ನಮ್ಮ ಭಾರತದ ನೆಲೆಯಲ್ಲಿ ಹುಟ್ಟುವುದಕ್ಕೆ ಸಾವಿರಾರು ವರ್ಷಗಳ ಪುಣ್ಯ ಬೇಕು ಎನ್ನುವುದು ಅಕ್ಷರಶಃ ಸತ್ಯ. ಪ್ರಪಂಚದ ಇತ್ಯಾದಿ ದೇಶಗಳು ಐಷಾರಾಮಿ ಜೀವನದ ಕಲ್ಪನೆಯನ್ನು ಹೊಂದಿರಬಹುದು ಆದರೆ ಭಾರತ ದೇಶದಲ್ಲಿ ಏನೂ ಇಲ್ಲದಿದ್ದರೂ ಸಂತೋಷವಾಗಿರುವ ನೆಮ್ಮದಿಯ ಬದುಕು ಕಳೆಯುವ ಮನಸ್ಥಿತಿಯನ್ನು ಬರುತ್ತದೆ ಈ ಮಣ್ಣಿಗೆ ಇಂತಹ ಶಕ್ತಿ ಇರುವುದರಿದಲೇ ಇದನ್ನು ಆಧ್ಯಾತ್ಮಿಕ ನೆಲೆ ಎನ್ನುತ್ತಾರೆ.
ಭಾರತದ ಸಂಸ್ಕೃತಿಯು ಎಷ್ಟು ಸಂಪತ್ಭರಿತವಾಗಿದ್ದು ಎಂದರೆ ಇಲ್ಲಿನ ಪ್ರತಿಯೊಬ್ಬರೂ ಇದು ಕೂಡ ತನ್ನ ಸನಾತನ ಆಚರಣೆಗಳ ಮೂಲಕ ಮನಸ್ಸಿನಲ್ಲಿಯೇ ಶ್ರೀಮಂತನಾಗಿದ್ದಾನೆ. ಈ ಸುಖವನ್ನು ಕಂಡ ವಿದೇಶಿಗರು ಕೂಡ ಇದರ ಮೂಲ ಆಧ್ಯಾತ್ಮ, ಸಂಸ್ಕೃತಿ, ಯೋಗ, ಧ್ಯಾನ, ಧರ್ಮ ಎನ್ನುವುದನ್ನು ಅರಿತು ತಾವು ಕೂಡ ಹಿಂದೂ ಧರ್ಮ ಅನುಸರಿಸುತ್ತಿದ್ದಾರೆ.
ಈ ಪಟ್ಟಿಗೆ ಸ್ವಿಟ್ಜರ್ಲ್ಯಾಂಡ್ ದೇಶದ ಅಗರ್ಭ ಶ್ರೀಮಂತ ಯುವಕನೊಬ್ಬ ಸೇರಿದ್ದು ಇತರರಿಗಿಂತ ಬಹಳ ಭಿನ್ನ ಎನಿಸಿಕೊಳ್ಳುತ್ತಾನೆ. ಕೈನಲ್ಲಿ ಹಿಂದಿ ಪುಸ್ತಕ ಹಿಡಿದು ಓಡಾಡುತ್ತಿರುವ, ಪುಸ್ತಕದಿಂದಲೇ ಭಾಷೆ ಕಲಿತು ನಿರರ್ಗಳವಾಗಿ ಹಿಂದಿ ಮಾತನಾಡುವ ಇವರು ಗಂಗಾ ಆರತಿಯಲ್ಲಿ ತೊಡಗಿಕೊಂಡಿರುವ, ಕೇಸರಿ ವಸ್ತ್ರವನ್ನು ಧರಿಸಿ ಹಣೆಯಲ್ಲಿ ಕುಂಕುಮ ಇಟ್ಟು ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಿರುವುದರಿಂದ ಬೆನ್ ಬಾಬಾ ಎಂದು ಕರೆಸಿಕೊಳ್ಳುತ್ತಿದ್ದಾರೆ.
ಶ್ರೀಮಂತ ದೇಶ ಸ್ವಿಜರ್ಲ್ಯಾಂಡ್ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದ ಇವರು ಭಾರತದ ಕಡೆ ಆಕರ್ಷಿತರಾಗಿ ಇಲ್ಲಿನ ಆಧ್ಯಾತ್ಮವನ್ನು ಅನುಸರಿಸುತ್ತಾ ಅಪಾರಾನಂದವನ್ನು ಪಡೆದು ಇದರ ಬಗ್ಗೆ ಪ್ರಚಾರದಲ್ಲೂ ಕೂಡ ತೊಡಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರ ವಿಡಿಯೋ ವೈರಲ್ ಆಗುತ್ತಲೇ ಅನೇಕರು ಇವರು ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ ಆ ಕುರಿತ ವಿವರ ಇಲ್ಲಿದೆ ನೋಡಿ.
