BPL ಕಾರ್ಡ್ ಇರುವ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಮಾಹಿತಿ, e-KYC ಮಾಡಿಸುವುದು ಕಡ್ಡಾಯ ಇಲ್ಲವಾದರೆ ಆಗಸ್ಟ್ ನಿಂದ ರೇಷನ್ ಬಂದ್ ಆಗುತ್ತದೆ.
BPL ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬರೂ ಸಹ ತಿಳಿದುಕೊಳ್ಳಬೇಕಾದಂತಹ ವಿಷಯ ಸರ್ಕಾರವು ನೀಡಿರುವಂತಹ ಹೊಸ ಮಾರ್ಗಸೂಚಿಯ ಅನುಸಾರವಾಗಿ ಯಾರೆಲ್ಲಾ e-KYC ಯನ್ನು ಮಾಡಿಸದೆ ಇದ್ದರೆ ಅಂತಹವರಿಗೆ ಆಗಸ್ಟ್ ತಿಂಗಳನಿಂದ ಪಡಿತರ ಚೀಟಿಯಲ್ಲಿ ಬರುವಂತಹ ಆಹಾರ ಧಾನ್ಯಗಳನ್ನು ಸ್ಥಗಿತಗೊಳಿಸುವುದಾಗಿ ಸರ್ಕಾರ ವರದಿಯನ್ನು ನೀಡಿದೆ. e-KYC ಮಾಡಿಸದಿರುವ ಪಡಿತರ ಚೀಟಿ ದಾರರಿಗೆ ಆಗಸ್ಟ್ ತಿಂಗಳಿನಿಂದ ಆಹಾರ ಧಾನ್ಯ ಮತ್ತು ಅನ್ನಭಾಗ್ಯ ಯೋಜನೆಯ ಹಣವನ್ನು ಸ್ಥಗಿತಗೊಳಿಸಲಾಗುವುದು ಎಂದು ಮಾಹಿತಿಯನ್ನು ನೀಡಲಾಗುತ್ತಿದೆ e-KYC ಮಾಡದೆ ಇದ್ದರೆ ಹಣ ಮತ್ತು ಆಹಾರ ಧಾನ್ಯಗಳು ಏಕೆ ದೊರೆಯುವುದಿಲ್ಲ…