ಕಣ್ಣು (most important organ eye) ದೇಹದ ಅತ್ಯಮೂಲ್ಯವಾದ ಅಂಗ, ಈ ಜಗತ್ತಿನಲ್ಲಿರುವ ಎಲ್ಲಾ ಪ್ರಾಣಿ ಪಕ್ಷಿಗಳೂ ಕೂಡ ಈ ಪ್ರಕೃತಿ ಸೊಬಗನ್ನು ಕಣ್ತುಂಬ ನೋಡಿ ಆನಂದಿಸುತ್ತವೆ. ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಈ ಭಾಗ್ಯ ಸಿಗಬೇಕು ಆದರೆ, ಕೆಲವರು ಹುಟ್ಟಿದಾಗಿನಿಂದಲೇ ದೃಷ್ಟಿ ಕಳೆದುಕೊಂಡಿರುತ್ತಾರೆ.
ಈ ಪ್ರಪಂಚ ಹೇಗಿರುತ್ತದೆ ಎನ್ನುವ ಕಲ್ಪನೆಯಲ್ಲಿಯೇ ಅವರ ದಿನ ಮುಗಿಯುತ್ತಿರುತ್ತದೆ. ಅವರಿಗೂ ಕೂಡ ಬದುಕು ಸಾ’ಯುವುದರೊಳಗೆ ಒಮ್ಮೆ ಈ ಜಗತ್ತು ಹೇಗಿದೆ ಎಂದು ನೋಡುವ ಆಸೆ ಖಂಡಿತ ಇರುತ್ತದೆ. ಅದಕ್ಕಾಗಿ ಪ್ರತಿದಿನವೂ ಕೂಡ ಅವರ ಮನಸುಗಳು ತುಡಿಯುತ್ತಿರುತ್ತವೆ, ಅನೇಕರಿಗೆ ಕಣ್ಣುಗಳನ್ನು ಕೊಂಡುಕೊಳ್ಳುವ ಶಕ್ತಿ ಇದ್ದರೂ ಕೂಡ ದಾನಿಗಳು ಇರದ ಕಾರಣ ಕತ್ತಲಲ್ಲಿಯೇ ಜೀವನ ಕಳಿಯಬೇಕಾಗಿರುತ್ತದೆ.
ಈ ರೀತಿ ಕಣ್ಣು ಕಳೆದುಕೊಂಡಿರುವ (Blind) ಎಲ್ಲರಿಗೂ ಮತ್ತೆ ಹೊಸ ಜೀವ ಕೊಡಲು ನೇತ್ರದಾನ ಮಾಡುವವರಿಗೆ ಅಷ್ಟೇ ಸಾಧ್ಯ. ಎಲ್ಲಾ ವ್ಯಕ್ತಿಗೂ ಕೂಡ ಕಣ್ಣುಮುಖ್ಯ. ಹಾಗಾಗಿ ಒಬ್ಬರ ಕಣ್ಣನ್ನು ತೆಗೆದು ಮತ್ತೊಬ್ಬರಿಗೆ ಕಸಿ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಮೃತ ಹೊಂದಿದ ವ್ಯಕ್ತಿಯ ನೇತ್ರವನ್ನು ಮತ್ತೊಬ್ಬರಿಗೆ ಅಳವಡಿಸುವುದರಿಂದ ಆ ಕಣ್ಣುಗಳ ಮೂಲಕ ಸ’ತ್ತ ವ್ಯಕ್ತಿಯು ಇನ್ನಷ್ಟು ದಿನ ಬದುಕಿರುತ್ತಾರೆ.
ಮತ್ತು ಆ ಕಣ್ಣುಗಳನ್ನು ಪಡೆದ ವ್ಯಕ್ತಿಯ ಬದುಕಿಗೂ ಒಂದು ಅರ್ಥ ಬರುತ್ತದೆ. ಹಾಗಾಗಿ ದಾನ ದಾನಕ್ಕಿಂತ ನೇತದಾನ (eye donate) ಶ್ರೇಷ್ಠ ಎಂದು ಹೇಳಲಾಗುತ್ತದೆ. ಇನ್ನು ಕೂಡ ನಮ್ಮ ಜನರಲ್ಲಿ ಮೂಢನಂಬಿಕೆ ಎಷ್ಟಿದೆ ಎಂದರೆ ನೇತ್ರದಾನ ಮಾಡುವುದರಿಂದ ಸ’ತ್ತ ಮೇಲೆ ಕಣ್ಣು ಕಾಣುವುದಿಲ್ಲ ಎನ್ನುವ ಕುರುಡು ನಂಬಿಕೆಗಳಿದೆ ಆದರೆ ಇದೆಲ್ಲ ಸುಳ್ಳು.
