Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ವಿಷ್ಣು ಜೊತೆ ನಟಿ ಮಾಲಾಶ್ರೀ ಯಾಕೆ ನಟಿಸಲಿಲ್ಲ ಅನ್ನೋದಕ್ಕೆ ಕೊನೆಗೂ ಸಿಕ್ತು ಕಾರಣ.!

Posted on October 26, 2023 By Admin No Comments on ವಿಷ್ಣು ಜೊತೆ ನಟಿ ಮಾಲಾಶ್ರೀ ಯಾಕೆ ನಟಿಸಲಿಲ್ಲ ಅನ್ನೋದಕ್ಕೆ ಕೊನೆಗೂ ಸಿಕ್ತು ಕಾರಣ.!

 

ನಟಿ ಮಾಲಾಶ್ರೀ(Malashree) ಸ್ಯಾಂಡಲ್ವುಡ್ ನ ಲೇಡಿ ಸೂಪರ್ ಸ್ಟಾರ್ (Sandalwood lady super star). ಕನ್ನಡದಲ್ಲಿ ಒಬ್ಬ ಸ್ಟಾರ್ ಹೀರೋ ಸಮಾನವಾಗಿ ಸಂಭಾವನೆ ತೆಗೆದುಕೊಂಡು ಹಲವು ದಿನಗಳವರೆಗೆ ನಂಬರ್ 1 ಪಟ್ಟದಲ್ಲಿ ಮೆರೆದವರು. ನಂಜುಂಡಿ ಕಲ್ಯಾಣ ಸಿನಿಮಾದ (debut through Nanjundi Kalyana movie) ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಈ ನಟಿ.

ಶ್ರೀ ದುರ್ಗ ಇಂದ ಮಾಲಾಶ್ರೀ (name changed Shree Durga to Malashree) ಆಗಿ ಬದಲಾಗಿ ಹಲವು ವರ್ಷಗಳ ವರೆಗೆ ಕನ್ನಡ ಚಿತ್ರರಂಗವನ್ನು ಆಳಿದರು. ಒಂದು ಸಮಯದಲ್ಲಿ ನಟಿ ಮಾಲಾಶ್ರೀ ಅವರಿಗಾಗಿ ಸಿನಿಮಾಗಳು ತಯಾರಾಗುತ್ತಿದ್ದವು ಮತ್ತು ಇವರ ಅದೃಷ್ಟ ಹೇಗಿತ್ತು ಎಂದರೆ ಇವರ ಜೊತೆ ಹೊಸ ಹೊಸ ಹೀರೋಗಳನ್ನು ಹಾಕಿಕೊಂಡು ಸಿನಿಮಾ ತೆಗೆಯಲಾಗುತ್ತಿತ್ತು ನಂತರ ಆ ಹೀರೋಗಳು ಕೂಡ ಒಳ್ಳೆ ಹೆಸರು ಮಾಡುತ್ತಿದ್ದರು.

ಮಾಲಾಶ್ರೀ ಅವರ ಸಮಕಾಲೀನ ಎಲ್ಲಾ ಹೀರೋಗಳು ಕೂಡ ನಟಿ ಮಾಲಾಶ್ರೀ ಅವರೊಂದಿಗೆ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಅಭಿಜಿತ್, ದೇವರಾಜ್, ಅಂಬರೀಶ್, ರವಿಚಂದ್ರನ್, ಶಶಿಕುಮಾರ್ ಮುಂತಾದ ಎಲ್ಲಾ ಹೀರೋಗಳ ಜೊತೆಗೂ ನಟಿ ತೆರೆ ಹಂಚಿಕೊಂಡಿದ್ದಾರೆ.

ಆದರೆ ಅದೇ ಸಮಯದಲ್ಲಿ ವಿಷ್ಣು ದಾದಾ (Vishnuvardhan) ಕೂಡ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದರು ಮತ್ತು ಟಾಪ್ ಹೀರೋ ಆಗಿದ್ದರೂ ವಿಷ್ಣುವರ್ಧನ್ ಅವರ ಜೊತೆ ಒಂದು ಸಿನಿಮಾದಲ್ಲಿ ಕೂಡ ಮಾಲಾಶ್ರೀ ಅವರು ನಾಯಕನಟಿಯಾಗಿ ಕಾಣಿಸಿಕೊಳ್ಳಲಿಲ್ಲ. ಇದಕ್ಕೆ ಕಾರಣ ಏನಿತ್ತು ಎನ್ನುವುದು ಹಲವಾರು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದ್ದು ಈ ಬಗ್ಗೆ ಅನೇಕ ಗಾಳಿ ಸುದ್ದಿಗಳು ಕೂಡ ಹರಿದಾಡುತ್ತಿವೆ.

