ರವಿಚಂದ್ರನ್ ತಮ್ಮ ನಟ ಬಾಲಾಜಿ, ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಉಳಿದಿದ್ದು ಯಾಕೆ ಗೊತ್ತಾ.? ಇವರ ತ್ಯಾಗದ ಹಿಂದಿರುವ ಉದ್ದೇಶ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಆಗುತ್ತೆ.
ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಹುಟ್ಟುವಾಗಲೇ ಸಿನಿಮಾ ವಾತಾವರಣವಿದ್ದ ಕುಟುಂಬದಲ್ಲಿ ಹುಟ್ಟಿದ ಕಾರಣ ಹೀರೋ ಆಗಿ ತೀರುವುದೇ ಅವರ ಗುರಿ, ಸಿನಿಮಾ ಮಾಡುವುದೇ ಅವರ ಜೀವನದ ಉದ್ದೇಶ ಎನ್ನುವ ರೀತಿಯಲ್ಲಿ ಬದುಕನ್ನು ಸಿನಿಮಾಗೆ ಅರ್ಪಿಸಿಕೊಂಡರು. ಕನ್ನಡ ಚಲನಚಿತ್ರರಂಗದ ನಾಯಕನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ಸಂಗೀತ ನಿರ್ದೇಶಕನಾಗಿ, ಸ್ಕ್ರಿಪ್ ರೈಟರ್ ಆಗಿ ರವಿಚಂದ್ರನ್ ಅವರು ತಮ್ಮನ್ನು ತಾವು ಸಿನಿಮಾ ರಂಗಕ್ಕೆ ತೊಡಗಿಸಿಕೊಂಡಿದ್ದಾರೆ. ಕನ್ನಡ ಚಲನಚಿತ್ರ ರಂಗದ ಒಬ್ಬ ದಂತಕಥೆ ಎಂದರೆ ಅದು ರವಿಚಂದ್ರನ್. ಅವರು ಪ್ರೇಮಲೋಕ ಎನ್ನುವ ಸಿನಿಮಾ ತಂದು ಕನ್ನಡ…