ಕೆಲವೊಮ್ಮೆ ನಮಗೆ ಯಾವುದೇ ವಿಷಯದ ಮೇಲಿನ ನಮ್ಮ ಅತಿಯಾದ ಅಭಿಮಾನ ಸಂಕಷ್ಟಕ್ಕೆ ಸಿಲುಕಿಸುತ್ತದೆ. ಸಿನಿಮಾ ಸ್ಟಾರ್, ಕ್ರಿಕೆಟ್ ತಾರೆ ಅಥವಾ ರಾಜಕೀಯ ನಾಯಕರ ಮೇಲೆ ಆಗಲಿ ಒಂದೊಂದು ಬಾರಿ ನಾವು ತೋರಿದ ಅತಿಯಾದ ಅಭಿಮಾನವೇ ನಮಗೆ ಮುಳುವಾಗಿರುತ್ತದೆ.
ಇದು ಎಂತಹ ಪರಿಸ್ಥಿತಿಗೆ ನಮ್ಮನ್ನು ಕರೆದೊಯ್ಯುತ್ತದೆ ಎನ್ನುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತನಿಗೆ ಭಾರತ್ ಜೋಡೋ ಯಾತ್ರೆ ಮೇಲಿದ್ದ ಅತಿಯಾದ ಅಭಿಮಾನ ಜೈಲಿನಲ್ಲಿ ಇರುವಂತೆ ಮಾಡಿದ ಉದಾಹರಣೆಯನ್ನು ಈ ಅಂಕಣದಲ್ಲಿ ವಿವರಿಸುತ್ತಿದ್ದೇನೆ. ಕಳೆದ ವರ್ಷ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಾರತ್ ಜೋಡೋ ಯಾತ್ರೆ (Bharath jodo) ಕೈಗೊಂಡಿದ್ದರು.
ಈಗ ಅವರ ಕಾರ್ಯಕ್ರಮ ಯಶಸ್ವಿ ಕೂಡ ಆಗಿದೆ ಆದರೆ ಪರದೇಶದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಈ ಯಾತ್ರೆ ಕಾರಣ ಯಮಯಾತನೆ ಅನುಭವಿಸಬೇಕಾಗಿ ಬಂತು. ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ (Rahul Gandhinand Congress party fan) ಮೇಲೆ ಅಪಾರ ಅಭಿಮಾನ ಹೊಂದಿರುವ ಕಾಂಗ್ರೆಸ್ ಕಾರ್ಯಕರ್ತ ರಾಝಾ ಖಾದ್ರಿ (Raza Khadri) ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಮೆಕ್ಕಾ ಯಾತ್ರೆ (Mecca) ಕೈಗೊಂಡಿದ್ದರು.
ವಿಶೇಷ ಸ್ಥಳಗಳಿಗೆ ಹೋದಾಗ ನಮ್ಮ ಅಭಿಮಾನವನ್ನು ವ್ಯಕ್ತಪಡಿಸುವುದು ಮಾಮೂಲಿ ಅದೇ ರೀತಿ ಅವರು ಕಾಬಾದಲ್ಲಿ ಭಾರತ ಜೋಡೋ ಜಾತ್ರಾ ಎನ್ನುವ ಫಲಕವನ್ನು ಹಿಡಿದು ಫೋಟೋ ತೆಗೆಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಆದರೆ ಅನಂತರ ಆಗಿದ್ದು ಆ’ಘಂ’ತು’ಕ. ಆ ದಿನ ರಾತ್ರೋರಾತ್ರಿ ಅವರು ತಂಗಿದ್ದ ಹೊಟೇಲ್ ಪತ್ತೆ ಹಚ್ಚಿದ ಸೌದಿ ಪೊಲೀಸರು (Saudi Arabia) ಅವರನ್ನು ವಶಕ್ಕೆ ಪಡೆದಿದ್ದರು.
