Thursday, September 28, 2023
Home Viral News ವೇದಿಕೆ ಮೇಲೆ ಅಪ್ಪು ಹಾಡನ್ನು ಹಾಡುತ್ತಿರುವಾಗಲೇ ಕೋಪಗೊಂಡು ಹಾಡನ್ನು ಅರ್ಧಕ್ಕೆ ನಿಲ್ಲಿಸಿದ ಸೋನು ನಿಗಮ್. ಕಾರಣವೇನು...

ವೇದಿಕೆ ಮೇಲೆ ಅಪ್ಪು ಹಾಡನ್ನು ಹಾಡುತ್ತಿರುವಾಗಲೇ ಕೋಪಗೊಂಡು ಹಾಡನ್ನು ಅರ್ಧಕ್ಕೆ ನಿಲ್ಲಿಸಿದ ಸೋನು ನಿಗಮ್. ಕಾರಣವೇನು ಗೊತ್ತ.? ಅಪ್ಪು ಹಾಡಿಗೆ ಇದೆಂತ ಅವಮಾನ ಮಾಡಿದ್ರು

ಸೋನು ನಿಗಮ್(Sonu Nigam) ಒಬ್ಬ ಬಹುಭಾಷಾ ಗಾಯಕ. ಕನ್ನಡ, ತಮಿಳು, ತೆಲುಗು, ಹಿಂದಿ ಹೀಗೆ ನಾನಾ ಭಾಷೆಯಲ್ಲಿ ಹಾಡುಗಳನ್ನು ಹಾಡಿ ತಮ್ಮ ಸುಮಧುರ ಕಂಠದಿಂದಲೇ ಕೋಟ್ಯಾನು ಗಟ್ಟಲೇ ಅಭಿಮಾನಿಗಳನ್ನು ಗಳಿಸಿದ್ದಾರೆ. ಸೋನು ನಿಗಮ್ ಅವರ ವಿಶೇಷತೆ ಏನು ಎಂದರೆ ಅವರು ಯಾವುದೇ ಭಾಷೆಯಲ್ಲಿ ಹಾಡುಗಳನ್ನು ಹಾಡಿದರು ಕೂಡ ಅಲ್ಲಿನ ಮೂಲ ಗಾಯಕರು ಹಾಡಿರುವ ರೀತಿಯೇ ಇರುತ್ತದೆ. ಅಷ್ಟು ಸ್ಪಷ್ಟವಾಗಿ ಭಾಷೆಯನ್ನು ಕಲಿತು ಅದರ ಭಾವವನ್ನು ಅರಿತು ಹಾಡುತ್ತಾರೆ ಇವರು. ಕನ್ನಡದ ಹಾಡುಗಳನ್ನೇ ತೆಗೆದುಕೊಂಡರೂ ಈವರಿಗೆ ಸಾಕಷ್ಟು ಕನ್ನಡ ಗೀತೆಗಳನ್ನು ಹಾಡಿದ್ದಾರೆ.

ಇದರಲ್ಲಿ ಬಹುತೇಕ ಎಲ್ಲವೂ ಕೂಡ ಸೂಪರ್ ಹಿಟ್ ಹಾಡುಗಳೇ. ಮೆಲೋಡಿ ಹಾಡುಗಳಿಗೆ ಇವರ ಧ್ವನಿ ಹೆಚ್ಚು ಫೇಮಸ್. ಕನ್ನಡದ ಎಲ್ಲಾ ಸ್ಟಾರ್ ಗಳ ಸಿನಿಮಾಗಳಲ್ಲೂ ಇವರು ಹಾಡು ಹಾಡಿದ್ದಾರೆ. ಮುಂಗಾರು ಮಳೆ, ಮಿಲನ, ಪರಮಾತ್ಮ, ಗೆಳೆಯ, ಮೊಗ್ಗಿನ ಮನಸ್ಸು, ಗಾಳಿಪಟ, ಮಳೆಯಲಿ ಜೊತೆಯಲಿ ಹೀಗೆ ನೂರಾರು ಕನ್ನಡದ ಸಾವಿರಾರು ಮೆಲೋಡಿ ಹಾಡುಗಳಿಗೆ ಧ್ವನಿ ಆಗಿರುವ ಸೋನು ನಿಗಮ್ ಅವರಿಗೆ ಕರ್ನಾಟಕದಲ್ಲೂ ಕೂಡ ಲಕ್ಷಗಟ್ಟಲೆ ಅಭಿಮಾನಿಗಳು ಇದ್ದಾರೆ. ಇದಲ್ಲದೆ ಅವರು ಅನೇಕ ಸಂಗೀತ ಕಾರ್ಯಕ್ರಮಗಳನ್ನು ಕೂಡ ಕನ್ನಡದಲ್ಲಿ ಮಾಡಿದ್ದಾರೆ.

