Sharukhan
ಬಾಲಿವುಡ್ (Bollywood) ಬಿಗ್ ಸ್ಟಾರ್ ಶಾರುಖ್ ಖಾನ್ (Sharukh Khan) ಅವರು ಬಾಲಿವುಡ್ ಬಾದ್ ಷಾ, ಬಾಲಿವುಡ್ ಕಿಂಗ್, ಕಿಂಗ್ ಖಾನ್ ಇತ್ಯಾದಿ ಹೆಸರುಗಳಿಂದ ಪ್ರಖ್ಯಾತರಾಗಿದ್ದಾರೆ. ಕಿರುತೆರೆ ಧಾರವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡುವ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಇವರು ಇಂದು ಬಾಲಿವುಡ್ ಅಂಗಳದಲ್ಲಿ ಬಿಗ್ ತಾರೆಯಾಗಿ ಬೆಳೆದು ನಿಂತಿರುವ ಯಶೋಗಾಥೆಯೇ ರೋಚಕ.
ಕಳೆದ ಮೂರ್ನಾಲ್ಕು ದಶಕಗಳಿಂದ ಹಿಂದಿ ಚಿತ್ರರಂಗದಲ್ಲಿ ಹಲವಾರು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಇವರು ಲವ್ ಸ್ಟೋರಿ, ಫ್ಯಾಮಿಲಿ ಡ್ರಾಮಾ, ಆಕ್ಷನ್ ಸಿನಿಮಾ, ಹೀಗೆ ಎಲ್ಲಾ ಝೋನರ್ ಸಿನಿಮಾಗಳನ್ನು ಮಾಡಿ ಜನಸಾಮಾನ್ಯರಿಗೆ ಹತ್ತಿರವಾಗಿದ್ದಾರೆ. ಹಾಗೆಯೇ ಇವರ ಸಿನಿಮಾ ಬದುಕು ಮಾತ್ರವಲ್ಲದೆ ವೈಯಕ್ತಿಕ ಬದುಕು ಕೂಡ ಇದೇ ರೀತಿ ಹತ್ತಾರು ವೈವಿಧ್ಯತೆ ಹಾಗೂ ಸಾಕಷ್ಟು ಕುತೂಹಲಕಾರಿ ವಿಷಯಗಳಿಂದ ಕೂಡಿದೆ.
ಎಲ್ಲರಿಗೂ ತಿಳಿದಿರುವಂತೆ ಶಾರುಖ್ ಖಾನ್ ರವರು ಬಹಳ ಕಷ್ಟಪಟ್ಟು ಜೀವನದಲ್ಲಿ ಮೇಲೆ ಬಂದವರು ಇಂದು ನಟನಾಗಿ, ನಿರ್ಮಾಪಕನಾಗಿ, ನಿರೂಪಕನಾಗಿ ಮಿಂಚುತ್ತಿರುವ ಇವರ ಕಷ್ಟದ ದಿನಗಳಲ್ಲಿ ಪರಿಚಯವಾದವರು ಗೆಳತಿ ಗೌರಿ. ಈಗ ನಟನ ಪತ್ನಿಯಾಗಿ ಗೌರಿ ಖಾನ್ ಆಗಿರುವ ಇವರ ಲವ್ ಸ್ಟೋರಿ ಯಾವುದೇ ಸಿನಿಮಾ ಕಥೆಗಿಂತ ಕಡಿಮೆ ಇಲ್ಲ.
ಇವರಿಬ್ಬರದು ಅಂತರ್ಜಾತಿ ವಿವಾಹವಾಗಿದ್ದರೂ ಕೂಡ ಇದುವರೆಗೂ ಸಾಂಸಾರಿಕ ಜೀವನದಲ್ಲಿ ಒಂದೇ ಒಂದು ವಿವಾದ ಹಾಗೂ ಕಪ್ಪು ಚುಕ್ಕೆ ಇಲ್ಲದಂತೆ ಬದುಕುತ್ತಾ ಮಾದರಿ ಜೋಡಿಗಳಾಗಿದ್ದಾರೆ. ಇನ್ನು ಮಕ್ಕಳ ವಿಚಾರಕ್ಕೆ ಬಂದರೆ ಶಾರುಖಾನ್ ರವರಿಗೆ ಮೂರು ಜನ ಮಕ್ಕಳಿದ್ದಾರೆ. ಹಿರಿಯ ಮಗಳು ಸುಹಾನ ಖಾನ್ ಕೂಡ ತಂದೆ ಹಾದಿಯಂತೆ ಬಣ್ಣದ ಪ್ರಪಂಚವನ್ನು ಆಯ್ದುಕೊಂಡು ಈಗಾಗಲೇ ನಟಿಯಾಗಿ ಸಿನೆಮಾ ರಂಗಕ್ಕೆ ಪಾದರ್ಪಣೆ ಕೂಡ ಮಾಡಿದ್ದಾರೆ.
