Thursday, September 28, 2023
Home Job News ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕ ಆರಂಭ ಪಿಯುಸಿ ಪಾಸಾಗಿದ್ರೆ...

ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕ ಆರಂಭ ಪಿಯುಸಿ ಪಾಸಾಗಿದ್ರೆ ಅರ್ಜಿ ಸಲ್ಲಿಸಬಹುದು ವೇತನ ₹62,600/-

 

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಬೆಂಗಳೂರು, ಇಲ್ಲಿ ಖಾಲಿ ಇರುವ ಮಿಕ್ಕುಳಿದ ವೃಂದ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ (ಸ್ಥಳೀಯ) ವೃಂದದ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.‌ ಇಂದಿನ ಲೇಖನದಲ್ಲಿ ಈ ಹುದ್ದೆಗಳ ಬಗ್ಗೆ ಇಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ…

ಈ ಸದರಿ ಸಂಸ್ಥೆಯ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹತೆ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕು.

ಹುದ್ದೆಗಳ ವಿವರ
* ಕಲ್ಯಾಣ ಅಧಿಕಾರಿ : 12
* ಕ್ಷೇತ್ರ ನಿರೀಕ್ಷಕರು : 60
* ಪ್ರಥಮ ದರ್ಜೆ ಸಹಾಯಕರು: 12
* ಆಪ್ತ ಸಹಾಯಕರು : 02
* ದ್ವಿತೀಯ ದರ್ಜೆ ಸಹಾಯಕರು: 100.
* ಒಟ್ಟು ಹುದ್ದೆಗಳು : 186

ಈ ಮೇಲಿನ ಎಲ್ಲಾ ಹುದ್ದೆಗಳು ಸಹ ಗ್ರೂಪ್ ಸಿ ಹುದ್ದೆಗಳಾಗಿವೆ.

ಹುದ್ದೆವಾರು ವೇತನ ಶ್ರೇಣಿ ವಿವರ
* ಕಲ್ಯಾಣ ಅಧಿಕಾರಿ : 37,900-70,850 ರೂ.
* ಕ್ಷೇತ್ರ ನಿರೀಕ್ಷಕರು : 33,450-62,600 ರೂ.
* ಪ್ರಥಮ ದರ್ಜೆ ಸಹಾಯಕರು: 27,650-52,650 ರೂ.
* ಆಪ್ತ ಸಹಾಯಕರು : 27,650-52,650 ರೂ.
* ದ್ವಿತೀಯ ದರ್ಜೆ ಸಹಾಯಕರು: 21,400-42000 ರೂ.

ಯಾವ ಹುದ್ದೆಗೆ ಏನು ವಿದ್ಯಾರ್ಹತೆ ಇರಬೇಕು ?

* ಕಲ್ಯಾಣ ಅಧಿಕಾರಿ: ಪದವಿ ಪಾಸ್.
* ಕ್ಷೇತ್ರ ನಿರೀಕ್ಷಕರು : ಪದವಿ ಪಾಸ್.
* ಪ್ರಥಮ ದರ್ಜೆ ಸಹಾಯಕರು: ಪದವಿ ಪಾಸ್.
* ಆಪ್ತ ಸಹಾಯಕರು: ಪದವಿ ಜತೆಗೆ, ಡಿಪ್ಲೊಮ ಇನ್ ಕಂಪ್ಯೂಟರ್ ಸೈನ್ಸ್‌ ಪಾಸ್‌ ಹಾಗೂ ಟೈಪಿಂಗ್ ಜ್ಞಾನ ಇರಬೇಕು.
* ದ್ವಿತೀಯ ದರ್ಜೆ ಸಹಾಯಕರು: ದ್ವಿತೀಯ ಪಿಯುಸಿ ಪಾಸ್‌ ಅಥವಾ ತತ್ಸಮಾನ ಅರ್ಹತೆಗಳು.

ವಯಸ್ಸಿನ ಅರ್ಹತೆ

* ಕನಿಷ್ಠ 18 ವರ್ಷ ಆಗಿರಬೇಕು.
* ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 35 ವರ್ಷ ಗರಿಷ್ಠ.
* ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷ ಗರಿಷ್ಠ.
* ಎಸ್‌ಸಿ/ ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷಗಳ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಶುಲ್ಕ ವಿವರ

* ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ- 1000 ರೂ.
* ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ- 750 ರೂ.
* ಎಸ್‌ಸಿ/ ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ- 250 ರೂ.