ಕನ್ನಡದ ಹಲವು ಕಾರ್ಯಕ್ರಮಗಳಿಗೆ ಇವರನ್ನು ವಿಶೇಷ ಅತಿಥಿಯಾಗಿ ಕರೆಸಲಾಗಿದೆ. ಪರಭಾಷಿಕರು ಆಗಿದ್ದರು ಕೂಡ ಇವರು ಕನ್ನಡದ ಬಗ್ಗೆ ಎಷ್ಟು ಅಭಿಮಾನ ಹೊಂದಿದ್ದಾರೆ ಎಂದರೆ ಸ್ವತಃ ಇವರೇ ಅನೇಕ ಇಂಟರ್ವ್ಯೂಗಳಲ್ಲಿ ಇದನ್ನು ಹೇಳಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿ ಬಾಲಿವುಡ್ ಜನರ ಕೆಂಗಣ್ಣಿಗೂ ಸಹ ಗುರಿ ಆಗಿದ್ದರು. ಕರ್ನಾಟಕ ಮಾತ್ರವಲ್ಲದೇ ವಿದೇಶದಲ್ಲೂ ಹೋಗಿ ಕನ್ನಡ ಹಾಡುಗಳನ್ನು ಹಾಡಿರುವ ಸೋನು ನಿಗಮ್ ಅವರು ಮುಂದಿನ ಜನ್ಮದಲ್ಲಿ ಕನ್ನಡಿಗನಾಗಿಯೇ ಹುಟ್ಟಬೇಕು ಎಂದು ಸಹ ಮನದಾಳದಿಂದ ಹೇಳಿಕೊಂಡಿದ್ದು ಇದೆ.

ಕನ್ನಡ ಮತ್ತು ಕರ್ನಾಟಕದ ಬಗ್ಗೆ ಇಷ್ಟು ಅಭಿಮಾನ ಹೊಂದಿರುವ ಸೋನು ನಿಗಮ್ ಅವರಿಗೆ ಇತ್ತೀಚೆಗೆ ಬೇಸರ ತರಿಸುವಂತಹ ಘಟನೆ ಒಂದು ಕರ್ನಾಟಕದಲ್ಲಿ ನಡೆದಿದೆ. ಜನವರಿ 7 ರಿಂದ ಚಿಕ್ಕಬಳ್ಳಾರ ಪುರ ಉತ್ಸವ ಜರಗುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಏಳು ದಿನಗಳ ಕಾಲ ನಡೆಯುತ್ತಿರುವ ಈ ಉತ್ಸವದಲ್ಲಿ ಉದ್ಯೋಗ ಮೇಳ, ಯುವ ಜಾತ್ರೆ, ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡೆಗಳು, ರಕ್ತದಾನ ಶಿಬಿರ ಇನ್ನಿತರ ಕಾರ್ಯಕ್ರಮಗಳ ಜೊತೆ ಸೆಲಬ್ರೆಟಿಗಳನ್ನು ಕರೆಸಿ ಮನರಂಜನೆ ಕಾರ್ಯಕ್ರಮವನ್ನು ಕೂಡ ಕೊಡಲಾಗುತ್ತಿದೆ.

ಈಗಾಗಲೇ ನಟ ಸುದೀಪ್ ಅಕುಲ್ ಬಾಲಾಜಿ, ಉಪೇಂದ್ರ ಮತ್ತಿತರರು ಇದರಲ್ಲಿ ಭಾಗಿಯಾಗಿದ್ದಾರೆ. ಇದೇ ರೀತಿ ಸಂಗೀತ ಕಾರ್ಯಕ್ರಮಕ್ಕಾಗಿ ಸೋನು ನಿಗಮ್ ಅವರನ್ನು ಕರೆಸಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಸಲು ಪ್ಲಾನ್ ಆಗಿತ್ತು. ಅಂದುಕೊಂಡಂತೆ ಎಲ್ಲವೂ ಚೆನ್ನಾಗಿ ನಡಿಯುತ್ತಿತ್ತು ಆದರೆ ವೇದಿಕೆ ಮೇಲೆ ಯಾವಾಗ ಸೋನು ನಿಗಮ್ ಅವರು ಅಪ್ಪು ಅವರ ಪರಮಾತ್ಮ ಸಿನಿಮಾದ ಪರವಶನಾದೆನು ಹಾಡನ್ನು ಹಾಡಲು ಶುರು ಮಾಡಿದರು ಆಗ ಕಿಡಿಗೇಡಿಗಳಿಂದ ಹಾಡಿಗೆ ಅಡ್ಡಿಪಡಿಸುವ ಕೆಲಸ ಶುರು ಆಯ್ತು.