ಅದರ ಬಗ್ಗೆ ಸ್ಪಷ್ಟತೆಯನ್ನು ಈ ಅಂಕಣದಲ್ಲಿ ಕೊಡಲು ಇಚ್ಚಿಸುತ್ತೇವೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ (rumors about Vishnudada and Malashree movies). ನಟಿ ಮಾಲಾಶ್ರೀ ಅವರು ಒಂದು ಸಂದರ್ಶನದಲ್ಲಿ ನನ್ನ ಜೊತೆ ಕೋತಿ ನಟಿಸಿದರು ಕೂಡ ಫೇಮಸ್ ಆಗುತ್ತದೆ ಎಂದು ಹೇಳಿಕೆ ಕೊಟ್ಟಿದ್ದರು, ಅದು ವಿಷ್ಣುವರ್ಧನ್ ಅವರಿಗೆ ಬಹಳ ಬೇಸರ ತರಿಸಿತ್ತು.

ಹಾಗಾಗಿ ಅವರು ನಟಿಸಿಲ್ಲ ಮತ್ತು ಹೃದಯ ಹಾಡಿತು ಹಾಗೂ ಲಯನ್ ಜಗಪತಿರಾವ್ ಸಿನಿಮಾಗಳು ಒಟ್ಟಿಗೆ ತಯಾರಾಗುತ್ತಿತ್ತು, ವಿಷ್ಣುವರ್ಧನ್ ನಾಯಕರಾಗಿದ್ದರೆ ಮತ್ತೊಂದು ಸಿನಿಮಾದಲ್ಲಿ ಅಂಬರೀಶ್ ಹಾಗೂ ಮಾಲಾಶ್ರೀ ಅವರಿದ್ದರು ಎರಡು ಚಿತ್ರ ಒಟ್ಟಿಗೆ ತೆರೆ ಮೇಲೆ ಬಂದರೆ ನಿರ್ಮಾಪಕರಿಗೆ ನ’ಷ್ಟವಾಗುತ್ತದೆ ಎಂದು ಹೃದಯ ಹಾಡಿತು ಸಿನಿಮಾವನ್ನು ಕೆಲ ದಿನಗಳು ಬಿಟ್ಟು ರಿಲೀಸ್ ಮಾಡುವಂತೆ ಕುಚುಕು ಗೆಳೆಯನ ಬಳಿ ಮನವಿ ಮಾಡಿಕೊಂಡಿದ್ದರಂತೆ.

ಅದಕ್ಕೆ ಅಂಬಿ ಅವರು ಒಪ್ಪಿಕೊಂಡಿದ್ದರಂತೆ. ಆದರೆ ಕೊನೆಗೆ ಎರಡು ಕೂಡ ಒಂದೇ ದಿನದಂದು ಬಿಡುಗಡೆ ಆಯಿತು. ಈ ಬಗ್ಗೆ ಅಂಬರೀಷ್ ಯನ್ನು ವಿಷ್ಣುವರ್ಧನ್ ರವರು ಪ್ರಶ್ನಿಸಿದಾಗ ಇದರಲ್ಲಿ ನನ್ನ ತಪ್ಪಿಲ್ಲ, ಮಾಲಾಶ್ರೀ ಅವರೇ ಒತ್ತಡ ಹಾಕಿ ಇದೇ ದಿನ ಸಿನಿಮಾ ರಿಲೀಸ್ ಮಾಡಿಸಿದರು ಎಂದು ಹೇಳಿದ್ದರಂತೆ. ಅಂದೇ ವಿಷ್ಣು ಇನ್ನು ಮುಂದೆ ಮಾಲಾಶ್ರೀ ಅವರ ಜೊತೆ ನಟಿಸಲೇಬಾರದು ಎಂದು ಡಿಸೈಡ್ ಮಾಡಿಬಿಟ್ಟರಂತೆ ಎಂದು ಸುದ್ದಿಯಾಗಿದೆ.

