ರಶ್ಮಿಕ ಮಂದಣ್ಣ ಎನ್ನುವ ಕನ್ನಡದ ಪ್ರತಿಭೆ ಇಂದು ದೇಶದಾದ್ಯಂತ ಬೆಳಗುತ್ತಿದ್ದಾರೆ. ಕೊಡಗಿನ ಕುವರಿ ಆಗಿದ್ದ ಈ ಬೆಡಗಿ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಮೊಟ್ಟಮೊದಲಿಗೆ ಲಾಂಚ್ ಆದರು. ಆ ಸಿನಿಮಾದ ಸಕ್ಸಸ್ ಬೆನ್ನಲ್ಲೇ ಪರಭಾಷೆಗಳಿಂದ ಕೂಡ ಇವರಿಗೆ ಆಫರ್ಗಳು ಬರಲು ಶುರುವಾದವು. ಯಾವಾಗ ತೆಲುಗು ಸಿನಿಮಾ ಇಂಡಸ್ಟ್ರಿಗೆ ಪಾದರ್ಪಣೆ ಮಾಡಿದರು ಈಕೆ ಅದೃಷ್ಟವೇ ಬದಲಾಗಿ ಹೋಯಿತು. ನಂತರ ತಮಿಳು ಮಲಯಾಳಂ ಹೀಗೆ ಈಗ ಹಿಂದಿ ಭಾಷೆಯಲ್ಲೂ ಕೂಡ ಅದೃಷ್ಟ ಪರೀಕ್ಷಿಸಿಕೊಂಡಿರುವ ಈಕೆ ಬಿ ಟೌನ್ ಅಲ್ಲಿ ಮುಂದಿನ ಹೈ ಬಜೆಟ್ ಸಿನಿಮಾಗಳಲ್ಲೂ ಕೂಡ ನಟಿಸುವ ಸಾಧ್ಯತೆ ಇದೆ.
ಕರ್ನಾಟಕದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುವ ರಶ್ಮಿಕ ಮಂದಣ್ಣ ಹೊರ ರಾಜ್ಯಗಳಲ್ಲಿ ನ್ಯಾಷನಲ್ ಕ್ರಶ್ ಎಂದು ಕರೆಸಿಕೊಳ್ಳುತ್ತಿದ್ದಾರೆ. ಪರಭಾಷಿಕರಲ್ಲಿ ನಿಮ್ಮ ನೆಚ್ಚಿನ ನಟಿ ಯಾರು ಎಂದು ಕೇಳಿದರೆ ಅದರಲ್ಲಿ ಶೇಕಡ 70% ಗಿಂತ ಹೆಚ್ಚು ಮಂದಿ ಕಡೆಯಿಂದ ಈಕೆ ಹೆಸರೇ ಬಂದಿರುತ್ತದೆ. ಸದ್ಯಕ್ಕೆ ಯುವಜನತೆಯ ಫೇವರೆಟ್ ಸೆಲೆಬ್ರಿಟಿ, ಡ್ರೀಮ್ ಗರ್ಲ್ ಎಲ್ಲವೂ ಆಗಿರುವ ರಶ್ಮಿಕ ಮಂದಣ್ಣ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ರಶ್ಮಿಕ ಮಂದಣ್ಣ ಅವರ ನಿಶ್ಚಿತಾರ್ಥ ಈಗಾಗಲೇ ರಕ್ಷಿತ್ ಶೆಟ್ಟಿ ಅವರ ಜೊತೆ ಆಗಿದ್ದು ನಂತರ ಅದು ಮುರಿದು ಬಿದ್ದಿರುವುದು ಕೂಡ ಎಲ್ಲರಿಗೂ ತಿಳಿದಿದೆ.
ಆನಂತರ ಇವರು ನಟ ವಿಜಯ ದೇವರಕೊಂಡ ಅವರನ್ನು ಮದುವೆಯಾಗುತ್ತಾರೆ ಎಂದು ಎಲ್ಲೆಡೆ ಗಾಳಿ ಸುದ್ದಿ ಹಬ್ಬಿತ್ತು. ಈ ಇಬ್ಬರು ಕೂಡ ತಮ್ಮ ನಡುವೆ ಏನು ಇಲ್ಲ ಎಂದು ಎಷ್ಟು ಹೇಳಿಕೊಳ್ಳುತ್ತಿದ್ದರು ಅವರು ಹಂಚಿಕೊಳ್ಳುವ ಪೋಸ್ಟ್ಗಳು ಹಾಗೂ ಒಟ್ಟೊಟ್ಟಿಗೆ ಮಾಡುತ್ತಿರುವ ಪ್ರವಾಸಗಳು ಇಂತಹ ಅನುಮಾನಗಳಿಗೆಲ್ಲಾ ಪುಷ್ಟಿ ನೀಡುತ್ತಿವೆ. ಆದರೆ ಅಧಿಕೃತವಾಗಿ ಇಬ್ಬರಲ್ಲಿ ಒಬ್ಬರು ಒಪ್ಪಿಕೊಳ್ಳುವ ತನಕ ಏನನ್ನು ನಿಖರವಾಗಿ ಹೇಳಲಾಗುವುದಿಲ್ಲ. ಈ ಎರಡು ಹೆಸರುಗಳು ಆದ ಬಳಿಕ ಮತ್ತೊಬ್ಬರ ಹೆಸರಿನ ಜೊತೆ ರಶ್ಮಿಕ ಹೆಸರು ಅಂಟಿಕೊಳ್ಳುವ ಸಾಧ್ಯತೆ ಇದೆ.