ಯಾಕೆಂದರೆ, ಇಸ್ಲಾಮಿಕ್ ಪವಿತ್ರ ಸ್ಥಳಗಳು ಸೇರಿದಂತೆ ಸೌದಿ ಅರೇಬಿಯಾದಲ್ಲಿ ಕೂಡ ಯಾವುದೇ ಧರ್ಮ, ದೇಶದ ಈ ರೀತಿಯ ಧ್ವಜ ಮತ್ತು ಫಲಕವನ್ನು ಪ್ರದರ್ಶಿಸುವುದಕ್ಕೆ ನಿ’ಷಿ’ದ್ಧ ಮತ್ತು ಶಿಕ್ಷಾರ್ಹ ಅಪರಾಧ (punishable affence). ಇದರ ಉಲ್ಲಂಘನೆ ಕಾರಣದಿಂದ ರಾಝಾ ಖಾದ್ರಿ ಅವರನ್ನು ಬಂಧಿಸಲಾಗಿತ್ತು.
ಭಾರತ್ ಜೋಡೋ ಯಾತ್ರೆಯ ಪೋಸ್ಟರ್ ಅನ್ನು ಪ್ರದರ್ಶನ ಮಾಡಿ, ಸೌದಿ ಅರೇಬಿಯಾದ ಕಾನೂನು ಉಲ್ಲಂಘನೆ ಮಾಡಿದ ಕಾರಣ ಅವರನ್ನು ಬಂಧಿಸಿ ಸುಮಾರು 2 ತಿಂಗಳ ಕಾಲ ವಿಚಾರಣೆ ನಡೆಸಿದ ಪೊಲೀಸರು 99 ಛಡಿ ಏಟನ್ನು ಶಿಕ್ಷೆಯಾಗಿ ಕೊಟ್ಟಿದ್ದಾರೆ. ರಾಝಾ ಖಾದ್ರಿ ಕಾಂಗ್ರೆಸ್ ರ್ಯಾಲಿಯಲ್ಲಿ ಭಾಗಿಯಾಗಿದ್ದ ವಿಡಿಯೋ ನೋಡಿ ರಾಜಕೀಯ ಏಜೆಂಟ್ ಎಂದು ಅನುಮಾನಿಸಿ ದಹಬಾನ್ ನ ಕಾರಾಗೃಹದಲ್ಲಿ ಎರಡು ತಿಂಗಳು ಇಡಲಾಗಿತ್ತಂತೆ.
ಕತ್ತಲೆ ಕೋಣೆಯಲ್ಲಿ ಬೆಳಗ್ಗೆ ಹಾಗೂ ಸಂಜೆ ಬ್ರೆಡ್ ತುಂಡು ತಿಂದು ಬದುಕಬೇಕಿತ್ತು ಎಂದು ತಾವು ಅನುಭವಿಸಿದ ನರಕಯಾತನೆಯನ ಬಗ್ಗೆ ರಾಝಾ ಖಾದ್ರಿ ಹೇಳಿಕೊಂಡಿದ್ದಾರೆ. ರಾಜಕೀಯ ಏಜೆಂಟ್ ಅಲ್ಲ ಎಂದು ಅವರಿಗೆ ಮನವರಿಕೆಯಾದ ಅಕ್ಟೋಬರ್ 3ರಂದು ವಿಮಾನ ನಿಲ್ದಾಣಕ್ಕೆ ತಂದುಬಿಟ್ಟರು ಎಂದು ಜೈಲಿನಿಂದ ಹೊರಗೆ ಬಂದ ಮೇಲೆ ತನ್ನ ಬಳಿ ಪಾಸ್‌ಪೋರ್ಟ್ ಇರಲಿಲ್ಲ.
ಅದನ್ನು ಪಡೆಯಲು ರಾಯಭಾರ ಕಚೇರಿಯಿಂದ ನೆರವನ್ನು ಯಾಚಿಸಿದಾಗ ರಾಯಭಾರಿ ಕಚೇರಿಯ ತನ್ವೀರ್ ಆಲಂ ಪಾಸ್‌ಪೋರ್ಟ್ ಕೆಲಸಕ್ಕಾಗಿ 1200 ರಿಯಾಲ್ ಭಾರತೀಯ ಮೌಲ್ಯದಲ್ಲಿ 26 ಸಾವಿರ ರೂಪಾಯಿ ಪಡೆದರು, ನಕನ್ನನ ಬಿಡುಗಡೆ ಮಾಡಿಸಲು ಕುಟುಂಬವು 28 ಲಕ್ಷ ರೂ. ಖರ್ಚು ಮಾಡಿತು ಎಂದವರು ಹೇಳಿದ್ದಾರೆ.