ರೈಲಿನ ಪ್ರಯಾಣ (Train travel) ಅನೇಕ ರೀತಿಯ ಅನುಕೂಲ ಮಾಡಿಕೊಡುತ್ತದೆ. ದೂರದ ಊರುಗಳಿಗೆ ಪ್ರಯಾಣ ಮಾಡಬೇಕು ಎಂದರೆ ರೈಲು ಪ್ರಯಾಣ ಬೆಸ್ಟ್. ಯಾಕೆಂದರೆ, ಅದರಲ್ಲಿ ನಮಗೆ ಮನೆಯಲ್ಲಿ ನಮ್ಮ ಕೋಣೆಯೊಳಗೆ ಇದ್ದ ರೀತಿಯ ಅನುಭವವಾಗುತ್ತದೆ.
ಹಸಿವಾದಾಗ, ನಿದ್ರೆ ಬಂದಾಗ, ಶೌಚಾಲಯಕ್ಕೆ ಹೋಗಬೇಕು ಎನಿಸಿದಾಗ ಯಾವುದಕ್ಕೂ ಸಮಸ್ಯೆ ಇರುವುದಿಲ್ಲ, ಜೊತೆಗೆ ಕುಟುಂಬ ಸಮೇತವಾಗಿ ಪ್ರಯಾಣ ಮಾಡಬೇಕು ಎಂದರೆ ಇನ್ನು ಬೆಸ್ಟ್. ಮುಂಚಿತವಾಗಿ ಟಿಕೆಟ್ ಕಾಯ್ದಿರಿಸುವ ಅನುಕೂಲತೆ ಕೂಡ ಇದೆ ಇನ್ನೊಂದು ವಿಚಾರವೇನೆಂದರೆ ದೇಶದಲ್ಲಿ ರೈಲು ಪ್ರಯಾಣದಿಂದಲೇ ಜನರಿಗೆ ಅನುಕೂಲ.
ಸರ್ಕಾರಕ್ಕೆ ಆದಾಯ ಆಗುವುದರಿಂದ ಜೊತೆಗೆ ಲೆಕ್ಕವಿಲ್ಲದಷ್ಟು ಕುಟುಂಬಗಳಿಗೆ ಜೀವನ ನಿರ್ವಹಣೆಗೆ ದಾರಿ ಕೂಡ ಆಗಿದೆ. ನೀವು ಕೂಡ ರೈಲು ಪಯಣ ಇಷ್ಟಪಡುವವರಾಗಿದ್ದರೆ ಮತ್ತು ಯಾವಾಗಲೂ ಟ್ರೈನ್ ಟ್ರಾವೆಲ್ ಮಾಡುವವರಾಗಿದ್ದರೆ ನಿಮ್ಮ ಗಮನಕ್ಕೆ ಅತಿ ಮುಖ್ಯವಾದ ಪ್ರಕಟಣೆ ಇದೆ ನೋಡಿ.
ಅದೇನೆಂದರೆ ಮೈಸೂರು – ಧಾರವಾಡ ಎಕ್ಸ್ಪ್ರೆಸ್ ರೈಲುಗಳ (Mysore- Dharawad Express Trains) ಸಮಯ ಬದಲಾವಣೆ ಮಾಡಲಾಗಿದೆ. ಈ ಮೊದಲು ಪ್ರತಿದಿನ ರಾತ್ರಿ 10:30ಕ್ಕೆ ಮೈಸೂರು – ಧಾರವಾಡ ಎಕ್ಸ್ಪ್ರೆಸ್ ರೈಲು ಸಂಚಾರ ಮಾಡುತ್ತಿತ್ತು. ಆದರೆ ಈಗ ಆ ಸಮಯವನ್ನು ಬದಲಾವಣೆ (timing change) ಮಾಡಲಾಗಿದೆ. ಇನ್ನು ಮುಂದೆ ಈ ಟ್ರೈನ್ 10:30ಕ್ಕೆ ಹೋಗುವ ಬದಲು ರಾತ್ರಿ 8.30 ಕ್ಕೆ ಮೈಸೂರಿನಿಂದ ಪ್ರಯಾಣ ಆರಂಭಿಸಿದೆ.