ಯಾಕೆಂದರೆ ಈ ಬಾರಿ ಸ್ವತಃ ಖ್ಯಾತ ಇಂಡಿಯನ್ ಸೆಲೆಬ್ರಿಟಿ ಒಬ್ಬರು ರಶ್ಮಿಕ ಮಂದಣ್ಣ ಅವರನ್ನು ತಮ್ಮ ಕ್ರಷ್ ಎಂದು ಮೀಡಿಯಾ ಮುಂದೆ ಹೇಳಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಉದಯೋನ್ಮುಖ ಆಟಗಾರನಾಗಿ ಮಿಂಚುತ್ತಿರುವ ಶುಭಮನ್ ಗ್ರಿಲ್ ಅವರು ಈ ರೀತಿ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಮೀಡಿಯಾದವರು ಅವರನ್ನು ಸಂದರ್ಶನ ಒಂದರಲ್ಲಿ ನಿಮಗೆ ಯಾರ ಮೇಲೆ ಕ್ರಶ್ ಇದೆ ಎಂದು ಕೇಳಿದ್ದರು. ಅದಕ್ಕೆ ನೇರವಾಗಿ ಕ್ಷಣ ಕೂಡ ಯೋಚಿಸದೆ ರಶ್ಮಿಕ ಮಂದಣ್ಣ ಅವರ ಹೆಸರನ್ನು ಹೇಳಿದ್ದಾರೆ ಶುಭಮನ್ ಗ್ರಿಲ್ ಅವರು. ಶುಭಮನ್ ಗ್ರಿಲ್ ಅವರು ಇತ್ತೀಚೆಗೆ ದ್ವಿಶತಕ ಬಾರಿಸಿ ಕ್ರಿಕೆಟ್ ಅಭಿಮಾನಿಗಳ ಮನೆಗೆದ್ದಿದ್ದಾರೆ.
ಆದರೆ ಇವರ ಮನ ಗೆದ್ದಿರುವುದು ರಶ್ಮಿಕ ಮಂದಣ್ಣ ಎಂದು ಈಗ ತಿಳಿದು ಬಂದಿದೆ. ಈ ಬಗ್ಗೆ ರಶ್ಮಿಕ ಮಂದಣ್ಣ ಏನು ಸಹ ಪ್ರತಿಕ್ರಿಯೆ ನೀಡಿಲ್ಲ. ಮುಂದೆ ಏನಾದರೂ ಶುಭಮನ್ ಗ್ರಿಲ್ ಅವರು ಮದುವೆ ಆಗುವ ಆಫರ್ ಕೊಟ್ಟರೆ ಒಪ್ಪಿಕೊಳ್ಳುತ್ತಾರಾ ಎಂದು ಈಗಾಗಲೇ ಲೆಕ್ಕಾಚಾರ ಶುರು ಆಗಿದೆ. ಯಾಕೆಂದರೆ ಕ್ರಿಕೆಟಿಗರು ಮತ್ತು ಸಿನಿಮಾ ತಾರೆಗಳು ಮದುವೆ ಆಗುವುದು ಇದೇ ಹೊಸದೇನಲ್ಲ. ಈಗಾಗಲೇ ಇದೇ ರೀತಿಯಾಗಿ ಒಂದು ಜೋಡಿ ಮದುವೆಯಾಗಿ ಸುಖಮಯ ಜೀವನ ನಡೆಸುತ್ತಿದ್ದಾರೆ.
ಕರ್ನಾಟಕದಲ್ಲಿ ಐಪಿಎಲ್ ಕಿಂಗ್ ಎಂದೆ ಹೆಸರುವಾಸಿ ಆಗಿರುವ ವಿರಾಟ್ ಕೊಹ್ಲಿ ಅವರು ಮತ್ತು ಬಾಲಿವುಡ್ ಸ್ಟಾರ್ ಹೀರೋಯಿನ್ ಅನುಷ್ಕಾ ಶರ್ಮ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟು ಇದೀಗ ಮುದ್ದು ಹೆಣ್ಣು ಮಗಳನ್ನು ಕೂಡ ಪಡೆದು ಸಂತೋಷದಿಂದಿದ್ದಾರೆ. ರಶ್ಮಿಕಾ ಕೂಡ ಈ ರೀತಿ ಕ್ರಿಕೆಟ್ ಮ್ಯಾನ್ ಮದುವೆಯಾಗಲು ಒಪ್ಪಿಕೊಳ್ಳುತ್ತಾರಾ, ಮುಂದೆ ರಶ್ಮಿಕ ಇದರ ಬಗ್ಗೆ ಬಾಯಿ ಬಿಡುತ್ತಾರಾ ಅಥವಾ ಈ ವಿಷಯ ಇಲ್ಲಿಗೆ ನಿಲ್ಲುತ್ತದಾ ಎಂದು ಕಾದು ನೋಡೋಣ. ಜೊತೆಗೆ ನಿಮ್ಮ ಪ್ರಕಾರ ರಶ್ಮಿಕಾ ಮಂದಣ್ಣ ಯಾರನ್ನು ಮದುವೆ ಆಗಬೇಕು ಎಂದು ಕಮೆಂಟ್ ಮಾಡಿ ತಿಳಿಸಿ.