ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ಉತ್ತರ ಕಾಂಡದಲ್ಲಿ ಒಂದು ಕೆಜಿ ಟೊಮೆಟೊ ಹಣ್ಣಿನ ಬೆಲೆ 250 ರ ಗಡಿ ದಾಟಿದ್ದು ಬೆಲೆ ಏರಿಕೆಯಿಂದಾಗಿ ಗ್ರಾಹಕರು ಕಂಗಾಲಾಗಿದ್ದಾರೆ, ಉತ್ತರಖಂಡದ ಗಂಗೋತ್ರಿ ಮತ್ತು ಯಮನೋತ್ರಿಯಯಲ್ಲಿ ಒಂದು ಕೆಜಿ ಟೊಮ್ಯಾಟೋ ಹಣ್ಣಿನ ಬೆಲೆ 200 ರಿಂದ 250 ರೂ ಗೆ ಮಾರಾಟ ಮಾಡಲಾಗುತ್ತಿದೆ ಇದರಿಂದ ಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ ಟೊಮೇಟೊ ಹಣ್ಣಿನ ಬೆಲೆ ಏರಿಕೆ ಆಗಲು ಕಾರಣ ಏನೆಂದು ನೋಡುವುದಾದರೆ
ಮಳೆಯ ಪರಿಣಾಮ ಟೊಮೆಟೊ ಬೆಳೆಗಳು ನಾಶವಾಗಿದೆ ಆದ್ದರಿಂದ ಬೇಡಿಕೆ ಇರುವಷ್ಟು ಪೂರೈಕೆ ಆಗುತ್ತಿಲ್ಲ ಪರಿಣಾಮ ಟೊಮೆಟೊ ಬೆಲೆಯಲ್ಲಿ ಏರಿಕೆಯಾಗುತ್ತಿದೆ ಮೊದಲೇ ಬೆಲೆ ಏರಿಕೆಯಿಂದ ತತ್ತರಿಸುವರುವ ಗ್ರಾಹಕರು ದಿನದಿಂದ ದಿನಕ್ಕೆ ಟೊಮೆಟೊ ಬೆಲೆ ಏರಿಕೆಯಿಂದ ಗ್ರಾಹಕರಿಗೆ ತಲೆ ಬಿಸಿಯಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ತರಕಾರಿ ಹಣ್ಣು ಹಾಗೆಯೇ ದಿನಸಿ ಸಾಮಗ್ರಿಗಳ ಬೆಲೆಯೂ ಹೆಚ್ಚಳವಾಗಿದ್ದು ಇದೀಗ ಟೊಮ್ಯಾಟೊ ಹಣ್ಣಿನ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ.
ತರಕಾರಿಗಳ ಇಳುವರಿ ಕುಂಠಿತವಾಗಿರುವ ಕಾರಣದಿಂದಾಗಿ ಬೆಲೆ ಹೆಚ್ಚಾಗುತ್ತಿದೆ ಗ್ರಾಹಕರಿಗೆ ಇದು ತಲೆಬಿಸಿ ಉಂಟು ಮಾಡುತ್ತಿದೆ ಅದರಲ್ಲಿ ಅಡುಗೆಯಲ್ಲಿ ಟೊಮ್ಯಾಟೊ ಅನಿವಾರ್ಯ ಟೊಮ್ಯಾಟೊ ಹಣ್ಣು ಇಲ್ಲದೆ ಯಾವುದೇ ಅಡಿಗೆ ಪೂರ್ಣವಾಗುವುದಿಲ್ಲ ಬೆಲೆ ಹೆಚ್ಚಳದಿಂದ ಜನರು ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಇತರ ರಾಷ್ಟ್ರಗಳಿಂದಲೂ ಕೂಡ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಟೊಮೊಟೊ ಹಣ್ಣಿನ ಬೆಲೆ 200ರ ಗಡಿಯನ್ನು ದಾಟಿದೆ. ಅಡಿಗೆಯಲ್ಲಿ ಅತಿ ಹೆಚ್ಚು ಬಳಸುವಂತಹ ತರಕಾರಿ ಎಂದರೆ ಟೊಮ್ಯಾಟೊ. ಟೊಮ್ಯಾಟೊ ಹಾಕದೆ ಯಾವುದೇ ಅಡುಗೆ ಕೂಡ ಪೂರ್ಣವಾಗುವುದಿಲ್ಲ ಅಷ್ಟು ರುಚಿಯೂ ಸಹ ಬರುವುದಿಲ್ಲ ಆದ ಕಾರಣದಿಂದಾಗಿ ಟೊಮ್ಯಾಟೊ ಬಳಕೆ ಅಡಿಗೆಯಲ್ಲಿ ಅತ್ಯವಶ್ಯಕ ಆದರೆ ಬೆಲೆ ಗಗನಕ್ಕೇರಿರುವ ಕಾರಣದಿಂದಾಗಿ 80 ಇದ್ದ ಟೊಮ್ಯಾಟೊ 100ಕ್ಕೆ ಬಂದಿದೆ. ದಿನದಿಂದ ದಿನಕ್ಕೆ ಇನ್ನೂ ಹೆಚ್ಚಾಗುತ್ತದೆ ಎನ್ನುವಂತಹ ಮಾಹಿತಿಯನ್ನು ವ್ಯಾಪಾರಿಗಳು ತಿಳಿಸುತ್ತಿದ್ದಾರೆ.
