ಸೌಂದರ್ಯ ಅವರ ಪ್ರೀತಿಯಲ್ಲಿ ಬಿದ್ದಿದ್ದ ಜಗಪತಿ ಬಾಬು ಅವರು ನಂತರ ಮದುವೆ ಆಗಿದ್ದು ಎಂಥವರನ್ನು ಗೊತ್ತಾ. ನಟಿ ಸೌಂದರ್ಯ (Actress Soundarya) ನೋಡುಗರ ಕಣ್ಣನ್ನು ಸೂರೆಗೊಳಿಸುವ ಸುರಸುಂದರಿ, ದೇವಲೋಕದಿಂದ ಧರೆಗಿಳಿದ ಅಪ್ಸರೆಯಂತಹ ಸೌಂದರ್ಯದ ಗಣಿಯೇ ಆಗಿದ್ದ ಇವರ ಚೆಲುವನ್ನು ಹಾಗೂ ಗುಣನಡತೆಯನ್ನು ನೋಡಿ ಮೆಚ್ಚಿದವರಿಲ್ಲ. ಕನ್ನಡ, ತಮಿಳು, ತೆಲುಗು, ಹಿಂದಿ ಹೀಗೆ ಬಹುಭಾಷ ನಟಿ ಆಗಿದ್ದ ಕಾರಣ ಬದುಕಿದ್ದ ಕೆಲವೇ ವರ್ಷಗಳಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿ ಜನ ಮನಸ್ಸಿನಲ್ಲಿ ಶಾಶ್ವತವಾಗಿ ಹೆಸರುಳಿಸಿಕೊಂಡಿದ್ದಾರೆ.
ಹಿಂದಿಯ ಬಿಗ್ ಬಿ ಅಮಿತಾ ಬಚ್ಚನ್ ಅವರಿಂದ ಹಿಡಿದು ಇಂಡಿಯನ್ ಸೂಪರ್ ಸ್ಟಾರ್ ರಜನಿಕಾಂತ್, ಕನ್ನಡದಲ್ಲಿ ಮೇರುನಟ ವಿಷ್ಣುವರ್ಧನ್, ತೆಲುಗಿನ ಸ್ಟಾರ್ಗಳಾದ ನಾಗಾರ್ಜುನ, ಮೆಗಾ ಸ್ಟಾರ್ ಚಿರಂಜೀವಿ, ವಿಕ್ಟರಿ ವೆಂಕಟೇಶ್ ಹೀಗೆ ತೊಂಬತ್ತರ ದಶಕದ ಎಲ್ಲಾ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡ ಖ್ಯಾತಿ ಇವರದ್ದು. ಆದರೆ ಬಹುಬೇಗ ನಾವು ಇಂತಹ ಒಂದು ಅದ್ಭುತ ಕಲೆಯನ್ನು ಕಳೆದುಕೊಂಡಿದ್ದು ಇಡೀ ಭಾರತ ಸಿನಿಮಾ ಇಂಡಸ್ಟ್ರಿಗೆ ತುಂಬಲಾಗದ ಬಹುದೊಡ್ಡ ನಷ್ಟ.
ಆ ಸಮಯದಲ್ಲಿ ಸೌಂದರ್ಯ ಅವರ ವ್ಯಕ್ತಿತ್ವವನ್ನು ಮೆಚ್ಚಿ ಅವರ ಜೊತೆ ನಟಿಸುತ್ತಿದ್ದ ಅನೇಕ ಹೀರೋಗಳು ಸೌಂದರ್ಯ ಅವರನ್ನು ಮದುವೆ ಆಗಲು ಬಯಸುತ್ತಿದ್ದರು. ಎಷ್ಟೋ ಜನ ಪ್ರೀತಿಯನ್ನು ಹೇಳಿಕೊಳ್ಳಲಾಗದೆ ಸಿಂಗಲ್ ಸೈಡ್ ಲವರ್ ಗಳಾಗಿಯೇ ಉಳಿದು ಬಿಟ್ಟರು. ಆದರೆ ವಿಕ್ಟರಿ ವೆಂಕಟೇಶ ಮತ್ತು ಜಗಪತಿ ಬಾಬು ಅವರ ಜೊತೆ ಇವರ ಹೆಸರು ಹೆಚ್ಚು ಸುದ್ದಿಯಲ್ಲಿ (love gossips) ಇತ್ತು. ಆದರೆ ಸೌಂದರ್ಯ ಅವರು ಸಿನಿಮಾ ಇಂಡಸ್ಟ್ರಿಗೆ ಬರುವ ಮೊದಲೇ ಅವರ ಕುಟುಂಬದಲ್ಲಿ ಅವರು ಮದುವೆ ಆಗುವ ಹುಡುಗನನ್ನು ನಿಶ್ಚಯ ಮಾಡಿದ್ದ ಕಾರಣ ಯಾರ ಜೊತೆಗೂ ಕೂಡ ಪ್ರೀತಿಯನ್ನು ಒಪ್ಪಿಕೊಳ್ಳದ ಸೌಂದರ್ಯ ಅವರು ತಂದೆ ತೋರಿಸಿದ್ದ ಹುಡುಗನನ್ನು ಮದುವೆಯಾಗಿ ಎಲ್ಲಾ ಊಹಾಪೋಗಳಿಗೂ ತೆರೆ ಎಳೆದಿದ್ದರು.