33 ವರ್ಷದ ಬೆನ್ ವೆಬ್ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದರು, ತಮ್ಮ ಹೆಸರಿನಲ್ಲಿ ಸಾವಿರಾರು ಕೋಟಿ ಆಸ್ತಿಯನ್ನು ಹೊಂದಿದ್ದರು. ಅದು ಅವರಿಗೆ ಭೌತಿಕ ಸುಖಗಳನ್ನು ನೀಡುತ್ತಿತ್ತಾದರು ವಾಸ್ತವಿಕವಾಗಿ ಅವರು ನೆಮ್ಮದಿಯಾಗಿ ಸಂತೋಷವಾಗಿ ಇರಲಿಲ್ಲ, ಬಳಿಕ ಅವರಿಗೆ ತಾವು ಬಯಸುತ್ತಿರುವುದು ಭಾರತದ ಯೋಗ, ಧ್ಯಾನ ಮತ್ತು ಆಧ್ಯಾತ್ಮದಿಂದ ಮಾತ್ರ ಸಿಗುತ್ತದೆ ಎನ್ನುವುದರ ಅರಿವಾಯಿತು.
ಬಳಿಕ ಇದನ್ನೇ ಅರಸಿ ಭಾರತಕ್ಕೆ ಬಂದ ಇವರು ಭಾರತಕ್ಕೆ ಬರಲು ಅನುಸರಿಸಿದ ಮಾರ್ಗ ಇವರನ್ನು ಇನ್ನಷ್ಟು ಕೊಂಡಾಡುವಂತೆ ಮಾಡುತ್ತಿದೆ. ಯಾಕೆಂದರೆ ಭಾರತಕ್ಕೆ ಬರಬೇಕು ಎನ್ನುವುದನ್ನು ತೀರ್ಮಾನಿಸಿದ ಆ ಕ್ಷಣವೇ ಇವರು ಅದನ್ನು ತಪಸ್ಸಿನಂತೆ ಸ್ವೀಕರಿಸಿ ಕಾಲ್ನಡಿಗೆಯಲ್ಲಿ ಭಾರತಕ್ಕೆ ಬಂದಿದ್ದಾರೆ.
ತನ್ನ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ದಾನ ಮಾಡಿ ಸತತ 4 ವರ್ಷಗಳವರೆಗೆ ಸುಮಾರು 16 ಸಾವಿರ ಕಿಲೋಮೀಟರ್ ದೂರವನ್ನು ಕಾಲ್ನಡಿಗೆ ಕ್ರಮಿಸಿ ಟರ್ಕಿ, ಇರಾನ್, ಅರ್ಮೇನಿಯಾ, ಜಾರ್ಜಿಯಾ, ರಷ್ಯಾ, ಕಿರ್ಗಿಸ್ತಾನ್, ಉಜ್ಬೇಕಿಸ್ತಾನ್, ಚೀನಾ ಮತ್ತು ಪಾಕಿಸ್ತಾನ ಸೇರಿದಂತೆ 18 ದೇಶಗಳ ಗಡಿಗಳನ್ನು ದಾಟಿದ ಬಳಿಕ ಭಾರತ ತಲುಪಿದ್ದಾರೆ.
ಭಾರತಕ್ಕೆ ಬಂದಿರುವ ಇವರು ಇಲ್ಲಿ ಒಬ್ಬ ಯೋಗಿಯಂತೆ ತಮ್ಮ ಸಾಧನೆಯಲ್ಲಿ ತೊಡಗಿದ್ದಾರೆ. ಪತಂಜಲಿ ಸಂಸ್ಥೆಯಿಂದ ಯೋಗ ಕಲಿಸುತ್ತಿರುವ ಇವರು ಜೀವನ ನಿರ್ವಹಣೆಗೆ ಭಿಕ್ಷಾಟನೆ ಮಾಡುತ್ತಾರೆ. ಭಾರತದ ಪ್ರಸಿದ್ದ ಪುಣ್ಯಕ್ಷೇತ್ರಗಳಲ್ಲಿ ಸಮಯ ಕಳೆದು ಇಲ್ಲಿನ ವಿಚಾರಗಳ ಬಗ್ಗೆ ಅರಿತು ಕಲಿತು ತನ್ನ ದೇಶಕ್ಕೆ ಹಿಂತಿರುಗಿದ ಮೇಲೆ ತಮ್ಮವರಿಗೂ ಇದನ್ನು ಕಲಿಸುವ ಮಹಾದಾಸೆಯನ್ನು ಹೊಂದಿದ್ದಾರೆ. ನಮ್ಮವರೇ ಪಾಶ್ಚಿಮಾತ್ಯ ಸಂಸ್ಕೃತಿಯ ಕಡೆ ವಾಲಿ ಹಾಳಾಗುತ್ತಿರುವ ಈ ಕಾಲದಲ್ಲಿ ಈ ವಿದೇಶಿ ಬಾಬಾ ಬಹಳ ಗ್ರೇಟ್ ಎನಿಸಿದೇ ಇರಲಾರರು.