ರಾಜ್ಯದಾದ್ಯಂತ ನಾವು ಸನಾತನಿಗಳಲ್ಲ ಅಭಿಯಾನ ಶುರು – ಕೆ.ಎಸ್. ಭಗವಾನ್ ನೇತೃತ್ವ
ಈ ರೈಲು ಸಂಚರಿಸುವ ಸಮಯ ಬದಲಾವಣೆ ಹಾಕಿರುವ ಮಾಹಿತಿ ತಿಳಿಯದೆ ಅನೇಕ ಪ್ರಯಾಣಿಕರು ಪರದಾಡಿ ಹೋಗಿದ್ದಾರೆ. ಈ ರೀತಿ ಟ್ರೈನ್ ಸಮಯ ಬದಲಾಗಿರುವ ಮಾಹಿತಿ ಎಲ್ಲರಿಗೂ ರೀಚ್ ಆಗಿಲ್ಲ. ಸಮಯ ಬದಲಾವಣೆ ಬಗ್ಗೆ ತಿಳಿಯದೆ ಬಂದ ಪ್ರಯಾಣಿಕರು ತೊಂದರೆಯಾಗಿ ಈ ಬಗ್ಗೆ ಪ್ರಶ್ನೆ ಮಾಡಿದಾಗ ರೈಲ್ವೆ ಇಲಾಖೆ ಅಧಿಕಾರಿ ಪ್ರಯಾಣಿಕರಿಗೆ ರೈಲು ಸಮಯ ಬದಲಾವಣೆ ಬಗ್ಗೆ ಟಿಕೆಟ್ ಬುಕಿಂಗ್ (Ticket Booking) ಸಮಯದಲ್ಲಿ ಮಾಹಿತಿ ನೀಡುತ್ತಿದ್ದೇವೆ ಎಂದು ಉತ್ತರ ಹೇಳಿ ಸಮಾಧಾನ ಪಡಿಸಿದ್ದಾರೆ.
ರೈಲ್ವೆ ಪ್ರಯಾಣಿಕರಿಗೆ ಇನ್ನು ಒಂದು ಸಿಹಿ ಸುದ್ದಿಯನ್ನು ರೈಲ್ವೆ ಇಲಾಖೆ ನೀಡಿದೆ, ಅದರಲ್ಲೂ ಉತ್ತರ ಕರ್ನಾಟಕ ಭಾಗದವರಿಗೆ ಹೆಚ್ಚು ಖುಷಿಯಾಗುವ ವಿಚಾರವಾಗಿದೆ. ಇನ್ನು ಮುಂದೆ ಮೈಸೂರು ಧಾರವಾಡ ಎಕ್ಸ್ಪ್ರೆಸ್ ಬೆಳಗಾವಿ ವರೆಗೂ ಪ್ರಯಾಣಿಸಲಿದೆ (extended to Belagavi). ಬೆಳಗಾವಿ ಜಿಲ್ಲೆಯ ಭಾಗಗಳಲ್ಲಿನ ರೈಲು ಪ್ರಯಾಣಿಕರು ಬಹಳ ದಿನದಿಂದ ಈ ಅನುಕೂಲತೆಗೆ ಕಾಯುತ್ತಿದ್ದರು.
ದಸರಾ ಹಬ್ಬಕ್ಕೆ ಹೀರೋ ಬೈಕ್ ಖರೀದಿ ಮಾಡುವವರಿಗೆ ಬಂಪರ್ ಆಫರ್.!
ಈಗ ಅವರ ಕನಸು ಈಡೇರಿದೆ ಇದನ್ನು ಕೇಂದ್ರ ರೈಲ್ವೆ ಸಚಿವರು ಆದೇಶಿಸಿದೆ ಅನುಮತಿ ನೀಡಿದ್ದಾರೆ. ಇದರ ಜೊತೆಗೆ ದೇಶದ 314 ರೈಲುಗಳ ವೇಳಾಪಟ್ಟಿಯಲ್ಲಿ ಕೂಡ ಅಲ್ಪಸ್ವಲ್ಪ ಬದಲಾವಣೆಯಾಗಿದೆ. ನೈರುತ್ಯ ರೈಲ್ವೆಯು ಇದೇ ಅಕ್ಟೋಬರ್ 1 ರಿಂದ 314 ರೈಲುಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಿ ಪ್ರಕಟಿಸಲಿದೆ ಎನ್ನುವ ಮಾಹಿತಿಯು ತಿಳಿದು ಬಂದಿದೆ.
ನೈರುತ್ಯ ರೈಲ್ವೆ ವಿಭಾಗವು (South West Railways) ಏಪ್ರಿಲ್ ನಿಂದ ಆಗಸ್ಟ್ 2023ರ ಅವಧಿಯಲ್ಲಿ ಸರಕು ಸಾಗಣೆಯಲ್ಲಿ ಹೆಚ್ಚು ಆದಾಯ ಗಳಿಸಿ ದಾಖಲೆ ಮಾಡಿದೆ. ನೈರುತ್ಯ ರೈಲ್ವೆಯು 19.27 ದಶಲಕ್ಷ ಟನ್ ಸರಕುಗಳನ್ನು ಲೋಡ್ ಮಾಡಿ ರೂ. 1,909.77 ಕೋಟಿ ಆದಾಯ ಗಳಿಸಿ ಸಾಧನೆ ಮಾಡಿದೆ. ಮುಖ್ಯವಾಗಿ ರೈಲು ಸಮಯ ಬದಲಾವಣೆ ಆಗಿರುವ ಈ ಮಾಹಿತಿಯ ಬಗ್ಗೆ ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರಿಗೂ ತಿಳಿಸಿ.
ಇನ್ನಿತರ ರೈಲ್ವೇ ವೇಳಾಪಟ್ಟಿ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.!