ಸೌಂದರ್ಯ ಅವರನ್ನು ಪ್ರೀತಿಸಿದ ಹೀರೋಗಳ ಸಾಲಿನಲ್ಲಿ ಜಗಪತಿ ಬಾಬು (Jagapathi Babu) ಇದ್ದರು. ಅವರು ಸೌಂದರ್ಯ ಅವರ ಬಗ್ಗೆ ಅನಂತವಾದ ಅನ್ನು ಕಂಡಿಷನಲ್ ಪ್ರೀತಿ ಇಟ್ಟುಕೊಂಡಿದ್ದರು, ನಂತರ ವಾತ್ಸವ ಒಪ್ಪಿಕೊಂಡು ಮುನ್ನಡೆಯಲೇ ಬೇಕಾಯಿತು. ಲಕ್ಷ್ಮಿ (Lakshmi)ಎನ್ನುವ ಸಾಮಾನ್ಯ ಕುಟುಂಬದ ಸಿಂಪಲ್ ಹುಡುಗಿಯನ್ನು ಜಗಪತಿ ಬಾಬು ಅವರು ಮದುವೆಯಾದರು (marriage) , ಅರ್ಧಾಂಗಿ ಆಗಿ ಬಂದ ಈ ಲಕ್ಷ್ಮಿಯವರು ಜಗಪತಿ ಬಾಬು ಅವರ ಪಾಲಿಗೆ ಎರಡನೇ ತಾಯಿಯಾದರೂ ಎಂದರೆ ತಪ್ಪಾಗಲಾರದು.
ಯಾಕೆಂದರೆ ಒಂದು ಕಾಲದಲ್ಲಿ ಸ್ಟಾರ್ ನಟನಾಗಿ ಮೆರೆದಿದ್ದ ಇವರು ನಂತರ ದುಶ್ಚಟಗಳಿಗೆ ಬಲಿಯಾಗಿ ಜೂಜಾಟದಲ್ಲಿ ತನ್ನ ಮನೆ ಮಠ ಆಸ್ತಿಪಾಸ್ತಿ ಎಲ್ಲವನ್ನು ಕೂಡ ಮಾರಿಕೊಳ್ಳುವ ಪರಿಸ್ಥಿತಿಯನ್ನು ತಲುಪಿದ್ದರು. ಆ ಎಲ್ಲಾ ಸಮಯದಲ್ಲೂ ಕೂಡ ಲಕ್ಷ್ಮಿ ಅವರು ಎಂದು ಸಹ ವಿವಾದ ಮಾಡಿಕೊಂಡು ಮಾಧ್ಯಮದ ಎದುರು ಬಂದವರೇ ಅಲ್ಲ. ಈವರೆಗೆ ಕ್ಯಾಮರಾ ಎದುರೇ ಆಗಲಿ ಅಥವಾ ಹಿಂದೆಯೇ ಆಗಲಿ ಎಂದು ಸಹ ತನ್ನ ಪತಿಯ ಬಗ್ಗೆ ಚಕಾರ ಎತ್ತಿದವರೇ ಅಲ್ಲ. ಸದಾ ಅವರ ಕಷ್ಟ ನಷ್ಟ ಸುಖ-ದುಃಖ ಎಲ್ಲದರಲ್ಲೂ ಜೊತೆಯಾಗಿದ್ದು ಅಕ್ಷರಶಃ ಪತ್ನಿ ಎನ್ನುವ ಪದವಿಗೆ ಬದ್ಧರಾಗಿ ಬದುಕಿದ್ದಾರೆ.
ಸಣ್ಣಪುಟ್ಟ ವಿಷಯಗಳಿಗೂ ಕೂಡ ಸ್ಟಾರ್ ಗಳ ವಿವಾಹಗಳು ಮುರಿದುಬೀಳುತ್ತವೆ, ಅಂತಹ ಯುಗದಲ್ಲೂ ಜಗಪತಿ ಬಾಬು ಅವರನ್ನು ತಿದ್ದಿ ತೀಡಿ ಅವರ ಜೊತೆಗೆ ಇದ್ದುಕೊಂಡು ಹೀರೋ ಎರಾ ಮುಗಿದು ಅವಕಾಶಗಳಿಂದ ವಂಚಿತರಾದರು ಮತ್ತೆ ಅವರು ಮೈಕೊಡವಿ ನಿಂತು ಎರಡನೇ ಇನ್ನಿಂಗ್ಸ್ ಆರಂಭಿಸಲು ತಮ್ಮಿಂದಾದ ಎಲ್ಲಾ ಶತ ಪ್ರಯತ್ನಗಳನ್ನು ಮಾಡಿದ್ದಾರೆ. ಇಂದು ಜಗಪತಿ ಬಾಬು ಅವರು ಪೋಷಕ ಪಾತ್ರದಾರಿಯಾಗಿ ಹಾಗೂ ಖಡಕ್ ವಿಲನ್ ಆಗಿ ದಕ್ಷಿಣ ಭಾರತದಾದ್ಯಂತ ಹೆಸರುವಾಸಿಯಾಗಿದ್ದಾರೆ. ಎಲ್ಲಾ ಹೈ ಬಜೆಟ್ ಸಿನಿಮಾಗಳಲ್ಲೂ ಕೂಡ ವಿಲನ್ ಆಗಿ ಕಾಣಿಸಿಕೊಳ್ಳುವ ಮೂಲಕ ಹೊಸದೊಂದು ಇತಿಹಾಸ ಸೃಷ್ಟಿಸುತ್ತಿದ್ದಾರೆ.