wife Ashwini) ಹಾಗೂ ಮಕ್ಕಳ ಪಾಲಿಗಂತೂ ಅಪ್ಪು ಅವರೇ ಸರ್ವಸ್ವ.
ಅಪ್ಪು ಹಾಕು ಅಶ್ವಿನಿ ಅವರದ್ದು ಲವ್ ಮ್ಯಾರೇಜ್ ಆಗಿತ್ತು, ಕಾಮನ್ ಫ್ರೆಂಡ್ ಆಗಿದ್ದ ಇವರು ಮನೆಯವರನ್ನು ಒಪ್ಪಿಸಿ ಡಿಸೆಂಬರ್ 1, 1999 ರಂದು ವಿವಾಹ ಬಂಧನಕ್ಕೆ ಒಳಪಟ್ಟರು. ಇವರಿಗೆ ಧೃತಿ ಹಾಗೂ ವಂದನಾ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಪುನೀತ್ ರಾಜಕುಮಾರ್ ಅವರು ಎಷ್ಟೇ ಬ್ಯುಸಿ ಇದ್ದರೂ ವಾರಗಟ್ಟಲೆ ಶೂಟಿಂಗ್ ಗೆ ಹೋದರು ಅಶ್ವಿನಿ ಅವರಿಗೆ ಹಾಗೂ ಮಕ್ಕಳಿಗೆ ಫೋನ್ ಮಾಡದೆ ಇರಲು ಆಗುತ್ತಿರಲಿಲ್ಲವಂತೆ.
ಮತ್ತು ವರ್ಷಪೂರ್ತಿ ಸಿನಿಮಾಗಳಲ್ಲಿ ಬಿಝಿ ಇದ್ದರು ಮಕ್ಕಳಿಗೆ ರಜೆ ಇದ್ದಾಗ ಕುಟುಂಬ ಸಮೇತವಾಗಿ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿರುವುದನ್ನು ಮರೆಯುತ್ತಿರಲಿಲ್ಲ, ಆಗ ಅವರು ಹಂಚಿಕೊಳ್ಳುತ್ತಿದ್ದ ಫೋಟೋಗಳನ್ನು ನಾವು ಕೂಡ ನೋಡಿದ್ದೇವೆ. ತಮ್ಮ ಕುಟುಂಬದ ಕಾರ್ಯಕ್ರಮವೇ ಇರಲಿ ಅಥವಾ ಅಭಿಮಾನಿಗಳು ಪ್ರೀತಿಯಿಂದ ಕರೆದಾಗಲೇ ಇರಲಿ ಯಾವುದೇ ಸಮಾರಂಭ ಇದ್ದರೂ ಅಶ್ವಿನಿ ಅವರನ್ನು ಜೊತೆಗೆ ಕಳೆದುಕೊಂಡು ಹೋಗುತ್ತಿದ್ದರು ಇದರಿಂದಲೇ ಗೊತ್ತಾಗುತ್ತದ ಅಪ್ಪು ಪಕ್ಕ ಫ್ಯಾಮಿಲಿ ಮ್ಯಾನ್ ಎಂದು.
ಹಿಂದೊಮ್ಮೆ ಪುನೀತ್ ಅವರು ನಡೆಸಿಕೊಡುತ್ತಿದ್ದ ರಿಯಾಲಿಟಿ ಶೋ ಒಂದರಲ್ಲಿ ಕಾರ್ಯಕ್ರಮ ಮುಗಿದು ಬೆಲ್ ಆದಾಗ ಕಾರ್ಯಕ್ರಮ ಮುಗಿಯಿತು ನಾನು ಮನೆಗೆ ಹೋಗಿ ನನ್ನ ಮಕ್ಕಳ ಜೊತೆ ಊಟ ಮಾಡಬೇಕು ಎಂದಿದ್ದ ವಿಡಿಯೋ ವೈರಲ್ ಆಗಿ ಅಪ್ಪುಗೆ ಕುಟುಂಬದ ಮೇಲೆ ಎಷ್ಟು ಪ್ರೀತಿ ಇದೆ ಎನ್ನುವುದನ್ನು ಸಾರಿತ್ತು.