ಈ ದೇಹ ಮಣ್ಣಾದ ಬಳಿಕ ದೇಹಕ್ಕೆ ಸಂಬಂಧಪಟ್ಟ ಪ್ರತಿ ಅಂಶವು ಕೂಡ ನಾಶವಾಗಿ ಹೋಗುತ್ತದೆ. ಅದರ ಬದಲು ಸಮಯ ಇರುವಾಗಲೇ ಅದನ್ನು ದಾನ ಮಾಡಿದರೆ ಅರ್ಥಾತ್ ಮೃ’ತ ಪಟ್ಟ ಕೆಲವು ಗಂಟೆಗಳ ಒಳಗೆ ಕುಟುಂಬಸ್ಥರು ಅವರ ಕಣ್ಣುಗಳನ್ನು ದಾನ ಮಾಡಿದ್ದರೆ ಅದು ಮತ್ತೊಬ್ಬರಿಗೆ ಅನುಕೂಲವಾಗುತ್ತದೆ. ಹೀಗಾಗಿ ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಮೇರು ನಟ ಡಾ. ರಾಜಕುಮಾರ್ (Dr. Rajkumar) ರವರು ಕೂಡ ನೇತ್ರದಾನದಲ್ಲಿ ನಂಬಿಕೆ ಇಟ್ಟಿದ್ದರು. ಹಾಗಾಗಿ ಬದುಕಿರುವಾಗಲೇ ತಮ್ಮ ಕಣ್ಣುಗಳನ್ನು ತಮ್ಮ ನಂತರ ದಾನ ಮಾಡಲು ಒಪ್ಪಿಕೊಂಡು ಆ ಮೂಲಕ ಅನೇಕರಿಗೆ ಸ್ಪೂರ್ತಿಯಾಗಿದ್ದರು. ಅಣ್ಣಾವ್ರ ಮಕ್ಕಳು ಕೂಡ ಅಣ್ಣಾವ್ರ ನಡೆಯಂತೆ ಬದುಕಿದವರು.
ಅಣ್ಣಾವ್ರಂತೆ ಕುಟುಂಬಸ್ಥರೆಲ್ಲರೂ ನೇತ್ರದಾನಕ್ಕೆ ನೋಂದಾಯಿಸಿಕೊಂಡಿದ್ದಾರೆ. ಅಕ್ಟೋಬರ್ 29, 2021 ರಲ್ಲಿ ನಾವು ದೊಡ್ಮನೆ ಮತ್ತೊಂದು ಕುಡಿಯನ್ನು ಕಳೆದುಕೊಂಡೆವು. ಪುನೀತ್ ರಾಜಕುಮಾರ್ ಅಗಲಿದ ಆ ದಿನ ಕನ್ನಡಿಗರ ಹೃದಯವೇ ಹೊಡೆದಿತ್ತು. ಅಂತಹ ಘಳಿಗೆಯಲ್ಲೂ ಸಮಯಪ್ರಜ್ಞೆ ಬರೆದ ಕುಟುಂಬಸ್ಥರು ಪುನೀತ್ ರಾಜಕುಮಾರ್ (Punith Rajkumar) ಅವರ ಇಚ್ಛೆಯಂತೆ ಅವರ ಕಣ್ಣುಗಳನ್ನು ದಾನ ಮಾಡಿದರು.
ಈಗ ಅಪ್ಪು ಕಣ್ಣುಗಳು ಆರು ಜನರಿಗೆ ದೃಷ್ಟಿ ನೀಡಿವೆ. ಪುನೀತ್ ರಾಜಕುಮಾರ್ ಅಗಲಿಕೆ ನಂತರ ರಾಜ್ಯದಲ್ಲಿ ದೃಷ್ಟಿದಾನದ ವಿಚಾರದಲ್ಲಿ ಕ್ರಾಂತಿಯೇ ನಡೆದಿದೆ. ಈಗಲೂ ಸಹ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ ಮತ್ತು ಪುಣ್ಯಸ್ಮರಣೆಯ ದಿನದಂದು ರಕ್ತದಾನ, ನೇತ್ರದಾನ ಮತ್ತು ಅಂಗಾಂಗ ದಾನದ ಶಿಬಿರಗಳನ್ನು ಏರ್ಪಡಿಸಲಾಗುತ್ತದೆ.
ಈವರೆಗಿನ ಕರ್ನಾಟಕದ ಇತಿಹಾಸದಲ್ಲಿ ಪುನೀತ್ ರಾಜಕುಮಾರ್ ಅವರಿಂದ ಸ್ಪೂರ್ತಿ ಪಡೆದು ಅವರ ನಂತರ ದಾಖಲೆ ಮಟ್ಟದಲ್ಲಿ ನೇತ್ರದಾನಕ್ಕೆ ಹೆಸರುಗಳು ನೋಂದಣಿಯಾಗಿವೆ ತಿಳಿದು ಬಂದಿದೆ. ಹೀಗಾಗಿ ಇಂತಹ ಮಹಾನ್ ವ್ಯಕ್ತಿಯ ಹೆಸರಿನಿಂದ ಮತ್ತಷ್ಟು ಜನರಿಗೆ ಸ್ಪೂರ್ತಿಯಾಗಲಿ ಮತ್ತು ಈ ವಿಚಾರ ಸೂರ್ಯ ಚಂದ್ರ ಇರುವವರೆಗೂ ಶಾಶ್ವತವಾಗಿರಲಿ ಎನ್ನುವ ಕಾರಣಕ್ಕಾಗಿ.
ಸರ್ಕಾರವೂ ಕೂಡ ಅಪ್ಪು ಹೆಸರಿನಲ್ಲಿ ಐ ಬ್ಯಾಂಕ್ ತೆರೆಯಲು ನಿರ್ಧರಿಸಿದೆ ( Karnataka government plans to open Eye bank in Appu name). ರಾಜಕುಮಾರ್ ಸಂಘಟನೆಯ ಮನವಿ ಕೂಡ ಇದೆ ಆಗಿತ್ತು, ಇದಕ್ಕೆ ಸ್ಪಂದಿಸಿರುವ ರಾಜ್ಯ ಆರೋಗ್ಯ ಇಲಾಖೆಯು ತನ್ನ ವ್ಯಾಪ್ತಿಯಲ್ಲಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಅಪ್ಪು ಅವರ ಹೆಸರಿನಲ್ಲಿ ಐ ಬ್ಯಾಂಕ್ ತೆರೆಯಲು ಚಿಂತನೆ ನಡೆಸಿದೆ ಎಂದು ತಿಳಿದಿದೆ.