ಆಯ್ಕೆ ವಿಧಾನ ಹೇಗೆ?

ಈ ಮೇಲಿನ ಪ್ರತಿ ಹುದ್ದೆಗೆ ಎರಡು ಪತ್ರಿಕೆಗಳ ಪರೀಕ್ಷೆ ನಡೆಸಲಿದ್ದು, ಒಂದು ಸಾಮಾನ್ಯ ಪತ್ರಿಕೆ ಇರುತ್ತದೆ. ಮತ್ತೊಂದು ಹುದ್ದೆಗೆ ಸಂಬಂಧಿತ ಪತ್ರಿಕೆ ಇರುತ್ತದೆ. ಪ್ರತಿ ಪ್ರಶ್ನೆ ಪತ್ರಿಕೆ 100 ಅಂಕಗಳಿಗೆ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯ ಅಂಕಗಳ ಆಧಾರದಲ್ಲಿ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ಆಯ್ಕೆ ಮಾಡಲಾಗುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಬೆಳಗಾವಿ, ಕಲಬುರ್ಗಿ, ಬಿಜಾಪುರ, ಶಿವಮೊಗ್ಗ ಮತ್ತು ತುಮಕೂರು ಕೇಂದ್ರಗಳಲ್ಲಿ ನಡೆಸಲಾಗುವುದು.

ಪ್ರಮುಖ ದಿನಾಂಕಗಳು

* ಕೆಇಎ ವೆಬ್‌ಸೈಟ್‌ನಲ್ಲಿ ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ : 22-06-2023
* ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 23-06-2023
* ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 22-07-2023 ರ ಸಂಜೆ 05-30 ಗಂಟೆವರೆಗೆ.
* ಇ-ಅಂಚೆ ಕಛೇರಿಗಳಲ್ಲಿ ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆ ದಿನಾಂಕ : 25-07-2023

ಅಧಿಸೂಚನೆ

* ಹುದ್ದೆಯ ಹೆಸರು : ಕಲ್ಯಾಣಾಧಿಕಾರಿ, ಸಹಾಯಕರು, ಎಸ್‌ಡಿಎ ಹುದ್ದೆಗಳ ನೇಮಕ.
* ವಿವರ : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅಧಿಸೂಚನೆ.
* ಪ್ರಕಟಣೆ ದಿನಾಂಕ : 2023-06-23
* ಕೊನೆ ದಿನಾಂಕ : 2023-07-22
* ಉದ್ಯೋಗ ವಿಧ : Full Time
* ಉದ್ಯೋಗ ಕ್ಷೇತ್ರ : ಸರ್ಕಾರಿ ಸಂಸ್ಥೆ ಹುದ್ದೆಗಳು
* ವೇತನ ವಿವರ : 21000-70000 ರೂ. ತಿಂಗಳಿಗೆ

ಕೌಶಲ ಮತ್ತು ಶೈಕ್ಷಣಿಕ ಅರ್ಹತೆ

* ವಿದ್ಯಾರ್ಹತೆ : ಪಿಯುಸಿ, ಡಿಗ್ರಿ
* ಕಾರ್ಯಾನುಭವ : 0 Year

ನೇಮಕಾತಿ ಸಂಸ್ಥೆ

* ಸಂಸ್ಥೆಯ ಹೆಸರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನೇಮಕಾತಿ
* ವೆಬ್‌ಸೈಟ್‌ ವಿಳಾಸ : https://cetonline.karnataka.gov.in

ಉದ್ಯೋಗ ಸ್ಥಳ

* ವಿಳಾಸ : ಬೆಂಗಳೂರು
* ಸ್ಥಳ : ಬೆಂಗಳೂರು
* ಪ್ರದೇಶ : ಕರ್ನಾಟಕ
* ಅಂಚೆ ಸಂಖ್ಯೆ : 560001
* ದೇಶ : ಭಾರತ

- Advertisment -