ಬಿಗ್ ಬಾಸ್ ಪ್ರಪಂಚದ ಬಹುತೇಕ ಎಲ್ಲಾ ಭಾಷೆಗಳಲ್ಲೂ ಪ್ರಸಾರವಾಗುವ ಶೋ. ಮೊದಲಿಗೆ ಈ ಭಾಷೆ 1991ರಲ್ಲಿ ಡಚ್ ಭಾಷೆಯಲ್ಲಿದ್ದ the nummer ಎನ್ನುವ ಹೆಸರಿನೊಂದಿಗೆ ಶುರುವಾಯಿತು. 7 ವಿದ್ಯಾರ್ಥಿಗಳು ಒಂದು ತಿಂಗಳವರೆಗೆ ಒಂದೇ ಮನೆಯಲ್ಲಿ ಇದ್ದರು, ವಾರಕೊಮ್ಮೆ ಅನುಭವಗಳನ್ನು ಆಕಾಶವಾಣಿಯಲ್ಲಿ ಹಂಚಿಕೊಳ್ಳುತ್ತಿದ್ದರು.
ನಂತರ 1992 ರಲ್ಲಿ MTV ಯಲ್ಲಿ the real world ಎಂದು an American Family ಶೋ ಕಾನ್ಸೆಪ್ಟ್ ನಲ್ಲಿ ಅಮೆರಿಕದವರು ಆರಂಭಿಸುತ್ತಾರೆ. ಇದರ ಎಪಿಸೋಡ್ ಗಳು ಪ್ರಸಾರವಾಗುತ್ತಿದ್ದ ಕಾರಣ ಜನ ಬಹಳ ಆಸಕ್ತಿಯಿಂದ ನೋಡಲು ಶುರು ಮಾಡುತ್ತಾರೆ. ಇದೆ ಐಡಿಯಾದಿಂದ UK ನವರು Bigboss ಗೆ ಹೋಲುವಂತೆ Big brother ಶೋ ತಯಾರಿಸುತ್ತಾರೆ.
ಅದಕ್ಕೆ ಸಿಕ್ಕ ಸ್ಪಂದನೆಯಿಂದ ಸೆಲೆಬ್ರಿಟಿ ಬಿಗ್ ಬ್ರದರ್ (Celebrate Big brother ) ಕಾರ್ಯಕ್ರಮ ಮಾಡಿ ಪ್ರಪಂಚದಾದ್ಯಂತ ಇರುವ ಫೇಮಸ್ ಫೇಸ್ ಗಳನ್ನು ಕರೆಸುತ್ತಾರೆ. ನಮ್ಮ ಭಾರತದಿಂದ ಶಿಲ್ಪ ಶೆಟ್ಟಿ ಅವರು ಕೂಡ ಭಾಗವಹಿಸಿ ಸೀಸನ್ 5ರಲ್ಲಿ ಭಾಗವಹಿಸಿ ಕವಿನ್ನರ್ ಆಗಿದ್ದರು.
ಅಂತಿಮವಾಗಿ 2006ರಿಂದ ಭಾರತದಲ್ಲಿ ಕೂಡ ಈ ಆಟ ಬಿಗ್ ಬಾಸ್ ಆಗಿ 100 ದಿನಗಳ ಕಾರ್ಯಕ್ರಮದಂತೆ ಆಯೋಜನೆ ಆಗುತ್ತದೆ. 2003 ರಲ್ಲಿ ಹಿಂದಿಯಲ್ಲಿ ಬಂದ ಈ ಶೋ ನ ರಾಯಭಾರಿ ಶಿಲ್ಪ ಶೆಟ್ಟಿ ನಂತರ ಅಮಿತಾಭ್ ಬಚ್ಚನ್ ಆಗಿರುತ್ತಾರೆ. ಕೊನೆಗೆ 4ನೇ ಸೀಸನ್ ನಿಂದ ಸಲ್ಮಾನ್ ಖಾನ್ ಅವರು ನಡೆಸಿಕೊಡುತ್ತಾರೆ TRP ಬೆಳಯುತ್ತದೆ ಇಂದಿನವರೆಗೆ 17 ಸೀಸನ್ ಆಗಿದ್ದು ಅವರೇ ನಡೆಸಿಕೊಡುತ್ತಿದ್ದಾರೆ.
ಕನ್ನಡದಲ್ಲಿ ಮೊದಲ ಬಾರಿಗೆ ಬಿಗ್ ಬಾಸ್ ಈ ಶೋ 2013 ರಲ್ಲಿ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ಮೊದಲಿಗೆ ಕನ್ನಡ ಭಾಷೆಯಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ. ಈಗ ತಮಿಳು, ತೆಲುಗು, ಮಲಯಾಳಂ ಎಲ್ಲ ಭಾಷೆಯಲ್ಲಿ ಕೂಡ ಬಿಗ್ ಬಾಸ್ ನಡೆಯುತ್ತಿದ್ದಾರೆ. ಕನ್ನಡದಲ್ಲಿ ಈವರೆಗೆ ಯಶಸ್ವಿಯಾಗಿ 9 ಸೀಸನ್ 1 OTT, 1 Mini show ನಡೆಸಲಾಗಿದೆ.