15 ದಿನದ ಹಿಂದೆ 25 ರಿಂದ 30 ರೂಪಾಯಿಗೆ ಮಾರಾಟವಾಗುತ್ತಿದ್ದಂತಹ ಟೊಮ್ಯಾಟೊ ಹಣ್ಣು ಇದೀಗ ದುಪ್ಪಟ್ಟು ಆಗಿದ್ದು ಬಡವ ಮತ್ತು ಮಧ್ಯಮ ವರ್ಗದ ಜನರ ಜೆಬಿಗೆ ಕತ್ತರಿ ಬೀಳುವಂತಾಗಿದೆ. ಎರಡು ಕೆಜಿ ಟೊಮೆಟೊ ಕೊಳ್ಳುತ್ತಿದ್ದಂತಹ ಜನರು ಇದೀಗ ಅರ್ಧ ಕೆಜಿ ಕಾಲು ಕೆಜಿ ಸಾಕು ಎನ್ನುವಂತಹ ಪರಿಸ್ಥಿತಿಗೆ ಬಂದಿದ್ದಾರೆ. ಅಷ್ಟೇ ಅಲ್ಲದೆ ಮುಸ್ಲಿಮರ ಬಕ್ರಿದ್ ಬಂದಿರುವುದರ ಕಾರಣದಿಂದಾಗಿಯೂ ಬೆಲೆ ಹೆಚ್ಚಾಗಿದೆ ಟೊಮ್ಯಾಟೊ ಇಲ್ಲದೆ ಅವರ ಅಡಿಗೆ ಪೂರ್ಣವಾಗುವುದಿಲ್ಲ ಆದ ಕಾರಣದಿಂದಾಗಿ ಬೆಲೆ ಇನ್ನೂ ಹೆಚ್ಚಾಗಿದೆ.
ಮಳೆಗಾಲ ಆಗಿರುವುದರಿಂದ ಬೆಳೆಗಳು ಅಲ್ಪ ಮಟ್ಟದಲ್ಲಿ ನಾಶವಾಗುತ್ತದೆ ಯಾವುದೇ ಮದುವೆ ಸಮಾರಂಭಗಳು ಜಾಸ್ತಿ ಇಲ್ಲದೆ ಇದ್ದರೂ ಸಹ ಟೊಮ್ಯಾಟೊ ಬೆಲೆಯಲ್ಲಿ ಬಹಳಷ್ಟು ಏರಿಕೆ ಕಂಡು ಬಂದಿದೆ. ಕೇವಲ ಟೊಮ್ಯಾಟೊ ದರ ಮಾತ್ರವಲ್ಲದೆ ಎಲ್ಲ ತರಕಾರಿ ಧಾನ್ಯಗಳ ದರಗಳು ಕೂಡ ಏರಿಕೆಯಾಗಿದೆ ಇನ್ನೊಂದೆಡೆ ವಿದ್ಯುತ್ ದರವು ಸಹ ಹೆಚ್ಚಳವಾಗಿರುವುದು ಜನರಿಗೆ ತಲೆಬಿಸಿ ಉಂಟು ಮಾಡಿದೆ ಮದುವೆ ಹಬ್ಬಗಳ ಸಂದರ್ಭಗಳಲ್ಲಿ ಬೆಲೆಗಳು ಏರಿಕೆ ಇರುತ್ತದೆ ಆದರೆ ಈಗ ಯಾವುದೇ ಸಮಾರಂಭಗಳು ಹಬ್ಬಗಳು ಇಲ್ಲದಿದ್ದರೂ ಸಹ ಬೆಲೆ ಏರಿಕೆ ಆಗಿರುವುದು ಜನರಿಗೆ ನುಂಗಲಾರದ ತುತ್ತಾಗಿದೆ.