ಬಾಲಿವುಡ್ ಭರವಸೆಯ ನಾಯಕಿ ಎಂದು ಕರೆಸಿಕೊಳ್ಳುತ್ತಿದ್ದಾರೆ ಇನ್ನು ಪುತ್ರ ಆರ್ಯನ್ ಖಾನ್ ಬಗ್ಗೆ ಅನೇಕರು ಪತ್ರಿಕೆಗಳಲ್ಲಿ ಓದಿ ಅಥವಾ ಸುದ್ದಿ ಮಾಧ್ಯಮ ನೋಡಿ ತಿಳಿದುಕೊಂಡಿರುತ್ತಾರೆ. ಆರ್ಯನ್ ಖಾನ್ ದಂಪತಿಗಳಿಗೆ ಎರಡನೇ ಮಗು ಹಾಗೂ ಗಂಡು ಮಕ್ಕಳಲ್ಲಿ ಹಿರಿಯ ಮಗನಾಗಿದ್ದಾರೆ, ಇವರು ಕೂಡ ಸಕ್ಕತ್ ಹ್ಯಾಂಡ್ ಸಮ್ ಲುಕ್ ಹಾಗೂ ಅಪ್ಪನಂತೆ ಚಾರ್ಮ್ ಹೊಂದಿರುವುದರಿಂದ ಇವರು ಸಿನಿಮಾ ರಂಗಕ್ಕೆ ಬರುತ್ತಾರೆ ಎಂದು ನಿರೀಕ್ಷಿಸಲಾಗುತ್ತಿದೆ.
ಇನ್ನು ಮುಖ್ಯವಾಗಿ ಮೂರನೇ ಮಗನ ಹೆಸರು ಹೇಳಲೇಬೇಕು ಯಾಕೆಂದರೆ ಈ ಮಗನ ಹೆಸರೇ ಎಲ್ಲರಲ್ಲೂ ಒಂದಷ್ಟು ಗೊಂದಲ ಸೃಷ್ಟಿಸಿರುವುದು. ಯಾಕೆಂದರೆ ಶಾರುಖಾನ್ ರವರ ಮೂರನೇ ಮಗುವಿನ ಹೆಸರು ಅಬ್ ರಾಮ್ ಎಂದು ಈ ಹೆಸರಿನ ಬಗ್ಗೆ ಅನೇಕರಿಗೆ ಅನೇಕ ರೀತಿಯ ಅಭಿಪ್ರಾಯಗಳಿವೆ. ಈ ಬಗ್ಗೆ ಸಂದರ್ಶನ ಒಂದರಲ್ಲಿ ಸ್ವತಃ ಶಾರುಖ್ ಖಾನ್ ಅವರಿಗೆ ಈ ಬಗ್ಗೆ ಪ್ರಶ್ನೆ ಎದುರಾಯಿತು ಅದಕ್ಕಾಗಿ ಅವರು ಕೊಟ್ಟ ಉತ್ತರ ಹೀಗಿತ್ತು.
ಇಸ್ಲಾಂ ಧರ್ಮದ ಹಜರತ್ ಇಬ್ರಾಹಿಂ ಅವರನ್ನು ಬೈಬಲ್ ನಲ್ಲಿ ಅಬ್ರಹಾಂ ಮತ್ತು ಜುದಾಯಿಸಂ ನಲ್ಲಿ ಅಬ್ರಮ್ ಎಂದು ಕರೆಯಲಾಗುತ್ತದೆ. ಹಾಗಾಗಿ ನಾನು ಈ ಹೆಸರನ್ನು ಸೂಚಿಸಿದೆ. ಎಲ್ಲರಿಗೂ ಗೊತ್ತು ನನ್ನ ಹೆಂಡತಿ ಹಿಂದೂ ಆಗಿದ್ದಾಳೆ ಮತ್ತು ನಾನು ಮುಸ್ಲಿಂ ಆಗಿದ್ದೇನೆ ನಮ್ಮ ಮನೆಯಲ್ಲಿ ಜಾತ್ಯಾತೀತ ಭಾವನೆ ಇದೆ ಇಡೀ ದೇಶದಲ್ಲೂ ಕೂಡ ಇದೇ ರೀತಿ ಜಾತ್ಯಾತೀತ ಭಾವನೆ ಹಾಗೂ ಸೌಹಾರ್ದತೆ ಇರುವುದನ್ನು ಕಂಡಿದ್ದೇನೆ ಎಂದಿದ್ದಾರವರು.