ಆದರೆ ಈಗ ಅಪ್ಪು ಅಕಾಲಿಕ ಮ’ರ’ಣ’ಕ್ಕೆ ತುತ್ತಾಗಿ ಸುಖ ಸಂಸಾರದ ಸಂತೋಷವು ಕಳೆದು ಹೋಗಿದೆ. ಕಳೆದ ಎರಡು ವರ್ಷಗಳಿಂದ ಅಪ್ಪು ಕುಟುಂಬ ಅನುಭವಿಸುತ್ತಿರುವ ನೋ’ವಿನ ಆಳವನ್ನು ಅಳೆಯುವುದು ಅಸಾಧ್ಯ. ಇದರ ನಡುವೆ ಅಪ್ಪು ಹಾಗೂ ಅಶ್ವಿನಿ ಅವರ ಪ್ರೇಮ ಕಥೆಗಳ ಬಗ್ಗೆ ಅನೇಕ ವಿಚಾರಗಳು ಹೊರಬೀಳುತ್ತಿವೆ.
ಅಪ್ಪು ಅವರು ಅಶ್ವಿನಿ ಅವರನ್ನು ಬಹಳ ಪ್ರೀತಿಸುತ್ತಿದ್ದರು, ಗೌರವಿಸುತ್ತಿದ್ದರು ನನ್ನ ತಾಯಿಯಂತೆ ನನ್ನ ಹೆಂಡತಿ ಹಾಗೂ ಮಕ್ಕಳು ಬಹಳ ಇಂಡಿಪೆಂಡೆಂಟ್ ಆಗಿ ಧೈರ್ಯವಾಗಿ ಬದುಕಬೇಕು ಎಂದು ಆಸೆ ಪಡುತ್ತಿದ್ದರು. 2019ರ ಮಹಿಳಾ ದಿನಾಚರಣೆಗೆ 4 ಕೋಟಿ ಬೆಲೆಬಾಳುವ ಕಾರ್ ನ್ನು ಮಡದಿಕ್ಕೆ ಗಿಫ್ಟ್ ಕೊಟ್ಟಿದ್ದರು.
ಇದು ಮಾತ್ರ ಅಲ್ಲದೆ ಹೆಂಡತಿಗೆ ಪ್ರೀತಿಗಿಂತ ರೇಗಿಸಲು ಯಾವಾಗಲೂ ಹಾಡು ಕೂಡ ಹಾಡುತ್ತಿದ್ದರಂತೆ. ತಮ್ಮ ತಂದೆಯವರ ಹಾಡಿದ ಹಾಡಾದ ಎಂಥ ಸೌಂದರ್ಯ ಕಂಡೆ ಈ ಹಾಡನ್ನು ಅಶ್ವಿನಿ ಅವರನ್ನು ಆಗಾಗ ರೇಗಿಸಲು ಹೇಳುತ್ತಿದ್ದರಂತೆ, ಹಾಗೆ ಅಶ್ವಿನಿ ಅವರು ಕೋ’ಪಕೊಂಡರೆ ಅಂಜನೀಪುತ್ರ ಸಿನಿಮಾದ “ಬಾರಿ ಖುಷಿ ಮರ್ರೇ ನಂಗೆ ನನ್ನ ಹೆಂಡ್ತಿ ಕಂಡ್ರೆ” ಈ ಹಾಡನ್ನು ಹಾಡುತ್ತಿದ್ದರಂತೆ. ನೀವು ಅಪ್ಪು ಫ್ಯಾನ್ ಆಗಿದ್ದರೆ ಅವರ ಸಿನಿಮಾದ ಅಥವಾ ಅವರು ಹಾಡಿರುವ ಯಾವ ಹಾಡು ಇಷ್ಟ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.