ಹೋಟೆಲ್ ಉದ್ಯಮಿಗಳಿಗೆ ಇದು ನಷ್ಟ ಉಂಟುಮಾಡುತ್ತದೆ ಜನರ ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಇಲ್ಲದ ಕಾರಣದಿಂದಾಗಿ ನಾವು ಬೆಲೆ ಏರಿಕೆ ಮಾಡಿದರೆ ಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತದೆ ಆದ್ದರಿಂದ ನಾವು ಬೆಲೆ ಏರಿಕೆ ಮಾಡಲಾಗುವುದಿಲ್ಲ ಎಂದು ಹೋಟೆಲ್ ಉದ್ಯಮಿಗಳು ತಿಳಿಸುತ್ತಿದ್ದಾರೆ. ಏಕಾಏಕಿ ಬೆಲೆಗಳು ಹೆಚ್ಚಾಗಿರುವ ಕಾರಣದಿಂದಾಗಿ ಕೂಡಲೇ ಹೋಟೆಲ್ ಉದ್ಯಮಸ್ಥರು ತಿಂಡಿಗಳ ಬೆಲೆಯನ್ನು ಏರಿಕೆ ಮಾಡಲು ಆಗುವುದಿಲ್ಲ ಏರಿಕೆ ಮಾಡಿದರು ಕೊಳ್ಳುವವರ ಸಂಖ್ಯೆ ಕಡಿಮೆ ಆಗಿ ಇದರಿಂದ ಅವರಿಗೆ ನಷ್ಟ ಉಂಟಾಗುತ್ತದೆ.
ಟೊಮ್ಯಾಟೋ ಬೆಳೆದಿರುವಂತಹ ಕೃಷಿಕರಿಗೆ ಇದು ಅಲ್ಪ ಮಟ್ಟದ ಲಾಭವನ್ನು ತಂದುಕೊಡಬಹುದು ಕೃಷಿಕರಿಗೂ ಕೂಡ ಮಳೆಗಾಲದಿಂದಾಗಿ ಬೆಳೆ ನಾಶ ಉಂಟಾಗುತ್ತದೆ ಹಾಗೆ ಇಳುವರಿ ಕಡಿಮೆ ಇರುವ ಕಾರಣದಿಂದಾಗಿ ಟೊಮ್ಯಾಟೊ ಹಣ್ಣಿನ ವಹಿವಾಟು ಅಷ್ಟೊಂದು ಸುಗಮವಾಗಿ ನಡೆಯುತ್ತಿಲ್ಲ ಆದ ಕಾರಣ ದುಬಾರಿಯಾಗಿದೆ. ಇಷ್ಟು ದುಬಾರಿ ಹಣವನ್ನು ಕೊಟ್ಟು ಟೊಮೊಟೊ ಹಣ್ಣನ್ನು ಕೊಂಡುಕೊಂಡು ಗ್ರಾಹಕರು ಜೀವನ ನಡೆಸುವುದು ತುಂಬಾ ಕಷ್ಟಕರ ಎನಿಸುತ್ತಿದೆ ಒಂದೊಂದು ಕಡೆಯಲ್ಲಿ ಒಂದೊಂದು ರೀತಿಯಾದಂತಹ ಬೆಲೆಗಳು ಟೊಮೇಟೊ ಹಣ್ಣಿಗೆ ಮಾರಾಟವಾಗುತ್ತಿದೆ ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ. ಈ ಮಾಹಿತಿ ಇಷ್ಟವಾದಲ್ಲಿ ತಪ್ಪದೇ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.