ಅವರು ಈ ಹಾಡಿನ ಗಾಯವನ್ನು ಕುರಿತು ಎಂಜಾಯ್ ಮಾಡುವ ಬದಲು ಮಧ್ಯಮಧ್ಯ ಸದ್ದು ಮಾಡಿ ಕಿರಿಕಿರಿ ಮಾಡುತ್ತಿದ್ದರು. ಹಲವು ಸಮಯದವರೆಗೆ ಇದನ್ನು ಸಹಿಸಿಕೊಂಡ ಸೋನು ನಿಗಮ್ ಮಧ್ಯದಲ್ಲಿ ಹಾಡನ್ನು ನಿಲ್ಲಿಸಿ ಬೇಸರದಿಂದ ಮತ್ತು ಸ್ವಲ್ಪ ಕೋಪದಿಂದ ಕೂಡ ಮಾತನಾಡಿದ್ದಾರೆ. ಬೇರೆ ಕಡೆಯಿಂದ ಬಂದು ಕನ್ನಡಕ್ಕಾಗಿ ಕನ್ನಡಿಗರನ್ನು ಖುಷಿಪಡಿಸುವ ಸಲುವಾಗಿ ಈ ರೀತಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಗಾಯಕರುಗಳಿಗೆ ಅವರ ಎದುರೇ ಈ ರೀತಿ ನಡೆದುಕೊಳ್ಳುವುದು ಎಷ್ಟು ಸರಿ. ವೇದಿಕೆ ಮೇಲೆ ನಿಂತಿರುವವರು ಎದುರಿಗಿರುವ ಆಡಿಯನ್ಸ್ ಪಲ್ಸ್ ತಿಳಿದು ಹಾಡಬೇಕಾಗುತ್ತದೆ.

ಲಕ್ಷಗಟ್ಟಲೆ ಮಂದಿ ಮುಂದೆ ನಿಂತು ಹಾಡುವುದು ಅಷ್ಟು ಸುಲಭದ ಮಾತಲ್ಲ ಅಷ್ಟೆಲ್ಲಾ ಕ್ರೌಡ್ ಅನ್ನು ಸಂಭಾಳಿಸಿಕೊಂಡು ಅವರಿಗೆ ಖುಷಿ ಪಡುವ ಸಲುವಾಗಿ ತಯಾರಿ ಮಾಡಿಕೊಂಡು ಬಂದಿರುವ ಗಾಯಕರುಗಳಿಗೆ ಈ ರೀತಿ ಮಧ್ಯಮಧ್ಯ ಅಡಚಣೆ ಉಂಟಾದಾಗ ಅವರಿಂದಲೂ ಸಹ ಕಾರ್ಯಕ್ರಮ ನಡೆಸಿಕೊಡುವುದು ಕಷ್ಟವಾಗುತ್ತದೆ. ಈ ರೀತಿ ಅಲ್ಲೋ ಇಲ್ಲೋ ಆಗುವ ಸಣ್ಣ ಪುಟ್ಟ ಘಟನೆಗಳು ಮುಂದೆ ಈ ನಾಡಿನ ಹೆಸರು ಕೆಡಿಸುವಂತಹ ಕಪ್ಪು ಚುಕ್ಕೆ ಆಗಿ ಬಿಡಬಹುದು.

ಹಾಗಾಗಿ ಇನ್ನು ಮುಂದೆ ಆದರೂ ಈ ರೀತಿ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲೇಬೇಕು ಮತ್ತು ಕನ್ನಡಿಗರು ಪ್ರಜ್ಞವಂತರಾಗಿ ನಡೆದುಕೊಳ್ಳಬೇಕು ಈ ಸಣ್ಣ ಘಟನೆ ಬಿಟ್ಟರೆ ಮತ್ಯಾವ ತೊಂದರೆ ಇಲ್ಲದೆ ಆ ದಿನದ ಕಾರ್ಯಕ್ರಮ ಬಹಳ ಚೆನ್ನಾಗಿ ನಡೆದಿದೆ. ಅ ಕಾರ್ಯಕ್ರಮದಲ್ಲಿ ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರವಾದ ಕ್ರಾಂತಿ ಸಿನಿಮಾದ ಬೊಂಬೆ ಬೊಂಬೆ ಹಾಡನ್ನು ಕೂಡ ಹಾಡಿ ಸೋನು ನಿಗಮ್ ಅವರು ಮನೋರಂಜಸಿದ್ದಾರೆ. ಈ ಎಲ್ಲ ವಿಡಿಯೋಗಳು ಬಹಳ ವೈರಲಾಗುತ್ತಿದೆ ಇವುಗಳನ್ನು ನೀವು ಕೂಡ ನೋಡಿ ಎಂಜಾಯ್ ಮಾಡಿ.

- Advertisment -