10 ನೇ ಸೀಸನ್ ಆರಂಭವಾಗಿದ್ದು ಕಿಚ್ಚ ಸುದೀಪ್ಅವರೇ ಈವರೆಗೂ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಹೋಸ್ಟ್ ಮಾಡುತ್ತಿದ್ದಾರೆ. ಈ ಕಾರ್ಯಕ್ರಮಕ್ಕೂ ಹಾಗೂ ಪ್ರಸಾರ ಮಾಡುವ ಚಾನೆಲ್ ಗೆ ಸಂಬಂಧವೇ ಇಲ್ಲ. ಈ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಾ ಇರುವುದು ಚಾನೆಲ್ ಗಳು ಆದರೂ ಇದಕ್ಕೆ ಬಂಡವಾಳ ಹೂಡಿರುವುದು Endomol Shine India ಎನ್ನುವ ಸಂಸ್ಥೆ.
ಈ ಕಾರ್ಯಕ್ರಮದ ಎಲ್ಲಾ ವಿಡಿಯೋಗಳು ಕೂಡ ಕಂಪನಿಯದ್ದೇ ಆಗಿರುತ್ತದೆ ಇದನ್ನು ಎಡಿಟ್ ಮಾಡಿ ಪ್ರಸಾರ ಮಾಡುವ ಹಕ್ಕನ್ನು ಮಾತ್ರ ಚಾನಲ್ ವಹಿಸಿಕೊಂಡಿರುತ್ತಾರೆ ಅದು ಅವರ ನಡುವಿನ ಒಪ್ಪಂದ ಆಗಿರುತ್ತದೆ. ಹಾಗಾಗಿ ಈ ಟಿವಿ, ಸುವರ್ಣ, ಕಲರ್ಸ್ ಕನ್ನಡ, ಕಲರ್ಸ್ ಸೂಪರ್ ಚಾನೆಲ್ಗಳಲ್ಲಿ ಕಾರ್ಯಕ್ರಮ ಪ್ರಸಾರವಾಗಿದೆ ಈ ಕಾರ್ಯಕ್ರಮಕ್ಕೆ ಸಂಪೂರ್ಣ ಹಣವನ್ನು ಕೂಡ ಸಂಸ್ಥೆ ಹೂಡುತ್ತದೆ.
ಇಲ್ಲಿ ಏರ್ಪಡಿಸಲಾಗುವ ಟಾಸ್ಕ್ ನಿಂದ ಊಟದವರೆಗೂ ಕೂಡ ಸಂಸ್ಥೆಯದ್ದೇ ಹೊಣೆಗಾರಿಕೆ ಆದರೆ ಬ ಒಂದು ತಿಂಗಳಿಗೆ ಆಗುವಷ್ಟು ಬಟ್ಟೆ ಮಾತ್ರ ಸ್ಪರ್ಧಿಗಳು ತರಬೇಕು. ಹೆಚ್ಚು ದಿನ ಇದ್ದರೆ ಅವರ ಕುಟುಂಬದವರು ಬಟ್ಟೆ ಕಳುಹಿಸಿಕೊಡುತ್ತಾರೆ.
ಕಂಟೆಸ್ಟಂಟ್ ಗಳ ಸಂಭಾವನ ವಿಚಾರವಾಗಿ ಹೇಳುವುದಾದರೆ ಅವರಿಗೆ ಹೊರಗಿರುವ ಫ್ಯಾನ್ಸ್ ಬೇಸ್ ಮೇಲೆ ಮತ್ತು ಹೊರಗೆ ಅವರಿಗೆ ಸಿಗುವ ರೆಸ್ಪಾನ್ಸ್ ಆಧಾರದ ಮೇಲೆ ಇದು ನಿರ್ಧಾರವಾಗುತ್ತದೆ ಹಾಗೂ ಒಂದು ವಾರಕ್ಕೆ ಇಷ್ಟು ಎಂದು ಅಗ್ರಿಮೆಂಟ್ ಆಗಿರುತ್ತದೆ. ಶೋ ಗೆ ಹೋದ ಮೇಲೆ ಪಾಪ್ಯುಲಾರಿಟಿ ಜಾಸ್ತಿಯಾದರೆ ಆಗಲೂ ಕೂಡ ಹಣ ಹೆಚ್ಚಿಗೆ ಮಾಡಲಾಗುತ್ತದೆ.
ಕನ್ನಡದಲ್ಲಿ ಒಂದು ವಾರಕ್ಕೆ 5 ಲಕ್ಷದವರೆಗೆ ಸಂಭಾವನೆ ಪಡೆದ ಸೆಲೆಬ್ರಿಟಿಗಳ ಉದಾಹರಣೆ ಇದೆ. ಕಾರ್ಯಕ್ರಮ ನಡೆಸಿಕೊಳ್ಳುವ ಸುದೀಪ್ ಅವರು ಐದು ವರ್ಷಕ್ಕೊಮ್ಮೆ ತಮ್ಮ ಸಂಭಾವನೆ ಅಗ್ರಿಮೆಂಟ್ ಮಾಡಿಕೊಳ್ಳುತ್ತಾರೆ ಎಂದು ತಿಳಿದುಬಂದಿದೆ ಆ ಪ್ರಕಾರವಾಗಿ ಈ ವರ್ಷ ಅವರ ಸಂಭಾವನೆ ಬದಲಾಗಿದ್ದು ಇನ್ನೂ ಐದು ವರ್ಷಗಳವರೆಗೆ ಪ್ರತಿ ಸೀಸನ್ ಗೆ 20 ಕೋಟಿ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.