ಆದರೆ ಅಸಲಿ ಸತ್ಯ ಏನೆಂದರೆ ವಿಷ್ಣುವರ್ಧನ್ ಅವರು ಹೆಣ್ಣು ಮಕ್ಕಳ ಬಗ್ಗೆ ಬಹಳ ಗೌರವ ಹೊಂದಿದ್ದರು, ಜೊತೆಗೆ ಯಾರನ್ನು ದ್ವೇಷಿಸುವ ಮನಸ್ಥಿತಿಯವರಲ್ಲ ಹಾಗಾಗಿ ಇದೆಲ್ಲ ಸುಳ್ಳು ಎಂದು ನಂಬಬಹುದು ಎಂದು ಒಂದು ಸಂದರ್ಶನದಲ್ಲಿ ಮಾಲಾಶ್ರೀ ಅವರೇ ಇದಕ್ಕೆ ಸ್ಪಷ್ಟತೆ ಕೊಟ್ಟಿದ್ದಾರೆ.

ನಾನು ಹಾಗೂ ವಿಷ್ಣುವರ್ಧನ್ ಅವರು ಪರಸ್ಪರ ಗೌರವವಾಗಿ ನಡೆದುಕೊಳ್ಳುತ್ತಿದ್ದೆವು ನಾವಿಬ್ಬರು ಒಟ್ಟಿಗೆ ನಟಿಸಬೇಕು ಎಂದು ಇಬ್ಬರಿಗೂ ಆಸೆ ಇತ್ತು ಆದರೆ ಅದಕ್ಕೆ ಅವಕಾಶ ಸಿಗಲೇ ಇಲ್ಲ ಎಂದು ಹೇಳಿದ್ದಾರೆ. ಮತ್ತೊಂದು ಮೂಲದ ಮಾಹಿತಿಯ ಪ್ರಕಾರ ಇವರಿಬ್ಬರು ಒಟ್ಟಿಗೆ ನಟಿಸಬೇಕು ಎಂದು ಸಿನಿಮಾ ಕೂಡ ಸಿದ್ದವಾಗಿತಂತೆ.

ಆದರೆ ಆ ಸಮಯದಲ್ಲಿ ನಟಿ ಮಾಲಾಶ್ರಿ ಹಾಗೂ ಸುನಿಲ್ ರವರು ಒಟ್ಟಿಗೆ ಹೋಗುತ್ತಿದ್ದ ಕಾರು ಆಕ್ಸಿಡೆಂಟ್ ಆಗಿ ಸುನಿಲ್ ಅವರು ಮೃ’ತ ಪಟ್ಟ ಕಾರಣ ಹಲವು ವರ್ಷಗಳವರೆಗೆ ಮಾಲಾಶ್ರೀ ಅವರು ಸಿನಿಮಾ ರಂಗದಿಂದ ದೂರ ಉಳಿದಿದ್ದರು. ಆ ಸಮಯದಲ್ಲಿ ಅವರು ನಟಿಸಬೇಕಿದ್ದ ಅನೇಕ ಸಿನಿಮಾಗಳು ಅರ್ಧಕ್ಕೆ ನಿಂತು ಹೋದವು ಇದರಲ್ಲಿ ವಿಷ್ಣು ಹಾಗೂ ಮಾಲಾಶ್ರೀ ಅವರು ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಕೂಡ ಸೇರಿತು ಎಂದು ಎನ್ನಲಾಗುತ್ತಿದೆ.

https://youtu.be/w-R_j5bPmIE?si=z0rjS1pQIRycdb6t

News

Post navigation

Previous Post: ಅಪ್ಪು ಹೆಸರಲ್ಲಿ ಐ ಬ್ಯಾಂಕ್ ತೆರೆಯಲು ನಿರ್ಧಾರ ರಾಜ್ಯ ಸರ್ಕಾರದಿಂದಲೂ ಅಸ್ತು..!
Next Post: ಸಾವಿರಾರು ಕೋಟಿ ಆಸ್ತಿ ದಾನ ಮಾಡಿ 6,000ಕಿ.ಮೀ ಕಾಲ್ನಡಿಗೆಯಲ್ಲಿ ಭಾರತಕ್ಕೆ ಬಂದು ಕ್ರಿಶ್ಚಿಯನ್ ಧರ್ಮ ತ್ಯಜಿಸಿ ಹಿಂದೂ ಧರ್ಮ ಸ್ವೀಕರಿಸಿದ ಸ್ವಿಜರ್ಲ್ಯಾಂಡ್ ಯುವಕ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme